ಮೈಸೂರ್ ಸಿಲ್ಕ್ ಸೀರೆಯುಟ್ಟು ಮಿಂಚಿದ ಅನುಪಮಾ ಗೌಡ; ಇದರ ಬೆಲೆ ಎಷ್ಟು?
ಹೆಣ್ಣಿಗೆ ಸೀರೆ ಯಾಕೆ ಅಂದ.. ಈ ಹಾಡನ್ನ ರವಿಚಂದ್ರನ್ ಅವರು ಅಂದೇ ನೀಡಿದ್ದಾರೆ. ಸೀರೆಯಲ್ಲಿ ಹೆಣ್ಣು ಎಷ್ಟು ಅಂದವಾಗಿ ಕಾಣಿಸ್ತಾರೆ ಅನ್ನೋದನ್ನು ಹೇಳಿದ್ದಾರೆ. ಅದರಲ್ಲೂ ರೇಷ್ಮೇ ಸೀರೆಯಲ್ಲಿ ಹೆಣ್ಣು ಮಕ್ಕಳು ಇನ್ನು ಅತ್ಯದ್ಭುತವಾಗಿ ಕಾಣಿಸ್ತಾರೆ. ರೇಷ್ಮೆ ಸೀರೆಗಳು ಕೊಡುವ ಲುಕ್ ಬೇರೆನೆ ಆಗಿರುತ್ತದೆ. ಹೀಗಾಗಿಯೇ ಎಲ್ಲರೂ ರೇಷ್ಮೆ ಸೀರೆಗಳನ್ನೇ ಇಷ್ಟ ಪಡುತ್ತಾರೆ. ಇದೀಗ ನಟಿ ಕಂ ನಿರೂಪಕಿ ಅನುಪಮಾ ಗೌಡ ಕೂಡ ರೇಷ್ಮೆ ಸೀರೆಯಲ್ಲಿಯೇ ಮಿಂಚಿದ್ದಾರೆ.
ಪಾಚಿ ಹಸಿರು ಬಣ್ಣದ ರೇಷ್ಟೆ ಸೀರೆಯಲ್ಲಿ ಅನುಪಮಾ ಗೌಡ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೇ ಸ್ನೇಹಿತೆ ನೇಹಾ ಮಗಳಿಗೆ ನಾಮಕರಣ ಮಾಡಲಾಯ್ತು. ಅಕ್ಷರಾ ಎಂಬ ಮುದ್ದಾದ ಹೆಸರನ್ನ ಇಟ್ಟಿದ್ದಾರೆ. ನಾಮಕರಣಕ್ಕೆಂದು ಹೋದಾಗ ಈ ಸೀರೆಯನ್ನು ಉಟ್ಟಿದ್ದರು. ಅದರ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಹಸಿರು ಬಣ್ಣದ ಸೀರೆಯಲ್ಲಿಯೇ ಹೆಚ್ವು ಪೋಸ್ಟ್‌ಗಳನ್ನ ಅನುಪಮಾ ಗೌಡ ಹಾಕಿದ್ದಾರೆ. ಸೀರೆಯನ್ನು ಇಷ್ಟ ಪಡುವ ಹೆಣ್ಣು ಮಕ್ಕಳನ್ನು ಈ ಸೀರೆ ಅಟ್ರ್ಯಾಕ್ಟ್ ಮಾಡಿದೆ. ಹಾಗಾದ್ರೆ ಈ ಸೀರೆಯ ಸ್ಪೆಷಾಲಿಟಿ ಏನು? ಬೆಲೆ ಎಷ್ಟಿರಬಹುದು? ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ.

ಅನುಪಮಾ ಗೌಡ ಅವರ ಸೋಷಿಯಲ್ ಮೀಡಿಯಾದಲ್ಲಿ ಈ ಸೀರೆಗಳ ಪೋಸ್ಟ್ ಮಾಡಲಾಗಿದೆ. ಸಾಮಾನ್ಯವಾಗಿ ಮೈಸೂರು ಸಿಲ್ಕ್ ಸೀರೆಗಳೆಂದರೆ ಹೆಣ್ಣು ಮಕ್ಕಳಿಗೆ ವಿಶೇಷ ವ್ಯಾಮೋಹ. ಯಾಕಂದ್ರೆ ಸಣ್ಣ ಜರಿ, ಬ್ಯೂಟಿಫುಲ್ ಕಲರ್, ನೈಸ್ ಕ್ಲಾತ್, ಉಟ್ಟಾಗ ಅಂದವನ್ನ ಹೆಚ್ಚಿಸುವಂತ ಸೀರೆ ಅದಾಗಿರುತ್ತದೆ. ಈ ಮೈಸೂರು ಸಿಲ್ಕ್ ಸೀರೆಯನ್ನ ಸಾಮಾನ್ಯರು ಕೂಡ ಕೊಂಡುಕೊಳ್ಳಬಹುದಾಗಿದೆ.
ಅನುಪಮಾ ಗೌಡ ಉಟ್ಟಿರುವ ಮೈಸೂರು ಸಿಲ್ಕ್ ಸೀರಿಯ ಬೆಲೆ ಮೇಲ್ನೋಟಕ್ಕೆ 8,500 ರೂಪಾಯಿ ತೋರಿಸುತ್ತಿದೆ. ಇವರ ಉಟ್ಟಿರುವ ಸೀರೆಯ ಬೆಲೆ ಇನ್ನೂ ಹೆಚ್ಚಿದ್ದರೂ ಇರಬಹುದು. ಇದು ಪ್ಯೂರ್ ಮೈಸೂರ್ ಸಿಲ್ಕ್ ಕ್ರೇಪ್ ಸ್ಯಾರಿಯಾಗಿದೆ. ಮೈಸೂರು ಸಿಲ್ಕ್ ಸೀರೆಯಲ್ಲಿ ತೂಕದ ಮೇಲೂ ಬೆಲೆ ನಿಗದಿಯಾಗುತ್ತದೆ. ಇದರ ತೂಕ ಇರೋದು 120 ಗ್ರಾಂ. ಕೆಲವೊಂದು ಮೈಸೂರು ಸಿಲ್ಕ್ ಸೀರೆಗಳ ಬೆಲೆ ಶುರುವಾಗುವುದೇ 25 ಸಾವಿರದಿಂದ. ಮೈಸೂರು ಸಿಲ್ಕ್ ಸೀರೆಗಳನ್ನ ಇಷ್ಟ ಪಡುವವರು ಈ ರೀತಿ ಕ್ರೇಪ್ ಸೀರೆಗಳನ್ನ ತೆಗೆದುಕೊಳ್ಳಬಹುದು.

