ಶ್ರೀಲಂಕಾದ ಬೀಚ್‌ನಲ್ಲಿ ಅಲೆಗಳ ಮುಂದೆ ನಿಂತಿರೋ ಈ ನಟಿ ವೃತ್ತಿಯಲ್ಲಿ ವೈದ್ಯೆ ಅನ್ನೋದು ಗೊತ್ತೇ?
ಆರತಿ ಪಡುಬಿದ್ರಿ ಅಂದ್ರೆ ಮಾಡರ್ನ್ ಲೋಕದ ಸುಂದರಿ ಅಂತಾನೇ ಕರೆಯಬಹುದು. ಬ್ಯೂಟಿ, ಲುಕ್, ಫ್ಯಾಷನ್ ಲೋಕದ ಕ್ವೀನ್. ಅವರ ಸೋಷಿಯಲ್ ಮೀಡಿಯಾದಲ್ಲಿ ಅವರು ಹಾಕುವ ಫೋಟೋಗಳೇ ಅದಕ್ಕೆ ಸಾಕ್ಷಿ. ಅಷ್ಟೇ ಯಾಕೆ 'ಬ್ರಹ್ಮಗಂಟು' ಸೀರಿಯಲ್‌ನಲ್ಲೂ ಬೆಳದಿಂಗಳ ಬಾಲೆಯಂತೆ ಕಂಗೊಳಿಸುತ್ತಾರೆ. ಅವರಿಗಿರುವ ಕ್ರೇಜ್ ಅಂದ್ರೆ ಟ್ರಾವೆಲ್. ಬೇರೆ ಬೇರೆ ಸ್ಥಳಗಳನ್ನು ಸುತ್ತುವುದು ಅಂದರೆ ಇನ್ನಿಲ್ಲದ ಕ್ರೇಜು. ಅಲ್ಲಿ ಇಲ್ಲಿ ಓಡಾಡ್ತಾ, ಅಲ್ಲಿನ ವಿಶೇಷ ಸ್ಥಳಗಳಲ್ಲಿ ಫೋಟೋ ಕ್ಲಿಕ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಾರೆ.
ಇತ್ತೀಚೆಗಷ್ಟೇ ಶ್ರೀಲಂಕಾಗೆ ಹೋಗಿ ಬಂದಿದ್ದಾರೆ. ಅದರ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಬೀಚ್ ಮುಂದೆ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋ ಅದಾಗಿದ್ದು, ಈ ಸಂಜೆ ಯಾಕಾಗಿದೆ ಹಾಡನ್ನು ಹಾಕಿದ್ದಾರೆ. ಈ ಬೀಚ್ ಇರೋದು ಶ್ರೀಲಂಕಾದಲ್ಲಿ. ಬೀಚ್ ನೋಡಿದರೆ ಹೆಚ್ಚು ಕಪಲ್‌ಗಳೇ ಆ ಬೀಚ್‌ಗೆ ಹೋಗಿರುವುದು. ಆದರೆ ಆರತಿ ಒಬ್ಬರು ಬೀಚ್ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮಿರರ್ ಮುಂದೆ ನಿಂತು ಒಂದಷ್ಟು ಫೋಟೋಗಳನ್ನ ತೆಗೆದುಕೊಂಡು ಪೋಸ್ಟ್ ಮಾಡಿದ್ದಾರೆ.

ಶ್ರೀಲಂಕಾದಲ್ಲಿ ತಾವೂ ಸ್ಟೇ ಆಗಿದ್ದಂತಗ ರೂಮಿನಲ್ಲಿ ಶ್ರೀಲಂಕಾದ ಸುಂದರ ದೃಶ್ಯವನ್ನ ಸೆರೆ ಹಿಡಿದಿದ್ದಾರೆ. ಬ್ಲೂ ಕಲರ್ ಶಾರ್ಟ್ಸ್ ಧರಿಸಿ, ವೈಟ್ ಕಲರ್ ಟಾಪ್ ಹಾಕಿ, ಪೋಸ್ ನೀಡಿದ್ದಾರೆ. ಮುಂದೊಂದು ಮೇಣದ ಬತ್ತಿಯ ದೀಪವನ್ನಿಟ್ಟಿದ್ದಾರೆ. ಇಡೀ ಶ್ರೀಲಂಕಾ ದೀಪಗಳಿಂದ ಕಂಗೊಳಿಸುತ್ತಿದೆ. ಶ್ರೀಲಂಕಾದ ಸೌಂದರ್ಯವನ್ನು ತಮ್ಮ ಅಭಿಮಾನಿಗಳಿಗೆ ಸಂಜನಾ ಅಲಿಯಾಸ್ ಆರತಿ ಸೋಷಿಯಲ್ ಮೀಡಿಯಾದಲ್ಲಿಯೇ ತೋರಿಸಿದ್ದಾರೆ. ಪ್ರವಾಸದ ಕ್ರೇಜ್ ಇರುವ ಆರತಿ ಆಗಾಗ ಚಿಕ್ಕಮಗಳೂರು, ಮುಂಬೈ ಅಂತ ಟ್ರಿಪ್ ಹೊಡೀತಾ ಇರ್ತಾರೆ.
