ಚುಮು ಚುಮು ಚಳಿಯಲ್ಲಿ ಟ್ರಿಪ್; ಕಾಶ್ಮೀರದಲ್ಲಿ ಮಿಂಚಿದ ಶ್ವೇತಾ ಚಂಗಪ್ಪ
ನಟಿ ಕಮ್ ನಿರೂಪಕಿ ಶ್ವೇತಾ ಚೆಂಗಪ್ಪ ಕಾಶ್ಮೀರವನ್ನೆಲ್ಲಾ ಸುತ್ತಿ ಬಂದಿದ್ದಾರೆ. ಈಗ ಬೇಸಿಗೆ ರಜೆ ಬೇರೆ. ಎಲ್ಲಾ ತಾಯಂದಿರಿಗೂ ರಜೆ ಸಿಕ್ಕಂತೆಯೇ ಸರಿ. ಶ್ವೇತಾ ಅವರಿಗೂ ಮಗನ ಶಾಲೆ, ಓದು ಇರುವ ಕಾರಣ ರಜಾ ದಿನಕ್ಕೆ ರಿಫ್ರೆಶ್ ಆಗಲು ಕಾಶ್ಮೀರಕ್ಕೆ ಹೋಗಿದ್ದಾರೆ. ತಮ್ಮ ಸ್ನೇಹಿತೆಯ ಜೊತೆಗೂಡಿ ಕಾಶ್ಮೀರದ ಸೌಂದರ್ಯವನ್ನೆಲ್ಲ ಸವಿದು ಬಂದಿದ್ದಾರೆ.
ಶ್ವೇತಾ ಚಂಗಪ್ಪ ಹಂಚಿಕೊಂಡಿರುವ ವಿಡಿಯೋಗಳನ್ನು ನೋಡ್ತಾ ಇದ್ದರೆ ಹಲವು ದಿನಗಳ ಪ್ಲ್ಯಾನ್ ಹಾಕಿಕೊಂಡೆ ಟ್ರಿಪ್ ಹೊಡೆದು ಬಂದವರಂತೆ ಇದೆ. ಡೇ ಒನ್‌ನಿಂದ ಹಿಡಿದು ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ. ಅಲ್ಲಿ ಹೇಗೆಲ್ಲಾ ಎಂಜಾಯ್ ಮಾಡಿದೆವು ಎಂದು ವಿಡಿಯೋಗಳನ್ನು ಹಾಕಿದ್ದಾರೆ.

ಕಾಶ್ಮೀರಕ್ಕೆ ಹೋಗುವದರಿಂದ ಹಿಡಿದು ಅಲ್ಲಿನ ವಿಶೇಷ ಸ್ಥಳಗಳಿಗೆ ಹೋದಲ್ಲೆಲ್ಲಾ ವಿಡಿಯೋ ಮಾಡಿದ್ದಾರೆ. ಇಲ್ಲಿಂದ ಹೊರಟವರಿಗೆ ಕಾಶ್ಮೀರ ಸಿಗುತ್ತಲೇ ಕಂಡಿದ್ದು ಮಂಜು ಕವಿದ ವಾತಾವರಣ. ಮಂಜನ್ನು ಕಂಡೊಡನೆ ಇಬ್ಬರು ಕುಣಿದು ಕುಪ್ಪಳಿಸಿದ್ದಾರೆ. ಆರಂಭದಲ್ಲಿಯೇ ಒಂದು ರೀಲ್ಸ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಬಳಿಕ ಬುಕ್ ಮಾಡಿದ್ದ ರೂಮ್‌ನಲ್ಲಿ ಸ್ಟೇ ಆಗಿ, ಫ್ರೆಶಪ್ ಆಗಿ, ಅಲ್ಲಿನ ಘಮ ಘಮ ಎನಿಸೋ ಟೀ ಕುಡಿದಿದ್ದಾರೆ. ಮೊದಲೇ ಹಿಮದ ಹನಿಗಳು ತಲೆಯ ಮೇಲೆಲ್ಲಾ ಬೀಳುತ್ತಿತ್ತು. ಶ್ವೇತಾ ಅವರಿಗೂ ಕೈ ಅದಾಗಲೇ ನಡುಗುತ್ತಿತ್ತು. ಜಾಕೆಟ್ ಹಾಕಿಕೊಂಡು, ಬಿಸಿ ಬಿಸಿ ಟೀ ಕುಡಿದರು ಅವರಿಂದ ಆ ಚಳಿಯನ್ನು ಸಹಿಸುವುದಕ್ಕೆ ಸಾಧ್ಯವೇ ಆಗಲಿಲ್ಲ.
