49ನೇ ವಯಸ್ಸಿನಲ್ಲಿ ಶಿಲ್ಪಾ ಶೆಟ್ಟಿ ಇಷ್ಟು ಫಿಟ್ ಇರೋದಕ್ಕೆ ಯೋಗ ಒಂದೇ ಕಾರಣ ಅಲ್ಲ..!

By ಎಸ್ ಸುಮಂತ್

ಮುಂಬೈ ಬೆಡಗಿ ಶಿಲ್ಪಾ ಶೆಟ್ಟಿ ಎಂದಾಕ್ಷಣಾ ಕಣ್ಣ ಮುಂದೆ ಬರೋದೆ ಅವರ ಫಿಟ್ನೆಸ್.‌ಈಗ ಅವರಿಗೆ 49 ವರ್ಷ ವಯಸ್ಸು. ಆದರೆ, ಇನ್ನು 30 ವರ್ಷದ ಯುವತಿಯಂತೆ ಕಾಣಿಸುತ್ತಾರೆ. ಅದಕ್ಕೆ ಅವರು ಪ್ರತಿದಿನವೂ ದೇಹ ದಂಡಿಸುವುದೇ ಕಾರಣ. ಏನೇ ಮಿಸ್ ಆದರೂ ಪ್ರತಿ ದಿನ ಅವರು ವರ್ಕೌಟ್ ಮಾಡೋದು ಮಾತ್ರ ಮಿಸ್ ಆಗುವುದೇ ಇಲ್ಲ. ಅವರ ಫಿಟ್ನೆಸ್ ಸೀಕ್ರೆಟ್ ಕೇವಲ ಯೋಗ ಮಾಡುವುದರಿಂದ ಬಂದಿರೋದು ಅಂತಾನೇ ಎಲ್ಲರೂ ಹೇಳ್ತಾರೆ. ಆದರೆ ಅದು ಅಷ್ಟಕ್ಕೆ ಸೀಮಿತವಾಗಿಲ್ಲ. ಯೋಗಾಭ್ಯಾಸವನ್ನು ಮಾಡುತ್ತಾರೆ. ಅದರ ಜೊತೆಗೆ ಮಿಸ್ ಮಾಡದೆ ವರ್ಕೌಟ್ ಕೂಡ ಮಾಡ್ತಾರೆ. ಡಯೆಟ್ ಕೂಡ ಮಾಡ್ತಾರೆ. ಹಾಗಾದ್ರೆ ಶಿಲ್ಪಾ ಶೆಟ್ಟಿ ಜಿಮ್‌ನಲ್ಲಿ ಎಷ್ಟು ಗಂಟೆಗಳ ಕಾಲ ಬೆವರಿಳಿಸುತ್ತಾರೆ ಅನ್ನೋದನ್ನ ನೋಡೋಣಾ ಬನ್ನಿ.

ಯೋಗ ಅನ್ನೋದು ಲೇಟ್ ರಿಸಲ್ಟ್ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಒಮ್ಮೆ ಯೋಗದಿಂದ ದೇಹದ ತೂಕ ಇಳಿಸಿದರೆ ಆರೋಗ್ಯಯುತವಾಗಿರುತ್ತದೆ ಅನ್ನೋದಂತು ಸತ್ಯ. ಪಕ್ಕಾ ಫಿಟ್ನೆಸ್ ಪಡೆದುಕೊಳ್ಳುವುದಕ್ಕೆ ಶಿಲ್ಪಾ ಶೆಟ್ಟಿ ಒಂದಷ್ಟು ವರ್ಷಗಳ ಕಾಲ ಯೋಗದಿಂದಾನೇ ಶ್ರಮ ಹಾಕಿದ್ದಾರೆ. ಈಗ ಯೋಗದ ಜೊತೆಗೆ ಜಿಮ್ ಕೂಡ ಹೋಗ್ತಾ‌ ಇದ್ದಾರೆ. ಬೊಜ್ಜು ಬಾರದೆ ಇರುವುದಕ್ಕೆ, ಆರೋಗ್ಯಯುತವಾಗಿರುವುದಕ್ಕೆ ಇನ್ನು ಸಾಕಷ್ಟು ಉಪಯೋಗ ಯೋಗದಲ್ಲಿದೆ. ಆದರೆ ದೇಹದಲ್ಲಿ ಕೆಲವೊಂದು ಅಂಗಗಳಿಗೆ ಬೇರೆ ಬೇರೆ ರೀತಿಯಾದಂತ ವ್ಯಾಯಾಮದ ಅಗತ್ಯ ಇರುತ್ತದೆ. ಹೀಗಾಗಿ ಶಿಲ್ಪಾ ಶೆಟ್ಟಿ ಜಿಮ್‌ನಲ್ಲಿಯೂ ಸಖತ್ ಆಗಿಯೇ ವರ್ಕೌಟ್ ಮಾಡ್ತಾರೆ.

