ಟಿಶ್ಯೂ ಸೀರೆಯುಟ್ಟ ಆಲಿಯಾ ಬ್ಲೌಸ್ ಡಿಸೈನ್ ಮಾಡಿಸುವುದರಲ್ಲಿ ಎಡವಿದರೇ? ಡಿಸೈನರ್ ಕೈ ಕೊಟ್ರಾ?
ಬಾಲಿವುಡ್ ನಟಿ ಆಲಿಯಾ ಭಟ್ ತುಂಬಾನೇ ಸ್ಪೆಷಲ್. ರಿಯಲ್ ಲೈಫ್‌ನಲ್ಲಿ ಇರೋದೆ ಬೇರೆ, ಸಿನಿಮಾ ಲೈಫ್‌ನಲ್ಲಿ ಕಾಣಿಸಿಕೊಳ್ಳುವುದೇ ಬೇರೆ. ಅದರಲ್ಲೂ ಸಿನಿಮಾ ವಿಚಾರದಲ್ಲಿ ತುಂಬಾ ಡೆಡಿಕೇಟೆಡ್. ಅದಕ್ಕಾಗಿಯೇ ಎಲ್ಲರಿಗೂ ಇಷ್ಟವಾಗ್ತಾರೆ. ಅಷ್ಟೇ ಅಲ್ಲ ಅವರಿದ್ದ ಕಡೆ ನಗುವಿಗೇನು ಕೊರತೆ ಅನ್ನೋದು ಇರುವುದಿಲ್ಲ. ಸದಾ ನಗು ನಗುತ್ತಾ ಅವರು ಖುಷಿಯಾಗಿರುತ್ತಾರೆ. ಅಕ್ಕ ಪಕ್ಕದವರನ್ನು ಖುಷಿಯಾಗಿಡೋದಕ್ಕೆ ಪ್ರಯತ್ನ ಮಾಡ್ತಾರೆ. ಜೊತೆಗೆ ಫ್ಯಾಷನ್ ವಿಚಾರದಲ್ಲೂ ಅಷ್ಟೇ ಎಲ್ಲರ ಗಮನ ಸೆಳೆಯುವಂತೆಯೇ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಈಗ್ಯಾಕಪ್ಪ ಆಲಿಯಾ ಭಟ್ ವಿಚಾರ ಅಂದ್ರೆ ಅವರೊಂದಷ್ಟು ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ಟಿಶ್ಯೂ ಸೀರೆ ಹಾಕಿ, ಕೈಯಲ್ಲಿ ಒಂದು ಮೊಳ ಮಲ್ಲಿಗೆ ಹಿಡಿದು ಪೋಸ್ ನೀಡಿದ್ದಾರೆ. ಅದರಲ್ಲೂ ಕಚ್ಚೆ ಪಚ್ಚೆಯ ಸ್ಟೈಲ್‌ನಲ್ಲಿ ಸೀರೆಯನ್ನ ಹಾಕಿದ್ದಾರೆ. ಸೀರೆ ಮಾತ್ರ ಕಣ್ಮನ ಸೆಳೆಯುವಂತೆ ಇದೆ. ಆದರೆ, ಅದ್ಯಾಕೋ ಏನೋ ಬ್ಲೌಸ್ ವಿಚಾರದಲ್ಲಿಯೇ ಆಲಿಯಾ ಯಡವಿದರಾ ಅಂತ ಅನಿಸುತ್ತಿದೆ. ಯಾಕಂದ್ರೆ, ಆ ಸೀರೆಗೂ ಆ ಬ್ಲೌಸ್‌ಗೂ ಮ್ಯಾಚ್ ಆಗ್ತಾನೆ ಇಲ್ಲ. ಆಲಿಯಾ ಭಟ್ ಇಂಥ ಕೆಟ್ಟ ಟೇಸ್ಡ್ ಯಾವಾಗಿಂದ ಶುರುವಾಯ್ತು ಅನ್ನೋದು ಅವರನ್ನ ಫಾಲೋ ಮಾಡುವ ಅಭಿಮಾನಿಗಳಿಗೆ ಅನುಮಾನ ಬರೋದಕ್ಕೆ ಶುರುವಾಗಿದೆ. ಅದರಲ್ಲೂ ಈ ಫೋಟೋಶೂಟ್ ಮಾಡಿದ ಟೀಂಗೆ ಅದರ ಗಮನ ಬರಲಿಲ್ಚಾ ಎಂಬ ಪ್ರಶ್ನೆಗಳು ಕೂಡ ಕಾಡುತ್ತಿವೆ. ಈ ಬಾರಿಯ ಆಲಿಯಾ ಡಿಸೈನರ್ ಏನಾದರೂ ಕೈ ಕೊಟ್ಟರೇ ಎನ್ನುವ ಅನುಮಾನ ಕಾಡುತ್ತಿದೆ.

