ವಜ್ರದಲ್ಲಿಯೇ ಮುಳುಗೆದ್ದಿದ್ದ ಚೈತ್ರಾ ವಾಸುದೇವ್; ವಂಕಿ, ಡಾಬ್‌ನಲ್ಲೂ ಇದೆ ಡೈಮಂಡ್
ಮದುವೆ ಅನ್ನೋದು ಪ್ರತಿಯೊಬ್ಬ ಹೆಣ್ಣು ಮಗಳ ದೊಡ್ಡ ಕನಸಾಗಿರುತ್ತದೆ. ಕೆಲವೊಂದಿಷ್ಟು ಮಂದಿ ಸಿಂಪಲ್ ಮ್ಯಾರೇಜ್ ಆಗಬೇಕು ಅಂದುಕೊಂಡರೆ ಇನ್ನು ಕೆಲವೊಂದಿಷ್ಟು ಮಂದಿ ಡೆಸ್ಟಿನಿ ವೆಡ್ಡಿಂಗ್ ಮಾಡಿಕೊಳ್ಳುತ್ತಾರೆ. ಮದುವೆ ಅಂತ ಬಂದ ತಕ್ಷಣ, ಅಲಂಕಾರ ಅಂತ ನೆನಪಾಗೋದು ಜ್ಯುವೆಲ್ಲರಿ. ಇದು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ರಿಸೆಪ್ಶನ್ ಒಂದು ರೀತಿ ಜ್ಯುವೆಲ್ಲರಿ ಹಾಕಿದ್ರೆ, ಮೂಹುರ್ತಕ್ಕೆ ಇನ್ನೊಂದು ರೀತಿಯ ಜ್ಯುವೆಲ್ಲರಿ ಹಾಕುತ್ತಾರೆ. ಹೀಗಾಗಿ ಆಲ್ಮೋಸ್ಟ್ ಆರ್ಟಿಫಿಶಿಯಲ್ ಪ್ರಿಫರ್ ಮಾಡ್ತಾರೆ. ಆದರೆ ನಿರೂಪಕಿ ಚೈತ್ರಾ ವಾಸುದೇವನ್ ತಮ್ಮ ಮದುವೆಯಲ್ಲಿ ಬಳಸಿರುವುದು ಕಂಪ್ಲೀಟ್ ಡೈಮಂಡ್ ಒಡವೆಗಳನ್ನೇ.
ಮದುವೆಯಾಗಿ ಕೆಲ ದಿನಗಳಾದ ಮೇಲೆ ತಮ್ಮ ಜ್ಯುವೆಲ್ಲರಿ ಕಲೆಕ್ಷನ್ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಜ್ಯುವೆಲ್ಲರಿ ಆರ್ಡರ್ ಕೊಟ್ಟ ಬಳಿಕ ಒಮ್ಮೆ ಟ್ರಯೆಲ್‌ಗೆ ಅಂತ ಹೋದಾಗ ಮಾಡಿರುವ ವಿಡಿಯೋ ಈಗ ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ಒಂದೊಂದು ಒಡವೆಯಲ್ಲಿ ಎಷ್ಟು ಡೈಮಂಡ್, ಪರ್ಲ್ ಬಳಸಲಾಗಿದೆ ಎಂಬುದನ್ನು ಸಂಪೂರ್ಣವಾಗಿ ತಿಳಿಸಿದ್ದಾರೆ. ಅಂದು ಚೈತ್ರಾಗೆ ಅಂದದ ಲುಕ್ ನೀಡಿದ್ದ ಜ್ಯುವೆಲ್ಲರಿ ಕಲೆಕ್ಷನ್ ಬಗೆಗಿನ ಮಾಹಿತಿ ಇಲ್ಲಿದೆ.

