'45' ಇವೆಂಟ್‌ನಲ್ಲಿ ಶಿವಣ್ಣ ಧರಿಸಿದ್ದ ಈ ಶರ್ಟ್ ಬೆಲೆ ಎಷ್ಟು? ಯಾವ ಬ್ರ್ಯಾಂಡ್?

By ಎಸ್ ಸುಮಂತ್

ಡಾ.ಶಿವರಾಜ್‍ಕುಮಾರ್.. ಚಿತ್ರರಂಗದ ಪಾಲಿಗೆ ಶಿವಣ್ಣ. ಅಭಿಮಾನಿಗಳ ಪಾಲಿಗೂ ಶಿವಣ್ಣನೇ. ಸದ್ಯ ದೇವರ ಆಶೀರ್ವಾದದಿಂದ ನಮ್ಮ ನಿಮ್ಮೆಲ್ಲರ ಮುಂದೆ ಮತ್ತೆ ಅದೇ ಹುರುಪಿನಿಂದ ಬಂದು ನಿಂತಿದ್ದಾರೆ. ಅದೇನು ಗ್ರಹಚಾರವಿತ್ತೋ ಏನೋ ದೊಡ್ಡ ಮಟ್ಟದ ಸರ್ಜರಿ ಮಾಡಿಸಿಕೊಂಡು ಮತ್ತೆ ನಮ್ಮ ಮುಂದೆ ಬಂದಿದ್ದಾರೆ. ಇದು ಕರುನಾಡಿಗೆ ಬಹಳ ಸಂತಸಕರ ವಿಚಾರ. ಶಿವಣ್ಣನಿಗೆ ಮತ್ತೆ ಅದೇ ಎನರ್ಜಿ ಬರಲಿ ದೇವರೆ ಎಂದು ಹಾರೈಸುವ ಮನಸ್ಸುಗಳು ಒಂದೆರಡಲ್ಲ. ಕೋಟ್ಯಾಂತರ ಮನಸ್ಸುಗಳು ಅವರಿಗಾಗಿ ಮಿಡಿಯುತ್ತಿದೆ.

ಅಮೆರಿಕದಿಂದ ಬಂದ ಮೇಲೆ ಸ್ವಲ್ಪ ಸಮಯವಷ್ಟೇ ಮನೆಯಲ್ಲಿ ಇದ್ದದ್ದು. ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ತಮ್ಮನ್ನು ನಂಬಿದ ನಿರ್ಮಾಪಕರ ಜೊತೆಯಾಗಿದ್ದಾರೆ. ಶಿವಣ್ಣ ನಟನೆಯ ಮೋಸ್ಟ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 45. ಇದರಲ್ಲಿ ಮೂವರು ನಾಯಕರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ, ಉಪೇಂದ್ರ ಅವರನ್ನ ಒಟ್ಟಿಗೆ ಒಂದೇ ತೆರೆಮೇಲೆ ಮತ್ತೆ ನೋಡುವ ಭಾಗ್ಯ ಅಭಿಮಾನಿಗಳದ್ದು. ಅದರ ಜೊತೆಗೆ ರಾಜ್ ಬಿ ಶೆಟ್ಟಿ‌ ಕೂಡ ಜೊತೆಯಾಗಿರುವುದು ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಮತ್ತೊಂದು ವಿಶೇಷವೆಂದರೆ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಇನ್ನು ಅಮೆರಿಕದಿಂದ ಬಂದ ಶಿವಣ್ಣ ಮೊದಲು ಶುರು ಮಾಡಿದ್ದೆ '45' ಸಿನಿಮಾದ ಪ್ರಮೋಷನ್.

How much is the price of this shirt worn by Shivarajkumar at the 45 film event

ಇತ್ತೀಚೆಗಷ್ಟೇ ಈ ಸಿನಿಮಾದ ಪ್ರಮೋಷನ್ ಇವೆಂಟ್ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಶಿವಣ್ಣ ಹಾಕಿದ್ದ ಶರ್ಟ್ ಒಂದು ಎಲ್ಲರ ಗಮನ ಸೆಳೆದಿದೆ. ಶಿವಣ್ಣ ತಮ್ಮ ಡ್ರೆಸ್ ವಿಚಾರದಲ್ಲೂ ಸ್ಪೂರ್ತಿಯಾಗ್ತಾರೆ. ಒಳ್ಳೆ ಟೇಸ್ಟ್ ಇದೆ ಅನ್ನೋದು ಎಲ್ಲರಿಗೂ ಗೊತ್ತು. ಪ್ಯಾಷನ್ ವಿಚಾರದಲ್ಲಿ ಶಿವಣ್ಣನೇ ಬೇರೆ.. ಶಿವಣ್ಣನ ಸ್ಟೈಲೇ ಬೇರೆ. '45' ಸಿನಿಮಾದ ಪ್ರೆಸ್ ಮೀಟ್‌ನಲ್ಲಿ ಶಿವಣ್ಣ ಧರಿಸಿದ್ದ ಕಲರ್ ಫುಲ್ ಶರ್ಟ್ ಗಮನ ಸೆಳೆದಿತ್ತು. ಎಲ್ಲೋ, ಬ್ಲೂ, ಬ್ರೌನ್ ಕಲರ್ ಫುಲ್ ಮಿಕ್ಸ್ಡ್‌ ಕಲರ್ ಶರ್ಟ್ ಧರಿಸಿದ್ದರು. ಈ ಶರ್ಟ್ ಅವರ ಅಭಿಮಾನಿಗಳಷ್ಟೇ ಅಲ್ಲ. ಹುಡುಗರ ಗಮನ ಸೆಳೆದಿತ್ತು. ಇದನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ Levi's ಬ್ರಾಂಡ್ ಅನ್ನೋದು ಗೊತ್ತಾಗಿದೆ. ಸದ್ಯಕ್ಕೆ ಈ ಬ್ರಾಂಡ್ ಸೇಮ್ ಶರ್ಟ್ ಸೋಲ್ಡ್ ಔಟ್ ಅಂತಾನೂ ತೋರಿಸ್ತಾ ಇದೆ. ಅಂದ್ರೆ ನಮ್ಮ ಶಿವಣ್ಣ ಧರಿಸುವ ಶರ್ಟ್‌ಗಳಿಗೆ ಎಷ್ಟೊಂದು ಡಿಮ್ಯಾಂಡ್ ಇದೆ ಎಂಬುದು ಇದರಿಂದಾನೇ ಅರ್ಥವಾಗ್ತಾ ಇದೆ.

