52ರ ಹರೆಯದಲ್ಲೂ ಸೋನು ಸೂದ್ ಸಿಕ್ಸ್ ಪ್ಯಾಕ್ ಗುಟ್ಟು ರಟ್ಟು: ರಿಯಲ್ ಹೀರೋ ಫಿಟ್ನೆಸ್ ಮಂತ್ರ ಇಲ್ಲಿದೆ

ತೆರೆಮೇಲೆ ನಟ-ನಟಿಯರು ಚೆಂದವಾಗಿ ಕಾಣಲೇಬೇಕು ಎನ್ನುವ ಅಲಿಖಿತ ನಿಯಮವೊಂದಿದೆ. ಅದರಲ್ಲೂ ನಟನೆಯ ಜೊತೆಗೆ ಮೈಕಟ್ಟು ಚೆನ್ನಾಗಿದ್ದರೆ ಆ ನಟನಿಗೆ ಇರುವ ಡಿಮ್ಯಾಂಡ್ ಬೇರೆಯೇ ಇರುತ್ತದೆ. ದಶಕಗಳಿಂದ ಚಿತ್ರರಂಗದಲ್ಲಿ ಮಿಂಚುತ್ತಿರುವ ಈ ನಟ ಎಲ್ಲರಿಗೂ ಚಿರಪರಿಚಿತ. ಕೇವಲ ನಟನೆಯಿಂದ ಮಾತ್ರವಲ್ಲ, ತಮ್ಮ ಸಮಾಜ ಸೇವೆಯಿಂದಲೂ ಇವರು ಮನೆಮಾತಾಗಿದ್ದಾರೆ.

ಇಂದು ಅನೇಕ ಯುವ ನಟರು ಸಿಕ್ಸ್ ಪ್ಯಾಕ್ ಮಾಡಲು ಹರಸಾಹಸ ಪಡುತ್ತಾರೆ. ಜಿಮ್ನಲ್ಲಿ ಗಂಟೆಗಟ್ಟಲೆ ಕಳೆಯುತ್ತಾರೆ. ಆದರೆ ಈ ನಟನಿಗೆ ವಯಸ್ಸು 50ರ ಗಡಿ ದಾಟಿದರೂ ಇವರ ಫಿಟ್ನೆಸ್ ನೋಡಿ ಪಡ್ಡೆ ಹುಡುಗರು ಕೂಡ ಅಚ್ಚರಿ ಪಡುತ್ತಾರೆ. ಇವರ ಬಾಡಿ ಬಿಲ್ಡಿಂಗ್ ಹಿಂದೆ ಒಂದು ದೊಡ್ಡ ಇತಿಹಾಸವೇ ಇದೆ.

At 52 Sonu Sood s Six-Pack Fitness Secret Shocks Fans No Extreme Diet Only Discipline

ಸಿನಿಮಾ ತೆರೆಯ ಮೇಲೆ ವಿಲನ್ ಆಗಿ ಅಬ್ಬರಿಸಿದರೂ, ನಿಜ ಜೀವನದಲ್ಲಿ ಇವರು ಕರುಣಾಮಯಿ. ಕೋವಿಡ್ ಸಮಯದಲ್ಲಿ ಇವರು ಮಾಡಿದ ಕೆಲಸ ಇಡೀ ದೇಶವೇ ಮೆಚ್ಚುವಂತೆ ಮಾಡಿತು. ಇಷ್ಟೆಲ್ಲಾ ಬ್ಯುಸಿ ಶೆಡ್ಯೂಲ್ ಮಧ್ಯೆ ಕೂಡ ಇವರು ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದು ಎಲ್ಲರ ಕುತೂಹಲ. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.

ಸೋನು ಸಿಕ್ಸ್ ಪ್ಯಾಕ್ ರಹಸ್ಯ...

