'ಡಿಕೆಡಿ' ಯಶಸ್ವಿನಿ ಕಿರುತೆರೆಯಲ್ಲೇ ಬೇರೆ, ರಿಯಲ್‌ ಲೈಫ್‌ನಲ್ಲೇ ಬೇರೆ

By ಎಸ್ ಸುಮಂತ್

ಸುರಸುಂದರಿ, ಖಡಕ್ ವಿಲನ್. 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಅಬ್ಬರಿಸುತ್ತಿರುವ ಯಶಸ್ವಿನಿ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ. ಖಳನಾಯಕಿ ಇಷ್ಟೊಂದು ಸುಂದರಿನಾ ಎನ್ನುವಷ್ಟು ಚೆನ್ನಾಗಿದ್ದಾರೆ. ಡಿಕೆಡಿಯಲ್ಲಿ ಅಷ್ಟೇ ಕುಣಿದು ಕುಪ್ಪಳಿಸಿದ್ದಾರೆ. ಧಾರಾವಾಹಿಗಳ ಜೊತೆಗೆ ಸಿನಿಮಾದಲ್ಲೂ ಬ್ಯುಸಿಯಿರುವ ಯಶಸ್ವಿನಿ, ಹೊರಗಡೆ ಹೇಗೆ ಬರ್ತಾರೆ ಅನ್ನೋದು ಈಗ ಸುದ್ದಿಯಾಗಿದೆ.

ಯಶಸ್ವಿನಿ ಅವರು ಪಕ್ಕಾ ಮಾಡರ್ನ್ ಗರ್ಲ್. ಅವರ ಫ್ಯಾಷನ್ ಎಲ್ಲರ ಕಣ್ಮನ ಸೆಳೆಯುತ್ತೆ. ಅವರ ಸೋಷಿಯಲ್ ಮೀಡಿಯಾ ನೋಡಿದರೇನೆ ಅದು ಅರ್ಥವಾಗುತ್ತದೆ. ಮಿನಿ ಡ್ರೆಸ್, ಸಿಂಗಲ್ ಪೀಸ್ ಡ್ರೆಸ್, ಸೀರೆ, ಲೆಹೆಂಗಾ, ಜೀನ್ಸ್ ಹೀಗೆ ಏನೇ ಹಾಕಿದರೂ ಆ ಡ್ರೆಸ್‌ಗಳತ್ತ ಎಲ್ಲರ ಚಿತ್ತ ಬೀಳುವಂತೆಯೇ ಡ್ರೆಸ್ ಹಾಕುತ್ತಾರೆ. ಇವರು ಕಿರುತೆರೆಯರ ಫ್ಯಾಷನ್ ಐಕಾನ್ ಅಂತಾನೇ ಹೇಳಬಹುದು.

DKD show contestant Yashaswini bag brand and fashion statement

ಸೋಷಿಯಲ್ ಮೀಡಿಯಾದಲ್ಲಿ ಅವರ ಡ್ರೆಸ್‌ಗಳು, ಫೋಟೋಶೂಟ್‌ಗಳೇ ಸಿಕ್ಕಾಪಟ್ಟೆ ಹೈಲೈಟ್ ಆಗುತ್ತಿರುತ್ತೆ. ಆದ್ರೀಗ ಇವೆಂಟ್ ಒಂದರಲ್ಲಿ ಅವರು ಕ್ಯಾರಿ ಮಾಡಿರುವ ಹ್ಯಾಂಡ್ ಬ್ಯಾಗ್ ಹೆಣ್ಣು ಮಕ್ಕಳ ಗಮನ ಸೆಳೆದಿದೆ. ಹೌದು ಇವೆಂಟ್‌ಗೆ ಬಂದಿದ್ದ ಯಶಸ್ವಿನಿ ಕೈನಲ್ಲಿ ಇದ್ದ ಹ್ಯಾಂಡ್ ಬ್ಯಾಗ್ ಕಣ್ಣು ಕುಕ್ಕಿದೆ. ಸ್ಟೈಲಿಶ್ ಆಗಿರುವ ಬ್ಯಾಗ್ ಯಾವುದು? ಎಲ್ಲಿಯದ್ದು? ಅನ್ನೋ ಲೆಕ್ಕಾಚಾರ ಶುರು ಹಾಕುವವರೇ ಹೆಚ್ಚಾಗಿದ್ದಾರೆ.