ನಿರೂಪಕಿ ಚೈತ್ರಾ ವಾಸುದೇವನ್ ಅವರ ಮದುವೆಯಲ್ಲಿ ಜ್ಯುವೆಲ್ಲರಿಗೆ ಸಾಕಷ್ಟು ಮಹತ್ವವನ್ನು ನೀಡಿದ್ದರು. ಒಂದು ತಿಂಗಳ ಮುಂಚೆಯೇ ತಮಗೆ ಬೇಕಾದ ಜ್ಯುವೆಲ್ಲರಿಗಳನ್ನ ಆರ್ಡರ್ ನೀಡಿದ್ದರಂತೆ. ನತ್ತಿ ಬೊಟ್ಟು, ವಂಕಿ, ವೇಸ್ಟ್ ಬೆಲ್ಟ್, ಸರಗಳು, ಬಳೆ, ರಿಂಗ್ಸ್ ಎಲ್ಲವನ್ನು ರೆಫರೆನ್ಸ್ ಕೊಟ್ಟು ಆರ್ಡರ್ ಮಾಡಿಸಿದ್ದರು. ಅದರಲ್ಲೂ ಚೈತ್ರಾ ಹಾಕಿದ್ದ ಒಡವೆಗಳಲ್ಲಿ ಹೆಚ್ಚಿನದ್ದು ರೋಸ್ ಕಟ್ ಡೈಮಂಡ್ ಅಂಡ್ ನಾರ್ಮಲ್ ಡೈಮೆಂಡ್‌ಗಳ ಬಳಕೆಯಾಗಿತ್ತು. ಕಿಯಾ ಜ್ಯುವೆಲ್ಲರ್ಸ್ ಆ ಆರ್ಡರ್ ಪಡೆದಿದ್ದು, ಎಲ್ಲಾ ಒಡವೆಗಳನ್ನು ಅವರು ಹೇಳಿದಂತೆ ಮಾಡಿಕೊಟ್ಟಿದ್ದಾರೆ. ಅದಕ್ಕೆ ಚೈತ್ರಾ ಕೂಡ ಫುಲ್ ಖುಷಿಯಾಗಿದ್ದಾರೆ.
ಅವರು ಹಾಕಿದ್ದಂತ ಡಾಬ್ ಹೇಗಿತ್ತು ಎಂಬುದನ್ನ ನೀವೂ ನೋಡಿದ್ದೀರಿ. ಹಾಗಾದ್ರೆ ಅದನ್ನ ಸೂಕ್ಷ್ಮವಾಗಿ ಅಬ್ಸರ್ವ್ ಮಾಡಿ. ಅದರೊಳಗೆ ಏನೆಲ್ಲಾ ಇದೆ ಎಂಬುದನ್ನ ಹೇಳ್ತೀವಿ ಬನ್ನಿ. ಸವ್ಯಸಾಚಿಯ ರೀತಿಯೇ ಇರಬೇಕು ಎಂದು ಡಾಬನ್ನ ಮಾಡಿಸಿದ್ದರು. ಸೆಂಟರ್‌ನಲ್ಲಿ ಹುಲಿಯನ್ನ ಡಿಸೈನ್ ಮಾಡಿಸಲಾಗಿತ್ತು. ಇನ್ನು ನೆಕ್ಲೆಸ್‌ನಲ್ಲಿ ಎರಡು ಲೇಯರ್ ಇದೆ. ಅದು ಕೂಡ ಡೈಮಂಡ್ ಮಿಶ್ರಿತವಾದಂತ ನೆಕ್ಲೆಸ್ ಆಗಿದೆ. ಮೋಸ್ಟ್ ಟ್ರೆಂಡಿಂಗ್ ಜಡೆ ಬಿಲ್ಲೆಯನ್ನ ಬಳಸಿದ್ದಾರೆ. ಜಡೆ, ಬಿಲ್ಲೆ ಜೊತೆಗೆ ಕನೆಕ್ಷನ್ ಪ್ಲ್ಯಾನ್ ಮಾಡಿದ್ದು, 20 ಇಂಚು ಅದಾಗಿತ್ತು. ಎರಡು ಭಾಗದಲ್ಲಿ ಬಿಳಿ ಮುತ್ತಿನ ಮಣಿ, ಮಧ್ಯ ಭಾಗದಲ್ಲಿ ಲೈಟ್ ಗ್ರೀನ್ ಮಣಿಗಳ ಎಳೆಯನ್ನು ಡಿಸೈನ್ ಮಾಡಲಾಗಿತ್ತು. ಹಾಗೇ ಮಧ್ಯೆ ಬಿಲ್ಲೆಗಳಿಗೆ ಕೇಸರಿ, ಹಸಿರು, ಡೈಮಂಡ್ ಬಳಸಲಾಗಿದೆ. ಈ ಒಂದು ಜಡೆ ಬಿಲ್ಲೆಗೆ 18 ಕ್ಯಾರಟ್ ಗೋಲ್ಡ್, ರೋಸ್ ಕಟ್ ಡೈಮಂಡ್, ರೌಂಡ್ ಡೈಮಂಡ್, ನ್ಯಾಚುರಲ್ ಡೈಮಂಡ್, ಕಾರಲ್ಸ್, ಪರ್ಲ್ಸ್, ಎಂಬ್ರಿಲ್ಸ್ ಅನ್ನ ಬಳಸಿದ್ದಾರೆ.

