ಪದೇ ಪದೇ ಐಫೋನ್ ಚೇಂಜ್ ಮಾಡೋ ಈ ಕಾಲದಲ್ಲಿ ಆಶಿಕಾ ಬಳಸ್ತಿರೋದು ಫೋನ್ ಯಾವುದು?
ಆಶಿಕಾ ರಂಗನಾಥ್ ಸಾಫ್ಟ್ ಅಂಡ್ ಸ್ವೀಟ್ ನಟಿ. ಕನ್ನಡ ಮಾತ್ರವಲ್ಲ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಸಿಕ್ಕಾಪಟ್ಟೆ ಬ್ಯುಸಿ. ಸದ್ಯ ವಿದೇಶದಲ್ಲಿರುವ ನಟಿ ಆಶಿಕಾ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. ಅದು ಅವರು ಬಳಸುವ ಫೋನ್ ಬಗ್ಗೆ. ಇತ್ತೀಚೆಗೆ ಸೆಲ್ಫಿ ತೆಗೆದ ಫೋಟೋ ಒಂದನ್ನ ಅಪ್ಲೋಡ್ ಮಾಡಿದ್ದರು. ಅದರಲ್ಲಿ ಅವರ ಫೋನ್ ಕೂಡ ಕಾಣಿಸಿದೆ. ಆ ಫೋಟೋ ನೋಡಿದಾಗ ನಟಿ ಇಷ್ಟೊಂದು ಸಿಂಪಲ್ ಅಂತ ಅನಿಸಿಬಿಡುತ್ತೆ.
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಐಫೋನ್ ಗೀಳು ಹತ್ತಿದೆ. ಫೋನ್ ಅಂದ್ರೆ ಐಫೋನ್ ಎಂಬ ರೇಂಜಿಗೆ ಎಲ್ಲರೂ ಬಂದಾಗಿದೆ. ಸೆಲೆಬ್ರೆಟಿಗಳ ಕೈಯಲ್ಲಂತೂ ದುಬಾರಿ ಫೋನ್‌ಗಳನ್ನೇ ಕಾಣುತ್ತೇವೆ. ಆಶಿಕಾ ಬಳಸ್ತಾ ಇರೋದು ದುಬಾರಿ ಫೋನ್. ಆದರೆ ವರ್ಷನ್ ಮಾತ್ರ ಬದಲಾಯಿಸಿಲ್ಲ ಅನ್ನೋದೇ ಆಶ್ಚರ್ಯ. ಹೀಗಾಗಿ ಇದು ಅವರ ಸಿಂಪ್ಲಿಸಿಟಿ ಅಂತಾರೆ ಅಭಿಮಾನಿಗಳು.

ಐಫೋನ್ ಕ್ರೇಜ್ ಇರೋರು ಹೊಸ ವರ್ಷನ್ ಬಂದ ಕೂಡಲೇ ಬದಲಾಯಿಸುತ್ತಾರೆ. ಇನ್ನು ಆಶಿಕಾ ರಂಗನಾಥ್‌ಗೆ ಇರುವ ಸಿನಿಮಾ ಅವಕಾಶಗಳು, ಬರುವ ಒಳ್ಳೆ ಸಂಭಾವನೆಯಿಂದ ಐಫೋನ್ ಬದಲಾಯಿಸೋದು ಕಷ್ಟವಲ್ಲ. ಆದರೆ ಬಳಕೆಗೆ ಒಂದು ಫೋನ್ ಇರಲಿ ಅಂತ ಸುಮ್ಮನಿದ್ದಾರೆ ಎನಿಸುತ್ತದೆ. ಹಾಗಾದ್ರೆ ಆಶಿಕಾ ಬಳಸುತ್ತಿರುವ ಐಫೋನ್ ವರ್ಷನ್ ಯಾವುದು? ಅದರ ಈಗಿನ ಬೆಲೆ ಏನು ಎಂಬ ಮಾಹಿತಿಯನ್ನ ನೀಡ್ತೀವಿ. ಅದಕ್ಕೂ ಮುನ್ನ ಸದ್ಯ ಆಶಿಕಾ ರಂಗನಾಥ್ ಏನು ಮಾಡ್ತಾ ಇದ್ದಾರೆ ಅನ್ನೋದನ್ನ ನೋಡೋಣಾ.
