ಶಿವರುದ್ರೆ ಗೌಡ್ರ ಮಗ್ಲೂ ಐಶ್ವರ್ಯ ಹೊಸ ಅವತಾರ; ಹೊಕ್ಕಳಿಗೆ ರಿಂಗ್ ಹಾಕಿಕೊಂಡು ಹಿರಿಹಿರಿ ಹಿಗ್ಗಿದ ಹೆಬಾ
ಮಹಿಳೆಯರು ಹೊಕ್ಕಳಿಗೆ ರಿಂಗ್(ಬೆಲ್ಲಿ ಪಿಯರ್ಸಿಂಗ್) ಹಾಕುವುದು ಹೊಸದೇನು ಅಲ್ಲ. ವಿದೇಶದಲ್ಲಿ ಮಾತ್ರವಲ್ಲ ಭಾರತದಲ್ಲಿ ಕೂಡ ದೇಹದ ಅಲಂಕಾರಕ್ಕೆ ಮಹಿಳೆಯರು ಹೊಕ್ಕುಳಿನ ಮೇಲಿನ ಚರ್ಮಕ್ಕೆ ರಿಂಗ್ ಅಥವಾ ಸ್ಟಡ್ ಹಾಕಿಕೊಳ್ಳುತ್ತಾರೆ. ಕೆಲ ಸಿನಿಮಾ ನಟಿಯರು ಕೂಡ ಈ ಪ್ರಯತ್ನ ಮಾಡಿದ್ದಾರೆ. ಪ್ರಿಯಾಂಕ ಚೋಪ್ರಾ ಹೊಕ್ಕಳಿಗೆ ಧರಿಸಿದ 2.7 ಕೋಟಿ ರೂ. ಮೌಲ್ಯದ ಡೈಮಂಡ್ ರಿಂಗ್ ವಿಚಾರ ಕಳೆದ ವರ್ಷ ಭಾರೀ ಸುದ್ದಿಯಾಗಿತ್ತು.
ಸದ್ಯ ಬಹುಭಾಷಾ ನಟಿ ಹೆಬಾ ಪಟೇಲ್ ಬೆಲ್ಲಿ ಪಿಯರ್ಸಿಂಗ್ ವೀಡಿಯೋ ವೈರಲ್ ಆಗ್ತಿದೆ. ಇದನ್ನು ನೋಡಿ "ಉಪಾಧ್ಯಕ್ಷರೇ.. ಇವ್ಳು ನಮ್ ಶಿವರುದ್ರೆ ಗೌಡನ್ ಮಗ್ಲೂ ಐಶ್ವರ್ಯ ಅಲ್ವಾ?" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿರುವುದು ವೈರಲ್ ಆಗ್ತಿದೆ. ಕನ್ನಡದ 'ಅಧ್ಯಕ್ಷ' ಸಿನಿಮಾ ಮೂಲಕ ಹೆಬಾ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಬಳಿಕ ತಮ್ಮ ಬಿಂದಾಸ್ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾ ಬರ್ತಿದ್ದಾರೆ.

ಮುಂಬೈ ಚೆಲುವೆ ಹೆಬಾ ಕನ್ನಡ ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟರು. ಶರಣ್ ಜೋಡಿಯಾಗಿ ಚಿತ್ರದಲ್ಲಿ ನಟಿಸಿದ್ದರು. ಶಿವರುದ್ರೆ ಗೌಡನಾಗಿ ಆರ್ಮುಗ ರವಿಶಂಕರ್ ಅಬ್ಬರಿಸಿದ್ದರು. ಅವರ ಮಗಳು ಐಶ್ವರ್ಯಾ ಪಾತ್ರದಲ್ಲಿ ಹೆಬಾ ನಟಿಸಿದ್ದರು. ಹಳ್ಳಿಯ ಮುಗ್ಧ ಹುಡುಗಿಯಾಗಿ ಅದೇ ಪಾತ್ರದ ಮೂಲಕ ಕನ್ನಡ ಸಿನಿರಸಿಕರ ನೆನಪಿನಲ್ಲಿ ಉಳಿದುಬಿಟ್ಟಿದ್ದಾರೆ. ಆ ಬಳಿಕ ಮತ್ತೆ ಕನ್ನಡ ಸಿನಿಮಾದಲ್ಲಿ ಆಕೆ ನಟಿಸಲಿಲ್ಲ.
