ತುಟಿಗೂ, ಕೆನ್ನೆಗೂ ಒಂದೇ; ಕತ್ರಿನಾ ಕೈಫ್‌ ಸ್ಟ್ರಾಬೆರಿ ಪ್ರಾಡಕ್ಟ್‌ನ ಸ್ಪೆಷಾಲಿಟಿ ಏನು ಗೊತ್ತೇ?

By ಎಸ್ ಸುಮಂತ್

ಕತ್ರಿನಾ ಕೈಫ್ ಸೌಂದರ್ಯದ ಗಣಿಯಿದ್ದಂತೆಯೇ ಸರಿ. ಸದಾ ಸಿನಿಪ್ರಿಯರನ್ನು ಕಾಡುವ ಸುಂದರಿ. ಇದೀಗ ಲಿಪ್‌ಗೆ ಲೈಟ್ ಆಗಿ ಜೆಲ್ ಹಚ್ಚಿ ಹುಡುಗರ ಹಾರ್ಟ್‌ಗೆ ಇನ್ನಷ್ಟು ಹುಚ್ಚು ಹಿಡಿಸಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಒಂದು ಜೆಲ್ಲಿ ಲಿಪ್ ಸ್ಟಿಕ್‌ನಿಂದ ಮುಖದ ಮೇಕಪ್‌ಗೆ ಎಷ್ಟೆಲ್ಲ ಲಾಭಗಳಿವೆ ಎಂಬುದನ್ನು ತಿಳಿಸಿದ್ದಾರೆ. ಆ ವಿಡಿಯೋ ಹಾಕಿದ ಕೂಡಲೇ ಕಮೆಂಟ್‌ಗಳ ಸುರಿಮಳೆಯೇ ಸುರಿದಿದೆ. ಲೈಕ್ಸ್ ಅಂತೂ ಕೇಳೋದೆ ಬೇಡ. ಯಾಕಂದ್ರೆ ಕತ್ರಿನಾ ಕೈಫ್‌ಗೆ ಅಷ್ಟೊಂದು ಫ್ಯಾನ್ ಫಾಲೋವರ್ಸ್ ಇದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ ಕತ್ರಿನಾ ಕೈಫ್ ತಮ್ಮದೇ ಆದ ಬ್ಯೂಟಿ ಪ್ರಾಡೆಕ್ಟ್ ಅನ್ನ ಹೊಂದಿದ್ದಾರೆ. ಆಗಾಗ ಆ ಪ್ರಾಡೆಕ್ಟ್ ಬಳಸಿ ಪ್ರಮೋಷನ್ ಮಾಡುತ್ತಾ ಇರುತ್ತಾರೆ. 2019ರಲ್ಲಿ ಕತ್ರಿನಾ ಕೈಫ್ ತಮ್ಮ ಬ್ಯೂಟಿ ಪ್ರಾಡಕ್ಟ್ ಅನ್ನು ಶುರು ಮಾಡಿದರು. ಈಗ ಸಾಕಷ್ಟು ಜನ ಆ ಬ್ಯೂಟಿ ಪ್ರಾಡಕ್ಟ್ ಅನ್ನೇ ಬಳಸುತ್ತಿದ್ದಾರೆ. ಎಲ್ಲರ ಚರ್ಮದ ಟೋನ್‌ಗೆ ಮ್ಯಾಚ್ ಆಗುವಂತ ಫೌಂಡೇಷನ್ ಕೂಡ, ಲಿಪ್ ಸ್ಟಿಕ್‌ಗಳು ಕತ್ರಿನಾ ಕೈಫ್ ಬ್ಯೂಟಿ ಪ್ರಾಡಕ್ಟ್‌ನಲ್ಲಿ ಸಿಗಲಿದೆ. ಅದರಲ್ಲೂ ಲಿಪ್ ಸ್ಟಿಕ್ ಅಂದ್ರೆ ಪ್ರಾಣ ಬಿಡುವವರಿಗೆ ಕತ್ರಿನಾ ಕೈಫ್ ಹೊಸ ಪ್ರಾಡಕ್ಟ್ ಅನ್ನ ಹೇಗೆಲ್ಲ ಬಳಸಬಹುದು ಎಂದು ತೋರಿಸಿದ್ದಾರೆ.

