'ಲಕ್ಷ್ಮೀಬಾರಮ್ಮ' ಸೀರಿಯಲ್ ಮುಗಿದ ಮೇಲೆ ನಟಿ ರಜನಿ ಏನು ಮಾಡ್ತಿದ್ದಾರೆ?

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಕೆಲ ವರ್ಷಗಳ ಮನರಂಜನೆ ನೀಡಿ, ಇತ್ತೀಚೆಗಷ್ಟೇ ಅಂತ್ಯವಾಗಿದೆ. ಆ ಧಾರಾವಾಹಿಯಲ್ಲಿದ್ದ ಒಂದೊಂದು ಪಾತ್ರವೂ ಒಂದೊಂದು ರೀತಿಯಲ್ಲಿ ಗಮನ ಸೆಳೆದಿತ್ತು. ತುಂಬಿದ ಕುಟುಂಬದಲ್ಲಿ ಕೆಲಸದವರನ್ನು ಕೂಡ ನೆಗ್ಲೆಕ್ಟ್ ಮಾಡಿರಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ಎಲ್ಲರಿಗೂ ಪಾತ್ರವನ್ನ ನೀಡಿದ್ದರು. ಎಲ್ಲರೂ ಮೇನ್ ಸ್ಟ್ರೀಮ್‌ನಲ್ಲಿಯೇ ಕಾಣಿಸಿಕೊಂಡಿದ್ದರು. ಆ ಧಾರಾವಾಹಿ ಮುಗಿದ ಮೇಲೆ ಯಾರೆಲ್ಲ ಏನು ಮಾಡುತ್ತಾ ಇದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಇರುತ್ತದೆ ಅಲ್ವಾ? ಅದರಲ್ಲಿ ಸುಪ್ರೀತಾ ಪಾತ್ರ ಮಾಡಿದ್ದಂತ ರಜಿನಿ ಏನು ಮಾಡ್ತಾ ಇದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ. ಅದಕ್ಕೂ ಮುಂಚೆ 'ಲಕ್ಷ್ಮೀಬಾರಮ್ಮ' ಧಾರಾವಾಹಿಯಲ್ಲಿ ರಜಿನಿ ಹೇಗಿದ್ರು ಅನ್ನೋ ರಿಕಾಲ್ ಮಾಡಿಕೊಳ್ಳೋಣಾ ಬನ್ನಿ.

ರಜನಿ 'ಲಕ್ಷ್ಮೀಬಾರಮ್ಮ' ಧಾರಾವಾಹಿಯಲ್ಲಿ ಸುಪ್ರೀತಾ ಎಂಬ ಪಾತ್ರವನ್ನ ಮಾಡ್ತಾ ಇದ್ದರು. ಅದು ಅತ್ತಿಗೆಗೆ ಇವರೇ ದುಷ್ಮನ್. ಇವರ ಅತ್ತಿಗೆಯೇ ಕಾವೇರಿ. ತನ್ನ ಮಾತೇ ನಡೆಯಬೇಕು, ತನ್ನ ಅಧಿಕಾರವೇ ನಡೆಯಬೇಕು ಎಂಬುದೇ ಅವರ ಅಹಂ ಆಗಿತ್ತು. ಹೀಗಾಗಿಯೇ ಸಂಸಾರದಲ್ಲಿ ಅಲ್ಲೋಲ ಕಲ್ಲೋಲವಾಗಿ. ಕಡೆಗೆ ಕಾವೇರಿಯೇ ಹೆಣವೂ ಸಿಗದಂತೆ ಸತ್ತು ಹೋದಳು. ತೆರೆ ಮೇಲಂತು ಕಾವೇರಿ ಹಾಗೂ ಸುಪ್ರೀತಾ ಶತ್ರುಗಳು. ಆದರೆ, ತೆರೆ ಹಿಂದೆ ಈ ಇಬ್ಬರು ಆತ್ಮೀಯರು. ಈಗ ಧಾರಾವಾಹಿ ಮುಗಿದಿದೆ. ಎಲ್ಲರೂ ಒಂದು ಕುಟುಂಬದಿಂದ ದೂರಾದ ಬೇಸರದಲ್ಲಿದ್ದಾರೆ. ಸದ್ಯ ಸುಪ್ರೀತಾ ಮನೆಯಲ್ಲಿ ಮಕ್ಕಳು ಬೇಸಿಗೆ ರಜೆ ಕಳೆಯಲ್ವಾ ಆ ಫೀಲ್‌ನಲ್ಲಿದ್ದಾರೆ. ಹಾಗಾದರೆ ಅಂಥದ್ದೇನು ಮಾಡ್ತಾ ಇದಾರೆ ಅನ್ನೋದನ್ನ ಹೇಳ್ತೀವಿ ಬನ್ನಿ.

