ರೀಲ್‌ನಲ್ಲಷ್ಟೇ ಅಲ್ಲ, ರಿಯಲ್ ಲೈಫ್‌ನಲ್ಲೂ 'ಭಾಗ್ಯಲಕ್ಷಿ' ಸಾಹಸ; ಮೌಂಟ್ ಎವರೆಸ್ಟ್ ಏರಲು ಹೊರಟ ನಟಿ ಸುಷ್ಮಾ!
'ಭಾಗ್ಯ ಲಕ್ಷ್ಮೀ' ಧಾರಾವಾಹಿಯ ಮೂಲಕ ಮನಗೆದ್ದಿರುವ ನಟಿ ಸುಷ್ಮಾ ರಾವ್. ಧಾರಾವಾಹಿಯಲ್ಲಿ ಬಹಳ ಅದ್ಭುತವಾದ ಪಾತ್ರವನ್ನು ಇವರು ಅಭಿನಯ ಮಾಡುತ್ತಿದ್ದಾರೆ. ಸೀರಿಯಲ್ ಕಥೆಯಲ್ಲಿ ಭಾಗ್ಯ ಹೇಗೆಯೋ ಅದೇ ರೀತಿ ನಿಜ ಜೀವನದಲ್ಲಿ ಕೂಡ ಸುಷ್ಮಾ ರಾವ್ ಬಹಳ ಕಷ್ಟದಿಂದ ಮೇಲೆ ಬಂದವರು. ಇದೀಗ ಸ್ವತಂತ್ರವಾಗಿ ಕಾಲ ಕಳೆಯುತ್ತಿದ್ದಾರೆ. ಸುಷ್ಮಾ ಅವರನ್ನು ನೋಡಿದ ಅಭಿಮಾನಿಗಳು ಮಾತ್ರ ಅರೆರೆ ಭಾಗ್ಯ ಸೀರಿಯಲ್ ಬಿಟ್ಟು ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಬಹಳಷ್ಟು ಜನರು ಅಂದುಕೊಳ್ಳುತ್ತಿದ್ದಾರೆ. ಹೌದು ಸುಷ್ಮಾ ರಾವ್ ಸೋಲೋ ಟ್ರಿಪ್‌ಗೆ ಹೊರಟಿದ್ದಾರೆ. ಬೇರೆ ಎಲ್ಲಿಗೂ ಅಲ್ಲ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಹೋಗುತ್ತಿದ್ದಾರೆ.
'ಭಾಗ್ಯಲಕ್ಷ್ಮಿ' ನಟಿ ಸುಷ್ಮಾ ಕೆ ರಾವ್ ಟ್ರಕ್ಕಿಂಗ್ ಪ್ರಿಯರು. ಟ್ರಕ್ಕಿಂಗ್ ಹೋಗೋದು ಅಂದರೆ ಅವರಿಗೆ ಬಲು ಇಷ್ಟ. ಬಹಳ ದಿನಗಳಿಂದ ಅವರು ಟ್ರೆಕ್ಕಿಂಗ್‌ಗೆ ಹೋಗಿರಲಿಲ್ಲ. ಆದ್ರೀಗ ಬೇಗ ಬೇಗ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ, ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಮೌಂಟ್ ಎವರೆಸ್ಟ್ ಕಡೆಗೆ ಮುಖ ಮಾಡಿದ್ದಾರೆ. ಅದೂ ಈ ಬಾರಿ ಒಬ್ಬಂಟಿಯಾಗಿ ಟ್ರಾವೆಲ್ ಮಾಡುತ್ತಿದ್ದಾರೆ.

ಹೌದು, ಧಾರಾವಾಹಿಯ ಶೂಟಿಂಗ್ ಅನ್ನು ಬ್ಯಾಕ್ ಟು ಬ್ಯಾಕ್ ಮುಗಿಸಿಕೊಂಡು ಸೋಲೋ ಟ್ರಿಪ್ ಮಾಡುತ್ತಿರೋ ಭಾಗ್ಯಲಕ್ಷ್ಮಿ ಉರ್ಫ್ ಸುಷ್ಮಾ ಕೆ ರಾವ್‌ಗೆ ಇವರ ಅಭಿಮಾನಿಗಳು ಶುಭ ಕೋರಿದ್ದಾರೆ. ಹಾಗೆಯೇ ಇನ್ನೊಬ್ಬ ಅಭಿಮಾನಿ ಅಲ್ಲಲ್ಲಿ ಆಗಾಗ ಹವಾಮಾನ ಬದಲಾವಣೆ ಆಗುತ್ತಿರುತ್ತದೆ. ಅದಕ್ಕೆ ನೀವು ಜಾಗರೂಕತೆಯಿಂದ ಇರಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು ಸುಷ್ಮಾ ಕೆ ರಾವ್ ತನ್ನ ಮೌಂಟ್ ಎವರೆಸ್ಟ್ ಟ್ರೆಕ್ಕಿಂಗ್ ಬಗ್ಗೆ ಸಾಕಷ್ಟು ವಿಡಿಯೋ ಮಾಡಿ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಬೆಂಗಳೂರಿಂದ ಹೊರಟಿರುವ ಸುಷ್ಮಾ ಕೆ ರಾವ್ ಮೂರನೇ ಪಾರ್ಟ್‌ನ ವಿಡಿಯೋ ಮಾಡಿ ಹಾಕಿದ್ದಾರೆ. ಸದ್ಯ ನೇಪಾಳದ ರಾಮೇಚಾಪ್‌ನಲ್ಲಿ ಇರುವುದಾಗಿ ಲೇಟೆಸ್ಟ್ ವಿಡಿಯೋ ಮಾಡಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಂದ್ಹಾಗೆ, ನಟಿ ಸುಷ್ಮಾ ಬೆಂಗಳೂರಿನಿಂದ ಮೊದಲು ಕಠ್ಮಂಡುಗೆ ಹೋಗಿ ಅಲ್ಲಿಂದ ರಾಮೆಚಾಪ್ ಎಂಬ ಜಾಗಕ್ಕೆ ಹೋಗಿ ಲೂಕ್ನಗೆ ತಲುಪಬೇಕಿದೆ. ಅಲ್ಲಿಂದ ಅವರ ಮೌಂಟ್ ಎವರೆಸ್ಟ್ ಜರ್ನಿ ಶುರುವಾಗುತ್ತದೆ. ಅವರು ಹೊರಡುವ ಮುನ್ನ ಮಾಡಿದ ವಿಡಿಯೋದಲ್ಲಿ "ಅಲ್ಲಿ ನನಗೆ ಕೆಲವರು ಟ್ರಿಪ್ ಮಾಡುವವರು ಸಿಗುತ್ತಾರೆ. ಗುರುತು ಪರಿಚಯ ಇರುವುದಿಲ್ಲ' ಅವರ ಜೊತೆಗೆ ಸೋಲೋ ಟ್ರಿಪ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಸುಷ್ಮಾ ರಾವ್ ಅಡ್ವೆಂಚರ್ ಮೂಡ್‌ನಲ್ಲಿದ್ದಾರೆ.

