ಸದ್ಯ ದರ್ಶನ್ ಬಳಸುತ್ತಿರುವ ಸ್ಮಾರ್ಟ್‌ಫೋನ್ ಮಾಡೆಲ್ ಯಾವ್ದು? ಬೆಲೆ ಎಷ್ಟು?

ಸ್ಟಾರ್ ನಟರು ಸಿನಿಮಾಗಳಲ್ಲಿ ನಟಿಸೋಕೆ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ನಾನಾ ಮೂಲಗಳಿಂದ ಸಾಕಷ್ಟು ಆದಾಯ ಬರುವಂತೆ ನೋಡಿಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ಐಷಾರಾಮಿ ಜೀವನ ಸಾಗಿಸುತ್ತಾರೆ. ಧರಿಸುವ ಬಟ್ಟೆ, ಬಳಸುವ ವಾಚ್, ಫೋನ್, ಓಡಾಡುವ ಕಾರ್ ಎಲ್ಲವೂ ಬಹಳ ದುಬಾರಿ.

ನಟ ದರ್ಶನ್ ಕೂಡ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ. 'ಡೆವಿಲ್' ಚಿತ್ರಕ್ಕೆ 20 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಊಹಾಪೋಹ ಇದೆ. ಸಾಕಷ್ಟು ಸಂಕಷ್ಟಗಳನ್ನು ಎದುರಿಸಿ ಕೂಡ ಅಭಿಮಾನಿಗಳ ಪ್ರೀತಿ, ಅಭಿಮಾನವನ್ನು ಉಳಿಸಿಕೊಂಡು ಬರ್ತಿದ್ದಾರೆ. ಶೀಘ್ರದಲ್ಳೇ 'ಡೆವಿಲ್' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

Darshan Flaunts Luxury Huawei Phone at Airport as Devil Movie Heads to Thailand Shoot

ದರ್ಶನ್ ದುಬಾರಿ ಬೆಲೆಯ ಬಟ್ಟೆ ಧರಿಸುವುದು, ವಾಚ್ ಕಟ್ಟುವುದು ನೋಡಿದ್ದೇವೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿ ಇದ್ದಾಗಲೂ ಸಾವಿರಾರು ರೂಪಾಯಿ ಬೆಲೆಯ ಟೀಶರ್ಟ್ ಧರಿಸಿದ್ದು ಸುದ್ದಿಯಾಗಿತ್ತು. ಇದೀಗ 'ಡೆವಿಲ್' ಸಿನಿಮಾ ಚಿತ್ರೀಕರಣಕ್ಕಾಗಿ ದರ್ಶನ್ ಥಾಯ್ಲೆಂಡ್‌ಗೆ ತೆರಳಿದ್ದಾರೆ. ಈ ವೇಳೆ ಪುತ್ರ ವಿನೀಶ್ ಕೂಡ ಅಪ್ಪನ ಜೊತೆ ಹೋಗಿದ್ದಾನೆ. ಇನ್ನು ಈ ವೇಳೆ ದರ್ಶನ್ ಕೈಯಲ್ಲಿದ್ದ ಮೊಬೈಲ್ ಫೋನ್ ಅಭಿಮಾನಿಗಳ ಗಮನ ಸೆಳೆದಿದೆ.

ವಿಮಾನ ನಿಲ್ದಾಣದಲ್ಲಿ ದರ್ಶನ್ ಕಾಣಿಸಿಕೊಂಡಿರುವ ಫೋಟೊ, ವೀಡಿಯೋ ವೈರಲ್ ಆಗ್ತಿದೆ. ನೀಲಿ ಬಣ್ಣದ ಜೀನ್ಸ್ ಹಾಗೂ ಬಿಳಿ ಬಣ್ಣದ ಟೀ-ಶರ್ಟ್ ಧರಿಸಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪಾಸ್‌ಪೋರ್ಟ್ ಜೊತೆ ದರ್ಶನ್ ಕೈಯಲ್ಲಿದ್ದ ರುಯಿ ರೆಡ್ ಕಲರ್ ಫೋನ್ ಅಭಿಮಾನಿಗಳ ಹುಬ್ಬೇರಿಸಿದೆ. ಆ ಫೋನ್ ಯಾವ್ದು? ಬೆಲೆ ಎಷ್ಟು? ಎಂದು ಅಭಿಮಾನಿಗಳು ಗೂಗಲ್ ಮಾಡುತ್ತಿದ್ದಾರೆ. ದರ್ಶನ್ ಕೈಯಲ್ಲಿ ಇರುವುದು ಹುವಾವೆ ಮೇಟ್ ಬ್ರ್ಯಾಂಡ್ ಫೋನ್ ಎನ್ನುವುದು ಗೊತ್ತಾಗುತ್ತಿದೆ.

