ಹೆಣ್ಣು ಮಕ್ಕಳ ಕಣ್ಣು ಕುಕ್ಕಿದ ಅಶ್ವಿನಿ ಪುನೀತ್ ರಾಜ್ಕುಮಾರ್; ಉಟ್ಟಿರುವ ಸೀರೆಯ ಸ್ಟೆಷಾಲಿಟಿ ಏನು?
ಸೀರೆಗಳ ರಾಯಭಾರಿ ಮಾಡೋದಾದ್ರೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನೇ ಮಾಡಬೇಕು. ಯಾಕಂದ್ರೆ ಎಲ್ಲಿಯೇ ಹೋದರೂ ಎಲ್ಲಿಯೇ ಬಂದರೂ ಹೆಚ್ಚಾಗಿ ಅವರು ಉಡುವುದು ಸೀರೆಯನ್ನೇ. ತುಂಬಾ ಸಿಂಪಲ್ ಆಗಿರುವ ಸೀರೆಗಳನ್ನೇ ಹಾಕಿದರೂ ಸಿಕ್ಕಾಪಟ್ಟೆ ಆಕರ್ಷಣೀಯವಾಗಿರುತ್ತವೆ. ಆ ರೀತಿಯ ಸೀರೆಗಳನ್ನೇ ಉಡುತ್ತಾರೆ. ಮಾಡರ್ನ್ ಡ್ರೆಸ್ ಹಾಕಲ್ಲ ಅಂತಲ್ಲ. ಆದರೆ, ಕೆಲ ವರ್ಷಗಳಿಂದ ಸಾರ್ವಜನಿಕ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿಯೇ ಕಂಡಿದ್ದು ಹೆಚ್ಚು.
ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಮಿಲನಾ ನಾಗರಾಜ್ ಜೊತೆಗೆ ಕೂತು ಕೊಂಚ ನಕ್ಕು ನಲಿದಿದ್ದಾರೆ. ಈ ವೇಳೆ ಅವರಾಕಿದ್ದ ಸೀರೆ ಗಮನ ಸೆಳೆದಿದೆ. ಅದರಲ್ಲೂ ಆ ಸೀರೆ ನೋಡುವುದಕ್ಕೆ ಸಿಕ್ಕಾಪಟ್ಟೆ ಸಿಂಪಲ್ ಆಗಿದೆ. ಆದರೆ, ತೀರಾ ಕಡಿಮೆ ಬೆಲೆಯಂತು ಅಲ್ವೆ ಅಲ್ಲ. ಪ್ಲೈನ್ ಸೀರೆಯಾದರೂ ಹೆಣ್ಣು ಮಕ್ಕಳ ಗಮನ ಸೆಳೆಯುವಂತದ್ದಾಗಿದೆ. ಇವೆಂಟ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಣ್ಣು ಮಕ್ಕಳ ಗಮನವನ್ನು ಸೆಳೆದಿದ್ದಾರೆ. ಅದರಲ್ಲೂ ಅಪ್ಪು ಪತ್ನಿ ಧರಿಸಿದ್ದ ಸಿಂಪಲ್ ಸೀರೆಯ ಮೇಲೆ ಕಣ್ಣಿಟ್ಟಿದ್ದಾರೆ. ಅಷ್ಟಕ್ಕೂ ಈ ಸೀರೆಯ ಸ್ಪೆಷಾಲಿಟಿ ಏನು ಗೊತ್ತೇ?

ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಹಾಕಿರುವ ಪಾಚಿ ಕಲರ್ ಸೀರೆ ಹೆಣ್ಣು ಮಕ್ಕಳಿಗೆ ಇಷ್ಟ ಆಗಿದೆ. ಎಲ್ಲಾ ಸೀರೆಗಳಿಗೂ ಅಂಚು ಬರುತ್ತದೆ. ಅದು ಡಿಸೈನ್‌ನಲ್ಲಿ ಇರುತ್ತೆ. ಹಾಗೇ ಸಣ್ಣ ಬಾರ್ಡರ್‌ನಲ್ಲೂ ಸಿಗುತ್ತವೆ. ದೊಡ್ಡ ಬಾರ್ಡರ್‌ನಲ್ಲೂ ಸಿಗುತ್ತವೆ. ಆದರೆ, ಅಶ್ವಿನಿ ಪುನೀತ್ ರಾಜ್ಕುಮಾರ್ ಉಟ್ಟಿರುವ ಸೀರೆಯನ್ನು ದಾರದ ಎಳೆಯಲ್ಲಿ ಡಿಸೈನ್ ಮಾಡಲಾಗಿದೆ. ಅದು ಮೂರು ಬಣ್ಣದಲ್ಲಿ. ಸೀರೆಯ ಕೆಳಭಾಗದ ಅಂಚಿನಲ್ಲಿ ಜಸ್ಟ್ ಒಂದು ಎಳೆಯಲ್ಲಿ ಡಿಸೈನ್ ಮಾಡಿದ್ದಾರೆ. ಲೈಟ್ ಪಿಂಕ್ ಎಳೆಯನ್ನ ಬಿಡಿಸಲಾಗಿದೆ. ಅದು ಸೀರೆಯ ಅಂಚಿನಲ್ಲಿ ಇಲ್ಲದೆ ಕೊಂಚ ಮೇಲೆ ಇದೆ. ಅದರ ಜೊತೆಗೆ ಸೆಂಟರ್‌ನಲ್ಲಿ ಉದ್ದುದ್ದ ಎಳೆಗಳನ್ನ ಬಿಡಿಸಲಾಗಿದೆ. ಅದು ಹಳದಿ, ಪಿಂಕ್ ಮತ್ತು ಬ್ಲೂ ಕಲರ್ ಎಳೆಗಳಾಗಿವೆ. ಪಾಚಿ ಹಸಿರಿನ ಮೇಲೆ ಈ ಎಲ್ಲಾ ಬಣ್ಣದಲ್ಲೂ ಎಳೆಗಳ ಡಿಸೈನ್ ಮಾಡಲಾಗಿದೆ. ಇದು ಈಗಿನ ಹೊಸತರದ ಸೀರೆಯಾಗಿದೆ. ಇದರ ಆನ್‌ಲೈನ್ ಬೆಲೆ ಬಂದು 36,800 ರೂಪಾಯಿ ತೋರಿಸ್ತಾ ಇದೆ. ಸಿಂಪಲ್ ಆಗಿದ್ದರು ದುಬಾರಿಯಾಗಿಯೇ ಕಾಣಿಸ್ತಾ ಇದೆ.
ಇನ್ನು ಈ ಸೀರೆಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಫುಲ್ ನೆಕ್ ಬ್ಲೌಸ್ ಅನ್ನ ಸ್ಟಿಚ್ ಮಾಡಿಸಿದ್ದಾರೆ. ಅದಕ್ಕೆ ಮ್ಯಾಚ್ ಆಗುವ ಕಾಂಟ್ರೆಸ್ ಬ್ಲೌಸ್ ಅನ್ನ ಅವರು ಸ್ಟಿಚ್ ಮಾಡಿಸಿದ್ದಾರೆ. ಆ ಸೀರೆಯ ಬ್ಲೌಸ್ ಅನ್ನ ಹೋಲಿಸಬೇಕೆಂದರೆ ಗ್ರೀನ್ ಕಲರ್‌ನಲ್ಲಿಯೇ ಬರಲಿದೆ. ಆದರೆ, ಅವರು ಕಾಂಟ್ರೆಸ್ಟ್ ಬ್ಲೌಸ್ ಹೊಲಿಸಿದ್ದಾರೆ. ಸದ್ಯ ಈ ಸೀರೆ ಹೆಣ್ಣು ಮಕ್ಕಳ ಗಮನ ಸೆಳೆಯುತ್ತಿದೆ. ಯಾವುದಾದರೂ ಸ್ಪೆಷಲ್ ಕಾರ್ಯಕ್ರಮಗಳಿಗೆ ಈ ಸೀರೆಯನ್ನ ಹಾಕಬಹುದು ಅಂತ ಸ್ಕೆಚ್ ಹಾಕ್ತಾ ಇದ್ದಾರೆ.

ಅಶ್ವಿನಿ ಪುನೀತ್ ರಾಜ್‍ಕುಮಾರ್ ಸ್ಪೂರ್ತಿಯ ಚಿಲುಮೆಯೇ ಸರಿ. ಅವರು ಎಲ್ಲಿಯೇ ಹೋದರು, ಎಲ್ಲಿಯೇ ಬಂದರೂ ಅಭಿಮಾನಿಗಳು ಮಾತ್ರ ಹಾಜರಿ ಇರ್ತಾರೆ. ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹು ಬೇಗನೆ ಬರುತ್ತವೆ. ಅಶ್ವಿನಿ ಅವರು ಅಷ್ಟೇ ನಗು ನಗುತ್ತಲೆ ಎಲ್ಲರನ್ನು ಮಾತಾಡಿಸುತ್ತಾರೆ. ಬಿಸಿನೆಸ್‌ನಲ್ಲೂ ಆಕ್ಟೀವ್ ಆಗಿರುವ ಅಶ್ವಿನಿ ಪುನೀತ್ ರಾಜ್‍ಕುಮಾರ್, ಹೊಸಬರ ಸಿನಿಮಾ ತಂಡಗಳಿಗೂ ಅಷ್ಟೇ ಪ್ರೋತ್ಸಾಹವನ್ನು ನೀಡುತ್ತಾರೆ. ಸದ್ಯ ಅಪ್ಪು ಕನಸ ಅನ್ನು ನನಸು ಮಾಡುತ್ತಿದ್ದಾರೆ. ಜೂನಿಯರ್ ಟೋಸ್ ಅನ್ನ ಈಗಾಗಲೇ ಶುರು ಮಾಡಿದ್ದಾರೆ. ಆ ಮೂಲಕ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಒತ್ತು ನೀಡಿದ್ದಾರೆ.


Click it and Unblock the Notifications