ನಿರೂಪಕಿಯಾಗಿ ಸುಷ್ಮಾ ಅವರು ಸಾಕಷ್ಟು ಜನಪ್ರಿಯರಾಗಿದ್ದರು. ಈಗ ನಟಿಯಾಗಿ ಮೆಚ್ಚುಗೆ ಗಳಿಸಿದ್ದಾರೆ. ಅದರಲ್ಲೂ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯಲ್ಲಿ ಭಾಗ್ಯಲಕ್ಷ್ಮೀ ಮೂಲಕ ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. 'ಭಾಗ್ಯಲಕ್ಷ್ಮೀ'ಯ ಭಾಗ್ಯ ಪಾತ್ರದಲ್ಲಿ ಸುಷ್ಮಾ ರಾವ್ ಮಧ್ಯಮ ವರ್ಗದ ಗೃಹಿಣಿಯರ ಪ್ರತಿನಿಧಿಯಾಗಿದ್ದಾರೆ. ಸಾಕಷ್ಟು ಮಹಿಳೆಯರಿಗೆ ಭಾಗ್ಯನೇ ರೋಲ್ ಮಾಡಲ್ ಎನ್ನುವ ಹಾಗಾಗಿದೆ.
ಭಾಗ್ಯ ನಟನೆಗೆ ಅಭಿಮಾನಿಗಳು ಫಿದಾ
ಸುಷ್ಮಾ ಕೆ ರಾವ್ ಮೂಲತಃ ಚಿಕ್ಕ ಮಂಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚಿಪುಡಿ ಕಲಾವಿದೆಯಾಗಿದ್ದಾರೆ. ಇವರ ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಲಭಿಸಿದೆ. ಇವರು 'ಭಾಗೀರಥಿ' ಹಾಗೆಯೇ 'ಯಾವ ಜನ್ಮದ ಮೈತ್ರಿ', 'ಗುಪ್ತಗಾಮಿನಿ', 'ಸೊಸೆ ತಂದ ಭಾಗ್ಯ', ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ.
ಸುಷ್ಮಾ ನಟನೆಗೆ ಮೆಚ್ಚುಗೆ
ಇನ್ನು ಧಾರಾವಾಹಿಯಲ್ಲಿ 'ಭಾಗ್ಯಲಕ್ಷ್ಮೀ' ಕಿರುತೆರೆ ವೀಕ್ಷಕರ ಫೆವರಿಟ್ ನಟಿಯಾಗಿದ್ದಾರೆ. ಭಾಗ್ಯಗೆ ಅದೆಷ್ಟೇ ಅಡೆತಡೆಗಳು ಬಂದರೂ ಅದೆಲ್ಲವನ್ನೂ ಮೆಟ್ಟಿ ನಿಂತು ತನ್ನದೇ ಆದ ಬ್ಯುಸಿನೆಸ್ ಕಟ್ಟಿಕೊಂಡಿದ್ದಾರೆ. ಗಂಡ ಅನ್ಯ ದಾರಿಯನ್ನು ಬಳಸಿ ಅಡ್ಡಿ ಪಡಿಸಿದರೂ ಅದೆನ್ನೆಲ್ಲ ಮೆಟ್ಟಿ ನಿಂತಿದ್ದಾಳೆ. ಅತ್ತೆ ಮಾವನನ್ನು ಅಪ್ಪ ಅಮ್ಮ ಎಂದು ತಿಳಿದುಕೊಂಡು ಆರೈಕೆ ಮಾಡುತ್ತಿದ್ದಾಳೆ. ಹಾಗೆಯೇ ತನ್ನದೇ ಆದ ಬ್ಯುಸಿನೆಸ್ ಮಾಡುತ್ತಾ ಖುಷಿಯಾಗಿದ್ದಾಳೆ.


Click it and Unblock the Notifications