Bollywood actress Katrina Kaif lipstick highlights and her beauty secret

ಸಾಕಷ್ಟು ಜನ ಹೆಣ್ಣು ಮಕ್ಕಳಿಗೆ ಮೇಕಪ್‌ನಲ್ಲಿ ಎಲ್ಲಾ ವಸ್ತುಗಳನ್ನು ಬಳಕೆ ಮಾಡದೆ ಹೋದರು ಒಂದಂತು ಇರಲೇಬೇಕಾಗುತ್ತದೆ. ಅದೇ ಲಿಪ್ ಸ್ಟಿಕ್. ಲಿಪ್ ಸ್ಟಿಕ್ ಇಲ್ಲದೆ ಸಾಕಷ್ಟು ಹೆಣ್ಣು ಮಕ್ಕಳು ಹೊರಗೆ ಹೋಗುವುದೇ ಇಲ್ಲ. ಹೀಗಾಗಿ ಒಂದು ಲಿಪ್ ಸ್ಟಿಕ್‌ನಲ್ಲಿ ಮುಖದ ಮೇಕಪ್ ಕೂಡ ಮಾಡಿಕೊಳ್ಳಬಹುದು ಎಂಬುದನ್ನು ಇದೀಗ ಕತ್ರಿನಾ ಕೈಫ್ ತೋರಿಸಿಕೊಟ್ಟಿದ್ದಾರೆ. ಅಂದ್ರೆ ಅವರು ಬಳಸಿದ, ಅವರದ್ದೇ ಬ್ರ್ಯಾಂಡ್‌ನ ಲಿಪ್ ಸ್ಟಿಕ್ ತೆಗೆದುಕೊಂಡರೆ ಮೇಕಪ್ ಆಗಿಯೂ ಹೇಗೆ ಬಳಕೆ ಮಾಡಬಹುದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ. ಅಂದ್ರೆ ಕೆನ್ನೆಗೂ ಶೇಡ್ ಆಗಿ ಅದನ್ನೇ ಬಳಸಬಹುದಾಗಿದೆ.

ಅದರಲ್ಲೂ ಕತ್ರಿನಾ ಕೈಫ್ ಬಳಸಿದ ಜಲ್ಲಿ ಲಿಪ್ ಸ್ಟಿಕ್‌ನಲ್ಲಿ ಏನೆಲ್ಲಾ ಇದೆ ಅನ್ನೋದನ್ನು ಮೆನ್ಶನ್ ಮಾಡಿದ್ದಾರೆ. ಅಂದ್ರೆ ಈ ಲಿಪ್ ಸ್ಟಿಕ್ ಹಲವು ಶೆಡ್‌ಗಳಲ್ಲಿ (ಬಣ್ಣಗಳಲ್ಲಿ) ಸಿಗುತ್ತದೆ. ಇದು ತುಟಿಗಳನ್ನ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಆಗ ತುಟಿಗಳ ಸೌಂದರ್ಯವೂ ಮತ್ತಷ್ಟು ಹೊಳೆಯುತ್ತದೆ. ಅದರಲ್ಲೂ ಈ ಬೇಸಿಗೆ ಕಾಲಕ್ಕೆ ಏಳಿ ಮಾಡಿಸಿದ ಲಿಪ್ ಸ್ಟಿಕ್ ಆಗಿರಲಿದೆ. ಸದಾ ಹೈಡ್ರೇಟ್ ಆಗಿರಲಿದೆ. ನನ್ನ ನೆಚ್ಚಿನ ಜೆಲ್ಲಿ ಲಿಪ್ ಸ್ಟಿಕ್ ಕೂಡ ಇದಾಗಿದೆ ಅಂತ ಕತ್ರಿನಾ ಕೈಫ್ ಕ್ಯಾಪ್ಶನ್ ಕೊಟ್ಟಿದ್ದಾರೆ. ಇನ್ನು ಬಾಲಿವುಡ್ ಹಲವು ನಟಿಯರು ಬ್ಯೂಟಿ ಪ್ರಾಡಕ್ಟ್‌ನ ಅಂಬಾಸಿಡರ್ ಆಗಿದ್ದಾರೆ.

ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಅವರನ್ನು ಮದುವೆಯಾದ ಮೇಲೆ ಸಿನಿಮಾ ರಂಗದಿಂದ ಕೊಂಚ ದೂರವೇ ಇದ್ದಾರೆ. ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಈ ಬ್ಯೂಟಿ ಪ್ರಾಡಕ್ಟ್ ವಿಡಿಯೋಗೂ ಅಭಿಮಾನಿಗಳು ಮತ್ತೆ ಬೇಗ ಸಿನಿಮಾ ಮಾಡಿ ಅಂತ ಕೇಳಿಕೊಳ್ಳುತ್ತಿದ್ದಾರೆ. ಆದರೆ, ಕತ್ರಿನಾ ಕೈಫ್ ಮನೆ, ಸಂಸಾರ ಅಂತ ಗೃಹಿಣಿಯಾಗುವತ್ತ ಗಮನ ಹರಿಸಿದ್ದಾರೆ. ಅದಕ್ಕಾಗಿಯೇ ಇತ್ತೀಚೆಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಬಂದು ಮಗುವಿಗಾಗಿ ಪೂಜೆ ಮಾಡಿಸಿದ್ದಾರೆ ಎಂಬ ಸುದ್ದಿ ಇದೆ.

More from Filmibeat

English summary
Bollywood actress Katrina Kaif lipstick highlights and her beauty secret
Read more about: life style katrina kaif actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X