ಜೆಪಿ ನಗರ to ಸದಾಶಿವನಗರ; ಅಮೃತಾ ಅಯ್ಯಂಗಾರ್ ಜರ್ನಿ ಕಥೆ ಕೇಳಿದ್ರಾ..?

By ಎಸ್ ಸುಮಂತ್

ಅಮೃತಾ ಅಯ್ಯಂಗಾರ್ ಲೈಫ್‌ನಲ್ಲಿ ಖುಷಿ ಖುಷಿಯಾಗಿ ಕಾಲ ಕಳೆಯುತ್ತಾರೆ. ಫ್ರೆಂಡ್ಸ್ ಜೊತೆಗೆ ಸುತ್ತುತ್ತಾರೆ, ಸೋಲೋ ಟ್ರಿಪ್ ಹೊಡೀತಾರೆ, ಫೋಟೋಶೂಟ್ ಮಾಡಿಸಿಕೊಳ್ತಾ ಇರುತ್ತಾರೆ. ಬೇರೆ ಬೇರೆ ರೀತಿಯ ಫುಡ್ ಟೇಸ್ಟ್ ಮಾಡಿ, ಅದರ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರ ಪೇಜ್ ಫಾಲೋ ಮಾಡೋರಿಗೆ ಅವರು ಲೈಫ್ ಎಷ್ಟು ಎಂಜಾಯ್ ಮಾಡ್ತಾ ಇದಾರೆ ಅನ್ನೋದು ಗೊತ್ತಾಗುತ್ತೆ. ಈಗ ಅವರ ಒಂದು ಜರ್ನಿ ಕಥೆಯನ್ನ ಸೋಷಿಯಲ್ ಮೀಡಿಯಾ ಸ್ಟೇಟಸ್‌ನಲ್ಲಿ ತೆರೆದಿಟ್ಟಿದ್ದಾರೆ.

ಬೆಂಗಳೂರಿನ ಟ್ರಾಫಿಕ್ ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ. ಎಲ್ಲಾದರೂ ಹೋಗಬೇಕೆಂದರೂ ಒಂದು ಗಂಟೆ ಮೊದಲೇ ಪ್ಲ್ಯಾನ್ ಮಾಡಿಕೊಂಡು ಹೊರಡಬೇಕು. ಕೇವಲ ಐದಾರು ಕಿಲೋ ಮೀಟರ್ ದೂರವಿದ್ದರು ಗಂಟೆಗಟ್ಟಲೇ ಜರ್ನಿಯಲ್ಲಿ ಕಳೆಯಬೇಕಾಗುತ್ತದೆ. ಅದು ಬೆಂಗಳೂರಿನಲ್ಲಿ ವಾಸಿಸುವವರಿಗೆ ಸಾಕಷ್ಟು ಅನುಭವ ಆಗಿರುತ್ತದೆ. ಅದೇ ಅನುಭವ ಇದೀಗ ಅಮೃತಾ ಅಯ್ಯಂಗಾರ್ ಅವರಿಗೂ ಆಗಿದೆ. ಜಸ್ಟ್ 13 ಕಿಲೋ ಮೀಟರ್ ದೂರ ಕ್ರಮಿಸುವುದಕ್ಕೆ ಅಮೃತಾ ಅಯ್ಯಂಗಾರ್ ಅವರಿಗೆ ಸಾಕು ಸಾಕಾಗಿ ಹೋಗಿದೆ. ಹೇಗೆ ಅಂತೀರಾ ಅದೇ ಬೆಂಗಳೂರಿನ ಟ್ರಾಫಿಕ್ ವಿಶೇಷತೆ.

Amrutha Iyengar shared her travel time between JP Nagar to Sadashivanagar Bengaluru

ಅಮೃತಾ ಅಯ್ಯಂಗಾರ್ ಹೊರಟಿದ್ದು ಜೆಪಿ ನಗರದಿಂದ. ತಲುಪಬೇಕಾದ ಜಾಗ ಸದಾಶಿವನಗರ ಆಗಿತ್ತು. ಅಲ್ಲಿಂದ ಇಲ್ಲಿಗೆ ಜಸ್ಟ್ 13 ಕಿಲೋ ಮೀಟರ್. ತಲುಪಬೇಕಾದ ಸ್ಥಳ ತಲುಪುವಷ್ಟರಲ್ಲಿ ಬರೋಬ್ಬರಿ ಎರಡು ಗಂಟೆ ಬೇಕಾಗಿತ್ತು. ನಿಜಕ್ಕೂ ಅಮೃತಾ ಅಯ್ಯಂಗಾರ್ ಟ್ರಾಫಿಕ್‌ನಲ್ಲಿಯೇ ಸುಸ್ತಾಗಿ ಹೋಗಿದ್ದಾರೆ. ಅದರ ಎರಡು ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ‌ಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ನಟಿ ಅಮೃತಾ ಅಯ್ಯಾಂಗರ್ ಆಟೋದಲ್ಲಿ ಪ್ರಯಾಣ ಮಾಡಿರೋದು ಮತ್ತೊಂದು ವಿಶೇಷ.

