ಬಾಲಿವುಡ್ ನಟಿ ಕಾಜೊಲ್ ಆಕ್ಟಿಂಗ್ ಅಷ್ಟೇ ಅಲ್ಲ, ಇವರ ಬಳಿ ಸ್ಪೆಷಲ್ ಟ್ಯಾಲೆಂಟ್ ಇದೆ!
ನಟಿ ಕಾಜೊಲ್‌ಗೆ ಈಗ 50 ವರ್ಷ. ಆದರೂ ಆ ಬ್ಯೂಟಿ ಆ ಎನರ್ಜಿಗೆ ಫಿದಾ ಆಗಲೇಬೇಕು. ಅಷ್ಟು ಆಕ್ಟೀವ್ ಆಗಿದ್ದಾರೆ. ಕಾಜೊಲ್ ಇತ್ತೀಚೆಗಷ್ಟೇ ತಮ್ಮ 50ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಪತಿ, ಮಕ್ಕಳು ಸೇರಿ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ನಟಿಯರು ಎಂದಾಗ ಅದ್ದೂರಿತನದ ಲೈಫ್ ಲೀಡ್ ಮಾಡ್ತಾರೆ ಅನ್ನೋದು ನಂಬಿಕೆ. ಆದರೆ ಕಾಜಲ್ ಹಂಗಲ್ಲ. ತಮ್ಮ ಬಿಡುವಿನ ವೇಳೆಯಲ್ಲಿ ವಿಶೇಷವಾಗಿ ತಮ್ಮ ಸಮಯವನ್ನು ಕಳೆಯುತ್ತಾರೆ. ತಮ್ಮ ಪ್ರೀತಿ ಪಾತ್ರರಿಗಾಗಿ ತಾವೇ ಗಿಫ್ಟ್ ರೆಡಿ ಮಾಡ್ತಾರೆ.
ಹಿಂದಿನ ಕಾಲದಲ್ಲಿ ಸಾಮಾನ್ಯ ಮಹಿಳೆಯರು ಕ್ರೂಷನ್ ಬಳಸುತ್ತಾ ಇದ್ದರು. ಅದರಿಂದ ಉಲ್ಲನ್ ಬಟ್ಟೆಗಳನ್ನ ತಯಾರು ಮಾಡ್ತಾ ಇದ್ದರು. ಆ ಬಟ್ಟೆಗಳ ಮಾರಾಟದಿಂದ ಅವರ ಜೀವನ ನಡೆಯುತ್ತಿತ್ತು. ಆದರೆ, ಕಾಜೊಲ್ ಈ ಕಲೆಯನ್ನ ಕಲಿತಿರುವುದು ಶಾಕಿಂಗ್ ಎನಿಸಿದೆ. ಕ್ರೂಷನ್ ಹಾಕೋದನ್ನ ಈಗಂತು ನಮ್ಮ ಸುತ್ತಮುತ್ತ ನೋಡೋಕೆ ಸಿಗುವುದು ಕೂಡ ಕಷ್ಟ. ಆದರೆ ಕಾಜೊಲ್ ಮಾತ್ರ ಆ ವಿದ್ಯೆಯನ್ನ ಇಲ್ಲಿಯವರೆಗೂ ಬಿಟ್ಟಿಲ್ಲ. ಅದರಿಂದ ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ರೆಡಿ ಮಾಡಿ ಕೊಟ್ಟಿದ್ದಾರೆ.

ಇನ್ನು ಕ್ರೂಷನ್ ಹಾಕೋದಕ್ಕೆ ಸಾಕಷ್ಟು ಸಮಯ ಬೇಕು. ಒಂದು ಸ್ವೆಟರ್ ಹಾಕ್ತೀವಿ ಅಂದ್ರೆ ಅಥವಾ ಒಂದು ಟೋಪಿ ಹಾಕಬೇಕು ಅಂದ್ರೂ ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ತಾಳ್ಮೆ ಇರಬೇಕು. ಅದನ್ನು ಈಗ ಒತ್ತಡದಿಂದ ಹೊರಬರುವುದಕ್ಕೂ ಮಹಿಳೆಯರು ಹಾಕುತ್ತಾರೆ. ಹೀಗಾಗಿಯೇ ಕ್ರೂಶನ್ ಮಾಡೋರು ಕುಂತಲ್ಲಿ, ನಿಂತಲ್ಲಿ, ಫ್ರೀ ಆದಾಗೆಲ್ಲಾ ಹೊಲಿತಾನೇ ಇರ್ತಾರೆ. ಈಗ ಕಾಜೋಲ್ ಮಾಡ್ತಾ ಇರೋದು ಅದನ್ನೇ.
ಕಾಜೊಲ್ ಕಾರಲ್ಲಿ ಜರ್ನಿ ಮಾಡುವಾಗ, ಮೇಕಪ್ ಮಾಡಿಸುವಾಗಲೂ ತಮ್ಮ ಕೈಯನ್ನ ಖಾಲಿ ಬಿಟ್ಟಿಲ್ಲ. ಬದಲಿಗೆ ಉಲ್ಲನ್ ಮೂಲಕ ಬಟ್ಟೆಯನ್ನ ಹೊಲಿಯುತ್ತಲೇ ಇದ್ದಾರೆ. ಈ ಉಲ್ಲನ್ ಬಟ್ಟೆಗಳನ್ನ ಕ್ರೂಷನ್ ಮೂಲಕ ತಯಾರಿಸೋದು ಅಂದ್ರೆ ಅಷ್ಟು ಸುಲಭವಲ್ಲ. ಅದು ಬರೀ ಕೈಯಿಂದ ಕಂಪ್ಲೀಟ್ ಬಟ್ಟೆಗಳನ್ನ ಹೆಣೆಯಬೇಕು. ಡಿಸೈನ್ ಒಂದೇ ಆದರೂ ಒಂದು ಸ್ವೆಟರ್ ಹೆಣೆಯೋಕೂ ಸಮಯ ಬೇಕು. ಕಾಜೊಲ್ ಕಡೆಗೂ ಒಂದು ಸ್ವೆಟರ್ ಹೆಣೆದೇ ಬಿಟ್ಟಿದ್ದಾರೆ. ಈಗ ಮತ್ತೊಂದು ಶುರು ಮಾಡಿದ್ದಾರೆ.
ಇದರ ನಡುವೆ ಸಿನಿಮಾದಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೆ. 'ಮಾ' ಎಂಬ ಸಿನಿಮಾ ಜೂನ್‌ನಲ್ಲಿ ರಿಲೀಸ್ ಆಗಲಿದೆ. ಅದನ್ನ ಹೊರತುಪಡಿಸಿದರೆ ಫ್ಯಾಮಿಲಿಗಾಗಿ ಸಾಕಷ್ಟು ಸಮಯವನ್ನು ಕಾಜೊಲ್ ನೀಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ತಮ್ಮಿಬ್ಬರು ಮಕ್ಕಳು ಹಾಗೂ ತುಂಬಾ ಪ್ರೀತಿಸುವ ದೇವಗನ್ ಜೊತೆಗೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಮಕ್ಕಳ ಜೊತೆಗಂತೂ ಮಗುವಾಗಿ ಎಂಜಾಯ್ ಮಾಡ್ತಾರೆ. ಪುಟ್ಟ ಸಂಸಾರದ ಯಶಸ್ಸಿನ ಗುಟ್ಟನ್ನ ಕಾಜೊಲ್ ಬಳಿ ಕೇಳಿ ತಿಳಿಯಬೇಕು. ಅಜಯ್ ದೇವಗನ್ ಕೂಡ ಸಿನಿಮಾದಲ್ಲಿ ಬ್ಯುಸಿ ಇದ್ದರು ಸಹ ಫ್ಯಾಮಿಲಿಗೆ ಸಮಯ ಮೀಸಲಿಡುತ್ತಾರೆ. ನಟನಾ ಬದುಕಿನ ಜೊತೆಗೆ ಮಕ್ಕಳ ಭವಿಷ್ಯಕ್ಕೂ ಸಮಯ ಮೀಸಲಿಡುತ್ತಾರೆ.
ಅಷ್ಟೇ ಅಲ್ಲ ಕಾಜೊಲ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಹೊಸ ಹೊಸ ಫೋಟೋಶೂಟ್ ಮಾಡಿಸಿ, ಹಂಚಿಕೊಳ್ಳುತ್ತಾ ಇರುತ್ತಾರೆ. ನ್ಯೂ ಡಿಸೈನ್ ಸ್ಯಾರಿ ಫೋಟೋಗಳನ್ನು ಹೆಚ್ಚು ಹಂಚಿಕೊಳ್ಳುತ್ತಾರೆ. ಅವರ ಸೋಷಿಯಲ್ ಮೀಡಿಯಾದಲ್ಲಿ ಸುಮಾರು 17.8 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಕಾಜೊಲ್ ಹಾಕುವ ಒಂದೊಂದು ಫೋಟೋಗೂ ಲೈಕ್ಸ್, ಕಮೆಂಟ್ ನೀಡುವ ಮೂಲಕ ತಮ್ಮ ನಟಿಗೆ ಜೈ ಎನ್ನುತ್ತಾರೆ. ಕಾಜೊಲ್ ಕೂಡ ಅಭಿಮಾನಿಗಳಿಗಾಗಿ ಹೊಸ ಹೊಸ ಅಪ್ಡೇಟ್ ಅನ್ನ ಸೋಷಿಯಲ್ ಮೀಡಿಯಾ ಮೂಲಕವೂ ನೀಡುತ್ತಾ ಇರುತ್ತಾರೆ.


Click it and Unblock the Notifications











