ಸುಡು ಬಿಸಿಲಿಗೆ ತೆಳ್ಳಗಿನ ಸೀರೆಯುಟ್ಟು ಮಿಂಚಿದ ನಿವೇದಿತಾ ಗೌಡ; ಈಕೆಯ ರೀಲ್ಸ್‌ಗೆ ಹುಡುಗರ ನಿದ್ದೇನೆ ಮಾಯ

By ಎಸ್ ಸುಮಂತ್

ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ನೆಟ್ಟಿಗರ ಪಾಲಿಗೆ ಅಕ್ಷರಶಃ ಚಂದನದ ಗೊಂಬೆಯೇ ಸರಿ. ಮಾಡರ್ನ್ ಡ್ರೆಸ್‌ಗೂ ಸೈ, ಟ್ರೆಡಿಷನಲ್ ಲುಕ್‌ಗೂ ಜೈ ಎನ್ನುವವರು. ಎಲ್ಲಾ ಲುಕ್‌ನಲ್ಲೂ ಅದ್ಭುತವಾಗಿ ಕಾಣುವಂತೆ ತಮ್ಮನ್ನು ತಾವೂ ತೊಡಗಿಸಿಕೊಳ್ಳುತ್ತಾರೆ. ಹೆಚ್ಚು ಮಾಡರ್ನ್ ಲುಕ್‌ನಲ್ಲಿಯೇ ಕಾಣಿಸಿಕೊಳ್ಳುವುದು ಹೆಚ್ಚು.

ಅದರಲ್ಲೂ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡು ಪಡ್ಡೆ ಹೈಕ್ಳಿಗೆ ಹುಚ್ಚೆಬ್ಬಿಸಿದ್ದಾರೆ. ಆಗಾಗ ಸೀರೆಯಲ್ಲೂ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅದರಲ್ಲೂ ಬೇಸಿಗೆ ಕಾಲಕ್ಕೆ ಒಂದೊಳ್ಳೆ ಸೀರೆ ಹಾಕಿ ನಿವೇದಿತಾ ಪೋಸ್ ಕೊಟ್ಟಿದ್ದಾರೆ. ಇವರು ಸೀರೆಯುಟ್ಟು ಬಂದರೂ ಹುಡುಗರು ಸುಡು ಬಿಸಿಲಲ್ಲೂ ತಣ್ಣಗಾಗುತ್ತಾರೆ. ಮಾಡರ್ನ್ ಡ್ರೆಸ್‌ನಲ್ಲಿ ಕಂಡರೆ, ಚುಮು ಚುಮು ಚಳಿಯಲ್ಲೂ ಬೆಂಕಿ ಬಿದ್ದವರಂತೆ ಆಡುತ್ತಾರೆ.

Niveditha Gowda summer saree collection

ಬೇಸಿಗೆ ಕಾಲಕ್ಕೆ ಅಂತಾನೇ ಎಲ್ಲರೂ ಒಂದಷ್ಟು ಡ್ರೆಸ್‌ಗಳನ್ನು ಎತ್ತಿಡುವುದು ಉಂಟು. ಯಾಕಂದ್ರೆ, ಶೆಕೆಗೆ ಡ್ರೆಸ್ ಕಿರಿಕಿರಿ ಆಗಬಾರದು ಅಂತ. ಅದರಲ್ಲೂ ಈ ಬಿಡು ಬೇಸಿಗೆಯಲ್ಲಿ ಸೀರೆ ಉಡುವುದು ಅಂದ್ರೆ ಒಂದು ದೊಡ್ಡ ಸಾಹಸವೇ ಸರಿ. ಆದರೆ, ಬೇಸಿಗೆಗೂ ಹಿತ ಎನಿಸುವಂತ ಸೀರೆ ಉಡುವುದಾದರೇ ಯಾವ ಥರದ ಸೀರೆ ಉಡಬಹುದು ಎಂಬ ಐಡಿಯಾ ಇರಬೇಕು ಅಷ್ಟೇ. ನಿವೇದಿತಾ ಗೌಡ ಇದೀಗ ಅದಕ್ಕೊಂದು ಪರ್ಫೆಕ್ಟ್ ಐಡಿಯಾ ಕೊಟ್ಟಿದ್ದಾರೆ. ನೋಡುವುದಕ್ಕೂ ಅಂದ, ಉಡುವುದಕ್ಕೂ ಚೆಂದ ಎನಿಸುವ ಸೀರೆಯುಟ್ಟು ತೋರಿಸಿದ್ದಾರೆ.

ನಿವೇದಿತಾ ಗೌಡ ರೀಲ್ಸ್ ಮಾಡುವುದರಲ್ಲಿ ಸದಾ ಮುಂದು. ಟ್ರೆಂಡಿಂಗ್ ಸಾಂಗ್‌ಗಳಿಗೆ ಮೈ ಬಳುಕಿಸುತ್ತಾ ಇರುತ್ತಾರೆ. ಅವರ ಮೈಮಾಟಕ್ಕೆ ಸೋತವರು ಕಡಿಮೆ ಮಂದಿಯೇನು ಅಲ್ಲ. ನಿವೇದಿತಾ ಸೌಂದರ್ಯಕ್ಕೆ ಮಾರು ಹೋದವರಲ್ಲಿ ನೆಗೆಟಿವ್ ಕಮೆಂಟ್‌ಗಳನ್ನೇ ಹಾಕುವವರು ಹೆಚ್ಚು. ಆರಂಭದಲ್ಲಿ ತಲೆ ಕೆಡಿಸಿಕೊಳ್ಳುತ್ತಿದ್ದ ನಿವೇದಿತಾ, ಈಗ ನಿರ್ಲಕ್ಷ್ಯದ ದಾರಿ ಹಿಡಿದಿದ್ದಾರೆ.

