ಸಿಂಗಾಪುರದಂತೆ ನಮ್ಮ ನಾಡಾದರೆ ಎಷ್ಟು ಸುಂದರ ; ಪತಿ, ಮಗನ ಜೊತೆ ಪ್ರವಾಸ- 'ಬ್ರಹ್ಮಗಂಟು' ಸೌಂದರ್ಯ ಮನದಾಳ

ಜೀವನದ ನಾನಾ ಸಮಸ್ಯೆಗಳಿಂದ ಕೆಲಕಾಲದವರೆಗಾದರೂ ಮುಕ್ತಿ ಪಡೆಯಲು, ಮನಸ್ಸನ್ನು ಹಗುರಗೊಳಿಸಲು ಪ್ರವಾಸಕ್ಕಿಂತ ಮೀಗಿಲಾದ ಮದ್ದಿಲ್ಲ.ಇನ್ ಫ್ಯಾಕ್ಟ್ ಬದಲಾದ ಈ ಕಾಲದಲ್ಲಿ ಪ್ರವಾಸ ಹಲವರ ಬದುಕಿನ ಬಹುಮುಖ್ಯವಾದ ಭಾಗವಾಗಿದೆ. ಕೆಲವರಿಗೆ ಪ್ರವಾಸ ಹವ್ಯಾಸ ಆದರೆ ಇನ್ನೂ ಕೆಲವರಿಗೆ ಸಹಜ ಅಭ್ಯಾಸ.

ಇನ್ನು ಪ್ರವಾಸ ಅಂದರೆ ಕೇವಲ ತಿರುಗಾಡಿಕೊಂಡು ಬರುವುದು ಅಲ್ಲ. ಬದಲಿಗೆ ಪ್ರಕೃತಿಯ ಒಡಲಿನಲ್ಲಿ ಲೀನವಾಗಿ ನಮ್ಮಲ್ಲಿನ ಶಕ್ತಿಯನ್ನು ಮತ್ತೆ ಜಾಗೃತಗೊಳ್ಳಿಸುವ ಸುಂದರ ಪಯಣ. ಬೆಳ್ಳಿತೆರೆ ಇರಲಿ, ಕಿರುತೆರೆ ಇರಲಿ, ಇಂತಹ ಪಯಣವನ್ನು ಹಲವರು ಮಾಡುತ್ತಾರೆ. ಕ್ಯಾಮರಾ.. ಲೈಮ್‌ಲೈಟ್..ಕೀರ್ತಿ.. ಕೆಲಸದಿಂದ ವಿಮುಖರಾಗಿ ವಿಮಾನ ಹತ್ತುತ್ತಾರೆ. ಗಿಜಿಗಿಡುವ ನಗರದಿಂದ ದೂರ ಸರಿದು ತಮ್ಮನ್ನು ತಾವು ಅರಿಯುವ ಮತ್ತು ಮಾನಸಿಕ ಶಾಂತಿ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಮನೆಯವರ ಜೊತೆ ನೆಮ್ಮದಿಯ ಕಾಲ ಕಳೆಯುತ್ತಾರೆ. ಉದಾಹರಣೆಗೆ ಪ್ರೀತಿ ಶ್ರೀನಿವಾಸ್.

exclusive-zero-chaos-pure-magic-inside-brahmagantu-fame-preethi-srinivasas-unfiltered-singapore

ಹೌದು, ಪ್ರೀತಿ ಶ್ರೀನಿವಾಸ್.. ಕನ್ನಡ ಕಿರುತೆರೆಯ ಸುರ ಸುಂದರಿ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ''ವರಲಕ್ಷ್ಮಿ ಸ್ಟೋರ್ಸ್‌''ನಲ್ಲಿ ಕಾಣಿಸಿಕೊಂಡ ಪ್ರೀತಿ ಕೇವಲ ಕನ್ನಡದಲ್ಲಿ ಮಾತ್ರ ತೆಲುಗಿನಲ್ಲಿಯೂ ಕೂಡ ವಿಪರೀತ ಫೇಮಸ್. ಆಂಧ್ರದಲ್ಲಿ ಇವರ ''ಪದಮತಿ ಸಂಧ್ಯಾ ರಾಗ'' ನೋಡದವರು ಯಾರು ಇಲ್ಲ. ವಿಶೇಷ ಅಂದರೆ ಈ ಧಾರಾವಾಹಿ ನಂತರ ಕನ್ನಡಕ್ಕೆ ''ಸಂಧ್ಯಾರಾಗ'' ಎಂಬ ಟೈಟಲ್‌ನಲ್ಲಿ ಡಬ್ ಕೂಡಾ ಆಗಿತ್ತು. ಸದ್ಯ ''ಬ್ರಹ್ಮಗಂಟು'' ಧಾರಾವಾಹಿಯಲ್ಲಿ ಸೌಂದರ್ಯ ಪಾತ್ರವನ್ನು ಪ್ರೀತಿ ನಿರ್ವಹಿಸುತ್ತಿದ್ದಾರೆ.

ಇಂಥಾ ಪ್ರೀತಿ ಶ್ರೀನಿವಾಸ್ ಕೆಲ ದಿನಗಳ ಹಿಂದೆಯಷ್ಟೇ ಸಿಂಗಾಪುರ್ ಸುತ್ತಿಕೊಂಡು ಬಂದಿದ್ದಾರೆ. ತಮ್ಮ ಮಗ ಹೃದಯ್ ಮತ್ತು ಪತಿಯ ಜೊತೆ ಸುಮಧುರ ಕ್ಷಣಗಳನ್ನು ಕಳೆದಿದ್ದಾರೆ. ಸದ್ಯ ತಮ್ಮ ಈ ಟ್ರಿಪ್‌ನ ಅನುಭವವನ್ನು ನಿಮ್ಮ ''ಫಿಲ್ಮಿಬೀಟ್ ಕನ್ನಡ''ದ ವಿಶೇಷ ಸರಣಿ ''ಸೆಲೆಬ್ರಿಟಿ ಟ್ರಾವೆಲ್ ಡೈರಿಸ್''ಗಾಗಿ ಪ್ರೀತಿ ಶ್ರೀನಿವಾಸ್ ಹಂಚಿಕೊಂಡಿದ್ದಾರೆ. ತಮ್ಮ ಸಿಂಗಾಪುರ್ ಪ್ರವಾಸದ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಹಾಗಿದ್ದರೆ ಹೇಗಿತ್ತು ಪ್ರೀತಿ ಶ್ರೀನಿವಾಸ್ & ಫ್ಯಾಮಿಲಿಯ ಸಿಂಗಾಪುರ್ ಪ್ರವಾಸ..? ಅಲ್ಲಿನ ವಿಶೇಷತೆಗಳೇನು..? ವೈಶಿಷ್ಟತೆಗಳೇನು..? ಅಲ್ಲಿಂದ ನಾವು ಕಲಿಯಬೇಕಾದದ್ದೇನು..? ನೋಡಲೇಬೇಕಾದ 5 ಸ್ಥಳಗಳು ಯಾವುವು..? ಇವೆಲ್ಲ ವಿಚಾರಗಳನ್ನು ತಿಳಿಯಲು ಮುಂದೆ ಓದಿ.

ಹೇಗಿತ್ತು ಸಿಂಗಾಪುರ್ ಅನುಭವ..? ಅಲ್ಲಿ ಹೋಗಿದ್ದು ಇದೇ ಮೊದಲಾ..?