After end of the Lakshmibaramma serial actress Rajani lifestyle

ಮಕ್ಕಳಿಗೆ ವರ್ಷ ಪೂರ್ತಿ ಶಾಲೆ ಇದ್ದು ಬೇಸಿಗೆ ರಜೆ ಬಂದಾಗ ತಮ್ಮಲ್ಲಿರುವ ಕಲೆಯನ್ನ ಹೊರ ಹಾಕುವುದು, ಏನಾದರೊಂದು ಕಲೆಯನ್ನ ತೋರಿಸುವುದು, ಆ ಸಮಯ ಕಳೆಯುವುದಕ್ಕೆ ಯಾವುದಾದರೂ ಆಕ್ಟಿವಿಟಿನಲ್ಲಿ ತೊಡಗಿಕೊಂಡಿರುತ್ತಾರಲ್ಲ ಹಾಗೇ ಈಗ ರಜನಿ ಕೂಡ ಕಾಣಿಸಿಕೊಂಡಿದ್ದು. ಹೌದು, ಮನೆಯಲ್ಲಿ ಕೂತು ಬೋರ್ ಆಗದಂತೆ ಮಾಡುವುದಕ್ಕೋ ಅಥವಾ ಅದರಿಂದ ಸಿಕ್ಕಾಪಟ್ಟೆ ಖುಷಿ ಸಿಗುತ್ತದೆಯೋ ಏನೋ. ಬಟ್ಟೆಯನ್ನೆಲ್ಲಾ ಗುಡ್ಡೆ ಹಾಕಿಕೊಂಡು ಕಟ್ ಮಾಡುತ್ತಾ ಕೂತಿದ್ದಾರೆ. ಆ ಕಟ್ ಮಾಡಿದ ಬಟ್ಟೆಗಳನ್ನೆಲ್ಲಾ ಏನು ಮಾಡ್ತಾರೆ ಅನ್ನೋದು ಮಾತ್ರ ಗೊತ್ತಿಲ್ಲ. ಅವರೇ ಆ ಸಂಬಂಧ ಏನಾದರೂ ವಿಡಿಯೋ ಬಿಟ್ಟರೆ ಗೊತ್ತಾಗಬಹುದು. ಅವರು ಏನಾದರೂ ಬೇಸಿಕ್ ಟೈಲರಿಂಗ್ ಏನಾದ್ರೂ ಕಲಿತಿದ್ದಾರಾ ಅಂತ. ಸದ್ಯಕ್ಕೆ ಬಟ್ಟೆ ಕಟ್ ಮಾಡುವ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲ ತಮ್ಮ ಇಷ್ಟದ ಸ್ವೀಟ್ ಮಾಡಿರುವ ವಿಡಿಯೋವೊಂದನ್ನು ಸಹ ಹಂಚಿಕೊಂಡಿದ್ದಾರೆ. ಅದು ಬಾದುಷಾ ರೀತಿ ಇದೆ. ಸ್ಟೋರಿಗೆ ಫೋಟೋ ಹಾಕಿದ್ದಾರೆ ಅಂದ್ರೆ ಅದನ್ನು ಅವರೇ ಮಾಡಿದ್ದಾರೆ ಎಂದೇ ಅರ್ಥ. ಶೂಟಿಂಗ್ ಅಂತೆಲ್ಲಾ ಹೋಗುವಾಗ ರೆಸ್ಟ್ ಸಿಕ್ಕಿದ್ರೆ ಸಾಕು ಎಂಬಂತೆ ಆಗಿರುತ್ತೆ ಆರ್ಟಿಸ್ಟ್ ಗಳ ಪರಿಸ್ಥಿತಿ. ಅಂಥದ್ರಲ್ಲಿ ಏನೇ ಇಷ್ಟ ಇದ್ದರು, ಏನೇ ಕ್ರೇಜ್ ಇದ್ದರು ಅಡುಗೆ ಮಾಡುವುದಕ್ಕೆ ಆಗಿರಲ್ಲ. ಈಗ ಸಮಯ ಸಿಕ್ಜಾಗ ಹೀಗೆ ತಮಗೆ ಇಷ್ಟವಾದ್ದನ್ನ ಮಾಡಿ ಸವಿದಿದ್ದಾರೆ.

After end of the Lakshmibaramma serial actress Rajani lifestyle

ನಟಿಯರಿಗೆಲ್ಲಾ ಅಡುಗೆ ಮಾಡೋದಕ್ಕೆ ಬರುತ್ತಾ ಎಂದುಕೊಳ್ಳುವವರಿಗೆ ಇದೊಂದು ಬೆಸ್ಟ್ ಎಕ್ಸಾಂಪಲ್. ಅದರಲ್ಲೂ 'ಲಕ್ಷ್ಮೀಬಾರಮ್ಮ' ಧಾರಾವಾಹಿಯಲ್ಲಿ ಸುಪ್ರೀತಾ ಇದ್ದ ರೀತಿಗೆ ಅವರಿಗೇನು ಕೆಲಸ ಬರುವುದಿಲ್ಲ ಎಂದೇ ಎಲ್ಲರೂ ನಂಬಿರುತ್ತಾರೆ. ಸಿಕ್ಕಾಪಟ್ಟೆ ಸ್ಟೈಲಿಸ್ಟ್ ಅವರು. ಹೀಗಾಗಿ ಇವರೇನು ಕೆಲಸ ಮಾಡುತ್ತಾರೆ ಅನ್ನೋರಿಗೆಲ್ಲಾ ಸುಪ್ರೀತಾ ಅಲಿಯಾಸ್ ರಜನಿ ತಮಗೆ ಎಲ್ಲಾ ಕೆಲಸ ಬರುತ್ತೆ ಎಂಬುದನ್ನು ಪ್ರೂವ್ ಮಾಡಿದ್ದಾರೆ.

More from Filmibeat

English summary
After end of the Lakshmibaramma serial actress Rajani lifestyle;
Read more about: life style actress tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X