ವೈಷ್ಣವಿ ಗೌಡ ಎಂಗೇಜ್ಮೆಂಟ್ ಡ್ರೆಸ್ ರೆಡಿ ಮಾಡೋಕೆ ಎಷ್ಟು ದಿನ ಆಯ್ತು? ಡಿಸೈನರ್ ಯಾರು?

By ಎಸ್ ಸುಮಂತ್

ಬೆಳಗ್ಗೆಯಿಂದಾನೂ ಸೋಷಿಯಲ್ ಮೀಡಿಯಾದಲ್ಲಿ ವೈಷ್ಣವಿ ಗೌಡ ಅವರ ಎಂಗೇಜ್ಮೆಂಟ್ ಸುದ್ದಿಯೇ ಟ್ರೆಂಡಿಂಗ್ ಎನ್ನಬಹುದು. ಯಾಕಂದ್ರೆ, ವೈಷ್ಣವಿ ತಮ್ಮ ಮದುವೆಗಾಗಿ ಎಷ್ಟು ಎಗ್ಸೈಟ್‌ಮೆಂಟ್‌ನಿಂದ ಕಾದಿದ್ದರೋ ಅಷ್ಟೇ ಎಗ್ಸೈಟ್‌ಮೆಂಟ್‌ ಇಂದು ಅವರ ಅಭಿಮಾನಿಗಳಿಗೂ ಆಗಿತ್ತು. ಜಸ್ಟ್ ಎಂಗೇಜ್ಮೆಂಟ್ ಫೋಟೋಗಳನ್ನ ವೈಷ್ಣವಿ ರಿವೀಲ್ ಮಾಡಿದ್ದಷ್ಟೇ ತಡ ನಾ ಮುಂದು ತಾ ಮುಂದು ಅಂತ ಕಮೆಂಟ್ ಹಾಕಿದವರೇ ಹೆಚ್ಚು.

ನಮಗಂತೂ ಖುಷಿ ಆಯ್ತು, ಇಬ್ಬರು ಚೆನ್ನಾಗಿರಿ ಅಂತ ಹಾರೈಸಿದವರೇ ಜಾಸ್ತಿ. ಎಂಗೇಜ್ಮೆಂಟ್ ಫೋಟೋ, ವಿಡಿಯೋ ಹಾಕಿದ ಮೇಲೆ ಎಲ್ಲರ ಚಿತ್ತ ಒಂದು ಸಲ ಆದ್ರೂ ಅವರ ಕಾಸ್ಟ್ಯೂಮ್ ಮೇಲೆ ಬಿದ್ದಿರುತ್ತೆ. ವೈಷ್ಣವಿ ಗೌಡ ನಿಶ್ಚಿತಾರ್ಥಕ್ಕೆ ಧರಿಸಿದ ಕಾಸ್ಟ್ಯೂಮ್ ವಿಶೇಷತೆ ಇಲ್ಲಿದೆ.

Actress Vaishnavi Gowda engagement dress design and designer details

ಮದುವೆ ಅನ್ನೋದು ಎಲ್ಲರ ಕನಸು. ಹೀಗೆ ಆಗ್ಬೇಕು, ಹೀಗೆ ಅಲಂಕಾರಗೊಳಬೇಕು ಎಂಬೆಲ್ಲಾ ಬಿಗ್ ಡ್ರೀಮ್ ಇರುತ್ತೆ. ವೈಷ್ಣವಿ ಅವರಿಗೂ ಅಷ್ಟೇ ತಮ್ಮ ಮದುವೆ ಬಗ್ಗೆ ದೊಡ್ಡ ಕನಸೇ ಇದೆ. ಆ ಜೀವನದ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದಾರೆ. ಈ ಬಗ್ಗೆ ಸಾಕಷ್ಟು ಸಲ ವೈಷ್ಣವಿ ಅವರೇ ಹೇಳಿಕೊಂಡಿದ್ದಾರೆ. ಅಂತು ಅವರ ಕನಸಿಗೆ ರೆಕ್ಕೆ ಪುಕ್ಕಗಳು ಬಂದಾಗಿದೆ. ಮದುವೆ ಬಗ್ಗೆಯೇ ಡ್ರೀಮ್ ಇಟ್ಟುಕೊಂಡಿರುವ ವೈಷ್ಣವಿ, ಹುಡುಗ-ಹುಡುಗಿಯ ಕಾಸ್ಟ್ಯೂಮ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ವಾ? ಎಸ್ ಆ ಕಾಸ್ಟ್ಯೂಮ್ ಕೂಡ ಮುತುವರ್ಜಿ ವಹಿಸಿ ಮಾಡಿಸಿಕೊಂಡಿದ್ದಾರೆ.

