ಪುನೀತ್ ರಾಜ್ ಕುಮಾರ್ ಜೊತೆ ಅಭಿನಯಿಸಿರುವ ಈ ನಟಿ ಯಾರು? ಗುರುತಿಸಬಲ್ಲೀರಾ?
ಕ್ಷೇತ್ರ ಯಾವುದೇ ಇರಲಿ ಚಾಲ್ತಿಯಲ್ಲಿ ಇದ್ದರಷ್ಟೇ ಬೆಲೆ. ಇಲ್ಲದೇ ಇದ್ದರೆ ಎಷ್ಟೇ ಜಾಣನಾದರೂ ಜಗತ್ತು ಕೋಣ ಎಂದೇ ಅಂದುಕೊಳ್ಳುತ್ತೆ. ಗೆದ್ದೆತ್ತಿನ ಬಾಲವನ್ನೇ ಹಿಡಿಯುತ್ತೆ. ಈ ಕಾರಣಕ್ಕೆ ಚಲಾವಣೆಯಲ್ಲಿರಲು ಅನೇಕರು ಅನೇಕ ತರಹದ ಸರ್ಕಸ್ ಗಳನ್ನ ಇಲ್ಲಿ ಮಾಡ್ತಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಂತೂ ನಾನಾ ತರಹದ ಕಸರತ್ತುಗಳನ್ನ ಅನೇಕರು ಮಾಡಲು ಮುಂದಾಗ್ತಾರೆ. ಇನ್ನೂ ಬಟ್ಟೆ ಬಿಚ್ಚುವುದು...
ಅದೇ ಅವತಾರದಲ್ಲಿ ಫೋಟೊಗೆ ಪೋಸು ಕೊಡುವುದು ಎಲ್ಲವೂ ಸರ್ವೇ ಸಾಧಾರಣವಾಗಿದೆ. ಅದರಲ್ಲೂ ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಆಗುತ್ತಿದ್ದಂತೆ ಇಂತಹ ಅಟಾಟೋಪಗಳಿಗೆ ಎಲ್ಲಿಲ್ಲದ ಬೇಡಿಕೆ. ಜನ ಇದನ್ನೇ ಬಯಸುತ್ತಾರೆ ಎಂದು ತಪ್ಪು ತಿಳಿದುಕೊಳ್ಳುವ ಸಾಕಷ್ಟು ಮಂದಿ ಇಂತಹ ಕುಕೃತ್ಯಗಳನ್ನು ಎಗ್ಗಿಲ್ಲದೇ ಸಿಗ್ಗಿಲ್ಲದೇ ಮಾಡುತ್ತಲೇ ಇರುತ್ತಾರೆ.

ಆದರೆ ಅಲ್ಲೊಬ್ಬರು.. ಇಲ್ಲೊಬ್ಬರು.. ಇದಕ್ಕೆ ತದ್ವಿರುದ್ದ ಎಂಬಂತೆ ಇರುತ್ತಾರೆ. ಉದಾಹರಣೆಗೆ ಪಾರ್ವತಿ ತಿರುವೋತ್ತು ಅಲಿಯಾಸ್ ಪಾರ್ವತಿ ಮೆನನ್. ಹೌದು ಪಾರ್ವತಿ ಮೆನನ್.. ಮಲಯಾಳಂನ ಈ ಮೋಹಕತಾರೆ ಕನ್ನಡಿಗರಿಗೆ ಅಪರಿಚತರೇನಲ್ಲ. ಪುನೀತ್ ರಾಜ್ ಕುಮಾರ್ ಅಭಿನಯದ ''ಮಿಲನ'' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಪಾರ್ವತಿ ಆ ನಂತರ ''ಮಳೆ ಬರಲಿ ಮಂಜೂ ಇರಲಿ''.. ''ಪೃಥ್ವಿ''.. ಮತ್ತು ''ಅಂದರ್ ಬಾಹರ್'' ಚಿತ್ರಗಳಲ್ಲಿ ನಟಿಸಿದರು. ಕನ್ನಡಿಗರ ಹೃದಯವನ್ನೂ ಗೆದ್ದರು.
ಇನ್ನೂ ಮಾಲಿವುಡ್‌ನ ಈ ಬಟ್ಟಲುಗಣ್ಣಿನ ಚೆಲುವೆ ಕೇವಲ ತಮ್ಮ ಅಭಿನಯದಿಂದ ಮಾತ್ರ ಹೆಸರುವಾಸಿಯಾಗಿಲ್ಲ. ಬದಲಿಗೆ ತಮ್ಮ ನೇರ ಹಾಗೂ ದಿಟ್ಟ ನುಡಿಗಳಿಂದ ಕೂಡ ಹೆಸರುವಾಸಿಯಾದವರು ಇವರು. ಮಲಯಾಳಂನ ಸ್ಟಾರ್ ಒಬ್ಬರ ವಿರುದ್ಧ ನೇರಾನೇರವಾಗಿಯೇ ವಾಗ್ದಾಳಿ ನಡೆಸಿದ್ದ ಪಾರ್ವತಿ ವಿರುದ್ಧ ಆ ಸ್ಟಾರ್ ಅಭಿಮಾನಿಗಳು ಆ ನಂತರ ಸೈಬರ್ ಯುದ್ಧವನ್ನೇ ಸಾರಿದ್ದರು. ಆದರೆ ಪಾರ್ವತಿ ಮಾತ್ರ ಕುಗ್ಗಲಿಲ್ಲ. ಎದೆಗುಂದಲಿಲ್ಲ. ''ಉಯರೆ''ಯಂತಹ ಸಿನಿಮಾ ಮೂಲಕ ಮತ್ತೆ ಮಾಲಿವುಡ್‌ನಲ್ಲಿ ಪುಟಿದೆದ್ದವರು ಪಾರ್ವತಿ.
ಇಂಥಾ ಪಾರ್ವತಿ ಸದ್ಯ ವಿಚಿತ್ರ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೆ ದೂಡಿದ್ದಾರೆ. ಆಫ್-ಶೋಲ್ಡರ್ ಲೇಸ್ ಬಾಡಿಕಾನ್ ಕಾಸ್ಟೂಮ್‌ನಲ್ಲಿ ಪಾರ್ವತಿ ಇಲ್ಲಿ ಕಾಣಿಸಿಕೊಂಡಿದ್ದು ಪಾಶ್ಚಾತ್ಯ ಸಂಸ್ಕ್ರತಿಯ ಉತ್ಸವ ಹ್ಯಾಲೋವೀನ್ ಹಿನ್ನೆಲೆಯಲ್ಲಿ ಈ ಫೋಟೊಶೂಟ್‌ನ ಪಾರ್ವತಿ ತಿರುವೋತು ಮಾಡಿಸಿದ್ದಾರೆ. ಈ ಫೋಟೊಶೂಟ್‌ನ್ನು ಪ್ರಕಟಿಸಲಿರುವ ''ದಿ ದರ್ಟಿ ಮ್ಯಾಗ್‌ಜಿನ್''ಗೆ ಧನ್ಯವಾದ ಹೇಳಿರುವ ಪಾರ್ವತಿ ''ಅಲ್ಲಿ ಅವಳು ಉದಯಿಸುತ್ತಾಳೆ'' ಎಂದು ತಮ್ಮ ಈ ಫೋಟೊಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.
ಸದ್ಯ ಪಾರ್ವತಿ ತಿರುವೋತು ಅವರ ಈ ಲೇಟೆಸ್ಟ್ ಫೋಟೊಶೂಟ್‌ಗೆ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಲವರು ಈ ರೂಪದಲ್ಲಿ ನಿಮ್ಮನ್ನು ಕಂಡು ಹಿಡಿಯುವುದೇ ಕಷ್ಟ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದ್ಭುತ.. ಸೂಪರ್.. ಸಖತ್.. ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಬೆಂಕಿಯ ಎಮೋಜಿಯನ್ನು ಕೂಡ ಕಳುಹಿಸಿದ್ದಾರೆ.