ಸಾಮಾನ್ಯವಾಗಿ ಸಿಕ್ಸ್ ಪ್ಯಾಕ್ ಅಂದ ಕೂಡಲೇ ನಮಗೆ ನೆನಪಾಗುವುದು ಕಠಿಣ ಡಯಟ್. ಅನ್ನ ತಿನ್ನಬಾರದು, ಸಿಹಿ ಮುಟ್ಟಬಾರದು ಎಂಬ ನಿಯಮಗಳು ಇರುತ್ತವೆ. ಆದರೆ ನಮ್ಮ 'ರಿಯಲ್ ಹೀರೋ' ಸೋನು ಸೂದ್ ಅವರ ಹಾದಿಯೇ ಬೇರೆ. ಅವರು ತಮ್ಮ ಈ ಅದ್ಭುತ ಮೈಕಟ್ಟಿನ ಬಗ್ಗೆ ಮಾತನಾಡುತ್ತಾ ಒಂದು ಶಾಕಿಂಗ್ ವಿಷಯ ಹಂಚಿಕೊಂಡಿದ್ದಾರೆ. "ನಾನು ಎಂದಿಗೂ ಎಕ್ಸ್ಟ್ರೀಮ್ ಡಯಟ್ ಮಾಡುವುದಿಲ್ಲ" ಎಂದು ಹೇಳುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.

ಹೌದು, ಸೋನು ಸೂದ್ ಅವರಿಗೆ ಈಗ 52 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ಅವರು ಫಿಟ್ನೆಸ್ ಫ್ರೀಕ್. ಅವರು ಹೇಳುವ ಪ್ರಕಾರ, ದೇಹವನ್ನು ದಂಡಿಸುವುದು ಮುಖ್ಯವೇ ಹೊರತು ಉಪವಾಸ ಇರುವುದಲ್ಲ. ತುಂಬಾ ಜನರು ಸಿಕ್ಸ್ ಪ್ಯಾಕ್ ಮಾಡಲು ಊಟ ಬಿಡುತ್ತಾರೆ. ಆದರೆ ಸೋನು ಸೂದ್ ಮಾತ್ರ ಹೊಟ್ಟೆ ತುಂಬಾ ಊಟ ಮಾಡಿಕೊಂಡೇ ಬಾಡಿ ಬಿಲ್ಡಿಂಗ್ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಶಿಸ್ತಿನ ದಿನಚರಿ ಇವರ ಬಲ...

ಸೋನು ಸೂದ್ ಅವರು ನಂಬುವುದು ಒಂದೇ ಮಂತ್ರ, ಅದು 'ಶಿಸ್ತು'. ಇಂದಿನ ಕಾಲದಲ್ಲಿ ಜನರು ರಾತ್ರೋರಾತ್ರಿ ಬಾಡಿ ಬಿಲ್ಡಿಂಗ್ ಮಾಡಲು ತ್ವರಿತ ಪರಿಹಾರಗಳನ್ನು ಹುಡುಕುತ್ತಾರೆ. ಆದರೆ ಸೋನು ಸೂದ್ ಮಾತ್ರ ಇಂತಹ ಯಾವುದೇ ಶಾರ್ಟ್ಕಟ್ಗಳ ಮೊರೆ ಹೋದವರಲ್ಲ. ಬದಲಾಗಿ ಆರೋಗ್ಯಕರ ಅಭ್ಯಾಸಗಳ ಸುತ್ತ ನಿರ್ಮಿಸಲಾದ ಸುಂದರವಾದ ಮತ್ತು ರಚನಾತ್ಮಕ ದೈನಂದಿನ ದಿನಚರಿಯನ್ನು ಅವರು ತಪ್ಪದೇ ಪಾಲಿಸುತ್ತಾರೆ.

