ದೇಸಿ ಪರಂಪರೆಗೆ ದೀಪಿಕಾ ರಾಯಲ್ ಲುಕ್: ಕೈಮಗ್ಗದ ನವರತ್ನ ಪಟೋಲಾದಲ್ಲಿ ಸೂಪರ್ ಹಿಟ್ ಸೌಂದರ್ಯ
ನಮ್ಮ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಫ್ಯಾಷನ್ ಎಂದಿಗೂ ಟ್ರೆಂಡಿಂಗ್. ಇತ್ತೀಚೆಗೆ ಅವರು ಧರಿಸಿದ ಉಡುಗೆ ಎಲ್ಲರ ಗಮನ ಸೆಳೆದಿದೆ. ದೀಪಿಕಾ ಸಂಪೂರ್ಣವಾಗಿ ಸ್ವದೇಶಿ ಉಡುಗೆಗೆ ಗೌರವ ಸಲ್ಲಿಸಿದ್ದಾರೆ. ದೀಪಿಕಾ ಪಡುಕೋಣೆಯ ಈ ಲುಕ್ ಸಖತ್ ವೈರಲ್ ಆಗಿದ್ದು, ಈ ಉಡುಗೆಯ ಹಿಂದೆ ದೊಡ್ಡ ಕಥೆಯೇ ಇದೆ.
ದೀಪಿಕಾ ಧರಿಸಿದ್ದು ಕೈಮಗ್ಗದಲ್ಲಿ ನೇಯ್ದ ನವರತ್ನ ಪಠಾಣ್ ಪಟೋಲಾ ಸೀರೆ. ಈ ಅಪರೂಪದ ಸೀರೆಯನ್ನು ಕುಶಲಕರ್ಮಿ ಭವರ್ ಸಿಂಗ್ ಅವರೇ ತಯಾರಿಸಿದ್ದಾರೆ. ಇದಕ್ಕೆ ಸ್ಟೈಲಿಶ್ ಲುಕ್ ಕೊಟ್ಟವರು ಖ್ಯಾತ ವಿನ್ಯಾಸಕಿ ಅನಾಮಿಕಾ ಖನ್ನಾ. ಅವರು ಈ ಪಟೋಲಾ ಸೀರೆಯನ್ನು ತಮ್ಮ ಮುಲ್ಮುಲ್ ಬ್ಲೂಮ್ಸ್ ವಿನ್ಯಾಸದೊಂದಿಗೆ ಹೊಸ ರೂಪ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಸೀರೆಯ ಅಂಚಿಗೆ ಕೈಯಿಂದ ಮಾಡಿದ ಬನಾರಸ್ ಬಾರ್ಡರ್ ಇಟ್ಟಿರೋದು ಮತ್ತೊಂದು ವಿಶೇಷ. ದೀಪಿಕಾ ಧರಿಸಿದ ಈ ಸೀರೆ ಹೆಣ್ಣು ಮಕ್ಕಳ ಮನ ಸೆಳೆಯುತ್ತಿದೆ.

ಕರಕುಶಲತೆಗೆ ಪ್ರೀತಿಯ ಪತ್ರ: ಉಡುಪಿನ ಹಿಂದಿದೆ ಅರ್ಥ
ದೀಪಿಕಾ ಈ ವಿಶಿಷ್ಟ ಉಡುಗೆ ಕೇವಲ ಫ್ಯಾಷನ್ ಅಷ್ಟೇ ಅಲ್ಲ. ಇದು ನಮ್ಮ ದೇಶದ ಪರಂಪರೆಯನ್ನು ಉಳಿಸಿರುವ ಕೈಮಗ್ಗದ ಕುಶಲಕರ್ಮಿಗಳಿಗೆ ಅರ್ಪಿಸಿದ ಪ್ರೀತಿಯ ಪತ್ರ. ಇದು 'ಸ್ವದೇಶಿ' ಕಲ್ಪನೆಗೆ ಕೊಟ್ಟಿರೊ ದೊಡ್ಡ ಗೌರವ. ದೀಪಿಕಾ ನಮ್ಮ ಸಾಂಪ್ರದಾಯಿಕ ಕಲೆಗೆ ಜಾಗತಿಕ ವೇದಿಕೆಯಲ್ಲಿ ಮನ್ನಣೆ ತಂದುಕೊಟ್ಟಿದ್ದಾರೆ. ಅವರ ಈ ನಡೆ ನಿಜಕ್ಕೂ ಮೆಚ್ಚುವಂತದ್ದು.
ಕೈಮಗ್ಗದ ನವರತ್ನಗಳ ಕಥೆ
ಪಠಾಣ್ ಪಟೋಲಾ ಸೀರೆಗಳು ಅವುಗಳ ಅಪರೂಪದ ದ್ವಿಮುಖ ವಸ್ತ್ರ ವಿನ್ಯಾಸಕ್ಕೆ ಫೇಮಸ್. ಈ ಸೀರೆಗಳು ತಯಾರಿಸಲು ಹೆಚ್ಚು ಸಮಯ ಹಾಗೂ ಶ್ರಮ ಬೇಕಾಗುತ್ತದೆ. ದೀಪಿಕಾ ಧರಿಸಿದ ಸೀರೆಯು ನವರತ್ನ ವಿನ್ಯಾಸವನ್ನು ಹೊಂದಿದೆ. ಇದು ಭಾರತೀಯ ಆಭರಣಗಳ ಶೈಲಿಯನ್ನು ನೆನಪಿಸುತ್ತದೆ. ಈ ಕಾರಣದಿಂದಲೇ ಈ ಸೀರೆಯ ಮೌಲ್ಯ ಮತ್ತು ಕಲಾತ್ಮಕತೆ ಅಪಾರವಾಗಿದೆ. ಈ ಉಡುಪು ದೀಪಿಕಾ ಅವರ ರಾಯಲ್ ಪರ್ಸನಾಲಿಟಿಗೆ ಸರಿಯಾಗಿ ಹೊಂದಿಕೆಯಾಗಿದೆ.
ಸಿನೆಮಾ ಲೋಕದಲ್ಲಿ ಫ್ಯಾಷನ್ ಟಾಕ್
ದೀಪಿಕಾ ಅವರ ಈ ಅದ್ಭುತ ಲುಕ್ ಈಗ ಫ್ಯಾಷನ್ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೀರೆಯ ಬಣ್ಣಗಳ ಸಂಯೋಜನೆ ಮತ್ತು ನೇಯ್ಗೆಯ ಸೂಕ್ಷ್ಮತೆ ನಿಜಕ್ಕೂ ಅನನ್ಯ. ದೀಪಿಕಾ ಈ ಸೀರೆಯಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತಿದ್ದಾರೆ. ಈ ರೀತಿಯ ಟ್ರೆಡಿಷನಲ್ ಉಡುಪನ್ನು ಧರಿಸುವ ಮೂಲಕ ಅವರು ಯುವ ಪೀಳಿಗೆಗೆ ಸ್ಫೂರ್ತಿ ನೀಡಿದ್ದಾರೆ. ಈ ಮೂಲಕ ದೀಪಿಕಾ ಪಡುಕೋಣೆ ತಾನು ದೇಶದ ಫ್ಯಾಷನ್ ಐಕಾನ್ ಎಂದು ಸಾರಿ ಹೇಳಿದಂತಿದೆ.
ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ
ದೀಪಿಕಾ ಪಡುಕೋಣೆಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಯಿತು. ಅಭಿಮಾನಿಗಳು ಅವರ ಸೌಂದರ್ಯ ಹಾಗೂ ಉಡುಪಿನ ಆಯ್ಕೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ಲೈಕ್ಸ್ ಮತ್ತು ಕಮೆಂಟ್‌ಗಳು ಹರಿದುಬಂದಿವೆ. ದೀಪಿಕಾಳ ಈ ರಾಯಲ್ ಲುಕ್ ಬಾಲಿವುಡ್ ಸುದ್ದಿ ಪೇಜ್‌ಗಳಲ್ಲಿ ಟ್ರೇಡಿಂಗ್ ಆಗಿದೆ. ಈ ಲುಕ್ ನಿಜಕ್ಕೂ ಸೂಪರ್ ಹಿಟ್.
ಕಲೆ ಮತ್ತು ಸಂಸ್ಕೃತಿಗೆ ದೀಪಿಕಾರ ಬದ್ಧತೆ
ಈ ಉಡುಪಿನ ಪ್ರತಿಯೊಂದು ಭಾಗವೂ ಭಾರತದ ಶ್ರೀಮಂತ ಕಲೆಯ ಪರಂಪರೆಯನ್ನು ಹೇಳುತ್ತದೆ. ಪಠಾಣ್ ಪಟೋಲಾದ ನೇಯ್ಗೆ, ಅನಾಮಿಕಾ ಖನ್ನಾ ಅವರ ವಿನ್ಯಾಸ ಮತ್ತು ಬನಾರಸ್ ಬಾರ್ಡರ್‌ನ ಕೌಶಲ್ಯ ಎಲ್ಲವೂ ಅದ್ಭುತವಾಗಿದೆ. ದೀಪಿಕಾ ಈ ಆಯ್ಕೆ ಭಾರತೀಯ ಕಲೆಗೆ ಸಿಕ್ಕ ದೊಡ್ಡ ಗೌರವ. ಇದು ಸ್ಟೈಲ್ ಸ್ಟೇಟ್ಮೆಂಟ್ ಮಾತ್ರವಲ್ಲ, ಇದೊಂದು ಸಂಸ್ಕೃತಿ.


Click it and Unblock the Notifications