ಹುವಾವೆ ಮೇಟ್ ಫೋನ್ ಬೆಲೆ 1.50 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಹುವಾವೇಯ ಟ್ರೈ-ಫೋಲ್ಡ್ ಸ್ಮಾರ್ಟ್‌ಫೋನ್ ಬೆಲೆ 3.50 ಲಕ್ಷ ರೂ. ಇರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಅದೇ ರೀತಿ ದರ್ಶನ್ ಕೈಯಲ್ಲಿರುವ ವಾಚ್ ಕೂಡ ಅಭಿಮಾನಿಗಳಲ್ಲಿ ಚರ್ಚೆ ಹುಟ್ಟಾಕ್ಕಿದೆ. 10 ದಿನಗಳ ಕಾಲ ಥಾಯ್ಲೆಂಡ್‌ನಲ್ಲಿ 'ಡೆವಿಲ್' ಟೀಮ್ ಇರಲಿದೆ. ಒಂದು ಹಾಡು ಹಾಗೂ ಕೆಲ ಮಾಂಟೇಜ್ ಸನ್ನಿವೇಶಗಳನ್ನು ಚಿತ್ರೀಕರಿಸಲಾಗುತ್ತದೆ.

ಅಕ್ಟೋಬರ್ ಕೊನೆಗೆ 'ಡೆವಿಲ್' ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಯಿದೆ. ಜುಲೈ 19ರಂದು ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲು ಚಿತ್ರತಂಡ ಮುಂದಾಗಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಿಂದ ಕುಗ್ಗಿರುವ ದರ್ಶನ್ ಈ ಸಿನಿಮಾ ಮೂಲಕ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದೆ ಮತ್ತಷ್ಟು ದೊಡ್ಡ ಸಿನಿಮಾಗಳಲ್ಲಿ ನಟಿಸಬೇಕಿದೆ.

ಪ್ರಕಾಶ್ ವೀರ್ 'ಡೆವಿಲ್' ಸಿನಿಮಾ ನಿರ್ಮಿಸಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇದೇ ಜೋಡಿ 'ತಾರಕ್' ಸಿನಿಮಾ ಮಾಡಿ ಗೆದ್ದಿತ್ತು. ರಚನಾ ರೈ ನಾಯಕಿಯಾಗಿ ನಟಿಸಿದ್ದು ಮಹೇಶ್ ಮಂಜ್ರೇಕರ್, ಅಚ್ಯುತ್‌ ಕುಮಾರ್, ಅವಿನಾಶ್ ಚಿತ್ರದ ತಾರಾಗಣದಲ್ಲಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ರಾಜಸ್ಥಾನದಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಥಾಯ್ಲೆಂಡ್ ಶೆಡ್ಯೂಲ್ ಪೂರ್ಣವಾದರೆ ಕಂಪ್ಲೀಟ್ ಸಿನಿಮಾ ಚಿತ್ರೀಕರಣ ಮುಗಿಯಲಿದೆ.

ಅಜನೀಶ್ ಲೋಕನಾಥ್ ಸಂಗೀತ ಹಾಗೂ ಸುಧಾಕರ್ ರಾಜ್ ಛಾಯಾಗ್ರಹಣ 'ಡೆವಿಲ್' ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಪೋಸ್ಟರ್ಸ್ ಹಾಗೂ ಟೀಸರ್ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ. ಭಿನ್ನ ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ದರ್ಶನ್ ನಟಿಸಿರುವುದು ಗೊತ್ತಾಗುತ್ತಿದೆ. ಅಭಿಮಾನಿಗಳು ಸಿನಿಮಾ ನೋಡಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

More from Filmibeat

English summary
Kannada star Darshan spotted with costly Huawei phone at the airport ahead of 'Devil' shoot in Thailand. The high-budget film, directed by Prakash Veer, is set for an October release;
Read more about: darshan devil sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X