ಶ್ರೀಲಂಕಾದಲ್ಲಿ ಬಿಗ್ ಬಾಸ್ ಬ್ಯೂಟಿ ನಮ್ರತಾ ಗೌಡ; ಸ್ಟ್ರಾಬೇರಿ ಕೇಕ್‌ಗೆ ಫಿದಾ

By ಎಸ್ ಸುಮಂತ್

ನಮ್ರತಾ ಗೌಡ ಅವರ ಪೇಜ್ ಫಾಲೋ ಮಾಡಿದ್ರೆ, ಅವರ ಬಗ್ಗೆ ತಿಳಿಯುವ ಕುತೂಹಲವಿದ್ದವರಿಗೆ ಅವರು ಫುಡ್ಡಿ ಅನ್ನೋದು ಅರ್ಥವಾಗಿರುತ್ತದೆ. ಎಲ್ಲಿಯೇ ಹೋದರು ಅಲ್ಲಿನ ವಿಶೇಷ ತಿನಿಸುಗಳ ರುಚಿಯನ್ನು ಟ್ರೈ ಮಾಡ್ತಾರೆ. ಈಗ ಶ್ರೀಲಂಕಾದಲ್ಲೂ ಕೇಕ್ ಸವಿದು, ಅದರ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ನಮ್ರತಾ ಗೌಡ, ಸಿಕ್ಕಾಪಟ್ಟೆ ಹ್ಯಾಪಿ ಮೂಡಲ್ಲಿದ್ದಾರೆ. ಅದರಲ್ಲೂ ಅವರ ಸ್ನೇಹಿತರುಗಳು ಸೇರಿ ನಮ್ರತಾ ಅವರ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ರಕ್ಷಕ್ ಬುಲೆಟ್ ಕೂಡ ನಮ್ರತಾ ಗೌಡ ಅವರ ಹುಟ್ಟುಹಬ್ಬವನ್ನ ಆಚರಿಸಿದ್ದರು. ಸರ್ಪೈಸ್ ನೀಡಿದ್ದರು. ಇದರ ಬೆನ್ನಲ್ಲೇ ನಮ್ರತಾ ಗೌಡ ಶ್ರೀಲಂಕಾಗೆ ಹೋಗಿದ್ದಾರೆ. ಶ್ರೀಲಂಕಾದಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡಿದ್ದಾರೆ. ಶ್ರೀಲಂಕಾದಲ್ಲಿ ಇರುವ ವಿಶೇಷ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಆ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಶ್ರೀಲಂಕಾದಲ್ಲಿ ಬೋಟಿಂಗ್ ಕೂಡ ಮಾಡಿದ್ದಾರೆ. ಸಮುದ್ರದೊಳಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

Bigg Boss season 10 contestants Namratha Gowda Sri Lanka Trip and Strawberry cake

ಸಿನಿಮಾ, ತಮ್ಮ ಯೂಟ್ಯೂಬ್ ಬ್ಲಾಗ್, ಜಾಹೀರಾತು ಶೂಟಿಂಗ್ ಅಂತ ಓಡಾಡುವ ನಡುವೆ ಬಿಡುವು ಮಾಡಿಕೊಳ್ಳುವುದು ಬಹಳ ಮುಖ್ಯ. ಮೈಂಡ್ ರಿಲ್ಯಾಕ್ಸ್ ಆದರೆ ಆಕ್ಟೀವ್ ಆಗಿರಬಹುದು. ನಮ್ರತಾ ಅವರನ್ನು ನೋಡಿದರೆ ಅದೆಲ್ಲವನ್ನು ಫಾಲೋ ಮಾಡ್ತಾರೆ ಅನ್ನೋದು ಅರ್ಥವಾಗುತ್ತದೆ. ತಾವೂ ಮಾಡುವ ಕೆಲಸವನ್ನ ಅಚ್ಚುಕಟ್ಟಾಗಿ‌ ಮಾಡುತ್ತಾರೆ. ತಮ್ಮ ಯೂಟ್ಯೂಬ್‌ಗೆ ವಿಡಿಯೋ ಮಾಡುವಾಗಲೂ ಅಷ್ಟೇ ನೋಡುಗರಿಗೆ ಎಲ್ಲಿಯೂ ಕಿರಿಕಿರಿ ಎನ್ನಿಸದಂತೆ ನೀಟಾಗಿ ಪ್ಲ್ಯಾನ್ ಮಾಡುತ್ತಾರೆ. ಹೊರಗಡೆ ಹೋಗುವಾಗಲೂ ಅಷ್ಟೇ ತಮ್ಮನ್ನು ತಾವೂ ರೆಡಿ ಮಾಡಿಕೊಳ್ಳುವುದು ಅಷ್ಟೇ ನೀಟಾಗಿ ಮಾಡಿಕೊಳ್ಳುತ್ತಾರೆ. ಇದು ಹಲವರಿಗೆ ಸ್ಪೂರ್ತಿಯಾಗಿದೆ. ಹೊರಗಡೆ ತನ್ನ ಸೌಂದರ್ಯವನ್ನು ಯಾವತ್ತಿಗೂ ಕಡಿಮೆ ಮಾಡಿಕೊಂಡಿಲ್ಲ.

ಈಗ ಶ್ರೀಲಂಕಾದಲ್ಲಿ ಸುತ್ತಾಡುವಾಗಲೂ ಬ್ಯೂಟಿಫುಲ್ ಆಗಿ ರೆಡಿಯಾಗಿದ್ದಾರೆ. ಹಾಗೇ ನಮ್ರತಾ ಗೌಡ ಫ್ರೀ ಆದಾಗೆಲ್ಲಾ ಫ್ರೆಂಡ್ಸ್ ಜೊತೆಗೆ ಹೊರಗೆ ಹೋಗುತ್ತಾ ಇರುತ್ತಾರೆ. ಫುಡ್ ಟೇಸ್ಟ್ ಮಾಡುತ್ತಾ ಇರುತ್ತಾರೆ. ಈಗ ಶ್ರೀಲಂಕಾದಲ್ಲೂ ಸ್ಪೆಷಲ್ ತಿನಿಸನ್ನ ತಿಂದಿದ್ದಾರೆ. ಅದುವೇ ಸ್ಟ್ರಾಬೆರಿ ಕೇಕ್. ಬರೀ ಸ್ಟ್ರಾಬೆರಿ ಅಲ್ಲ ಅದರ ಮೇಲೆಲ್ಲ ಕಂಪ್ಲೀಟ್ ಚಾಕಲೇಟ್ ಹಾಕಿರುವಂತ ಕೇಕ್ ಅದಾಗಿದೆ. ಒಂದು ಕೇಕ್ ರೀತಿ ಕಾಣಿಸ್ತಾ ಇದೆ. ಇನ್ನೊಂದು ಐಸ್ ಕ್ರೀಂ ಕೂಡ ತೆಗೆದುಕೊಂಡಿದ್ದಾರೆ. ಐಸ್ ಕ್ರೀಂನಲ್ಲೂ ಸ್ಟ್ರಾಬೆರಿ ಇದೆ. ಚಾಕಲೇಟ್, ಐಸ್ ಕ್ರೀಂ, ಸ್ಟ್ರಾಬೆರಿ ಕೂಡ ಕಟ್ ಮಾಡಿ ಜಾಸ್ತಿ ಇಡಲಾಗಿದೆ. ಅದರಲ್ಲೂ ಸ್ಟ್ರಾಬೆರಿ ಜಾಸ್ತಿ ಇಟ್ಟಿರೋದನ್ನ ನೋಡಿದ್ರೆ ಇದು ಸ್ಟ್ರಾಬೆರಿಯ ಐಸ್ ಕ್ರೀಂ ಅನ್ನೋದು ಅರ್ಥವಾಗುತ್ತದೆ.

Bigg Boss season 10 contestants Namratha Gowda Sri Lanka Trip and Strawberry cake

ಶ್ರೀಲಂಕಾದಲ್ಲಿ ಸುತ್ತಾಡುತ್ತಾ, ಅಲ್ಲಿನ ವಿಶೇಷ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿನ ವಿಶೇಷ ತಿನಿಸುಗಳನ್ನ ತಿಂದು ಎಂಜಾಯ್ ಮಾಡಿದ್ದಾರೆ. ಅವರ ಶ್ರೀಲಂಕಾ ಡೈರಿಯಲ್ಲಿನ ಕೆಲವು ಫೋಟೋಸ್ ಮಾತ್ರ ಬಿಟ್ಟಿದ್ದು, ಅಲ್ಲಿನೂ ಏನಾದ್ರೂ ವಿಡಿಯೋ ಮಾಡಿದ್ದಾರಾ ಎಂಬ ಪ್ರಶ್ನೆ ಅವರ ಫಾಲೋವರ್ಸ್‌ಗಿದೆ. ಒಂದು ವೇಳೆ ವಿಡಿಯೋ ಮಾಡಿದ್ದರೆ. ಖಂಡಿತ ಅದನ್ನು ಅವರ ಯೂಟ್ಯೂಬ್‌ನಲ್ಲಿ ಬಿಡಲಿದ್ದಾರೆ.

ನಮ್ರತಾ ಸದ್ಯ ಸಿನಿಮಾ, ಸೀರಿಯಲ್ ಕಡೆಗೂ ಗಮನ ಹರಿಸಿದ್ದಾರೆ. ಪಾತ್ರಕ್ಕೆ ಕಾಂಪ್ರಮೈಸ್ ಆಗೋದೆ ಇಲ್ಲ. ನಾನಿಷ್ಟಪಟ್ಟ ಪಾತ್ರವಿದ್ದರೆ ಅಷ್ಟೇ ಎಂದೇ ಹಲವು ಸಂದರ್ಶನಗಳಲ್ಲಿ ಹೇಳಿದ್ದರು. ಅದರಂತೆ ಇದೀಗ 'ಕೋಣ' ಸಿನಿಮಾದಲ್ಲಿ ಶ್ರುತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಸೀರಿಯಲ್‌ನಿಂದ ತುಂಬಾ ಗ್ಯಾಪ್ ತೆಗೆದುಕೊಂಡಿದ್ದ ನಮ್ರತಾ ಗೌಡ ಇದೀಗ ಕರ್ಣ ಸೀರಿಯಲ್ ಮೂಲಕ ಕಿರಣ್ ರಾಜ್‌ಗೆ ಜೋಡಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Bigg Boss season 10 contestants Namratha Gowda Sri Lanka Trip and Strawberry cake.
Read more about: life style actress namratha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X