ಸೀರೆಯುಟ್ಟ ನವಿಲು ನೀನು, ದೃಷ್ಟಿಯಾಗಬಹುದು ಏನೋ ಎಂಬಂತೆ ಸೀರೆಯಲ್ಲಿ ಅಂದವಾಗಿ ಕಾಣುವುದಕ್ಕೆ ಅದರ ಮೇಜಪ್ ಬಹಳ ಮುಖ್ಯವಾಗುತ್ತದೆ. ಇಲ್ಲಿ ಅನುಪಮಾ ಕೂಡ ಸೀರೆಗೆ ತಕ್ಕ ಮೇಕಪ್ ಮಾಡಿದ್ದಾರೆ. ಹಸಿರು ಸೀರೆಗೆ ಕಾಂಟ್ರಾಸ್ಟ್ ಕಲರ್ ಬಳೆ, ಸರವನ್ನ ಧರಿಸಿದ್ದಾರೆ. ಕೇಸರಿ ಬಣ್ಣದ ಗಾಜಿನ ಬಳೆಯನ್ನ ಧರಿಸಿರುವುದು ವಿಶೇಷವೇ ಸರಿ. ಮೈಸೂರು ಸಿಲ್ಕ್ ಸ್ಯಾರಿ ಎಂದರೇನೆ ಅದೊಂದು ಸಂಪ್ರದಾಯ. ಅದರ ಜೊತೆಗೆ ಗಾಜಿನ ಬಳೆಗಳನ್ನ ಧರಿಸಿದ್ದೆ ಮತ್ತೊಂದು ಬ್ಯೂಟಿ. ಇದಕ್ಕೆ ಮತ್ತೊಂದು ರೀತಿಯ ಲುಕ್ ಕೊಟ್ಟಿರೋದೆ ಅವರು ಹಾಕಿರುವ ಚೈನ್ ಕಾರಣ. ಎರಡು ಎಳೆಯಲ್ಲಿದ್ದು, ಹಸಿರು ಹಾಗೂ ಕೆಂಪು ಮಿಶ್ರಿತ ಡಾಲರ್ ಗಳು ಇದಾವೆ. ಹಣೆಗೆ ಸಿಂಪಲ್ ಆಗಿ ಒಂದು ಬೊಟ್ಟು ಇಟ್ಟು, ನಗುವೊಂದನ್ನ ಬೀರಿದ್ದಾರೆ. ಫ್ರೀ ಹೇರ್ ಬಿಟ್ಟು, ಸೀರೆಯಲ್ಲೊಂದಿಷ್ಟು ಪೋಸ್ ನೀಡಿದ್ದಾರೆ.
ಅಷ್ಟೇ ಅಲ್ಲ ಸೀರೆಗೆ ಹೊಲಿಸಿರುವ ಬ್ಲೌಸ್. ಸಾಮಾನ್ಯವಾಗಿ ಮಹಿಳೆಯರಿಗೆ ಅದರಲ್ಲೂ ಸೀರೆ ಕ್ರೇಜ್ ಇರುವ ಮಹಿಳೆಯರಿಗೆ ಬ್ಲೌಸ್‌ನದ್ದೇ ಚಿಂತೆ. ಯಾವ ರೀತಿಯ ಬ್ಲೌಸ್ ಹೊಲಿಸುವುದು ಅಂತ. ಅನುಪಮಾ ಇಲ್ಲಿ ವಿಭಿನ್ನವಾದ, ತುಂಬಾ ಕ್ರಿಟಿಕಲ್ ಅಂತ ಏನಿಲ್ಲ. ಹೇಗೂ ಬಾರ್ಡರ್ ಬರುತ್ತಲ್ಲ, ಆ ಬಾರ್ಡರ್ ಆದಷ್ಡು ಬ್ಲೌಸ್‌ನಲ್ಲಿ ಎಲ್ಲಿ ಬೇಕೋ ಅಲ್ಲಿ ಕೊಟ್ಟು ಡಿಫ್ರೆಂಟ್ ಸ್ಟೈಲ್‌ನಲ್ಲಿ ಸ್ಟಿಚ್ ಮಾಡಿಸಿದ್ದಾರೆ. ನೀವೂ ಕೂಡ ಮದುವೆ ಕಾರ್ಯಕ್ರಮಗಳಿಗೆ ಹಾಕಬಹುದು. ನಿಮ್ಮ ಲುಕ್ ಕೂಡ ಅದ್ಬುತವಾಗಿ ಕಾಣಿಸುತ್ತದೆ.


Click it and Unblock the Notifications











