ದರ್ಶನ್ ಬಳಸುವ ಒಂದೊಂದು ದುಬಾರಿ ಕಾರಿನ ಕಲರ್ ಯಾವುದು ಗೊತ್ತಾ? ಶರ್ಟ್ ಬ್ರ್ಯಾಂಡ್ ಏನು?

By ಎಸ್ ಸುಮಂತ್

ನಟ ದರ್ಶನ್‌ಗೆ ಇರುವ ಅಭಿಮಾನಿಗಳ ಬಳಗ ಕಡಿಮೆ ಏನು ಇಲ್ಲ. ಜಸ್ಟ್ ಹೊರಗೆ ಬಂದರೆ ಸಾಕು ಸಹಸ್ರಾರು ಅಭಿಮಾನಿಗಳು ಬಂದು ನಿಲ್ಲುತ್ತಾರೆ. ಅವರಿಗಾಗಿ ಕಾಯುತ್ತಾರೆ. ದರ್ಶನ್ ಅವರ ಅಭಿಮಾನಿಗಳಿಗೆ ಅವರ ರಿಯಲ್ ಲೈಫ್ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಹಜವಾಗಿಯೇ ಇರುತ್ತದೆ. ಎಲ್ಲರಿಗೂ ಗೊತ್ತು ಅವರು ಪ್ರಾಣಿ ಪ್ರಿಯ ಅಂತ. ಆದರೆ ಅದಕ್ಕೂ ಮಿಗಿಲಾಗಿ ಅವರು ವಾಹನ ಹಾಗೂ ಬ್ರ್ಯಾಂಡೆಡ್ ಬಟ್ಟೆ ಪ್ರಿಯ ಅನ್ನೋದು ಕೂಡ ಅಷ್ಟೇ ಸತ್ಯ.

ದರ್ಶನ್ ಎಲ್ಲಿಯೇ ಬಂದರೂ ಸಿಂಪಲ್ ಆಗಿರುವ ಟೀ ಶರ್ಟ್, ಶರ್ಟ್‌ಗಳನ್ನ ಧರಿಸಿದರೂ ಅದರ ಬ್ರ್ಯಾಂಡ್ ಮಾತ್ರ ಸಿಕ್ಕಾಪಟ್ಟೆ ದುಬಾರಿಯದ್ದೇ ಆಗಿರುತ್ತದೆ. ಬಟ್ಟೆಗಳ ವಿಚಾರದಲ್ಲಂತೂ ದರ್ಶನ್ ಅವರು ನೋ ಕಾಂಪ್ರೂಮೈಸ್. ಅವರ ಅಭಿಮಾನಿಯಾಗಿರುವ, ಈಗ ಬ್ರ್ಯಾಂಡೆಡ್ ಬಟ್ಟೆಗಳ ವ್ಯಾಪಾರ ಮಾಡುತ್ತಿರುವ ನಟ ಅಂಜನ್ ದೀಪು 'ಬಾಸ್ ಟಿವಿ' ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ನೆಚ್ಚಿನ ನಟನ ಕ್ರೇಜ್‌ ಬಗ್ಗೆ ಬಗ್ಗೆ ಮಾತನಾಡಿದ್ದಾರೆ. ಅಂಜನ್ ದೀಪು ಕೂಡ ಬ್ರಾಂಡೆಡ್ ಬಟ್ಟೆಗಳನ್ನ ಮಾರಾಟ ಮಾಡುತ್ತಾರೆ.‌ ಹಾಗೇ ಜಿಮ್ ಟ್ರೈನರ್ ಕೂಡ ಹೌದು. ಹಾಗಾದ್ರೆ ದರ್ಶನ್ ಅಭಿಮಾನಿಯಾಗಿ ಅವರ ಬಗ್ಗೆ ಏನೆಲ್ಲಾ ತಿಳಿದುಕೊಂಡಿದ್ದಾರೆ. ಸಂದರ್ಶನದಲ್ಲಿ ಬಿಟ್ಟುಕೊಟ್ಟ ಗುಟ್ಟೇನು ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.

Kannada actor Darshan luxury car and branded clothes craze

ನಿರೂಪಕ ದರ್ಶನ್ ಅವರ ಕಾರಿನ ಬಗ್ಗೆ ಅಂಜನ್ ದೀಪು ಬಳಿ ಕೇಳಿದಾಗ, ಈಗ ಅವರು ಡಿಫೆಂಡರ್ ತೆಗೆದುಕೊಂಡಿದ್ದಾರೆ. ವಿಜಯಲಕ್ಷ್ಮಿ ಮೇಡಂ ಅವರ ಬರ್ತ್ ಡೇ ಟೈಮ್‌ನಲ್ಲಿ ಒಂದು ಬ್ಲೂ ಕಲರ್ ಗಾಡಿ ಕೊಡಿಸಿದ್ದರು. ಆ ಗಾಡಿ ಕೂಡ ನಂಗೆ ತುಂಬಾ ಇಷ್ಟ. ನಮ್ಮ ಏರಿಯಾದಲ್ಲಿ ಒಂದು ದೊಡ್ಡ ಕಾರ್ಯಕ್ರಮ ನಡೆದಿತ್ತು. ಜನ ಸಿಕ್ಕಾಪಟ್ಟೆ ಸೇರಿದ್ದರು. ಆಗ ದರ್ಶನ್ ಸರ್ ಒಂದು ಮಾತನ್ನ ಹೇಳಿದ್ರು. ಇಷ್ಟೆಲ್ಲ ಜನ ಸೇರಿಸಿದ್ದೀಯಾ. ಇವರತ್ರ ಎಲ್ಲಾ ಹುಷಾರಾಗಿ ಇರು ಅಂತ ಹೇಳಿದ್ರು. ಫ್ರೆಂಡ್ಸ್ ಅಂತಾನೆ ಅಂದುಕೊಂಡು ಸುಮ್ಮನಾಗಿದ್ದೆ. ಆದರೆ ಆ ಮಾತು ಆನಂತರದ ದಿನಗಳಲ್ಲಿ ಅರ್ಥ ಆಯ್ತು ಎಂದಿದ್ದಾರೆ.

ಅಭಿಮಾನಿಯೊಬ್ಬರು ಅದೇ ವಿಡಿಯೋಗೆ ದರ್ಶನ್ ಬಳಿ ಇರುವ ಕಾರುಗಳ ಹೆಸರನ್ನ ಹಾಕಿದ್ದಾರೆ. Range Rover vogue ಬಿಳಿ ಬಣ್ಣ, Lamborghini urus ಹಳದಿ ಬಣ್ಣ, Lamborghini avetender ಗ್ರೇ ಕಲರ್, Jaguar ಬ್ಲೂ ಕಲರ್, Jeep warangler ಕೆಂಪು ಬಣ್ಣ, Toyota vellfire ಬಿಳಿ ಬಣ್ಣ, Ford endeavor ಬಿಳಿ ಬಣ್ಣ, Mini Cooper ಕಪ್ಪಿ ಬಣ್ಣ, land Rover defender ಹಸಿರು ಬಣ್ಣ, Ford mustang ಹಳದಿ ಬಣ್ಣದ ಕಾರುಗಳು ದರ್ಶನ್ ಬಳಿ ಇದಾವೆ ಅಂತ ಕಮೆಂಟ್ ಹಾಕಿದ್ದಾರೆ.

ಜೊತೆಗೆ ದರ್ಶನ್ ಅವರಿಗೆ ಬಟ್ಟೆಯ ಕ್ರೇಜ್ ಎಷ್ಟಿದೆ ಅನ್ನೋದನ್ನು ಹೇಳಿದ್ದಾರೆ. ದರ್ಶನ್ ಸರ್ ಅಭಿಮಾನಿ. 'ರಾಬರ್ಟ್' ಸಿನಿಮಾದಲ್ಲಿ ದರ್ಶನ್ ಸರ್ ಹಾಕಿದ್ದ ಶರ್ಟ್ ಬೇಕು ಅಂತ ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್ ಹಾಕಿದ್ರು. ನಾನು ಇಲ್ಲಿ ಹುಡುಕುತ್ತಿದ್ದೆ. ನಾನು ಬೇರೆ ದೇಶದಿಂದ ಕೊರಿಯರ್ ಮಾಡಿಸಿಕೊಂಡು ತರಿಸಿಕೊಟ್ಟಿದ್ದೆ. ದರ್ಶನ್ ಸರ್ ಸಿಂಪಲ್ ಆಗಿ‌ ಒಂದು ಟೀ ಶರ್ಟ್ ಹಾಕಿರುತ್ತಾರೆ. ಆದರೆ, ಅದರ ಬ್ರ್ಯಾಂಡ್ ದುಬಾರಿ ಆಗಿರುತ್ತೆ. ಆ ಬಟ್ಟೆಯ ಫೀಲ್ ಬೇರೆನೆ ಇರುತ್ತೆ. ಮಾರ್ಸೆಲೊ ಬರ್ನಾಲಾ ಬ್ರ್ಯಾಂಡ್ ಅನ್ನು ಜಾಸ್ತಿ ಬಳಸುತ್ತಾರೆ. ಕಂಪ್ಲೀಟ್ ಹ್ಯಾಂಡ್ ಮೇಡ್. ಅವರ ಡ್ರೆಸ್ಸಿಂಗ್ ಸೆನ್ಸ್‌ ಅದ್ಭುತ ಎಂದು ಅಭಿಮಾನಿಯಾಗಿಯೂ ಆಗಿರುವ ಅಂಜನ್ ದೀಪು ಕೊಂಡಾಡಿದ್ದಾರೆ.

More from Filmibeat

Read more about: life style darshan cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X