ಆಶಿಕಾ ರಂಗನಾಥ್‌ಗೆ ಪ್ರಯಾಣ, ಓದು, ಫೋಟೋಗ್ರಫಿ ಎಂದರೆ ಬಹಳ ಇಷ್ಟ. ಆಗಾಗ ತಮ್ಮಿಷ್ಟದ ಹವ್ಯಾಸಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ಇಂಪ್ರೆಸ್ ಮಾಡುತ್ತಾ ಇರುತ್ತಾರೆ. ಟ್ರಾವೆಲ್ ಅಂತು ಸಿಕ್ಕಾಪಟ್ಟೆ ಮಾಡ್ತಾರೆ. ಅದರ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಉತ್ತಮ ಡ್ಯಾನ್ಸರ್ ಕೂಡ ಹೌದು. ಅದರಲ್ಲೂ ಬೆಲ್ಲಿ ಡ್ಯಾನ್ಸ್ ಸಖತ್ತಾಗಿನೇ ಮಾಡ್ತಾರೆ. ಅಷ್ಟೇ ಅಲ್ಲ ತಮ್ಮ ಫಿಟ್ನೆಸ್ ಕಡೆಗೆ ಹೆಚ್ಚು ಗಮನವನ್ನು ನೀಡುತ್ತಾರೆ. ಸದ್ಯ ವಿದೇಶ ಪ್ರವಾಸದಲ್ಲಿದ್ದು, ಅಲ್ಲಿನ ಸೌಂದರ್ಯವನ್ನು ಎಂಜಾಯ್ ಮಾಡ್ತಾ ಇದ್ದಾರೆ. ಅಲ್ಲಿನ ವಿಶೇಷ ಸ್ಥಳಗಳಲ್ಲಿ ತೆಗೆದ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲ ಪರಭಾಷೆಯಲ್ಲೂ ನಟಿ ಬ್ಯುಸಿ. ಇದರ ನಡುವೆ ಗಮನ ಸೆಳೆದದ್ದು ಅವರ ಫೋನ್. ಬನ್ನಿ ಅದರ ಮಾಹಿತಿ ನೀಡ್ತೇವೆ.

ಆಶಿಕಾ ಹಂಚಿಕೊಂಡಿರುವ ಫೋಟೋದಲ್ಲಿ ನೋಡಿದ್ರೆ IPhone 14 pro Max ರೀತಿ ಕಾಣಿಸುತ್ತಿದೆ. ಇದು ಲಾಂಚ್ ಆಗಿದ್ದು 2022ರಲ್ಲಿ. ಆಗಿದ್ದ ಬೆಲೆ 1,27,999 ರೂಪಾಯಿ. ಈಗಲೂ ಆ ಫೋನ್ ದುಬಾರಿಯೇ ಆಗಿದೆ. ಸದ್ಯದ ಆನ್‌ಲೈನ್ ಬೆಲೆ 1,19,900 ರೂಪಾಯಿ ಇದೆ.
ಆಶಿಕಾ ರಂಗನಾಥ್ ಇನ್‌ಸ್ಟಾಗ್ರಾಂನಲ್ಲಿ 2.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರು ಹಾಕುವ ಒಂದೊಂದು ಪೋಸ್ಟ್ ಗೂ ಸಾವಿರಗಟ್ಟಲೇ ಲೈಕ್ಸ್, ಸಾವಿರಗಟ್ಟಲೇ ಕಮೆಂಟ್ಸ್ ಬರುತ್ತವೆ. ಹಾರ್ಟ್ ಸಿಂಬಲ್ ಹಾಕುವವರು ಎಷ್ಟೋ ಮಂದಿ. ಅವರ ಸ್ಟೋರಿಯಲ್ಲಿ ಬೇರೆ ಸೂರ್ಯನ ಕಿರಣಗಳು ಸ್ಪರ್ಶಿಸಿದ ಫೋಟೋ ಹಂಚಿಕೊಂಡಿದ್ದಾರೆ. ಈ ಹಾಲ್‌ಗೆನ್ನೆಯ ಚೆಲುವೆಗೆ ಕನ್ನಡ ಮಾತ್ರವಲ್ಲ ತಮಿಳು, ತೆಲುಗು ಭಾಷೆಯಲ್ಲೂ ಅಭಿಮಾನಿಗಳು ಇದ್ದಾರೆ. ಈಗ ಬೇರೆ ಭಾಷೆಯ ಸಿನಿಮಾದಲ್ಲಿಯೇ ನಟಿ ಆಶಿಕಾ ರಂಗನಾಥ್ ಬ್ಯುಸಿಯಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಫಾರಿನ್ ಟ್ರಿಪ್ ಹಾಕ್ತಾ ಇರುತ್ತಾರೆ. ಅಭಿಮಾನಿಗಳಿಗಾಗಿ ಅಲ್ಲಿನ ಸುಂದರ ಸ್ಥಳವನ್ನು ತೋರಿಸ್ತಾ ಇರ್ತಾರೆ. ಈ ಫೋಟೊಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications











