ವಿಜಯಲಕ್ಷ್ಮೀ ಹತ್ರ ಇರೋ ಪರ್ಸ್ ಬೇಕು ಅಂದ್ರೆ ನಿಮ್ಮತ್ರ ಎಷ್ಟು ಲಕ್ಷ ಇರ್ಬೇಕು ಗೊತ್ತೇ?
ವಿಜಯಲಕ್ಷ್ಮಿ ದರ್ಶನ್ ಸದ್ಯಕ್ಕೆ ಟ್ರೆಂಡಿಂಗ್‌ನಲ್ಲಿದ್ದಾರೆ. ಎಲ್ಲಿಯೇ ಹೋದರೂ ಎಲ್ಲಿಯೇ ಬಂದರೂ ಸಿಕ್ಕಾಪಟ್ಟೆ ಸುದ್ದಿಯಾಗ್ತಾರೆ. ಅದರಲ್ಲೂ ದರ್ಶನ್ ಫ್ಯಾನ್ಸ್ ಅವರನ್ನು ಹೊತ್ತು ಮೆರೆಸುತ್ತಾರೆ. ಇದೀಗ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಹೆಚ್ಚು ಗಮನ ಸೆಳೆದಿದ್ದು ಅವರ ಕೈಲಿ ಇದ್ದಂತಹ ಸಣ್ಣದೊಂದು ಪರ್ಸ್. ನೋಡೋಕೆ ಸಣ್ಣದಾಗಿದ್ದರು, ಆಕರ್ಷಣೀಯವಾಗಿತ್ತು. ಹೀಗಾಗಿ ಎಲ್ಲರ ಚಿತ್ತ ಅವರ ಪರ್ಸ್ ಕಡೆಗೆ ನೆಟ್ಟಿದೆ.
ವಿಜಯಲಕ್ಷ್ಮಿ ಫ್ಯಾಷನ್ ವಿಚಾರದಲ್ಲಿ ಅದ್ಭುತವಾದ ಟೇಸ್ಟ್ ಹೊಂದಿದ್ದಾರೆ. ಹೊರಗಡೆ ಹೋಗುವಾಗ ಅವರು ಹಾಕುವ ಡ್ರೆಸ್ ಇರಬಹುದು, ಅದಕ್ಕೆ ಮ್ಯಾಚ್ ಮಾಡುವಂತ ಬ್ಯಾಗ್ ಅಥವಾ ಪರ್ಸ್ ಇರಬಹುದು ಅಥವಾ ಮಾಡುವ ಮೇಕಪ್ ಇರಬಹುದು ಎಲ್ಲವೂ ಸ್ಪೂರ್ತಿಯ ರೀತಿಯೇ ಮಾಡುತ್ತಾರೆ. ಸೀರೆ ಹಾಕಿದಾಗಲೂ ಅಷ್ಟೇ ಅದಕ್ಕೆ ಮ್ಯಾಚ್ ಆಗುವ, ಲುಕ್ ಇನ್ನಷ್ಟು ಚೆನ್ನಾಗಿ ಕೊಡುವಂತೆ ಜ್ಯುವೆಲ್ಲರಿ ಬಳಸುತ್ತಾರೆ. ಅದರಲ್ಲೂ ಯಾವ ಸೀರೆಗೆ ಯಾವ ಥರದ ಕಾಂಟ್ರೆಸ್ಟ್ ಜ್ಯುವೆಲ್ಲರಿಗಳನ್ನ ಹಾಕಬಹುದು ಎಂಬುದನ್ನು ಸಹ ಬೇರೊಬ್ಬರಿಗೆ ಮಾರ್ಗದರ್ಶನ ಸಿಗುವಂತೆ ಮಾಡುತ್ತಾರೆ. ಹೀಗಾಗಿ ಅದೆಷ್ಟೋ ಹೆಣ್ಣು ಮಕ್ಕಳು ವಿಜಯಲಕ್ಷ್ಮಿ ಅವರನ್ನ ನೋಡಿ ಕಾಪಿ ಹೊಡೆದದ್ದೇ ಹೆಚ್ಚು. ಈಗ ಆ ಬ್ಯಾಗ್ ಬಗ್ಗೆ ಹೇಳಿದ್ವಲ್ಲ. ಅದರ ಬಗ್ಗೆ ಒಂದಿಷ್ಟು ಮಾಹಿತಿಯನ್ನ ನೋಡಿ ಬರೋಣಾ ಬನ್ನಿ.