ಹೌದು, ಸಿಂಗಾಪುರ್ ಗೆ ಇದು ನನ್ನ ಮೊದಲ ಪ್ರವಾಸ. ಇದೇ ಮೊದಲ ಬಾರಿ ನಾನು ಅಲ್ಲಿ ಹೋಗಿದ್ದು. ವಿಶೇಷ ಅಂದರೆ ನನ್ನ ಈ ಟ್ರಿಪ್‌ನಲ್ಲಿ ನನ್ನ ಗಂಡ ಮತ್ತು ನನ್ನ ಮುದ್ದಿನ ಮಗ ನನ್ನ ಜೊತೆಯಲ್ಲಿದ್ದರು. ಮಗನಿಗೆ ಸಮ್ಮರ್ ಹಾಲಿಡೇಸ್ ಇದ್ದ ಕಾರಣ ಎಲ್ಲಾದರೂ ಕರ್‍ಕೊಂಡು ಹೋಗಬೇಕು ಎಂದು ಪ್ಲಾನ್ ಮಾಡಿದ್ದ ಪ್ರವಾಸ ಇದು. ನಿಜ ಹೇಳಬೇಕು ಅಂದರೆ ಮಕ್ಕಳ ಕಲಿಕೆಗೆ ಸಿಂಗಾಪುರ್ ಚೆನ್ನಾಗಿರುತ್ತೆ ಎಂಂದು ಹೋಗಿದ್ದು. ನಮಗೂ ಚೆನ್ನಾಗಿತ್ತು ಅನುಭವ. ವರ್ಷಕ್ಕೆ ಎರಡು ಬಾರಿಯಾದರೂ ಫ್ಯಾಮಿಲಿ ಟ್ರಿಪ್ ನಾವು ಹೋಗಿಯೇ ಹೋಗ್ತೀವಿ.

exclusive-zero-chaos-pure-magic-inside-brahmagantu-fame-preethi-srinivasas-unfiltered-singapore

ಸಿಂಗಾಪುರ್ ನಲ್ಲಿ ಏನೆಲ್ಲಾ ನೋಡಿದ್ರೀ..?


ಸಾಮಾನ್ಯವಾಗಿ ಸಿಂಗಾಪುರ್ ಮತ್ತು ಮಲೇಷಿಯಾ ಒಟ್ಟಿಗೆ ನೋಡಿದರಾಯ್ತು ಎಂದು ಹಲವರು ಪ್ಲಾನ್ ಮಾಡಿಕೊಂಡು ಹೋಗುತ್ತಾರೆ. ಆದರೆ, ನಾವು ಕೇವಲ ಸಿಂಗಾಪುರಗೆ ಮಾತ್ರ ಹೋಗಿದ್ವಿ. ಯಾಕೆಂದರೆ, ಒಂದು ಕಡೆ ಹೋದರೆ ನೆಮ್ಮದಿಯಿಂದ ಆರಾಮಾಗಿ ಎಲ್ಲ ನೋಡಿಕೊಂಡು ಬರೋಣ ಎನ್ನುವ ಉದ್ದೇಶ ನಮ್ಮದಾಗಿತ್ತು. ಅದಕ್ಕೆ ಪೂರಕವಾಗಿ ಎಲ್ಲ ಕಡೆ ಓಡಾಡಿದ್ವಿ.

ಮರೀನಾ ಬೇ ಸ್ಯಾಂಡ್ಸ್‌ನ 57ನೇ ಫ್ಲೋರ್‌ಗೆ ಹೋಗಿದ್ವಿ. ಅಲ್ಲಿಂದ ಹೋಲ್ ಸಿಟಿ ವ್ಯೂವ್ ಕಾಣ್ಸುತ್ತೆ. ದೊಡ್ಡ ದೊಡ್ಡ ಸ್ಕೈ ಸ್ಕ್ರೇಪರ್ಸ್, ಲೈಟ್ಸ್ ಎಲ್ಲಾ ತುಂಬಾ ಚೆನ್ನಾಗಿತ್ತು. ಅಲ್ಲಿ ''ಲಾವೋ'' ಅನ್ನೋ ಇಟಾಲಿಯನ್ ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಮಾಡಿದ್ವಿ. ಮರು ದಿನ ಸಿಟಿ ಸೈಡ್ ಸೀಯಿಂಗ್ ಹೋಗಿದ್ವಿ. ಸಿಂಗಾಪುರ್ ಫ್ಲೈಯರ್ (ದೊಡ್ಡ ಜಾಯಿಂಟ್ ವೀಲ್ ತರ ಇರೋದು) ನೋಡಿದ್ವಿ. ಸಿಟಿ ತುಂಬಾ ಕ್ಲೀನ್ ಮತ್ತು ಗ್ರೀನ್ ಆಗಿದೆ.

ಈ ಸ್ಥಳಗಳನ್ನು ಹೊರತು ಪಡಿಸಿದರೆ ಡೋಮ್ ಒಳಗಡೆ ಜುರಾಸಿಕ್ ವರ್ಲ್ಡ್ ಮತ್ತು ವರ್ಲ್ಡ್‌ನ ಎಲ್ಲಾ ತರಹದ ಫ್ಲವರ್ಸ್ ಇರೋ ಗ್ರೀನ್ ಹೌಸ್ ನೋಡಿದ್ವಿ. ಯುನಿವರ್ಸಲ್ ಸ್ಟುಡಿಯೋಸ್, ಸೆಂಟೋಸಾ ಐಲ್ಯಾಂಡ್, ನೈಟ್ ಸಫಾರಿ ಮತ್ತು ಓಷನ್ ಏರಿಯಂ ನೋಡಿದ್ವಿ. ಆದರೆ, ಒಂದು ಪ್ರಮುಖ ವಿಚಾರ ಏನಂದರೆ ಅಲ್ಲಿ ಓಡಾಡಲು ಕಾಲು ಗಟ್ಟಿಯಾಗಿರಬೇಕು.

ಅಲ್ಲಿ ನಡೀಬೇಕು, ನಡೀಲೇಬೇಕು ಅಂದ್ರೆ... ಅಲ್ಲಿ ಕ್ಯಾಬ್ ವ್ಯವಸ್ಥೆ ಇರಲ್ವಾ ಅಥವಾ ಹೆಂಗೆ?

ಕ್ಯಾಬ್ ವ್ಯವಸ್ಥೆ ಎಲ್ಲಾ ಇದೆ. ಆದರೆ ಒಂದು ಟೂರಿಸ್ಟ್ ಸ್ಪಾಟ್‌ಗೆ ಅಂತ ಹೋದರೆ, ಅದು ತುಂಬಾ ದೊಡ್ಡ ಜಾಗ ಆಗಿರುವುದರಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ನಡ್ಕೊಂಡು ಹೋಗ್ಲೇಬೇಕು. ಯುನಿವರ್ಸಲ್ ಸ್ಟುಡಿಯೋ, ಓಷನ್ ಏರಿಯಂನಲ್ಲೆಲ್ಲಾ ತುಂಬಾ ನಡೀಬೇಕಾಗುತ್ತೆ. ಅಲ್ಲಿ ಲೋಕಲ್ ಜನರಿಗೆ ಕಾರ್ ತಗೊಳೋದು ತುಂಬಾ ಕಾಸ್ಟ್ಲಿ (ಟ್ಯಾಕ್ಸ್ ಜಾಸ್ತಿ). ಹಾಗಾಗಿ ಅಲ್ಲಿನ ಜನರು ಮೆಟ್ರೋ ಮತ್ತು ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಜಾಸ್ತಿ ಯೂಸ್ ಮಾಡ್ತಾರೆ. ನಾವು ಟೂರಿಸ್ಟ್ ಆಗಿದ್ದರಿಂದ ಕ್ಯಾಬ್‌ನಲ್ಲೇ ಓಡಾಡಿದ್ವಿ, ಆದರೆ ಆ ಸ್ಥಳಕ್ಕೆ ಹೋದ ನಂತರ ತುಂಬಾನೇ ಓಡಾಡಬೇಕಾಯ್ತು.

exclusive-zero-chaos-pure-magic-inside-brahmagantu-fame-preethi-srinivasas-unfiltered-singapore

ಎಷ್ಟು ದಿನದ ಪ್ರವಾಸ..? ನಿಮ್ಮ ಜೊತೆ ಗೈಡ್ ಇದ್ದರಾ..?

ನಮ್ಮದು ಒಟ್ಟು 5 ದಿನದ ಪ್ರವಾಸ ಅದು. ಮಗ ಬೇರೆ ಚಿಕ್ಕವನು. ಹೀಗಾಗಿ ಸ್ವತಂತ್ರವಾಗಿ ಎಕ್ಸ್ಪೋರ್ ಮಾಡಲು ಸಾಧ್ಯ ಆಗಲಿಲ್ಲ. ಹಾಗಂಥ ನಾವು ಗೈಡ್ ಮೇಲೆ ಅವಲಂಬಿತರಾಗಿರಲಿಲ್ಲ. ಮುಂಚಿತವಾಗಿಯೇ ಹಾಲಿಡೇ ಪ್ಲಾನರ್ಸ್ ಹತ್ತಿರ ಎಲ್ಲಾ ಪ್ಲಾನ್ ಮಾಡಿಕೊಂಡು ಹೋಗಿದ್ವಿ.