Bollywood actress Shilpa shetty fitness secret at the age of 49

ಶೋಲ್ಡರ್ ಫಿಟ್ ಆಗೋದಕ್ಕೆ, ಬ್ಯಾಕ್ ಸ್ಟ್ರೆಂಥ್, ಸೈಡ್ ಫ್ಯಾಟ್ ಕರಗಿಸುವಂತ ವರ್ಕೌಟ್‌ಗಳನ್ನ ಮಾಡುತ್ತಾರೆ. ಆದರೆ ಅವರ ಒಂದೊಂದು ವಿಡಿಯೋಗಳನ್ನು ನೋಡ್ತಾ ಹೋದರೆ ಮೈ ಝುಮ್ ಎನಿಸುತ್ತದೆ. ಅಷ್ಟು ಜೋರು ವರ್ಕೌಟ್ ಮಾಡ್ತಾರೆ. ಆ ಎನರ್ಜಿಗೆ ಯುವಕರು ನಾಚಿ ನೀರಾಗಬೇಕು. 20-30 ವಯಸ್ಸಿನವರೇ ಜಿಮ್‌ನಲ್ಲಿ ವಸ್ತುಗಳನ್ನ ಎತ್ತುವುದಕ್ಕೆ ತಿಣುಕಾಡುತ್ತಾರೆ‌. ಅದರಲ್ಲೂ ಹೊಟ್ಟೆಯ ಬೊಜ್ಜು ಕರಗಿಸುವುದಕ್ಕೆ ಅವರು ಮಾಡುವ ಲ್ಯಾಟ್ ವ್ಯಾಯಾಮವಂತು ಸುಸ್ತು ಮಾಡಿ ಬಿಡುತ್ತದೆ. ಇತ್ತ ನೋಡಿದ್ರೆ ಶಿಲ್ಪಾ ಶೆಟ್ಟಿ ಅದನ್ನೇ ಎಷ್ಟು ಫಾಸ್ಟ್ ಆಗಿ ಮಾಡಿದ್ದಾರೆ ಅಂದ್ರೆ ಇಷ್ಟೆಲ್ಲಾ ಎನರ್ಜಿ ಹೇಗೆ ಬಂತು ಅನ್ನೋ ಆಶ್ಚರ್ಯವಾಗದೆ ಇರಲಾರದು.

ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾ ನೋಡಿದ್ರೆ ಅದರಲ್ಲಿ ಹೆಚ್ಚಾಗಿ ಇರುವುದೇ ಈ ವ್ಯಾಯಾಮದ ವಿಡಿಯೋಗಳು. ಯೋಗ, ಜಿಮ್‌ನಲ್ಲಿ ಕಸರತ್ತು ಮಾಡಿದ ವಿಡಿಯೋಗಳು. ಅದರಲ್ಲೂ ಒಬ್ಬರೇ ವರ್ಕೌಟ್ ಮಾಡಿ ಬೇಜಾರು ಅನ್ನೋರಿಗಂತು ಶಿಲ್ಪಾ ಶೆಟ್ಟಿ ಹಾಕಿರುವ ವಿಡಿಯೋಗಳು ಸಹಾಯ ಮಾಡುತ್ತವೆ. ಅಂದ್ರೆ ಜಿಮ್‌ನಲ್ಲಿ ಯಾರಾದ್ರೂ ಫ್ರೆಂಡ್ಸ್ ಇದ್ದರೆ ಅವರೊಟ್ಟಿಗೆ ಸೇರಿ ಹೇಗೆಲ್ಲಾ ವರ್ಕೌಟ್ ಮಾಡಬಹುದು ಎಂಬುದನ್ನ ತೋರಿಸಿದ್ದಾರೆ. ಅಂದ್ರೆ ಜೋಡಿ ವ್ಯಾಯಾಮ ಯಾವ ರೀತಿ ವರ್ಕ್ ಆಗುತ್ತೆ ಎಂಬುದು. ಸಿಂಗಲ್ ಆಗಿ ಜಿಮ್ ಹೋಗೋದಕ್ಕೆ ಬೇಜಾರು ಎನ್ನುವವರು ಇದನ್ನ ಟ್ರೈ ಮಾಡಬಹುದು.

ವರ್ಕೌಟ್ ವಿಡಿಯೋಗಳನ್ನ ಹೊರತು ಪಡಿಸಿದರೆ ಫ್ಯಾಮಿಲಿ ವಿಡಿಯೋಗಳನ್ನ ಅಪ್ಲೋಡ್ ಮಾಡಿದ್ದಾರೆ. ಮಗ, ಮಗಳು ಇಬ್ಬರು ಮುದ್ದಾಗಿದ್ದು, ಭಾಂದವ್ಯ, ಹೊಂದಾಣಿಕೆ ಕೂಡ ಅಷ್ಟೇ ಚೆನ್ನಾಗಿದೆ. ಅದಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿಯೇ ಆಗಾಗ ವಿಡಿಯೋಗಳನ್ನ ಹಂಚಿಕೊಳ್ಳುತ್ತಾ ಇರುತ್ತಾರೆ. ಅದನ್ನ ಬಿಟ್ಟರೆ ಜಾಹೀರಾತುಗಳಲ್ಲಿ ಸಿಕ್ಕಾಪಟ್ಟೆ ಕಾಣಿಸಿಕೊಳ್ಳುತ್ತಾರೆ. ಹಾಗೇ ಶಿಲ್ಲಾ ಶೆಟ್ಟಿ ಫುಡ್ಡಿ ಕೂಡ. ರುಚಿ ರುಚಿಯಾದದ್ದನ್ನ ಇಷ್ಟಿಷ್ಟೇ ತಿಂತಾರೆ.

More from Filmibeat

English summary
Bollywood actress Shilpa shetty fitness secret at the age of 49;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X