ಯಶಸ್ವಿನಿ ಸಿನಿಮಾದ ಪ್ರಮೋಷನ್‌ಗಾಗಿ ಬಂದಿದ್ದರು. ಇದಕ್ಕಾಗಿ ಸೈಡ್ ಕಟ್ ಇರುವ ಸಿಂಗಲ್ ಪೀಸ್ ಡ್ರೆಸ್ ಹಾಕಿ ಬಂದಿದ್ದರು. ಅದು ಸ್ಕಿನ್ ಟಚ್ ಇರುವಂತ ಟಾಪ್ ಆಗಿತ್ತು. ಆ ಡ್ರೆಸ್‌ಗೆ ಸರಿಯಾಗಿ ಮ್ಯಾಚ್ ಆಗುವಂತೆ ಬ್ಯಾಗ್ ಒಂದನ್ನ ಹಿಡಿದು ಬಂದಿದ್ದರು. ಆ ಬ್ಯಾಗ್ ಕಪ್ಪು ಮತ್ತು ಬಿಳಿ ಬಣ್ಣ ಮಿಶ್ರಿತ ಬ್ಯಾಗ್ ಅದಾಗಿತ್ತು. ಆ ಹ್ಯಾಂಡ್ ಬ್ಯಾಗ್ ನೋಡುವುದಕ್ಕೂ ಆಕರ್ಷಣೀಯವಾಗಿತ್ತು. ಕೆಳ ಭಾಗದಲ್ಲಿ ಕಪ್ಪು ಬಣ್ಣದ ಮೇಲ್ಭಾಗದಲ್ಲಿ ಬಿಳಿ ಬಣ್ಣದಲ್ಲಿ ಡಿಸೈನ್ ಮಾಡಲಾಗಿತ್ತು. ಸೆಂಟರ್‌ನಲ್ಲಿರುವ ಗೆರೆಯಲ್ಲಿ ಅದು ಯಾವ ಬ್ರ್ಯಾಂಡ್ ಅನ್ನುವ ಸಿಂಬಲ್ ಹಾಕಲಾಗಿತ್ತು. ಅದು ವೆಸ್ಟ್ ಸೈಡ್ ಬ್ರ್ಯಾಂಡ್‌ನ ಬ್ಯಾಗ್ ಆಗಿದೆ.

ಯಶಸ್ವಿನಿ ಸದ್ಯಕ್ಕೆ ಸೀರಿಯಲ್ ಹಾಗೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಯಶಸ್ವಿನಿಗೆ ಹಲವಾರು ಜನ ಅಭಿಮಾನಿಗಳಿದ್ದಾರೆ. ಅವರ ಬ್ಯೂಟಿಗೆ, ಮಾತಿಗೆ ಮಾರು ಹೋಗಿರುವವರು ಇದ್ದಾರೆ. ಇಂಥ ಇನೊಸೆಂಟ್ ಫೇಸ್‌ನಲ್ಲೂ ಖಳನಾಯಕಿಯ ಪಾತ್ರ ಮಾಡುತ್ತಿದ್ದಾರೆ ಅನ್ನೋದೇ ಆಶ್ಚರ್ಯ. ಸದ್ಯ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಅಬ್ಬರಿಸಿದ್ದಾರೆ.

DKD show contestant Yashaswini bag brand and fashion statement

ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಗಮನ ಸೆಳೆದದ್ದಕ್ಕಿಂತ ಆ ಧಾರಾವಾಹಿಯಲ್ಲಿ ಅವರು ಹಾಕುವ ಸೀರೆಯೇ ಹೆಣ್ಣು ಮಕ್ಕಳ ಕಣ್ಣು ಕುಕ್ಕಿದೆ. ಸೀರೆಯ ಕ್ರೇಜ್ ಇರುವವರು ನೋಡದೆ ಇರುವ ಸೀರೆಗಳನ್ನೆಲ್ಲಾ ಆ ಧಾರಾವಾಹಿ ಮೂಲಕ ತೋರಿಸಿದ್ದಾರೆ. ಟ್ರಾನ್ಸಪರೆಂಟ್ ಸೀರೆಗಳು, ಪೇಪರ್ ಸಿಲ್ಕ್ ಸೀರೆಗಳನ್ನ ಹೇಗಪ್ಪ ಹಾಕೋದು ಅಂತ ತಲೆ ಕೆಡಿಸಿಕೊಂಡ ಮಹಿಳಾ ಮಣಿಗಳಿಗೆ ಕಷ್ಟವಾದ ಸೀರೆಗಳನ್ನು ಸಿಂಪಲ್ ಆಗಿ, ಸ್ಟೈಲಿಶ್ ಆಗಿ ಉಡುವುದು ಹೇಗೆ ಎಂಬುದನ್ನ ತೋರಿಸಿ ಕೊಟ್ಟಿದ್ದಾರೆ.

ಅಷ್ಟೇ ಅಲ್ಕ ಬ್ಲೌಸ್‌ನ ವೆರೈಟಿ ವೆರೈಟಿ ಡಿಸೈನ್‌ಗಳನ್ನು ಯಶಸ್ವಿನಿ ತೋರಿಸಿದ್ದಾರೆ. ಅವರ ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಫೋಟೋಶೂಟ್ ಮಾಡಿಸಿ ಹಾಕಿದ್ದಾರೆ. ಸದ್ಯಕ್ಕೆ ಮಡೆನೂರು ಮನು ಅವರ ಜೊತೆಗೆ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀರಿಯಲ್ ಜೊತೆ ಜೊತೆಗೆ ಸಿನಿಮಾದ ಜರ್ನಿಯನ್ನು ಶುರು ಮಾಡಿದ್ದಾರೆ.

More from Filmibeat

English summary
Lakshmi Nivasa actress Yashaswini bag brand and fashion statement
Read more about: life style actress fashion
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X