ಇನ್ನೂ ಕೆಲವರು ನಟಿ ಪಾರ್ವತಿ ತಿರುವೋತು ತಮ್ಮ ನಟನೆ ಹಾಗೂ ಫ್ಯಾಷನ್ ಪ್ರಯೋಗಗಳಿಂದ ಸದಾ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಈ ಚಿತ್ರಗಳಲ್ಲಿ ಪಾರ್ವತಿ, ಆಫ್-ಶೋಲ್ಡರ್ ಲೇಸ್ ಬಾಡಿಕಾನ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಇದು ಅವರ ಹೊಸ ಲುಕ್ ಆಗಿದೆ.
ಹ್ಯಾಲೋವೀನ್ ವಿಶೇಷ ಫೋಟೋಶೂಟ್‌ನಂತೆ ಕಾಣುತ್ತಿದೆ ಎಂದರೆ ಮತ್ತೂ ಕೆಲವರು ನೀವು ಕಣ್ಣಿಗೆ ಹಾಕಿಕೊಂಡ ಲೆನ್ಸ್ ನೀಲಿ ಬಣ್ಣದ್ದಾ..? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಇವರ ಕನ್ನಡದ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಜೊತೆ ''ಮಿಲನ'' ಮತ್ತು ''ಪೃಥ್ವಿ''ಯಲ್ಲಿ ಅಭಿನಯಿಸಿದ್ದು ನೀವೇನಾ..? ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಪಾರ್ವತಿ ತಿರುವೋತು ಅವರ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇನ್ನುಳಿದಂತೆ ಹೃತಿಕ್ ರೋಷನ್ ಜೊತೆ ವೆಬ್ ಸರಣಿಯೊಂದರಲ್ಲಿ ಪಾರ್ವತಿ ಮೆನನ್ ಕಾಣಿಸಿಕೊಳ್ಳಲಿದ್ದಾರೆ. ಈ ವೆಬ್ ಸರಣಿ ಹೃತಿಕ್ ರೋಷನ್ ನಿರ್ಮಾಣದಡಿ ಸಿದ್ದವಾಗುತ್ತಿರುವ ಮೊದಲ ಚಿತ್ರ ಎನ್ನುವುದು ವಿಶೇಷ. ಈ ಚಿತ್ರ ಹೊರತು ಪಡಿಸಿದರೆ ''ಪ್ರಥಮದೃಷ್ಟ್ಯಾ ಕುಟ್‌ಕರ್'' ಮತ್ತು ''ನೋಬಡಿ'' ಚಿತ್ರಗಳಲ್ಲಿ ಪಾರ್ವತಿ ತಿರುವೋತು ಅವರ ದರ್ಶನವನ್ನು ನೀವು ಮಾಡಬಹುದು.


Click it and Unblock the Notifications