'ಬ್ರಹ್ಮಗಂಟು' ಸೀರಿಯಲ್‌ನಲ್ಲಿ ಸಂಜನಾ ಎಂಬ ಪಾತ್ರವನ್ನ ಮಾಡ್ತಾ ಇದ್ದಾರೆ. ಆರತಿ ರಿಯಲ್ ಲೈಫ್‌ನಲ್ಲಿ ಡಾಕ್ಟರ್ ಆಗಿದ್ದವರು. ಫಿಜಿಯೋಥೆರಪಿಸ್ಟ್ ಆಗಿದ್ದವರು. ಬಳಿಕ ಮಾಡೆಲಿಂಗ್ ಕ್ಷೇತ್ರದತ್ತ ಆಕರ್ಷಣೀಯವಾದವರು. ಬಳಿಕ ಮಾಡೆಲಿಂಗ್ ಕಲಿತು, ನಟನೆಯತ್ತ ಬಂದಿದ್ದಾರೆ. ಆರಂಭದಲ್ಲಿ ನಟನೆ ಆರಂಭಿಸಿದ್ದು ಪೋಷಕ ಪಾತ್ರಗಳಲ್ಲಿ. ಹೂಮಳೆ ಧಾರಾವಾಹಿಯಲ್ಲಿ ನಾಯಕನ ಅಕ್ಕನಾಗಿ ಕಾಣಿಸಿಕೊಂಡರು. ನಟನೆ ಮಾತ್ರವಲ್ಲ ರಿಯಾಲಿಟಿ ಶೋನಲ್ಲೂ ಆರತಿ ಪಡುಬಿದ್ರೆ ಭಾಗವಹಿಸಿದ್ದಾರೆ. ಡಾಕ್ಟರ್ ಆಗಿದ್ದ ಆರತಿಗೆ ಆಕ್ಟರ್ ಆಗಬೇಕೆಂಬ ಕನಸು ಚಿಗುರಿದಾಗ ಸಿಕ್ಕ ಪಾತ್ರಗಳಿಗೆ ಜೀವ ತುಂಬಿದವರು. ಈಗ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಒನ್ ಆಫ್ ದ ಲೀಡ್ ಕ್ಯಾರೆಕ್ಟರ್ ಪ್ಲೇ ಮಾಡ್ತಾ ಇದ್ದಾರೆ.
ಇದರ ಜೊತೆಗೆ ಆರತಿ IMG Creationನ ಬ್ರ್ಯಾಂಡ್ ಅಂಬಾಸಿಡರ್ ಕೂಡ. ಸೋಷಿಯಲ್ ಮೀಡಿಯಾದಲ್ಲಂತು ಸಿಕ್ಕಾಪಟ್ಟೆ ಆಕ್ಟೀವ್ ಆಗಿ ಇರ್ತಾರೆ. 52 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಅವರ ಫೋಟೋ, ವಿಡಿಯೋಗಳಿಗೆ ಅವರ ಅಭಿಮಾನಿಗಳಿಗೆ ಒಳ್ಳೆಯ ಮೆಚ್ಚುಗೆ ಬರ್ತಾ ಇರುತ್ತೆ. ಲೈಕ್ಸ್ ಕಮೆಂಟ್ಸ್ ಬರುತ್ವೆ. ಸದ್ಯ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನರಸಿಂಹನಿಗೆ ಜೋಡಿಯಾಗಿದ್ದಾರೆ. ಈ ಜೋಡಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದಾರೆ. ಕೊಬ್ಬು ತುಂಬಿದ ಸಂಜನಾಳನ್ನು ನರಸಿಂಹ ಹೇಗೆ ಲವ್‌ನಲ್ಲಿ ಬೀಳಿಸ್ತಾನೆ ಅನ್ನೋದೇ ಎಲ್ಲರ ಕುತೂಹಲ.
ಈಗಂತು ಅವಳನ್ನ ಬ್ಲಾಕ್ ಮೇಲ್ ಮಾಡೋದಕ್ಕೆ ಶುರು ಮಾಡಿದ್ದಾನೆ. ನರಸಿಂಹನಿಗಂತು ಮನಸ್ಸಿನಲ್ಲಿ ಲವ್ವಾಗಿದೆ. ಆದರೆ ಸಂಜನಾಗೆ ಆಗಬೇಕು ಅಷ್ಟೇ. ಇಬ್ಬರ ಲವ್ ಸ್ಟೋರಿ ನೋಡುಗರಿಗೆ ಥ್ರಿಲ್ಲಿಂಗ್ ಎನಿಸಿದೆ. ಇಬ್ಬರು ಆದಷ್ಟು ಬೇಗ ಒಂದಾಗಲಿ ಅಂತಾನೆ ಕಾಯ್ತಾ ಇದಾರೆ. ಸೋಷಿಯಲ್ ಮೀಡಿಯಾದಲ್ಲೂ ಈ ಜೋಡಿ ಟ್ರೆಂಡ್ ಆಗಿದೆ.


Click it and Unblock the Notifications