ಸಿಂಗಾಪುರದಲ್ಲಿನ ಲಿಟಲ್ ಇಂಡಿಯಾ ಅಲ್ಲಿನ ನಾಗರೀಕ ಪ್ರಜ್ಞೆ

ಸಿಂಗಾಪುರದಲ್ಲಿ ಭಾರತೀಯರು ತುಂಬಾ ಜನ ಇದ್ದಾರೆ. ಅಲ್ಲಿನ ಸೆರಂಗೂನ್ ರಸ್ತೆಯಲ್ಲಿ ಹೋದರೆ ಭಾರತದಲ್ಲಿಯೇ ಇರುವ ಅನುಭವ ಆಗುತ್ತೆ. ಹೀಗಾಗಿಯೇ ಆ ಸ್ಥಳವನ್ನು ಅಲ್ಲಿನ ಜನ ಸಿಂಗಾಪುರದ ''ಲಿಟಲ್ ಇಂಡಿಯಾ'' ಎಂದೇ ಕರೆಯುತ್ತಾರೆ.

ಚೈನಾಟೌನ್‌ನಿಂದ ಮತ್ತು ಕಂಪಾಂಗ್ ಗ್ಲಾಮ್‌ನ ಉತ್ತರಕ್ಕೆ ಅಡ್ಡಲಾಗಿರುವ ಈ ''ಲಿಟಲ್ ಇಂಡಿಯಾ''ದಲ್ಲಿ ಇರುವ ಬಹುತೇಕ ಭಾರತೀಯರು ಶಿಸ್ತನ್ನು ರೂಢಿಸಿಕೊಂಡಿದ್ಧಾರೆ. ಕೇವಲ ''ಲಿಟಲ್ ಇಂಡಿಯಾ'' ಮಾತ್ರ ಅಲ್ಲ. ಸಿಂಗಾಪುರ್ ಅಂದರೆ ಶಿಸ್ತು ಎನ್ನುವುದಕ್ಕೆ ಮತ್ತೊಂದು ಹೆಸರು ಎನ್ನುವಂತೆ ಇದೆ.

ತುಂಬಾ ಸ್ಟ್ರಿಕ್ಟ್ ರೂಲ್ಸ್ ಇದೆ ಅಲ್ಲಿ. ಒಂದು ಚೂರು ಕಸ ಬಿಸಾಕಿದ್ರೂ ಫೈನ್ ಹಾಕ್ತಾರೆ. ಆ ಭಯ ಅಲ್ಲಿನ ಎಲ್ಲರಲ್ಲಿಯೂ ಇದೆ. ತಮ್ಮ ದೇಶವನ್ನು ಅವರು ಎಷ್ಟು ಕ್ಲೀನ್ ಆಗಿ ಇಟ್ಕೊಂಡಿದ್ದಾರೆ ಅಂದ್ರೆ ವೇಸ್ಟ್ ಡಿಸ್ಪೋಸಲ್‌ಗೆ ಸಪರೇಟ್ ಜಾಗ ಮಾಡಿದ್ದಾರೆ. ಕಂಟ್ರಿ ರೂಲ್ ಸ್ಟ್ರಿಕ್ಟ್ ಆಗಿರೋದ್ರಿಂದ ಎಲ್ಲರೂ ಫಾಲೋ ಮಾಡಲೇಬೇಕಾಗುತ್ತೆ. ತಪ್ಪದೇ ಮಾಡ್ತಾರೆ ಕೂಡ.

ಸಿಂಗಾಪುರ್ ತುಂಬಾನೇ ಕಾಸ್ಟ್ಲಿ ಅಂತಾರೆ. ಇಂಡಿಯಾ ಮತ್ತು ಸಿಂಗಾಪುರ್ ಹೋಲಿಸಿದರೆ..?