ವಿಜಯಲಕ್ಷ್ಮಿ ದರ್ಶನ್ ಇದೀಗ ನಾಲ್ಕು ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಆರೇಂಜ್ ಕಲರ್ ಡ್ರೆಸ್ ಹಾಕಿರುವ ಫೋಟೋವದು. ಒಂದು ಫೋಟೋ ನಿಂತಿರುವುದು, ಮತ್ತೆರಡು ಕುಳಿರುವ ಫೋಟೋ. ಇನ್ನೊಂದು ಡೆಸರ್ಟ್ ಫೋಟೋ. ಮಾಮೂಲಿಯಾಗಿ ವಿಜಯಲಕ್ಷ್ಮಿ ಅವರು ಯಾವುದಾದರೂ ಹೋಟೆಲ್, ರೆಸಾರ್ಟ್ ಅಂತ ಹೋದ್ರೆ ಅಲ್ಲಿನ ಸ್ಪೆಷಲ್ ಡಿಶ್‌ನ ಫೋಟೋ ಹಾಕುತ್ತಾರೆ. ಕಾಫಿ ಕುಡಿದರು ಅದರ ಫೋಟೋವನ್ನು ಕೂಡ ಹಾಕುತ್ತಾರೆ. ಈಗಲೂ ಅದೇ ರೀತಿ ಫೋಟೋ ಹಾಕಿದ್ದಾರೆ.
ಆರೆಂಜ್ ಕಲರ್ ಡ್ರೆಸ್ ಹಾಕಿದ್ದು, ಬೆರಳುಗಳಿಗೆ ಡೈಮಂಡ್ ಉಂಗುರವನ್ನ ಹಾಕಿದ್ದಾರೆ. ಹಾಗೇ ಅದಕ್ಕೆ ಮ್ಯಾಚ್ ಆಗುವಂತಹ ಬ್ರೇಸ್ ಲೇಟ್ ಹಾಗೂ ವಾಚ್ ಒಂದನ್ನ ಹಾಕಿದ್ದಾರೆ. ಕೈಗೆ ದಾರವೊಂದನ್ನ ಕಟ್ಟಿದ್ದು, ದೇವಸ್ಥಾನದಲ್ಲಿ ಕಟ್ಟಿದ ದಾರದಂತೆಯೇ ಕಾಣಿಸುತ್ತಿದೆ. ಇದರ ಜೊತೆಗೆ ಒಂದು ಪರ್ಸ್ ಒಂದನ್ನ ಹಿಡಿದು ಕೊಂಡಿದ್ದಾರೆ. Louis Vuitton ಬ್ರ್ಯಾಂಡ್‌ನ ಪರ್ಸ್ ಇದಾಗಿದೆ. ವಿಜಯಲಕ್ಷ್ಮಿ ದರ್ಶನ್ ಅವರ ಕೈನಲ್ಲಿದ್ದ ಪರ್ಸ್ ಅನ್ನು ಸರ್ಚ್ ಮಾಡಿದಾಗ Louis Vuitton ಬ್ರಾಂಡ್ ಅನ್ನೋದು ಗೊತ್ತಾಗುತ್ತೆ.

ಅಂದ್ಹಾಗೆ ವಿಜಯಲಕ್ಷ್ಮಿ ಕೈಲ್ಲಿರುವ ಈ ಬ್ಯಾಗ್‌ನ ಬೆಲೆ ಬಂದು 5 ಲಕ್ಷದ 60 ಸಾವಿರ ರೂಪಾಯಿ ತೋರಿಸ್ತಾ ಇದೆ. ನೋಡುವುದಕ್ಕೆ ಸಣ್ಣದೊಂದು ಪರ್ಸ್ ಆದರೂ ಸಿಕ್ಕಾಪಟ್ಟೆ ದುಬಾರಿಯಾಗಿದೆ. ನೋಡುವುದಕ್ಕೂ ಆಕರ್ಷಣೀಯವಾಗಿದೆ. ವಿಜಯಲಕ್ಷ್ಮಿ ದರ್ಶನ್ ಬಳಸುವ ಪರ್ಸ್ ಆಗಲಿ, ಬ್ಯಾಗ್ ಆಗಲಿ ದುಬಾರಿಯಾದ, ಬ್ರ್ಯಾಂಡ್‌ಗಳೇ ಆಗಿರುತ್ತವೆ. ಡ್ರೆಸ್ ಕೂಡ ಅಷ್ಟೇ ದುಬಾರಿಯಾದದ್ದನ್ನೇ ಹಾಕುತ್ತಾರೆ. ಹೊರಗೆ ಹೊರಟಾಗ ಹೊಸ ಡ್ರೆಸ್‌ಗಳನ್ನ ಪ್ರಿಫರ್ ಮಾಡ್ತಾರೆ. ಸೀರೆಗಳಿಗೆ ಹಾಕುವ ಜ್ಯುವೆಲ್ಲರಿ ಕೂಡ ಅಷ್ಟೇ ದುಬಾರಿಯಾಗಿರುತ್ತದೆ.
ದರ್ಶನ್ ಅವರನ್ನ ಜೈಲಿಂದ ಬಿಡಿಸಿಕೊಂಡು ಬಂದ ಬಳಿಕ ಅವರ ಜೊತೆಗೆ ನಿಂತು ಎಲ್ಲವನ್ನು ನೋಡಿಕೊಳ್ಳುತ್ತಿದ್ದಾರೆ. ಎಲ್ಲಿಯೇ ಹೋದರೂ ದರ್ಶನ್ ಜೊತೆಗೆ ಹೋಗುತ್ತಾರೆ. ಇತ್ತೀಚೆಗಷ್ಟೇ ನಿರ್ಮಾಪಕಿ ಶೈಲಜಾ ನಾಗ್ ಅವರ ಮಗಳು ರಂಗ ಪ್ರವೇಶದ ಕಾರ್ಯಕ್ರಮಕ್ಕೂ ಹೋಗಿ ಬಂದಿದ್ದಾರೆ. ಹೀಗೆ ಜೊತೆ ಜೊತೆಯಾಗಿಯೇ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಅಭಿಮಾನಿಗಳಿಗೂ ಇದು ಬಹಳಷ್ಟು ಖುಷಿ ಕೊಟ್ಟಿದೆ.


Click it and Unblock the Notifications