ಪ್ರತಿದಿನ ಅವರು ನಿಯಮಿತವಾಗಿ ವ್ಯಾಯಾಮ ಮಾಡುತ್ತಾರೆ. ಇವರ ವರ್ಕೌಟ್ ಶೈಲಿ ಕೂಡ ವಿಭಿನ್ನವಾಗಿದೆ. ಇವರು ಕೇವಲ ತೀವ್ರವಾದ ಹೃದಯ ರಕ್ತನಾಳದ ವ್ಯಾಯಾಮಗಳ ಮೇಲೆ ಅವಲಂಬಿತವಾಗಿಲ್ಲ. ಬದಲಾಗಿ ತಮ್ಮ ಮಾಂಸ ಖಂಡಗಳ ಬಲವನ್ನು ಹೆಚ್ಚಿಸಲು 'ಶಕ್ತಿ ತರಬೇತಿ' ಕಡೆಗೆ ಹೆಚ್ಚಿನ ಗಮನ ಹರಿಸುತ್ತಾರೆ. ಇದೇ ಇವರ ಆ ಗಟ್ಟಿಮುಟ್ಟಾದ ಮೈಕಟ್ಟಿನ ಗುಟ್ಟು ಎನ್ನುತ್ತಾರೆ ಫಿಟ್ನೆಸ್ ಪ್ರಿಯರು.

ಆಹಾರ ಪದ್ಧತಿಯಲ್ಲಿ ಸರಳತೆ

ಊಟದ ವಿಷಯಕ್ಕೆ ಬಂದರೆ ಸೋನು ಸೂದ್ ತುಂಬಾ ಸರಳ ವ್ಯಕ್ತಿ. ಇವರು ಯಾವಾಗಲೂ ಸರಳವಾದ ಮತ್ತು ಹೆಚ್ಚಿನ ಪ್ರೋಟೀನ್ ಹೊಂದಿರುವ ಆಹಾರವನ್ನೇ ಸೇವಿಸುತ್ತಾರೆ. ಅನಗತ್ಯ ಮಸಾಲೆ ಪದಾರ್ಥಗಳಿಗಿಂತ ದೇಹಕ್ಕೆ ಶಕ್ತಿ ನೀಡುವ ಆಹಾರವೇ ಇವರಿಗೆ ಇಷ್ಟ. ವಿಶೇಷವೆಂದರೆ, ಇವರು ಎಂದಿಗೂ ತಡರಾತ್ರಿಯ ಊಟವನ್ನು ಮಾಡುವುದಿಲ್ಲ. ಸರಿಯಾದ ಸಮಯಕ್ಕೆ ಊಟ ಮಾಡುವ ಅಭ್ಯಾಸ ಇವರನ್ನು ಇಷ್ಟು ಫಿಟ್ ಆಗಿಟ್ಟಿದೆ.

ಇದಲ್ಲದೆ ದೇಹವನ್ನು ಯಾವಾಗಲೂ ಹೈಡ್ರೇಟೆಡ್ ಆಗಿಟ್ಟುಕೊಳ್ಳುವುದು ಇವರ ಇನ್ನೊಂದು ಪ್ರಮುಖ ಸೂತ್ರ. ದಿನವಿಡೀ ಸಾಕಷ್ಟು ನೀರು ಕುಡಿಯುವ ಮೂಲಕ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುತ್ತಾರೆ. "ಡಯಟ್ ಹೆಸರಲ್ಲಿ ಹೊಟ್ಟೆ ಹಸಿಬಾರದು, ಆದರೆ ಏನು ತಿನ್ನುತ್ತಿದ್ದೇವೆ ಎಂಬ ಪ್ರಜ್ಞೆ ಇರಬೇಕು" ಎಂಬುದು ಇವರ ಕಿವಿಮಾತು. 52ರ ಪ್ರಾಯದಲ್ಲೂ ಅವರ ಮುಖದಲ್ಲಿರುವ ಆ ಕಳೆ ಮತ್ತು ಮೈಕಟ್ಟಿನ ಗತ್ತು ಅನೇಕರಿಗೆ ಸ್ಪೂರ್ತಿ.

More from Filmibeat

Read more about: sonu sood bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X