ಹೌದು, ಸಿಂಗಾಪುರ್ ಖಂಡಿತ ಕಾಸ್ಟ್ಲಿ ಇದೆ. ನಮ್ಮ 1 ರೂಪಾಯಿ ಅಲ್ಲಿನ 75 ರೂಪಾಯಿಗೆ ಸಮ. ಇಂಡಿಯನ್ ಕರೆನ್ಸಿಯಲ್ಲಿ ಲೆಕ್ಕ ಹಾಕಿದರೆ ತುಂಬಾ ಜಾಸ್ತಿ ಅನ್ಸುತ್ತೆ. ಫುಡ್ ಕೂಡ ಕಾಸ್ಟ್ಲಿ, ಆದರೆ ಅವರು ಆ ದುಡ್ಡಿಗೆ ತಕ್ಕ ಹಾಗೆ ಗುಣಮಟ್ಟದ ಆಹಾರ ಕೊಡ್ತಾರೆ. ಸ್ವಚ್ಚತೆಗೆ ಆದ್ಯತೆ ಕೊಡ್ತಾರೆ.

ಅಲ್ಲಿ ಕಲಬೆರಕೆ ವಸ್ತು ಎಲ್ಲ ಮಾರುವಂತೆ ಇಲ್ಲ. ಪನಿಷಬಲ್ ಅಫೆನ್ಸ್ ಅದು. ಹೀಗಾಗಿ ಎಲ್ಲರೂ ಜಾಗೃತರಾಗಿ ಕೆಲಸ ಮಾಡ್ತಾರೆ. ಸ್ವಚ್ಚತೆ ಮತ್ತು ಗುಣಮಟ್ಟದ ಕಡೆ ಗಮನ ಕೊಡ್ತಾರೆ. ಇನ್ನು ನಾವು ಐದೇ ದಿನ ಹೋಗಿದ್ದರಿಂದ ಮೊದಲೇ ದುಡ್ಡಿನ ಬಗ್ಗೆ ಹೆಚ್ಚು ಯೋಚನೆ ಮಾಡೋದು ಬೇಡ. ಎಂಜಾಯ್ ಮಾಡ್ಕೊಂಡು ಬರೋಣ ಎನ್ನುವ ಮೈಂಡ್ ಸೆಟ್‌ನಲ್ಲಿ ನಾವು ಹೋಗಿದ್ವಿ.

ಸಿಂಗಾಪುರದ ಯಾವುದಾದರೂ ಒಂದು ಅಂಶ ಭಾರತದಲ್ಲಿ ಅಳವಡಿಸುವುದಾದರೆ..

ಅಲ್ಲಿನ ಇನ್ಫ್ರಾಸ್ಟ್ರಕ್ಚರ್, ಕ್ಲೀನ್‌ಲಿನೆಸ್ ಮತ್ತು ಗೌರ್ನಮೆಂಟ್ ಸಿಸ್ಟಮ್. ಅಲ್ಲಿ ಲಂಚ ಪಡೆಯುವಂತೆ ಇಲ್ಲ. ಅಪರಾಧಕ್ಕೆ ಅಲ್ಲಿ ಆಸ್ಪದ ಇಲ್ಲ. ಸಿಕ್ಕಿ ಬಿದ್ದರೆ ಮುಗಿಯಿತು ಕಥೆ. ಕೇವಲ 60-65 ವರ್ಷಗಳ ಇಂಡಿಪೆಂಡೆನ್ಸ್‌ನಲ್ಲಿ ಅವರು ಅಷ್ಟು ಚಿಕ್ಕ ಕಂಟ್ರಿನ ಮೋಸ್ಟ್ ಡೆವಲಪ್ಡ್ ಎಕಾನಮಿಯಾಗಿ ಮಾಡಿದ್ದಾರೆ. ನಮ್ಮ ದೇಶದಲ್ಲೂ ಇಷ್ಟು ಪ್ರೊಡಕ್ಟಿವ್ ಪಾಪ್ಯುಲೇಶನ್ ಇದೆ, ಇಂತಹ ಸಿಸ್ಟಮ್ ಮತ್ತು ಇನ್ಫ್ರಾಸ್ಟ್ರಕ್ಚರ್ ನಮ್ಮಲ್ಲೂ ಇದ್ದರೆ ನಾವು ಎಷ್ಟೋ ಡೆವಲಪ್ ಆಗಬಹುದಿತ್ತು.

