ತುಂಡುಡುಗೆಯಲ್ಲಿ ಜಲಕನ್ಯೆಯಾದ ನಿವೇದಿತಾ ಗೌಡ; ಆ ಫೋಟೊ ಬ್ಲರ್ ಯಾಕೆ ಎಂದ ನೆಟ್ಟಿಗರು

ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ವೀಟ್ ಆಗಿರುತ್ತಾರೆ. ಆಗಾಗ್ಗೆ ಹೊಸ ಹೊಸ ಫೋಟೊ ವೀಡಿಯೋ ಶೇರ್ ಮಾಡಿ ಗಮನ ಸೆಳೆಯುತ್ತಾರೆ. ರೀಲ್ಸ್ ಮಾಡಿ ವೈರಲ್ ಆಗುತ್ತಾರೆ. ತುಂಡು ಉಡುಗೆಯಲ್ಲಿ ಮಾದಕ ಮೈಮಾಟ ಪ್ರದರ್ಶಿಸುತ್ತಾ ಕ್ಯಾಮರಾ ಮುಂದೆ ನಿಲ್ಲುತ್ತಾರೆ. ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ ಮಾಡಿದ್ರು ತಲೆ ಕೆಡಿಸಿಕೊಳ್ಳಲ್ಲ.

ಹೊಸ ವರ್ಷದ ಸಂಭ್ರಮದಲ್ಲಿ ಆಪ್ತರ ಜೊತೆ ನಿವೇದಿತಾ ಗೌಡ ಫ್ಲೋರಿಡಾ ಪ್ರವಾಸ ಕೈಗೊಂಡಿದ್ದಾರೆ. ಕಡಲ ತಡಿಯಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಪ್ರಕೃತಿ ಮಡಿಲಲ್ಲಿ ಮಗುವಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದೀಗ ಈಜುಡುಗೆಯಲ್ಲಿ ಬಿಂದಾಸ್ ಆಗಿ ಸಮುದ್ರದಲ್ಲಿ ಚೆಲ್ಲಾಟ ಆಡಿರುವ ಫೋಟೊ, ವೀಡಿಯೋ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಅದಕ್ಕೆ ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

Bigg Boss Fame Nivedita Gowda Rings in New Year with Glam Florida Beach Vacation

ಟೂ-ಪೀಸ್ ಸ್ವಿಮ್ ಸೂಟ್ ಧರಿಸಿ ನಿವೇದಿತಾ ಜಲಕನ್ಯೆಯಂತೆ ನೀರಿನಲ್ಲಿ ಈಜಾಡಿದ್ದಾರೆ. ಅಲೆಗಳ ಮೇಲೆ ಹಕ್ಕಿಯಂತೆ ಹಾರಿದ್ದಾರೆ. ಆದರೆ ಸಂಪೂರ್ಣ ಫೋಟೊ, ವೀಡಿಯೋ ಪೋಸ್ಟ್ ಮಾಡಿಲ್ಲ. ಕಡಲ ತಡಿಯಲ್ಲಿ ನಿಂತಿರುವ ಫೋಟೊವೊಂದನ್ನು ಬ್ಲರ್ ಆಗಿ ಕಾಣುವಂತೆ ಹಾಕಿದ್ದಾರೆ. ಆ ಫೋಟೊ ಬ್ಲರ್ ಮಾಡಿದ್ದೇಕೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಡಿವೋರ್ಸ್ ಬಳಿಕ ನಿವೇದಿತಾ ಗೌಡ ಸುತ್ತಾಟ, ರೀಲ್ಸ್‌ ಹೆಚ್ಚಾಯ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಬೇಕೆಂದೇ ಕೆಟ್ಟದಾಗಿ ಟ್ರೋಲ್ ಮಾಡುತ್ತಾರೆ. ಆದರೆ ನಿವೇದಿತಾ ಪ್ರತಿಕ್ರಿಯಿಸುವ ಗೋಜಿಗೆ ಹೋಗುತ್ತಿಲ್ಲ. ನೆಗೆಟಿವ್ ಕಾಮೆಂಟ್ ಬಂದ್ರೆ ಕಾಮೆಂಟ್ ಸೆನ್ಷನ್ ಆಫ್ ಮಾಡಿ ಕೆಲವರು ಪೋಸ್ಟ್ ಮಾಡುತ್ತಾರೆ. ಆದರೆ ನಿವೇದಿತಾ ಮಾತ್ರ ಅದರ ಬಗ್ಗೆ ಆಲೋಚಿಸುವಂತೆ ಕಾಣ್ತಿಲ್ಲ. ಆದರೆ ಕೆಲವೊಮ್ಮೆ ಮಾತ್ರ ಖಡಕ್ ತಿರುಗೇಟು ಕೊಟ್ಟಿರುವ ಉದಾಹರಣೆಯಿದೆ.

'ಮುದ್ದು ರಾಕ್ಷಸಿ' ಎಂಬ ಚಿತ್ರದಲ್ಲಿ ನಿವೇದಿತಾ ನಟಿಸಿದ್ದರು. ಬಿಗ್‌ಬಾಸ್ ಬಳಿಕ 'ಗಿಚ್ಚಿ ಗಿಲಿಗಿಲಿ' ಹಾಗೂ 'ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಮಿಂಚಿದ್ದರು. ಡಿವೋರ್ಸ್ ಬಳಿಕ ನಿವೇದಿತಾ 2ನೇ ಮದುವೆ ಬಗ್ಗೆ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದರು. ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದ ನಿವಿ "ಮದುವೆ ಟಾಪಿಕ್ ಅಂದ್ರೇನೆ ಭಯ ಆಗುತ್ತೆ. ಮುಂದೆ ನೋಡೋಣ. ಬಹಳ ಇಷ್ಟಪಟ್ಟು, ಚೆನ್ನಾಗಿ ನೋಡ್ಕೊತ್ತೀನಿ ಎಂದು ಹೇಳುವವರು ಬಂದರೆ ಮದುವೆ ಬಗ್ಗೆ ಆಲೋಚಿಸುತ್ತೇನೆ" ಎಂದಿದ್ದರು.

ಒಳ್ಳೆ ಅವಕಾಶಗಳು ಸಿಕ್ಕರೆ ಸಿನಿಮಾಗಳಲ್ಲಿ ನಟಿಸುತ್ತೇನೆ. ಇಲ್ಲದೇ ಇದ್ದರೆ ಬೇರೆ ಪ್ಲ್ಯಾನ್ಸ್ ಇದೆ. ಯೂಟ್ಯೂಬ್ ವ್ಲಾಗ್ಸ್ ಮಾಡ್ತೀನಿ, ಬ್ಯುಸಿನೆಸ್ ಕೂಡ ಮಾಡಬಹುದು. ಆ ಐಡಿಯಾ ಕೂಡ ಇದೆ. ನಾನು ಹಾಗೂ ವಾಣಿ ಆತ್ಮೀಯ ಸ್ನೇಹಿತರು. ಹಾಗಾಗಿ ಒಟ್ಟಿಗೆ ರೀಲ್ಸ್ ಮಾಡುತ್ತೇವೆ ಅಷ್ಟೆ. ಆಕೆ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಾರೆ. ಇಬ್ಬರೂ ಇಷ್ಟಪಟ್ಟು ರೀಲ್ಸ್ ಮಾಡ್ತಿವಿ ಎಂದು ಕೂಡ ನಿವೇದಿತಾ ಹೇಳಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆ ಫಾಲೋಯಿಂಗ್ ಇದೆ. ಯಾವುದಾದರೂ ಬ್ರ್ಯಾಂಡ್ ಜೊತೆ ಒಪ್ಪಂದ ಮಾಡಿಕೊಂಡರೆ ಒಳ್ಳೆ ಆದಾಯ ಬರುತ್ತೆ. ಅದೇ ಸಾಕು ನನ್ನ ಜೀವನ ನಡೆಸಲು. ಹೀಗೆ ಬರುವ ಹಣವನ್ನು ನಾನು ಸುತ್ತಾಡಲು ಬಯಸುತ್ತೇನೆ. ಸೇವಿಂಗ್ಸ್ ಜಾಸ್ತಿ ಮಾಡಲ್ಲ ಎಂದು ಅದೇ ಸಂದರ್ಶನದಲ್ಲಿ ನಿವೇದಿತಾ ವಿವರಿಸಿದ್ದರು. 20 ಲಕ್ಷಕ್ಕೂ ಹೆಚ್ಚು ಜನ ನಿವೇದಿತಾ ಇನ್‌ಸ್ಟಾಗ್ರಾಮ್‌ ಅಕೌಂಟ್ ಫಾಲೋ ಮಾಡುತ್ತಿದ್ದಾರೆ.

More from Filmibeat

Read more about: nivedita gowda bigg boss tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X