ಆದರೆ, ಹೋಗುವುದೇ ಅಪರೂಪ. ಅಲ್ಲಿ ಎಂಜಾಯ್ ಮಾಡದೆ ಬಿಡೋದಕ್ಕೆ ಸಾಧ್ಯವೇ..? ಹಿಮದ ಗಡ್ಡೆಗಳನ್ನು ಹಿಡಿದು ಒಬ್ಬರಿಗೊಬ್ಬರು ಎಸೆದು ಎಂಜಾಯ್ ಮಾಡಿದ್ದಾರೆ. ಅಷ್ಟರಲ್ಲಿ ರಾತ್ರಿಯಾಗಿದೆ. ರೂಮಿಗೆ ಬಂದ ಗೆಳತಿಯರು ಸ್ವಲ್ಪ ಸಮಯ ರೆಸ್ಟ್ ಮಾಡಿದ್ದಾರೆ. ಆ ರಾತ್ರಿ ವೇಳೆಯೂ ಶ್ವೇತಾ ಅವರಿದ್ದ ರೂಮಿಗೆ ಹಿಮ ಪರ್ವತ ಅದ್ಭುತವಾಗಿ ಕಾಣಿಸ್ತಾ ಇತ್ತು. ಹಿಮದ ಗಡ್ಡೆಗಳ ಸುತ್ತ, ಬೆಳಕನ್ನು ಹೊಟೇಲ್‌ನವರು ಬಿಟ್ಟಿದ್ದರು. ಫೈನಲಿ ಆ ರಾತ್ರಿಯೊಂದು ರೀಲ್ ಮಾಡಿದರು. ಕೆಲ ದಿನಗಳನ್ನು ಕಾಶ್ಮೀರದಲ್ಲಿಯೇ ಕಳೆದ ಶ್ವೇತಾ ಅಂಡ್ ಗೆಳತಿ ಬಹಳ ಸುಂದರವಾದ ದೃಶ್ಯಗಳನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಕ್ರೇಜಿಯಾಗಿರೋ ಸ್ನೋ ಬೈಕ್ ರೈಡ್ ಮಾಡಿ ಎಂಜಾಯ್ ಮಾಡಿದ್ದಾರೆ. ಕಾಶ್ಮೀರಕ್ಕೆ ಹೋದವರು ಈ ಸ್ನೋ ಬೈಕ್ ರೈಡ್ ಅನ್ನ ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ. ಅಷ್ಟೇ ಅಲ್ಲ, ಕಾಶ್ಮೀರದ ಡ್ರೆಸ್ ತೊಟ್ಟು ಪೋಸ್ ಕೊಟ್ಟಿದ್ದಾರೆ. ಸಂಜೆ ತಂಗಾಳಿಯ ತಂಪಲ್ಲಿ ಕೂತು ಬಿಸಿ ಬಿಸಿ ಕಾಶ್ಮೀರದ ಚಹಾವನ್ನು ಕುಡಿದಿದ್ದಾರೆ. ಕಾಶ್ಮೀರ್, ಶ್ರೀನಗರ್ ಪ್ರದೇಶಗಳನ್ನು ಸುತ್ತಾಡಿ, ಹಿಮದ ಮೇಲೆ ಏನೆಲ್ಲಾ ಆಟವಾಡಬಹುದೋ ಅದೆಲ್ಲವನ್ನು ಆಡಿ ಎಂಜಾಯ್ ಮಾಡಿಕೊಂಡು ಬಂದಿದ್ದಾರೆ. ಅವರ ವಿಡಿಯೋಗಳನ್ನು ನೋಡಿದರೇನೆ ಅದೆಷ್ಟು ಬ್ಯೂಟಿಫುಲ್ ಜರ್ನಿ ಅನ್ನೋದು ಅರ್ಥವಾಗುತ್ತದೆ. ಇಲ್ಲಿ ಮೊದಲೇ ಬಿರು ಬಿಸಿಲಿನಲ್ಲಿ ಬೆಂದಿದ್ದ ಶ್ವೇತಾ ಅಂಡ್ ಗೆಳತಿ ಅಲ್ಲಿ ಕಂಡ ಕಂಡಲ್ಲಿ ಐಸ್ ಗಡ್ಡೆಯಲ್ಲಿ ಬಿದ್ದು ಒದ್ದಾಡಿ ಬಂದಿದ್ದಾರೆ.
ಅಷ್ಟೇ ಅಲ್ಲ ಮಕ್ಕಳಿಗೆ ರಜೆ ಇರುವ ಕಾರಣ ತನ್ನ ಗೆಳತಿಯರು ಹಾಗೂ ಅವರ ಮಕ್ಕಳೆಲ್ಲಾ ಸೇರಿ ಒಂದು ರೆಸಾರ್ಟ್‌ಗೂ ಹೋಗಿ ಬಂದಿದ್ದಾರೆ. ಅಲ್ಲಿ ಗೆಳತಿಯರ ಜೊತೆಗೂಡಿ ಎಷ್ಟು ಎಂಜಾಯ್ ಮಾಡಿದ್ದಾರೆ ಎಂಬ ವಿಡಿಯೋ ಹಂಚಿಕೊಂಡಿದ್ದಾರೆ. ಮಕ್ಕಳಿಗೆ ಶಾಲೆ ಶುರುವಾಗುವುದಕ್ಕೂ ಮುನ್ನ ಇದೊಂದು ರಿಫ್ರೆಶ್ ಮೆಂಟ್ ಆದಂತೆಯೇ ಆಗುತ್ತದೆ. ಅದರಲ್ಲೂ ಅಪ್ಪ ಅಮ್ಮ ಮಕ್ಕಳ ಜೊತೆಗೆ ಸಮಯ ಕಳೆದಂತೆ ಆಗುತ್ತದೆ.


Click it and Unblock the Notifications