ಇನ್ನು ಅಲ್ಲಿ ಕ್ರೈಮ್ ಇಲ್ಲವೇ ಇಲ್ಲ ಅನ್ಸುತ್ತೆ. ರಾತ್ರಿ ಎಷ್ಟೊತ್ತಿಗೆ ಹೋದ್ರೂ ಮಹಿಳೆಯರು ಧೈರ್ಯವಾಗಿ ಆರಾಮಾಗಿ ಓಡಾಡಬಹುದು, ಯಾರು ಡಿಸ್ಟರ್ಬ್ ಮಾಡಲ್ಲ. ಯಾವುದಾದರೂ ವಸ್ತು ಕಳೆದು ಹೋದ್ರೂ ಅಲ್ಲಿನ ಜನ ವಾಪಸ್ ತಂದು ಕೊಡ್ತಾರೆ. ಅಲ್ಲಿನ ನಾಗರೀಕರಿಗೆ ಸರ್ಕಾರ ಎಲ್ಲಾ ಅಗತ್ಯ ಸಹಕಾರ ನೀಡುವುದರಿಂದ ಜನರಿಗೆ ದುರಾಸೆ ಇಲ್ಲ. ಹೀಗಾಗಿಯೇ ಕ್ರೈಮ್ ಮಾಡೋ ಯೋಚನೆ ಬರಲ್ಲ ಅನ್ಸುತ್ತೆ.

https://www.instagram.com/p/DZcMNIpkTG-/?utm_source=ig_web_copy_link&igsh=MzRlODBiNWFlZA==

ಆನ್ ದ ಸ್ಕೇಲ್ ಆಫ್ 10, ಸಿಂಗಾಪುರ್ ಟೂರಿಸಂಗೆ ಎಷ್ಟು ರೇಟಿಂಗ್ ಕೊಡ್ತೀರಾ?


ಒಬ್ಬಳು ಟೂರಿಸ್ಟ್ ಆಗಿ ನಾನು ಸಿಂಗಾಪೂರಕ್ಕೆ 10ಕ್ಕೆ 10 ಅಂಕ ಕೊಡ್ತೀನಿ. ತುಂಬಾ ನೀಟ್, ಕ್ಲೀನ್ ಆದ ದೇಶ. ತುಂಬಾನೇ ಖುಷಿ ಕೊಡುತ್ತೆ.

ಸಿಂಗಾಪುರ್ ಹೋಗ್ಬೇಕು ಎಂದುಕೊಂಡವರಿಗೆ ನಿಮ್ಮ ಒಂದು ಸಲಹೆ ಅಥವಾ ಗೈಡ್‌ಲೈನ್ಸ್


ಮಕ್ಕಳು ಇದ್ದರೆ ಖಂಡಿತ ಕರ್ಕೊಂಡು ಹೋಗ್ಬೇಕು ಅಂತ ನಾನು ಹೇಳುತ್ತೇನೆ. ಯುನಿವರ್ಸಲ್ ಸ್ಟುಡಿಯೋಸ್ ಎಲ್ಲಾ ಮಕ್ಕಳಿಗೆ ಲೈಫ್ ಟೈಮ್ ಅನುಭವ ಕೊಡುತ್ತೆ. ಅಲ್ಲಿನ ಸ್ವಚ್ಚತೆ, ಶಿಸ್ತು ನೋಡಿ ನಾವು ನಮ್ಮ ದೇಶದಲ್ಲೂ ಅದನ್ನ ಅಪ್ಲೈ ಮಾಡ್ಕೋಬೇಕು. ಪ್ರತಿಯೊಬ್ಬರೂ ಲೈಫ್‌ನಲ್ಲಿ ಒಮ್ಮೆಯಾದರು ನೋಡಲೇಬೇಕಾದ ಜಾಗ ಅದು.

ಕೊನೆಯದಾಗಿ ನೀವೇನಾದರೂ ಸಿಂಗಾಪುರ್ ಪ್ರವಾಸ ಪ್ಲಾನ್ ಮಾಡಿದ್ದರೆ, ಪ್ರೀತಿ ಶ್ರೀನಿವಾಸ್ ನಿಮಗಾಗಿ ಟಾಪ್ 5 ಪ್ರವಾಸಿ ತಾಣಗಳನ್ನು ಶಿಫಾರಸು ಮಾಡಿದ್ದಾರೆ. ಆ ತಾಣಗಳು ಯಾವುವು ಎನ್ನುವ ವಿವರ ಈ ಕೆಳಗಿನಂತೆ ಇದೆ.

