ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ನಿಂದ ಹಿಂತಿರುಗಿದರೇ 'ಭಾಗ್ಯಲಕ್ಷ್ಮೀ' ಭಾಗ್ಯ?
ಸುಷ್ಮಾ ಕೆ. ರಾವ್ ವಿಭಿನ್ನ ನಿರೂಪಣೆ ಮೂಲಕ ಹೆಸರಾದವರು, ಒಳ್ಳೆಯ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದವರು. ಅದರಲ್ಲೂ 'ಭಾಗ್ಯಲಕ್ಷ್ಮೀ' ಧಾರಾವಾಹಿ ಮೂಲಕ ಅದೆಷ್ಟೋ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾದವರು. ಅದೇ ಥರ ನಿಜ ಜೀವನದಲ್ಲೂ ಟ್ರಾವೆಲ್ ಪ್ರಿಯರಿಗೆ ಸಿಕ್ಕಾಪಟ್ಟೆ ಸ್ಪೂರ್ತಿಯಾಗಿ ಕಾಣಿಸುತ್ತಾರೆ. ಯಾಕಂದ್ರೆ, ಸುಷ್ಮಾ ಕೂಡ ಪ್ರವಾಸ ಪ್ರಿಯೆ.
ವರ್ಷದಲ್ಲಿ ಮೂರ್ನಾಲ್ಕು ಸಲವಾದರೂ, ಎಲ್ಲಿಯಾದರೂ ಟ್ರಾವೆಲ್ ಮಾಡ್ತಾ ಇರ್ತಾರೆ. ಆದರೆ, ಸುಷ್ಮಾ ಮಾಡುವ ಟ್ರಾವೆಲ್ ನಾರ್ಮಲ್ ಅಲ್ಲ. ಅಲ್ಲೊಂದು ಅಡ್ವೆಂಚರ್ ಇರ್ಬೇಕು, ನೆನಪಲ್ಲಿ ಉಳಿಯುವಂತದ್ದಾಗಿರಬೇಕು. ಅಂಥ ಕಡೆಗೆ ಲಗೇಜ್ ಪ್ಯಾಕ್ ಮಾಡಿಕೊಂಡು ಹೊರಟು ಬಿಡುತ್ತಾರೆ.

ಈಗ ಸುಷ್ಮಾ ಹಂಚಿಕೊಂಡಿರುವ ವಿಡಿಯೋ ನೋಡಿದ್ರೆ ಹಿಮಾಲಯ ಪರ್ವತವನ್ನೇ ಒಂದು ರೌಂಡ್ ಹಾಕಿ ಬಂದಂತ ಫೀಲ್ ಆಗುತ್ತದೆ. ಶೂಟಿಂಗ್ ಗ್ಯಾಪ್ ತೆಗೆದುಕೊಂಡು ನೇರ ಮೌಂಟ್ ಎವರೆಸ್ಟ್ ಹತ್ತುವುದಕ್ಕೆ ಹೋಗಿದ್ದಾರೆ. ಅಲ್ಲಿನ ಸೌಂದರ್ಯವನ್ನು ಅವರ ಫಾಲೋವರ್ಸ್‌ಗೂ ತೋರಿಸಿದ್ದಾರೆ. ಸದ್ಯ ಹಿಮಾಲಯದ ತಪ್ಪಲಿನ ಚಳಿಯ ಫೀಲ್ ಮಾಡ್ತಾ ಇದ್ದಾರೆ. ಸುಷ್ಮಾ ಕೆ.ರಾವ್ ಅವರ ಪೇಜ್ ಫಾಲೋ ಮಾಡುವವರಿಗೆ ಗೊತ್ತಿರುತ್ತೆ. ಅವರು ಲೈಫ್‌ನ ಎಷ್ಟು ಅದ್ಭುತವಾಗಿ ಕಳೆಯುತ್ತಾರೆ ಅನ್ನೋದು. ತಮ್ಮ ಲೈಫ್‌ನ ಅನ್ನು ಸಂಪೂರ್ಣವಾಗಿ ಎಂಜಾಯ್ ಮಾಡ್ತಾರೆ. ಜೀವನದಲ್ಲಿ ಪಾಸಿಟಿವ್ ಆಗಿರೋದಕ್ಕೆ, ನಗೋದಕ್ಕೆ, ನಗಿಸೋದಕ್ಕೆ ಎಷ್ಟು ಸಾಧ್ಯವೋ ಅಷ್ಟನ್ನು ಪ್ರಯತ್ನ ಮಾಡ್ತಾರೆ. ಲೈಫ್‌ನಲ್ಲಿ ಖುಷಿ ಖುಷಿಯಾಗಿರೋದಕ್ಕೆ ಸುಷ್ಮಾ ಅವರನ್ನ ಸ್ಪೂರ್ತಿಯಾಗಿ ತೆಗೆದುಕೊಳ್ಳಬಹುದು.
ಸುಷ್ಮಾ ದೂರದ ಪ್ರಯಾಣವನ್ನು ಒಬ್ಬರೇ ಮಾಡ್ತಾರೆ. ಇದನ್ನ ಸಾಕಷ್ಟು ವಿಡಿಯೋಗಳಲ್ಲಿ ನೋಡಿದ್ದೇವೆ. ಸೋಲೋ ಟ್ರಿಪ್ ಅನ್ನೇ ಬಹಳ ಇಷ್ಟ ಪಡುತ್ತಾರೆ ಅನ್ನೋದು ಇದರಿಂದಾನೇ ಅರ್ಥವಾಗುತ್ತೆ. ಕೆಲವೊಮ್ಮೆ ಸೋಲೋ ಟ್ರಿಪ್ ಹಲವರಿಗೆ ಹಿತ ಎನಿಸುತ್ತದೆ. ತಮ್ಮದೇ ಸಮಯ, ತಮ್ಮದೇ ನೆಮ್ಮದಿ, ತಮ್ಮದೇ ಎಂಜಾಯ್ಮೆಂಟ್. ಸುಷ್ಮಾ ಪ್ರಯಾಣ ಬೆಳೆಸಿದಾಗೆಲ್ಲಾ ಅಲ್ಲಿನ ವಿಶೇಷ ಜಾಗಗಳ ಬಗ್ಗೆ ವಿಡಿಯೋ ಮೂಲಕ ತಿಳಿಸುತ್ತಾರೆ. ಕೈಯಲ್ಲೊಂದು ಕ್ಯಾಮೆರಾ ಹಿಡಿದು, ಅಲ್ಲಿನ ಸೌಂದರ್ಯವನ್ನೆಲ್ಲ ವರ್ಣಿಸುತ್ತಾ ಸಾಗುತ್ತಾರೆ. ಈಗಲೂ ಮೌಂಟ್ ಎವರೆಸ್ಟ್ ಹತ್ತುವ ಅನುಭವ, ಅದಕ್ಕೂ ಮುನ್ನ ಮಾಡಿಕೊಂಡ ಪ್ರಿಪರೇಷನ್ ಎಲ್ಲವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಪ್ರಪಂಚದ ಅತೀ ಎತ್ತರದ ಪರ್ವತಗಳಲ್ಲಿ ಒಂದಾದ ಮೌಂಟ್ ಎವರೆಸ್ಟ್‌ಗೆ ಭಾಗ್ಯ ಪಯಣ ಬೆಳೆಸಿದ್ದರು. ಮೌಂಟ್ ಎವರೆಸ್ಟ್ ಹತ್ತುವುದಕ್ಕೆ ಆಗದೇ ಇದ್ದರೂ, ಬೇಸ್ ಕ್ಯಾಂಪ್‌ವರೆಗೆ ರೀಚ್ ಆಗಬೇಕು ಅನ್ನೋದು ಅವರ ಮಹದಾಸೆಯಾಗಿತ್ತು. ಅಂತೆಯೇ ಆ ಅನುಭವವನ್ನು ಪಡೆದುಕೊಂಡಿದ್ದಾರೆ.
ಇನ್ನು ಬೇಸಿಗೆ ಕಾಲವಾದರೂ ಅಲ್ಲಿನ ಹಿಮದಿಂದ ದೇಹವನ್ನ ಬಿಸಿಯಾಗಿಟ್ಟುಕೊಳ್ಳುವುದು ಸುಲಭವಲ್ಲ. ಸುಷ್ಮಾಗೂ ಆ ಅನುಭವ ಆಗಿದೆ. ಅದಕ್ಕೆಂದೇ ಎಲ್ಲಾ ರೀತಿಯ ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೂ ಅಲ್ಲಿನ ಚಳಿಗೆ ಗಢಗಢ ಅಂತ ನಡುಗಿದ್ದಾರೆ. ಅಲ್ಲಿ ಸ್ಟೇ ಆಗಿದ್ದ ರೂಮಿನ ವಿಡಿಯೋ ಕೂಡ ಮಾಡಿದ್ದಾರೆ.
ಬೆಂಗಳೂರಿನಿಂದ ಹೊರಟಾಗಿನಿಂದ ತನ್ನ ಜರ್ನಿ ಹೇಗಿತ್ತು ಅನ್ನೋದರ ಕಂಪ್ಲೀಟ್ ವಿಡಿಯೋ ಮಾಡಿದ್ದರು. ಸುಷ್ಮಾ ಕಂಪ್ಲೀಟ್ ಜರ್ನಿ ಮುಗಿಸುವ ತನಕವೂ ಅವರ ಜೊತೆಗೆ ಇದ್ದದ್ದು ರೆಡ್ ಕಲರ್ ಕ್ಯಾಪ್. ಎಲ್ಲಿಯೇ ಹೋದರೂ ಅದನ್ನ ಮಾತ್ರ ಮಿಸ್ ಮಾಡಿಕೊಂಡಿಲ್ಲ. ಹಾಗೇ ಹೋಗ್ತಾನೇ ಚಳಿ ಅದು ಇದು ಅಂತ ಲಗೇಜ್ ಹೆಚ್ಚಾಗಿ ತೆಗೆದುಕೊಂಡು ಹೋಗಿದ್ದ ಕಾರಣ ಅಲ್ಲಿ ಏನು ಶಾಪಿಂಗ್ ಮಾಡಿಲ್ಲ ಅನ್ನೋದನ್ನು ಹೇಳಿದ್ದಾರೆ. ಫೈನಲಿ ನಮಗೆಲ್ಲಾ ಕುಳಿತಲ್ಲಿಯೇ ಹಿಮಾಲಯ ಪರ್ವತವನ್ನ ತೋರಿಸಿದ್ದಾರೆ. ಅಷ್ಟೇ ಅಲ್ಲ ಸುಷ್ಮಾ ಅವರು ಎಂಥಹ ಸವಾಲಿನ ಬದುಕನ್ನ ಇಷ್ಟ ಪಡ್ತಾರೆ ಅನ್ನೋದನ್ನು ತೋರಿಸಿದ್ದಾರೆ.


Click it and Unblock the Notifications