ಆಲಿಯಾ ಭಟ್ ಅವರ ಸೋಷಿಯಲ್ ಮೀಡಿಯಾಗೆ ಹೋಗಿ ಒಮ್ಮೆ ಕಣ್ಣು ಆಡಿಸಿದರೆ ಸಾಕು ಅವರು ಎಂತಹ ಫ್ಯಾಷನ್ ಹೊಂದಿದ್ದಾರೆ ಅನ್ನೋದು ಗೊತ್ತಾಗಿ ಬಿಡುತ್ತದೆ. ಲೆಹೆಂಗಾ ಆಗಿರಬಹುದು, ಸ್ಯಾರಿ ಆಗಿರಬಹುದು, ಹಾಕುವ ಟೀ ಶರ್ಟ್‌ಗಳೇ ಆಗಿರಬಹುದು ನೋಡಿದ ಕೂಡಲೇ ವ್ಹಾವ್ ಎನಿಸುವಂತಹ ಹಾಗೇ ಇರುತ್ತವೆ. ಆ ಡ್ರೆಸ್‌ಗಳನ್ನ ನೋಡಿದವರು ಕೂಡ ಫಾಲೋ ಮಾಡುವಂತಹ ಸ್ಟೈಲ್ ಅನ್ನೇ ಫಾಲೋ ಮಾಡುತ್ತಾರೆ. ಅದರಲ್ಲೂ ಸೀರೆಗಳ ಪೋಸ್ಟರ್‌ಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ. ಸೀರೆಗೆ ಹಾಕುವ ಬ್ಲೌಸ್, ಮಾಡುವ ಹೇರ್ ಸ್ಟೈಲ್, ಹಾಕುವ ಜ್ಯುವೆಲ್ಲರಿ ಎಲ್ಲವೂ ಗಮನ ಸೆಳೆಯುತ್ತವೆ. ಹಾಗೇ ಆಲಿಯಾ ಭಟ್ ಸೌಂದರ್ಯವನ್ನು ಹೆಚ್ವಿಸುತ್ತದೆ. ಆದರೆ ಈ ಬಾರಿ ಯಾಕೆ ಈ ರೀತಿಯ ಸ್ಟೈಲ್ ಮಾಡಿದ್ರು ಗೊತ್ತಾಗ್ತಿಲ್ಲ. ಹಾಗಾದ್ರೆ ಆಲಿಯಾ ಭಟ್ ಹಾಕಿರುವ ಸೀರೆ ಯಾವುದು..? ಬ್ಲೌಸ್ ಯಾವುದು ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಆಲಿಯಾ ಭಟ್ ಮಲ್ಲಿಗೆ ಹಿಡಿದು ಫೋಟೋಗೆ ಪೋಸ್ ಕೊಡಲು ಹಾಕಿರುವ ಸ್ಯಾರಿ ಟಿಶ್ಯೂ ಟೈಪ್ ಸ್ಯಾರಿ. ಆದರೆ ಕಲರ್ ಮಾತ್ರ ಸೂಪರ್ ಆಗಿದೆ. ಲೈಟ್ ಪಿಂಕ್. ಕಂಪ್ಲೀಟ್ ಪಿಂಕ್ ಅಂತಾನೂ ಹೇಳೋಕೆ ಆಗಲ್ಲ. ಸ್ವಲ್ಪ ಆರೇಂಜ್ ಕಲರ್ ಅಂತೆಯೂ ಕಾಣಿಸುತ್ತದೆ. ಮಧ್ಯ ಭಾಗದಲ್ಲಿ ಫ್ಕವರ್ ಡಿಸೈನ್ ಮಾಡಲಾಗಿದೆ. ಆ ಕಡೆ ಈ ಕಡೆ ಸೈಡ್ ಭಾಗದಲ್ಲಿ ಫ್ಲೈನ್ ಡಿಸೈನ್ ನೀಡಲಾಗಿದೆ. ಅದನ್ನು ಹಾಕಿರುವುದು ಕಚ್ಚೆ ಪಂಚೆ ಸ್ಟೈಲ್‌ನಲ್ಲಿ. ಆದರೆ, ಅದಕ್ಕೆ ಬಳಸಿರುವ ಬ್ಲೌಸ್ ಲೈಟ್ ಪಿಂಕ್ ಕಲರದ್ದೇ ಆಗಿದ್ದರೂ, ಆ ಸೀರೆಗೂ ಆ ಬ್ಲೌಸ್‌ಗೂ ಯಾವ ಕಡೆಯಿಂದ ನೋಡಿದ್ರು ಮ್ಯಾಚ್ ಆಗ್ತಾ ಇಲ್ಲ. ಅಂದರೆ, ರೇಷ್ಮೇ ಸೀರೆಗೆ ಫ್ಯಾನ್ಸಿ ಬ್ಲೌಸ್ ಹಾಕಿದ್ರೆ ಮ್ಯಾಚ್ ಆಗೋದಾದ್ರೂ ಹೇಗೆ. ಅದರಲ್ಲೂ ಪ್ಕೈನ್ ಸೀರೆಗೆ ಎಂಬ್ರಾಯ್ಡರಿ ಡಿಸೈನ್ ಇರೋ ಬ್ಲೌಸ್ ಹಾಕಿದ್ದಾರೆ. ಇದೂ ಒಂದು ಫ್ಯಾಷನ್ ಇರಬಹುದಾ? ಖಂಡಿತಾ ಗೊತ್ತಿಲ್ಲ.


Click it and Unblock the Notifications