ಸೀರೆಯಲ್ಲಿ ಮೋಡಿ ಮಾಡೋ ಕನ್ನಡದ ಸೀರಿಯಲ್ ನಟಿಯರು; ಈ ಸೀರೆಗಳ ಬೆಲೆ ಎಷ್ಟು ಗೊತ್ತೇ?

By ಎಸ್ ಸುಮಂತ್

ಇತ್ತೀಚಿನ ದಿನಗಳಲ್ಲಿ ಸೀರೆ ಕ್ರೇಜ್ ಎಲ್ಲರಿಗೂ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಸೀರೆ ಹಾಕೊಂಡು ಥೀಮ್ ಫೋಟೋಶೂಟ್ ಮಾಡಿಸೋದು, ವಿಡಿಯೋ ಮಾಡಿಸೋದು ಕೂಡ ಜಾಸ್ತಿಯಾಗಿದೆ. ಈಗ ಸೀರೆ ಅನ್ನೋದು ಅಡುಗಲ ಅಜ್ಜಿ ಹಾಕುವ ಬಟ್ಟೆಯಲ್ಲ. ಇಂದಿನ ಟ್ರೆಂಡಿಂಗ್ ಅದು. ಯಾವುದೇ ಸಭೆ, ಸಮಾರಂಭಗಳಿಗೆ ಹೋದರು ಸೀರೆಯನ್ನೇ ಹಾಕಿಕೊಂಡು ಹೋಗುತ್ತಾರೆ. ಅದರಲ್ಲೂ ಹೆಚ್ಚಾಗಿ ನಟಿಯರೇ ಸೀರೆಯನ್ನ ಬಳಸುತ್ತಿದ್ದಾರೆ. ಪ್ರಸ್ತುತ ಟ್ರೆಂಡಿಂಗ್‌ಗೆ ತಕ್ಕಂತೆ ಸೀರೆಯನ್ನ ಹಾಕುತ್ತಾರೆ.

ನಟಿಮಣಿಯರು ಸೀರೆಯಲ್ಲಿ ಫ್ಯಾಷನ್ ಮಾಡೋದಕ್ಕೆ ನಿಂತಾಗಿನಿಂದ ಎಲ್ಲರೂ ಸೀರೆಗಳ ಮೊರೆ ಹೋಗಿದ್ದಾರೆ. ಇದೀಗ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿಯರು ಹಾಕಿರುವ ಸೀರೆಗಳು ಕೈಗೆಟಕುವ ಬೆಲೆಯಲ್ಲಿ, ಆಪ್‌ನಲ್ಲೂ ಸಿಗುತ್ತವೆ ಅನ್ನೋದನ್ನ ಕನ್ನಡತಿ ಅನ್ನೋ ಸೋಷಿಯಲ್ ಮೀಡಿಯಾದಲ್ಲಿ ಹಾಕಲಾಗಿದೆ. ಅದರ ಬೆಲೆ ಕೂಡ ಇದೆ. ನೀವೂ ಚೆಕ್ ಮಾಡಬಹುದು.

Do you know how much the Kannada serial actresses sarees cost

'ರಾಮಾಚಾರಿ' ಧಾರಾವಾಹಿಯ ಚಾರು ಅಲಿಯಾಸ್ ಮೌನ ಗುಡ್ಡೆಮನೆ ಕೂಡ ಧಾರಾವಾಹಿಯಲ್ಲಿ ಸದಾ ಕಾಲ ಸೀರೆಯನ್ನೇ ಉಡುತ್ತಾರೆ. ಇತ್ತೀಚೆಗೆ ಕಪ್ಪು ಕಲರ್ ಸೀರೆ ಅದರ ಮೇಲೆ ಸಿಮೆಂಟ್ ಕಲರ್ ಫ್ಲವರ್ ಇರುವಂತ ತೀರಾ ಸಿಂಪಲ್ ಅಂಡ್ ತೆಳನೆಯ ಸೀರೆಯನ್ನ ಹಾಕಿದ್ದರು. ಅದಕ್ಕೆ ಟ್ರೆಂಡಿಂಗ್ ಬ್ಲೌಸ್ ಕೂಡ ಸ್ಟಿಚ್ ಮಾಡಿಸಿದ್ದರು‌. ಆ ಸೀರೆ ಬೇಕು ಅಂದ್ರೆ ಆನ್‌ಲೈನ್‌ನಲ್ಲೂ ಸಿಗಲಿದೆ. ಅದಕ್ಕೆ ಕೇವಲ 783 ರೂಪಾಯಿ ತೋರಿಸ್ತಾ ಇದೆ. ಅಂದ್ರೆ ಮೌನ ಗುಡ್ಡೆಮನೆ ತೆಗೆದುಕೊಂಡಿರುವುದು ಎಲ್ಲಿ ಎಂಬುದು ಗೊತ್ತಿಲ್ಲ. ಅದೇ ರೀತಿ ಹೋಲುವ ಸೀರೆ ನಿಮಗೆ ಆನ್‌ಲೈನ್‌ನಲ್ಲಿಯೂ ಸಿಗಲಿದೆ. ಅದೂ ಕಡಿಮೆ ಬೆಲೆಗೆ ಎಂಬ ಮಾಹಿತಿಯನ್ನಷ್ಟೇ ಇಲ್ಲಿ ನೀಡಲಾಗುತ್ತಿದೆ. ಇನ್ನು ಹಲವು ನಟಿಯರ ಸೀರೆಗಳ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಅದೇ ಥರದ ಸೀರೆಗಳ ಮಾಹಿತಿಯನ್ನ ಹಾಕುತ್ತೇವೆ.