ಸಾಮಾನ್ಯವಾಗಿ ಸೆಲೆಬ್ರೆಟಿಗಳ ಲೈಫ್ ಸ್ಟೈಲ್ ಬಗ್ಗೆ ಜನ ಸಾಮಾನ್ಯರ ನಿರೀಕ್ಷೆಯೂ ದೊಡ್ಡಮಟ್ಟಕ್ಕೆ ಇರುತ್ತದೆ. ಎಲ್ಲರೂ ಓಡಾಡುವುದು ದೊಡ್ಡ ದೊಡ್ಡ ಕಾರಲ್ಲಿಯೇ ಆಗಿರುತ್ತೆ. ಫುಡ್ ಎಲ್ಲಾ ಫೈವ್ ಸ್ಟಾರ್ ಹೊಟೇಲ್‌ಗಳೇ ಆಗಿರುತ್ತೆ ಎಂದೇ ಭಾವಿಸಿರುತ್ತಾರೆ. ಆದರೆ ಅವರಲ್ಲಿಯೂ ಕೂಡ ಕೆಲವೊಮ್ಮೆ ಸಾಮಾನ್ಯರಂತೆಯೇ ಜೀವನ ನಡೆಸುತ್ತಾರೆ. ಅದೇ ರೀತಿ ಅಮೃತಾ ಅಯ್ಯಂಗಾರ್ ಒಬ್ಬ ಸೆಲೆಬ್ರೆಟಿಯಾಗಿ ಹೈಫೈ ಜೀವನವನ್ನು ನಡೆಸಿದ್ದಾರೆ. ಈಗ ಆಟೋದಲ್ಲಿ ಸಾಮಾನ್ಯರಂತೆ ಪ್ರಯಾಣವನ್ನು ಬೆಳೆಸಿದ್ದಾರೆ. ಇದು ಆಶ್ಚರ್ಯವಾದರೂ ಖುಷಿ ಪಡುವ ವಿಚಾರವೇ ಆಗಿದೆ.

Amrutha Iyengar shared her travel time between JP Nagar to Sadashivanagar Bengaluru

ಬೆಂಗಳೂರಿನ ಜನಕ್ಕೆ ಅಮೃತಾ ಅಯ್ಯಂಗಾರ್ ಬೇಗ ಗುರುತು ಸಿಗುತ್ತಾರೆ‌. ಕಂಡರೆ ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ. ಫೋಟೋ, ಸೆಲ್ಫಿ ಅಂತ ವಿಡಿಯೋ, ಫೋಟೋಗೆ ಮುಗಿ ಬೀಳುತ್ತಾರೆ. ಒಬ್ಬ ಸೆಲೆಬ್ರೆಟಿಗೆ ಇದು ಕಾಮನ್ ಅಲ್ವಾ. ಆ ಎಲ್ಲಾ ಗೋಜಲಗಳಿಂದ ತಪ್ಪಿಸಿಕೊಳ್ಳಲು ಅಮೃತಾ ಅಯ್ಯಂಗಾರ್ ಮಾಡಿದ ಪ್ಲ್ಯಾನ್ ಬೇರೆಯದ್ದೆ ಆಗಿತ್ತು. ಯಾರಿಗೂ ಗೊತ್ತಾಗದಂತೆ ಮುಖಕ್ಕೆ ಮಾಸ್ಕ್ ಹಾಕಿ, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ಆಟೋ ಹತ್ತಿದ್ದರು.

ಒಂದು ವೇಳೆ ಅವರೇ ಈ ವಿಡಿಯೋವೊಂದನ್ನ ತಮ್ಮ ಪ್ರೊಫೈಲ್‌ನಲ್ಲಿ ಹಂಚಿಕೊಂಡಿಲ್ಲದೇ ಹೋಗಿದ್ದರೆ ಖಂಡಿತ ಇದು ಅವರೇನಾ ಅಂತ ಯಾರಿಗೂ ಗೊತ್ತಾಗ್ತಾ ಇರಲಿಲ್ಲ. ಒಟ್ಟಾರೆ ಅಮೃತಾ ಅಯ್ಯಂಗಾರ್ ಅವರಿಗೆ ಇವತ್ತು ಬೆಂಗಳೂರಿನ ಟ್ರಾಫಿಕ್ ಬಿಸಿ ತಗುಲಿದೆ. ಮೊದಲೇ ಉರಿ ಉರಿ ಬಿಸಿಲು, ಆಟೋದಲ್ಲಿ ಬೇರೆ ಪಯಣ, ಏಸಿ ಇಲ್ಲ, ಮಾಸ್ಕ್ ತೆಗೆಯಂಗಿಲ್ಲ. ಅತ್ತ ಬೇಗನೇ ಹೋಗುವಂತೆಯೂ ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಫೈನಲಿ ಜೆಪಿ‌ ನಗರದಿಂದ ಅಮೃತಾ ಅಯ್ಯಂಗಾರ್ ಸದಾಶಿವ ನಗರ ತಲುಪಿದ್ದು ಬರೋಬ್ಬರಿ ಎರಡು ಗಂಟೆಗಳ ಪಯಣದ ನಂತರ. ಒಂದು ಬಿರುಗಾಳಿ ಬೀಸಿ, ತಣ್ಣನೆಯ ವಾತಾವರಣ ಸೃಷ್ಟಿಯಾದಂತ ಅನುಭವವಂತೂ ಅಮೃತಾ ಅಯ್ಯಂಗಾರ್ ಅವರಿಗೆ ಆಗಿರುತ್ತದೆ.

More from Filmibeat

English summary
Amrutha Iyengar shared her travel time between JP Nagar to Sadashivanagar Bengaluru.
Read more about: amrutha actress lifestyle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X