ಇನ್ನು ಈ ಶರ್ಟ್ ಬೆಲೆ ಕೂಡ ಕೈಗೆಟುಕುವಂತೆ ಇದೆ. ನಿಮಗೂ ಶಿವಣ್ಣ ಹಾಕುವ ಶರ್ಟ್ ಬೇಕು ಅನ್ನಿಸಿದ್ದಲ್ಲಿ ತೆಗೆದುಕೊಳ್ಳಬಹುದು. ಅದರ ಬೆಲೆ ಸದ್ಯಕ್ಕೆ ಲೆವಿಸ್ ಬ್ರಾಂಡ್‌ ನಲ್ಲಿ ತೋರಿಸುತ್ತಿರುವುದನ್ನು ನೋಡಿದರೆ 2,399 ರೂಪಾಯಿ ಅಂತಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಈ ಶರ್ಟ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಸೋಷಿಯಲ್‌ ಮೀಡಿಯಾ ತುಂಬೆಲ್ಲಾ ಶಿವಣ್ಣ ಅವರು ಈ ಶರ್ಟ್ ಧರಿಸಿದ್ದ ವಿಡಿಯೋಗಳೇ ಹೆಚ್ಚಾಗಿವೆ.

How much is the price of this shirt worn by Shivarajkumar at the 45 film event

ಸದ್ಯ ಶಿವಣ್ಣ ಆರೋಗ್ಯವಾಗಿದ್ದು, ನಿಧಾನಕ್ಕೆ ಇನ್ನಷ್ಟು ಚೇತರಿಸಿಕೊಳ್ಳುತ್ತಿದ್ದಾರೆ. ಸರ್ಜರಿಗೆ ಹೋಗುವುದಕ್ಕೂ ಮುನ್ನವೇ ಹಲವು ಸಿನಿಮಾಗಳನ್ನ ಒಪ್ಪಿಕೊಂಡಿದ್ದರು. ಆದರೆ ಸರ್ಜರಿ ಆದ ಮೇಲೆ ಒಂದಷ್ಟು ಬ್ರೇಕ್ ಅನಿವಾರ್ಯತೆ ಇದೆ. ಹೀಗಾಗಿ ವಿಶ್ರಾಂತಿಯಲ್ಲಿದ್ದಾರೆ. ಅದಕ್ಕೂ ಮುನ್ನ 45 ಸಿನಿಮಾ ಪ್ರಮೋಷನ್ ಮುಗಿಸಿ, 'A For ಆನಂದ' ಸಿನಿಮಾದ ಅಪ್ಡೇಟ್ ಅನ್ನು ಕೊಟ್ಟಿದ್ದಾರೆ. ನಿರ್ಮಾಪಕರ ಇಷ್ಟದ ಹೀರೋ, ನಿರ್ದೇಶಕರ ನೆಚ್ಚಿನ ಹೀರೋ ಆಗಿರುವ ಕಾರಣ ಶಿವಣ್ಣನಿಗಾಗಿ ಕಥೆಗಳನ್ನು ಬರೆಯುವವರು ಕಡಿಮೆ ಏನು ಇಲ್ಲ. ಶಿವಣ್ಣನ ಕಾಲ್ ಶೀಟ್‌ಗಾಗಿ ಹಲವಾರು ಮಂದಿ ಕಾಯುತ್ತಿದ್ದಾರೆ. ಅದರಲ್ಲೂ ಭೈರವನ ಕೊನೆ ಪಾಠ ಪೋಸ್ಟರ್ ನೋಡಿನೇ ಕುತೂಹಲ ಉಂಟಾಗಿದ್ದು, ಸಿನಿಮಾದ ಕಥೆ ಬಗ್ಗೆಯೂ ಕುತೂಹಲವಿದೆ. ಶಿವಣ್ಣ ಯಾವ ಸಿನಿಮಾವನ್ನು ಕೈಗೆತ್ತಿಕೊಳ್ತಾರೆ ಎಂಬುದನ್ನು ನೋಡಬೇಕಿದೆ.

More from Filmibeat

English summary
shivarajkumar 45 film event shirt rate and brand details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X