ಮುಂಬೈನ 'ಅಜ್ ಆಳ್ವಾ- ಬೆಸ್ಟ್ ಪಿಯರ್ಸಿಂಗ್ ಸ್ಟುಡಿಯೋ'ದಲ್ಲಿ ನಟಿ ಹೆಬಾ ಪಟೇಲ್ ತಮ್ಮ ಹೊಕ್ಕಳಿಗೆ ರಿಂಗ್ ಬೆಲ್ಲಿ ಪಿಯರ್ಸಿಂಗ್ ಮಾಡಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗ್ತಿದೆ. ಇವತ್ತು ಪಿಯರ್ಸಿಂಗ್ ಯಾಕೆ ಎನ್ನುವ ಪ್ರಶ್ನೆಗೆ "15 ವರ್ಷಗಳ ಬಳಿಕ ನಾನು ತೆಳ್ಳಗಾಗಿ ನನ್ನ ಬೆಲ್ಲಿ ಪಿಯರ್ಸಿಂಗ್ ಚೆನ್ನಾಗಿ ಕಾಣುವಂತಾಗಿದೆ. ಹಾಗಾಗಿ ಮತ್ತೆ ದಪ್ಪ ಆಗುವ ಮುನ್ನ ಮಾಡಿಸಿಕೊಂಡೆ. ಇನ್ನು ಮಿಡ್‌ಲೈಫ್ ಕ್ರೈಸಿಸ್ ಎನ್ನಿ, ಬೇರೆ ಏನಾದರೂ ಕರೆಯಿರಿ ಪರವಾಗಿಲ್ಲ. ಒಟ್ನಲ್ಲಿ ಚೆನ್ನಾಗಿ ಕಾಣಿಸ್ತಿದೆ" ಎಂದಿದ್ದಾರೆ.
ನನಗೂ ಬೆಲ್ಲಿ ಪಿಯರ್ಸಿಂಗ್ ಎನ್ನುವುದು ಭಯ ತಂದಿತ್ತು ಎಂದು ಹೆಬಾ ಪಟೇಲ್ ಹೇಳಿದ್ದಾರೆ. ಸದ್ಯ ವಿಡಿಯೋ ಸಖತ್ ವೈರಲ್ ಆಗ್ತಿದೆ. ಕೊನೆಯದಾಗಿ 'ರೇಪು ಉದಯಂ ಪದಿ ಗಂಟಲಕು' ಎಂಬ ತೆಲುಗು ಸಿನಿಮಾದಲ್ಲಿ ಆಕೆ ನಟಿಸಿದ್ದರು. 'ಆದ್ಯ' ಎಂಬ ಒಂದು ತಮಿಳು ಹಾಗೂ 'ರುದ್ರ ಕಾಳ' ಎಂಬ ಒಂದು ಕನ್ನಡ ಚಿತ್ರದಲ್ಲಿ ಈಗ ನಟಿಸುತ್ತಿದ್ದಾರೆ.
ಚಿತ್ರರಂಗ ಬಂದ ಆರಂಭದಲ್ಲಿ ತೆಳ್ಳಗಿದ್ದ ಹೆಬಾ ಪಟೇಲ್ ಬಳಿಕ ಕೊಂಚ ದಪ್ಪ ಆಗಿದ್ದರು. ಮತ್ತೆ ಜಿಮ್, ಡಯೆಟ್ ಮಾಡಿ ತೂಕ ಇಳಿಸಿದ್ದರು. iDream Media ಯೂಟ್ಯೂಬ್ ಸಂದರ್ಶನದಲ್ಲಿ ತಮ್ಮ ವೇಯ್ಟ್ ಲಾಸ್ ಜರ್ನಿ ಬಗ್ಗೆ ಮಾತನಾಡಿದ್ದರು. ನಾನು ಮೊದಲಿಗೆ ಜಿಮ್‌ಗೆ ಸರಿಯಾಗಿ ಹೋಗುತ್ತಿರಲಿಲ್ಲ. 21 ದಿನ ಯಾವುದೇ ವಿಷಯವನ್ನು ನಿರಂತರವಾಗಿ ಅಭ್ಯಸಿಸಿದರೆ ಬಳಿಕ ಅದು ರೂಢಿಯಾಗುತ್ತದೆ. ಮೊದಲ 21 ದಿನ ತಪ್ಪದೇ ಜಿಮ್‌ಗೆ ಹೋಗಿದ್ದೆ. ಬಳಿಕ 21 ದಿನ ಸಕ್ಕರೆ ಸೇವನೆ ಬಿಟ್ಟೆ. ಬಳಿಕ ಡಯೆಟ್ ಆರಂಭಿಸಿದೆ. ನಿಧಾನವಾಗಿ ಹೀಗೆ ತೆಳ್ಳಗಾದೆ. ಈಗ ಯಾವುದೇ ಡಯೆಟ್ ಇಲ್ಲದೇ ಎಲ್ಲಾ ಆಹಾರ ತಿನ್ನುತ್ತೀನಿ. ಆದರೆ ಕಮ್ಮಿ ಪ್ರಮಾಣದಲ್ಲಿ ತೆಗೆದುಕೊಳ್ತೀನಿ ಎಂದಿದ್ದರು.
'ಅಧ್ಯಕ್ಷ' ಬಳಿಕ ತೆಲುಗಿನ 'ಕುಮಾರಿ 21F' ಚಿತ್ರ ಹೆಬಾ ಪಟೇಲ್ ಅವರಿಗೆ ಬ್ರೇಕ್ ಕೊಟ್ಟಿತ್ತು. 'ಮಿಸ್ಟರ್', 'ಅಂದಗಾಡು', '24 ಕಿಸ್ಸೆಸ್', 'ಏಂಜೆಲ್', 'ಹನಿಮೂನ್ ಎಕ್ಸ್‌ಪ್ರೆಸ್', 'ಧೂಮ್ ಧಾಮ್', 'ಒದೆಲಾ-2' ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications