ಧೋನಿ ಔಟ್ ಆದಾಗ ಫಸ್ಟ್ರೇಟ್ ಆಗಿದ್ದ ಪೋರಿ; ಈಗ ಲಕ್ಷ ಲಕ್ಷ ಆದಾಯ!

ಸೋಶಿಯಲ್ ಮೀಡಿಯಾದ ಜಮಾನದಲ್ಲಿ ಯಾರು ಯಾವಾಗ ಫೇಮಸ್ ಆಗಿಬಿಡ್ತಾರೆ ಎಂದು ಹೇಳೋದು ಕಷ್ಟ. ಐಪಿಎಲ್ ಪಂದ್ಯ ವೀಕ್ಷಣೆಗೆ ಬರುವವರು ಕೆಲವೊಮ್ಮೆ ವೈರಲ್ ಆಗಿ ಸದ್ದು ಮಾಡ್ತಾರೆ. ಇತ್ತೀಚೆಗೆ ಸಿಎಸ್‌ಕೆ vs ಆರ್‌ಆರ್ ಪಂದ್ಯದ ವೇಳೆ ಧೋನಿ ಔಟ್ ಆದಾಗ ಯುವತಿಯೊಬ್ಬಳು ಬೇಸರ, ಹತಾಶೆ ಹೊರ ಹಾಕಿದ್ದಳು.

ಆ ವೀಡಿಯೋ ವೈರಲ್ ಆಗಿ ದಿಢೀರ್ ಆಕೆಯ ಕ್ರೇಜ್ ಹೆಚ್ಚಾಗಿಬಿಟ್ಟಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯನ್ನು ಫಾಲೋ ಮಾಡುವವರು ಸಂಖ್ಯೆ ಲಕ್ಷ ಲಕ್ಷ ದಾಟಿದೆ. ಪರಿಣಾಮ ಈಗ ಆಕೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಕೆಲ ಜಾಹೀರಾತುಗಳ ಪ್ರಚಾರಕ್ಕೆ ಮುಂದಾಗಿದ್ದಾಳೆ. ಆ ಮೂಲಕ ಆಕೆಗೆ ಒಳ್ಳೆಯ ಆದಾಯ ಬರಲು ಆರಂಭಿಸಿದೆ. ಇದೆಲ್ಲಾ ಧೋನಿ ಕೃಪೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

IPL 2025 Viral video of CSK fan earns her instant fame 400K Instagram followers and brand deals

ಮಾರ್ಚ್ 30ರಂದು ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ರಾಜಸ್ಥಾನ್ ರಾಯಲ್ಸ್ ತಂಡ ಸೆಣಿಸಿತ್ತು. ಪಂದ್ಯದಲ್ಲಿ ಸಿಎಸ್‌ಕೆ ತಂಡ 6 ರನ್‌ಗಳಿಂದ ಸೋತಿತ್ತು. ಅಂದು ಪಂದ್ಯ ವೀಕ್ಷಿಸಲು ಗುವಾಹಟಿಯ ಧೋನಿ ಅಭಿಮಾನಿ ಆರ್ಯಪ್ರಿಯ ಭೂಯಾನ್ ಕೂಡ ಆಗಮಿಸಿದ್ದಳು. ಪಂದ್ಯದ ವೇಳೆ ಆಕೆಯ ಕಡೆಗೆ ಕ್ಯಾಮರಾಗಳು ಫೋಕಸ್ ಆಗಿತ್ತು.

ಅಂದು ಧೋನಿ 11 ಎಸೆತಗಳಲ್ಲಿ 16 ರನ್ ಸಿಡಿಸಿದರು. ಪಂದ್ಯ ಗೆಲ್ಲಿಸುತ್ತಾರೆ ಎಂದು ಅಭಿಮಾನಿಗಳು ಭರವಸೆಯಿಂದ ಇದ್ದರು. ಸಂದೀಪ್ ಶರ್ಮಾ ಎಸೆದ 20ನೇ ಓವರ್ ಮೊದಲ ಎಸೆತದಲ್ಲಿ ಧೋನಿ ಔಟ್ ಆಗಿದ್ದರು. ಹೆಚ್ಚು ರನ್ ಬೇಕಿದ್ದ ಕಾರಣ ಬಿರುಸಿನ ಹೊಡೆತಕ್ಕೆ ಮುಂದಾಗಿದ್ದರು. ಆದರೆ ಡೀಪ್ ಮಿಡ್ ವಿಕೆಟ್‌ನಲ್ಲಿ ಬಾರಿಸಿದ ಚೆಂಡು ಶಿಮ್ರಾನ್ ಹೆಟ್ಮೇಯರ್‌ ಕೈ ಸೇರಿತು. ಇದು ಧೋನಿ ಅಭಿಮಾನಿಗಳ ನಿರಾಸೆಗೆ ಕಾರಣವಾಗಿತ್ತು.

ಧೋನಿ ಔಟ್ ಆಗುತ್ತಿದ್ದಂತೆ ಹತಾಶೆಯಿಂದ ಯುವತಿ ಆರ್ಯಪ್ರಿಯ ಭೂಯಾನ್ ಕೈಯನ್ನು ಮುಂದಕ್ಕೆ ಚಾಚಿ ಉಸಿರು ಬಿಗಿಹಿಡಿದು ಬೇಸರ ಹೊರ ಹಾಕಿದ್ದರು. ಧೋನಿ ಔಟ್ ಆಗಿದ್ದಕ್ಕೆ ಆಕೆಯ ಈ ಪ್ರತಿಕ್ರಿಯೆ ನೆಟ್ಟಿಗರ ಗಮನ ಸೆಳೆದಿತ್ತು. ನೋಡ ನೋಡುತ್ತಲೇ ವೀಡಿಯೋ ಕಾಡ್ಗಿಚ್ಚಿನಂತೆ ವೈರಲ್ ಆಗಲು ಆರಂಭಿಸಿತು. ಸಾಕಷ್ಟು ಮೀಮ್ಸ್ ಕ್ರಿಯೇಟ್ ಆಗಿ ಸದ್ದು ಮಾಡಿದೆ. ಕರ್ನಾಟಕ ಬಿಜೆಪಿ ಪಕ್ಷ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಲು ಈ ವೀಡಿಯೋ ಬಳಸಿಕೊಂಡಿತ್ತು.

ಗುವಾಹಟಿ ಮೂಲಕ 19 ವರ್ಷದ ಯುವತಿ ಆರ್ಯಪ್ರಿಯ ಭೂಯಾನ್ ರಾತ್ರೋರಾತ್ರಿ ಫೇಮಸ್ ಆಗಿಬಿಟ್ಟಳು. ಒಂದೇ ವಾರದಲ್ಲಿ ಆಕೆಯ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 800ರಿಂದ 4 ಲಕ್ಷಕ್ಕೆ ಏರಿದೆ. ಆ ವೀಡಿಯೋದಲ್ಲಿ ಅಂಥಾದ್ದೇನಿದೆ? ಅದ್ಯಾಕೆ ಈಕೆಯನ್ನು ಇಷ್ಟು ಮೆರೆಸುತ್ತಿದ್ದೀರಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 2018ರಲ್ಲಿ ಆರ್ಯಪ್ರಿಯ ಟ್ವಿಟ್ಟರ್ ಖಾತೆ ತೆರೆದಿದ್ದಳು. ಹೆಚ್ಚು ಪೋಸ್ಟ್ ಮಾಡಿರಲಿಲ್ಲ.

ಪಂದ್ಯದ ವೇಳೆ ಆರ್ಯಪ್ರಿಯ ಪ್ರತಿಕ್ರಿಯೆ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕೆಯ ಹಿನ್ನೆಲೆ ಹುಡುಕಲು ಆರಂಭಿಸಿದ್ದರು. ಬಳಿಕ ಆರ್ಯಪ್ರಿಯ ಭೂಯಾನ್ ಇನ್‌ಸ್ಟಾಗ್ರಾಮ್‌ ಖಾತೆ ಹುಡುಕಿದ್ದರು. ಕೆಲವರು ಫಾಲೋ ಮಾಡಲು ಆರಂಭಿಸಿದರು. ಮತ್ತೆ ಒಂದಷ್ಟು ಜನ ಆಕೆ ಈ ಹಿಂದೆ ಮಾಡಿದ್ದ ಪೋಸ್ಟ್‌ಗಳಿಗೆ ಲೈಕ್ಸ್, ಕಾಮೆಂಟ್ಸ್ ಮಾಡಲು ಆರಂಭಿಸಿದ್ದರು. ನಾಲ್ಕೈದು ದಿನ ಸುಮ್ಮನಿದ್ದ ಆಕೆ ಇದೀಗ ಒಂದೊಂದೇ ಪೋಸ್ಟ್ ಮಾಡಲು ಆರಂಭಿದ್ದಾಳೆ.

ಆರ್ಯಪ್ರಿಯ ಭೂಯಾನ್ ಕ್ರೇಜ್ ಹೆಚ್ಚಾಗುತ್ತಿದ್ದಂತೆ ಕೆಲ ಉತ್ಪನ್ನಗಳ ಪ್ರಚಾರಕ್ಕೆ ಆಕೆಯನ್ನು ಬಳಸಿಕೊಳ್ಳಲಾಗುತ್ತಿದೆ. ಬ್ಯೂಟಿ ಬ್ರ್ಯಾಂಡ್ 'ಯೆಸ್ ಮೇಡಮ್' ಜೊತೆ ಬ್ರಾಂಡ್ ಸಹಯೋಗ ಮಾಡಿಕೊಂಡಿದೆ. ಇನ್ನು ಫುಡ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಕೂಡ ಆರ್ಯಪ್ರಿಯ ಕ್ರೇಜ್‌ ಅನ್ನು ಎನ್‌ಕ್ಯಾಶ್ ಮಾಡಿಕೊಂಡಿದೆ. ಈ ಮೂಲಕ ಆಕೆಗೆ ಲಕ್ಷ ಲಕ್ಷ ಹಣ ಬರಲು ಆರಂಭಿಸಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

"ಧೋನಿ ನಿನ್ನನ್ನು ಸ್ಟಾರ್ ಮಾಡಿದ್ದು" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಆ ಪಂದ್ಯದ ಟಿಕೆಟ್ ನಿನ್ನ ಜೀವನಕ್ಕೆ ಲಾಟರಿ ಟಿಕೆಟ್ ಆಗಿಬಿಡ್ತು" ಎಂದು ಮತ್ತೊಂದು ಕಾಮೆಂಟ್ ಮಾಡಿದ್ದಾರೆ. ಅಂದು ಪಂದ್ಯದ ವೇಳೆ ನಿನ್ನ ಪ್ರತಿಕ್ರಿಯೆಯನ್ನು ಸೆರೆ ಹಿಡಿದ ಕ್ಯಾಮರಾಮನ್‌ಗೆ ಧನ್ಯವಾದ ಹೇಳು. ಆತನಿಂದಲೇ ನೀನು ಇಷ್ಟು ಕ್ರೇಜ್ ಗಳಿಸಿದ್ದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿ ತಿಳಿಸಿದ್ದಾರೆ.

More from Filmibeat

English summary
CSK supporter Aaryapriya Bhuyan gain stardom with a viral video, attracting 4 lakh Instagram fans and endorsement offers;
Read more about: ipl 2025 kollywood tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X