ಮಾಟಿಯ ಲುಕ್‌ಗೆ ಬರೋದಾದ್ರೆ ಅದು ಕೂಡ ವಿಭಿನ್ನವಾಗಿದೆ. ಮಾಟಿಯನ್ನು ಆರೆಂಜ್ ಕಲರ್‌ನಲ್ಲಿ ಮಾಡಿಸಲಾಗಿದೆ. ಇದು 8 ಇಂಚು ಇದೆ. ವಂಕಿ ಕೂಡ ಫಳ ಫಳ ಅಂತ ಹೊಳೆಯುತ್ತದೆ. ಸಿಂಹದ ಲುಕ್ ಬರುವಂತೆ ಡಿಸೈನ್ ಮಾಡಿಸಲಾಗಿದೆ. ವಂಕಿಯಲ್ಲೂ ರೋಸ್ ಕಟ್, ನ್ಯಾಚುರಲ್ ಡೈಮಂಡ್ ಅನ್ನ ಬಳಸಲಾಗಿದೆ. ಸಿಂಹದ ಡಿಸೈನ್‌ಗೆ ಗೋಲ್ಡ್ ಕಲರ್ ಪಟ್ಟಿ ಮಾಡಲಾಗಿದೆ. ಸಿಂಹದ ಕಣ್ಣಿಗೆ ರೂಬಿಯನ್ನ ಬಳಸಲಾಗಿದೆ. ಬ್ರೈಡಲ್ ರಿಂಗ್ ಸಾಕಷ್ಟು ಗಮನ ಸೆಳೆದಿತ್ತು. ಹೇಗೆಂದರೆ ಹಾಕಿದ್ದು ಒಂದೇ ರಿಂಗ್ ಆದರೂ ಎಲ್ಲಾ ಬೆರಳುಗಳನ್ನು ಕವರ್ ಮಾಡಲಾಗಿತ್ತು.
ಈ ಉಂಗುರ ಕೂಡ ಡೈಮಂಡ್‌ನಿಂದಾನೇ ಮಾಡಿರುವಂಥದ್ದು. ಇದು ತ್ರಿ ಪೀಸ್ ಕಾನ್ಸೆಪ್ಟ್‌ನಲ್ಲಿ ಮಾಡಲಾಗಿದೆ. ಒಂದು ರಿಂಗ್ ಹಾಕಿಕೊಂಡರೆ ಇಡೀ ಬೆರಳುಗಳನ್ನೇ ಕವರ್ ಮಾಡುತ್ತದೆ. ಈ ರಿಂಗ್ ಮಾಡೋದಕ್ಕೆ ಹದಿನೈದು ದಿನಗಳನ್ನ ತೆಗೆದುಕೊಂಡಿದ್ದಾರೆ. ಆದರೆ, ಡಿಸೈನ್ ಮೇಲೆಯೂ ಡಿಪೆಂಡ್ ಆಗುತ್ತದೆ. ಅವರು ಹಾಕಿದ್ದಂತ ಒಡವೆಗಳ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಡಿಟೈಲ್ ಸಮೇತ ಹಾಕಿದ್ದಾರೆ.


Click it and Unblock the Notifications