ಖಾಲಿ ಕುಳಿತವರ ಕಮೆಂಟ್ ಮನೆಯವರಿಗೆ ಹರ್ಟ್ ಅಂತು ಮಾಡಿದೆ ಎಂಬ ಮನಸ್ಸಿನಾಳದಲ್ಲಿ ಅಡಗಿದ್ದ ನೋವನ್ನು ನಿವೇದಿತಾ ಹೊರಗೆ ಹಾಕಿದ್ದಾರೆ. ಆದರೂ ಜೀವನ ಹೇಗಿದೆಯೋ ಹಾಗೇ ಮುಂದುವರೆಸಿದ್ದಾರೆ. ತನಗೇನು ಇಷ್ಟವೋ ಅದನ್ನೇ ಮಾಡುತ್ತಾ ಸಾಗಿದ್ದಾರೆ. ಇದರ ನಡುವೆಯೆ ಒಂದು ರೀಲ್ ಹಂಚಿಕೊಂಡಿದ್ದಾರೆ. ಅದರಲ್ಲಿ ಗಮನ ಸೆಳೆದದ್ದೇ ಸೀರೆ. ಬೇಸಿಗೆಗೂ ಕಂಫರ್ಟಬಲ್ ಆಗಿ ಉಡಬಹುದಾದಂತ ಸೀರೆ ಅದಾಗಿದೆ.

ಮರೂನ್ ಕಲರ್ ಬಣ್ಣದ ಕಾಟನ್‌ ಸೀರೆ ಅದಾಗಿದೆ. ಬೇಸಿಗೆಗೆ ಕಾಟನ್ ಬಟ್ಟೆಗಳು ಕಂಫರ್ಟ್ ಕ್ರಿಯೇಟ್ ಮಾಡುತ್ತವೆ. ಇಲ್ಲಿ ನಿವಿ ಹಾಕಿರುವ ಸೀರೆಯೂ ಅಷ್ಟೇ. ಮರೂನ್ ಕಲರ್ ಸೀರೆ ಮೇಲೆ ಬಿಳಿ ಬಣ್ಣದ ಹಾರ್ಟ್ ಡಿಸೈನ್ ಮಾಡಲಾಗಿದೆ. ಅದಕ್ಕೆ ಮ್ಯಾಚ್ ಆಗುವಂತ ವೈಟ್ ಕಲರ್‌ನ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದಾರೆ. ಮೊದಲೇ ಹಾಟ್ ಬೇಬಿ. ಸೀರೆಯಲ್ಲಿ ಸೌಂದರ್ಯ ಇನ್ನಷ್ಟು ಚೆಂದ ಕಾಣಿಸ್ತಾ ಇದೆ. ಸೆರಗನ್ನು ಸಿಂಗಲ್ ಪಿನ್ ಮಾಡಿರುವ ನಿವಿ, ಸೆಕ್ಸಿ ಸ್ಟೆಪ್ ಹಾಕಿದ್ದಾರೆ.

ಈ ಸೀರೆಯ ಬೆಲೆ 3,100 ರೂಪಾಯಿ ಇದೆ. ಈ ಸೀರೆಗೆ ಮ್ಯಾಚ್ ಆಗುವಂತೆ ಆರ್ಟಿಫಿಯಲ್ ಜುಮ್ಕಿ, ಕೈಗೊಂದು ಮಣಿಯಲ್ಲಿ ಡಿಸೈನ್ ಮಾಡಿರುವ ಬ್ರೇಸ್ ಲೇಟ್ ಹಾಕಿದ್ದಾರೆ. ಇನ್ನೊಂದು ಕೈಯನ್ನು ಬಳೆ ಅಥವಾ ವಾಚ್ ಹಾಕದೆ ಖಾಲಿ ಬಿಟ್ಟಿದ್ದಾರೆ. ಈ ಕಾಟನ್ ಸೀರೆಯಲ್ಲೂ ಇಷ್ಟೊಂದು ಫ್ಯಾಷನ್ ಮಾಡೋದನ್ನ ನಿವೇದಿತಾ ತೋರಿಸಿಕೊಟ್ಟಿದ್ದಾರೆ. ನಿವೇದಿತಾ ಸಾಕಷ್ಟು ವೆರೈಟಿ ಎನಿಸುವ ಸೀರೆಗಳನ್ನ ಹಾಕಿ ಪೋಸ್ ಕೊಟ್ಟಿರೋದನ್ನ ನೋಡಬಹುದು. ಮಾಡ್ರನ್ ಡ್ರೆಸ್‌ನಲ್ಲಿ ಒಂದು ರೀತಿ ಕಂಡರೆ ಸೀರೆ ಲುಕ್‌ನಲ್ಲಿ ಮತ್ತೊಂದು ರೀತಿ ಕಾಣಿಸುತ್ತಾರೆ.

More from Filmibeat

English summary
Bigg Boss Kannada fame and social media influencer Niveditha Gowda summer saree collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X