ಕ್ಲೀನ್, ಸಿಂಪಲ್, ಎಲಿಗೆನ್ಸ್ ಅಂಡ್ ಕ್ಯೂಟ್ ಲುಕ್ ಅಂದ್ರೆ ಬಾರ್ಬಿ ಡಾಲ್ ಥರ ಕಾಣ್ಬೇಕು ಅಂಥ ಲುಕ್ ಬೇಕು ಅಂಥ ನಿರ್ಧಾರ ಮಾಡಿದ್ದ ವೈಷ್ಣವಿ ಕಡೆಗೂ ಆ ಕ್ಯೂಟ್ ಲುಕ್ ನಲ್ಲಿಯೇ ರೆಡಿಯಾಗಿದ್ದರು. ಅದಕ್ಕೆ ಅಂತ ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದಾರೆ. ಮೇಕಪ್, ಹೇರ್ ಸ್ಟೈಲ್, ಡ್ರೆಸ್ ಎಲ್ಲವನ್ನು ಬಹಳಷ್ಟು ಮುತುವರ್ಜಿ ವಹಿಸಿ ಮಾಡಿಸಿಕೊಂಡಿದ್ದಾರೆ. ಈ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು, ಪ್ರಿಯಾಂಕಾ ಎನ್ನುವವರು. ಸುಮಾರು ಏಳು ವರ್ಷದಿಂದ ವೈಷ್ಣವಿ ಹಾಗೂ ಪ್ರಿಯಾಂಕಾಗೆ ಪರಿಚಯವಿದೆ. ಪ್ರಿಯಾಂಕಾ ಅವರಿಗಾಗಿ ಸಾಕಷ್ಟು ಫೋಟೋಶೂಟ್ ಕೂಡ ವೈಷ್ಣವಿ ಮಾಡಿಸಿದ್ದಾರೆ.

Actress Vaishnavi Gowda engagement dress design and designer details

ಈ ಕಾಸ್ಟ್ಯೂಮ್ ಅನ್ನ ವೈಷ್ಣವಿ ಅವರೇ ಸೆಲೆಕ್ಟ್ ಮಾಡಿರೋದು. ಪೇಸ್ಟ್ರಿ ಕಲರ್‌ನಲ್ಲಿ ಇರಲಿ ಅಂತ ಒಂದೇ ಕಲರ್ ಅನ್ನ ಆಯ್ಕೆ ಮಾಡಿಕೊಂಡಿದ್ದಾರೆ. ವೈಷ್ಣವಿ ಅವರು ತುಂಬಾನೇ ಕಲರ್ ಆಗಿದ್ದಾರೆ. ಹಾಲುಗೆನ್ನೆಯ ಚೆಲುವೆ. ಡ್ರೆಸ್ ಬ್ರೈಟ್ ಆಗ್ಬಿಟ್ರೆ ಅಲ್ಲಿ ಲುಕ್ ಬೇರೆ ರೀತಿಯಾಗಿಯೇ ಕಾಣಿಸುತ್ತೆ ಎಂಬ ಕಾರಣಕ್ಕೆ ಸಿಂಗಲ್ ಕಲರ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಕ್ಲಾತ್ ಅನ್ನು ಟಿಶ್ಯೂ ಸಿಲ್ಕ್‌ನಲ್ಲಿ ಮಾಡಿರೋದು. ಅಷ್ಟೇ ಅಲ್ಲ ಕಂಪ್ಲೀಟ್ ಹ್ಯಾಂಡ್ ಮೇಡ್ ಮೂಲಕ ತಯಾರಿ ಮಾಡಲಾದ ಡ್ರೆಸ್ ಇದಾಗಿದೆ.

ಏಳು ವರ್ಷದಿಂದ ಪರಿಚಯವಿದ್ದ ಪ್ರಿಯಾಂಕಾ ಅವರಿಗೆ ವೈಷ್ಣವಿ ಅವರು ಯಾವ ಕಲರ್ ಹಾಕಿಕೊಂಡರೆ ಚೆನ್ನಾಗಿ ಕಾಣಿಸ್ತಾರೆ ಅನ್ನೋದರ ಅಂದಾಜು ಇತ್ತು. ಹೀಗಾಗಿಯೇ ಅವರಿಗೆ ಯಾವ ಕಲರ್ ಬೆಟರ್ ಅನ್ನೋದರಲ್ಲಿ ಮೂರು ಕಲರ್ ತೋರಿಸಿದ್ದಾರೆ. ಅದರಲ್ಲಿ ಒಂದನ್ನು ವೈಷ್ಣವಿ ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗೇ ಈ ಡ್ರೆಸ್ ರೆಡಿ ಮಾಡುವುದಕ್ಕೆ 20-25 ದಿನಗಳನ್ನ ತೆಗೆದುಕೊಂಡಿದ್ದಾರೆ. ಆ ಕಾಸ್ಟ್ಯೂಮ್ ನೋಡಿದರೇನೆ ಅರ್ಥವಾಗುತ್ತದೆ. ಎಷ್ಟೆಲ್ಲಾ ಕೆಲಸಗಳಿದಾವೆ ಅನ್ನೋದು. ವೈಷ್ಣವಿ ಹಾಗೂ ಅನುಕೂಲ್ ಅವರ ಎಂಗೇಜ್ಮೆಂಟ್ ಎರಡು ತಿಂಗಳ ಹಿಂದೆ ಗೊತ್ತಾಗಿತ್ತಂತೆ. ಹೀಗಾಗಿ ಕಾಸ್ಟ್ಯೂಮ್ ಬಹಳಷ್ಟು ಸಮಯ ತೆಗೆದುಕೊಂಡಿದ್ದಾರೆ.

More from Filmibeat

English summary
Actress Vaishnavi Gowda engagement dress design and designer details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X