ಇನ್ನು ಭವ್ಯಾ ಗೌಡ ಫೋಟೋಶೂಟ್ ಮಾಡಿಸಿಕೊಂಡಿದ್ದ ಸೀರೆ. ಲೈಟ್ ಪಿಂಕ್ ಸೀರೆಗೆ ಹಸಿರು ಬಣ್ಣದ ಸ್ಟೋನ್ ಜ್ಯುವೆಲ್ಲರಿಯನ್ನು ಹಾಕಿ ಫೋಟೋಶೂಟ್ ಮಾಡಿಸಿದ್ದರು. ಅದೇ ಥರ ಸೀರೆ ಕೂಡ ಆನ್‌ಲೈನ್‌ನಲ್ಲಿ ಸಿಕ್ತಾ ಇದೆ. ಅದರ ಬೆಲೆ ₹489 ಇದೆ. ಅನುಪಮಾ ಗೌಡ ಹಸಿರು ಬಣ್ಣದ, ಡಬ್ಬಲ್ ಶೇಡ್, ಟ್ರಾನ್ಸಪರೆಂಟ್ ಇರುವ ಸೀರೆ ಹಾಕಿದ್ದರು. ಈ ಸೀರೆಯಂತೂ ಹೆವಿ ಟ್ರೆಂಡಿಂಗ್ ನಲ್ಲಿದೆ. ಆನ್‌ಲೈನ್‌ನಲ್ಲಿ ಇದೇ ಥರದ ಸೀರೆಯೂ ಸಿಗಲಿದೆ. 'ಆಸೆ' ಧಾರಾವಾಹಿಯಲ್ಲಿ ಮಾಡ್ತಿರುವ ಪ್ರಿಯಾ ಅವರು ಇತ್ತೀಚೆಗೆ ಥೀಮ್ ಸಾಂಗ್ ಶೂಟ್ ಮಾಡಿಸಿದ್ದರು. ಬ್ಲೂ ಕಲರ್ ಸೀರೆ, ಅದರ ಮೇಲೆ ಫ್ಲವರ್ ಇರುವಂಥದ್ದು. ಹಾಗೇ ಅದಕ್ಕೆ ಮ್ಯಾಚ್ ಆಗುವಂತ ವೈಟ್ ಕಲರ್ ಸ್ಲೀವ್ ಲೆಸ್ ಬ್ಲೌಸ್. ಆ ಸೀರೆ ನೋಡಿದರೆ ಕಾಟನ್ ಸೀರೆ ಅನ್ನೋದು ಅರ್ಥವಾಗುತ್ತದೆ. ಇದು ಕೂಡ ಆನ್‌ಲೈನ್‌ನಲ್ಲಿ ₹574 ರೂಪಾಯಿ ತೋರಿಸ್ತಾ ಇದೆ.

ನಮ್ರತಾ ಗೌಡ ಹಾಕಿರುವ ಲೈಟ್ ಪಿಂಕ್ ಸೀರೆ, ಅದರ ಮೇಲೆ ಬಿಳಿ ಬಣ್ಣದ ಹೂಗಳು ಇದ್ದು, ಅಂದವಾಗಿ ಕಾಣಿಸುತ್ತಾರೆ. ನಿಶಾ ಅಲಿಯಾಸ್ ಪಾರು ನೀಲಿ ಬಣ್ಣದ ರೇಷ್ಮೆ ಸೀರೆಯಂತೆ ಕಾಣುವ ಸೀರೆಯಲ್ಲಿ ಮಿಂಚಿದ್ದರು. ಅದು ಕೂಡ ಆನ್‌ಲೈನ್‌ನಲ್ಲಿ ಇದೆ. ಹಾಗೇ ಕಾವ್ಯಾ ಗೌಡ ಪೋಸ್ ಕೊಟ್ಟಿರುವ ನೀಲಿ ಬಣ್ಣದ ಬಿಳಿ ಬಣ್ಣ ಮಿಕ್ಸ್‌ನಲ್ಲಿ ಡಿಸೈನ್ ಮಾಡಿರುವ ಈ ಸೀರೆ ಆನ್‌ಲೈನ್‌ನಲ್ಲಿ ₹1,199 ತೋರಿಸ್ತಾ ಇದೆ. ಹೀಗೆ ನಟಿಯರು ಹಾಕಿರುವ ಸೀರೆಗಳನ್ನು ಹುಡಿಕಾಡುತ್ತಿದ್ದರೆ ಆ ಪೋಟೋ ತೆಗೆದು ಆಪ್‌ಗಳಲ್ಲಿ ಹುಡುಕಿದರೆ ಅದೇ ಥರದ ಸೀರೆಗಳು ಸಿಗುತ್ತವೆ. ಇಲ್ಲ ಎಲ್ಲಿ ಆ ಸೀರೆ ತೆಗೆದುಕೊಂಡರು ಎಂಬುದನ್ನ ಅವರೆರ ಟ್ಯಾಗ್ ಮಾಡಿರುತ್ತಾರೆ ನೋಡಿ.

More from Filmibeat

Read more about: life style actress saree
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X