ಕ್ರ.ಸಂ. ಪ್ರವಾಸಿ ತಾಣ (ಹಾಟ್ ಸ್ಪಾಟ್) ವಿವರಣೆ / ವಿಶೇಷತೆ
1 ಮರೀನಾ ಬೇ ಸ್ಯಾಂಡ್ಸ್ ಅದ್ಭುತವಾದ ನೈಟ್ ಲೈಟ್ಸ್ ಮತ್ತು ಸಂಜೆಯ ಲೈಟ್ ಶೋ ವೀಕ್ಷಿಸಲು ಮಿಸ್ ಮಾಡಲೇಬಾರದ ಜಾಗ.
2 ಸಿಂಗಾಪುರ್ ಫ್ಲೈಯರ್ ಇಡೀ ನಗರದ ಸುಂದರ ನೋಟವನ್ನು ಕಣ್ಣುಂಬಿಕೊಳ್ಳಲು ಇರುವ ದೈತ್ಯ ಜೈಂಟ್ ವೀಲ್ ರೈಡ್.
3 ಯುನಿವರ್ಸಲ್ ಸ್ಟುಡಿಯೋಸ್ ಸಾಹಸಮಯ ರೈಡ್ಸ್ ಮತ್ತು ಸಿನಿಮಾ ಜಗತ್ತಿನ ಅನುಭವ ನೀಡುವ ಅದ್ಭುತ ಥೀಮ್ ಪಾರ್ಕ್.
4 ಸೆಂಟೋಸಾ ಐಲ್ಯಾಂಡ್ ರೋಮಾಂಚಕ ನೈಟ್ ಸಫಾರಿ ಮತ್ತು ಆಕರ್ಷಕ ಕೇಬಲ್ ಕಾರ್ ಪ್ರಯಾಣದ ಮಜಾ ಸವಿಯಬಹುದು.
5 ಓಷನ್ ಏರಿಯಂ ಮತ್ತು ಫ್ಲವರ್ ಡೋಮ್ ಅಪರೂಪದ ಜಲಚರಗಳು ಮತ್ತು ಜಗತ್ತಿನ ವೈವಿಧ್ಯಮಯ ಹೂವುಗಳ ಸೌಂದರ್ಯವನ್ನು ಆಸ್ವಾದಿಸಲು ಬೆಸ್ಟ್ ಸ್ಪಾಟ್.

ಹೀಗೆ ಸಿಂಗಾಪುರ್ ದ ಪ್ರವಾಸದ ತಮ್ಮ ಅನುಭವವನ್ನು ನಿಮ್ಮೆಲ್ಲರ ನೆಚ್ಚಿನ ''ಬ್ರಹ್ಮಗಂಟು'' ಖ್ಯಾತಿಯ ಸೌಂದರ್ಯ ಅಲಿಯಾಸ್ ಪ್ರೀತಿ ಶ್ರೀನಿವಾಸ್ ಅವರು ನಿಮ್ಮ ನೆಚ್ಚಿನ ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಒಂದು ವೇಳೆ ಸಿಂಗಾಪುರ್ ಪ್ರವಾಸ ನೀವೇನಾದರೂ ಪ್ಲ್ಯಾನ್ ಮಾಡಿದ್ದರೆ ನಮ್ಮ ಈ ಎಕ್ಸ್ ಕ್ಲೂಸಿವ್ ಸಂದರ್ಶನ ನಿಮಗೆ ಅನುಕೂಲವಾಗುತ್ತೆ, ಸಹಕಾರಿಯಾಗುತ್ತೆ, ಎನ್ನುವುದು ನಮ್ಮ ಭಾವನೆ. ನೀವೇನಂತೀರಾ ? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

English summary
Inside Brahmagantu actress Preethi Srinivasa's magical Singapore getaway with her family. Read the exclusive scoop on her 5-day stress-free vacation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X