ದರ್ಶನ್ ಪುತ್ರ ವಿನೀಶ್ ಹೇರ್ ಕಟ್ ವಿಡಿಯೋ ಮತ್ತೆ ವೈರಲ್; ಹೇಗಿದೆ ನೋಡಿ ಹೇರ್ ಸ್ಟೈಲ್
ದರ್ಶನ್ ತೂಗುದೀಪ ಸಂಕಷ್ಟದಲ್ಲಿ ಇರೋದನ್ನು ಅವರ ಅಭಿಮಾನಿಗಳಿಗೆ ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಹೇಗಾದರೂ ಮಾಡಿ ರೇಣುಕಾಸ್ವಾಮಿ ಪ್ರಕರಣದಿಂದ ಹೊರಬರಲಿ ಎಂದು ದರ್ಶನ್ ಫ್ಯಾನ್ಸ್ ದೇವರ ಮೊರೆ ಹೋಗಿ ಹರಕೆ ಹೊತ್ತು ಬಂದಿದ್ದಾರೆ. ಇನ್ನೊಂದು ಕಡೆ ದರ್ಶನ್‌ಗೆ ಜೈಲಿನ ಒಳಗೂ ನೆಮ್ಮದಿ ಇಲ್ಲ ಅನ್ನೋದು ಮತ್ತಷ್ಟು ಅಸಮಧಾನಕ್ಕೆ ಕಾರಣವಾಗಿದೆ. ಇತ್ತ ಪತಿ ಹಾಗೂ ಮಗ ಕೂಡ ದರ್ಶನ್ ಹಿಂತಿರುಗುವಿಕೆಯನ್ನು ಎದುರು ನೋಡುತ್ತಿದ್ದಾರೆ.
ಸದ್ಯದ ಪರಿಸ್ಥಿತಿಯನ್ನು ನೋಡಿದವರೆ ದರ್ಶನ್ ಜೈಲಿನಿಂದ ಹೊರಬರುವುದಕ್ಕೆ ಸಾಕಷ್ಟು ಹೋರಾಟ ಮಾಡಬೇಕಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿರುವುದು ಇಡೀ ದೇಶದ ಗಮನ ಸೆಳೆದಿದೆ. ಸುಪ್ರೀಂ ಕೋರ್ಟ್ ಕೂಡ ದರ್ಶನ್ ವಿರುದ್ಧ ಅಸಮಧಾನ ಹೊರ ಹಾಕಿ ಜಾಮೀನನ್ನು ಕ್ಯಾನ್ಸಲ್ ಮಾಡಿದ ದಿನದಿಂದ ಈ ಪ್ರಕರಣಕ್ಕೆ ದೇಶಾದ್ಯಂತ ಸುದ್ದಿಯಾಗಿತ್ತು.

ಇದೆಲ್ಲವನ್ನು ನೋಡಿ ಕಂಗೆಟ್ಟಿರೋ ಫ್ಯಾನ್ಸ್‌ಗೆ ವಿನೀಶ್ ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ವಿನೀಶ್ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ತಂದೆಯ ಸ್ಥಾನದಲ್ಲಿ ತಾನು ನಿಂತು ಆಯುಧ ಪೂಜೆಯಂದು ಕಾರುಗಳಿಗೆ ಪೂಜೆಯನ್ನು ಮಾಡಿದ್ದರು. ಅದರ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಈ ಬೆನ್ನಲ್ಲೇ ಹಳೆ ವಿಡಿಯೋ ಒಂದನ್ನು ಮತ್ತೆ ದರ್ಶನ್ ಫ್ಯಾನ್ಸ್ ಶೇರ್ ಮಾಡುತ್ತಿದ್ದಾರೆ.
ವಿನೀಶ್ ಸಲೂನ್ ಒಂದರಲ್ಲಿ ಹೇರ್ ಸೆಟ್ ಮಾಡಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಾಗಂತ ಈ ವಿಡಿಯೋ ಏನು ಇತ್ತೀಚೆಗೆ ಆಗಿದ್ದಲ್ಲ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್ ಆಗಿರುವ ಪ್ರಕಾರ, ಇದು ಸುಮಾರು 18 ವಾರಗಳಷ್ಟು ಹಳೆಯ ವಿಡಿಯೋ. ಅಂದರೆ, ಹೆಚ್ಚು ಕಡಿಮೆ ನಾಲ್ಕುವರೆ ತಿಂಗಳಷ್ಟು ಹಳೆಯ ವಿಡಿಯೋ. ಈ ವಿಡಿಯೋ ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ.
ದರ್ಶನ್ ಪುತ್ರ ವಿನೀಶ್‌ಗೆ ಸಲೂನ್‌ನಲ್ಲಿ ಹೇರ್ ಸೆಟ್ ಮಾಡಲಾಗುತ್ತಿದೆ. ಈಗ ಯುವಕರು ಗುಂಗುರು ಕೂದಲನ್ನೇ ಉದ್ದ ಬಿಟ್ಟು, ಸೈಡ್‌ನಲ್ಲಿ ಮಾತ್ರ ಟ್ರಿಮ್ ಮಾಡಿಸುತ್ತಾರೆ. ವಿನೀಶ್ ಇಷ್ಟ ಪಟ್ಟಂತೆ ಹೇರ್ ಸ್ಟೈಲಿಸ್ಟ್ ಹೇರ್ ಸೆಟ್ ಮಾಡಿದ್ದಾರೆ. ವಿಡಿಯೋ ಕೊನೆಯಲ್ಲಿ ಖುಷಿಯಲ್ಲಿ ಚಿಕ್ಕದೊಂದು ಸ್ಮೈಲ್ ಕೊಡುವ ಮೂಲಕ ವಿನೀಶ್ ಹೇರ್ ಕಟ್ ಮಾಡಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಶೇರ್ ಮಾಡಿ ಖುಷಿ ಪಡುತ್ತಿದ್ದಾರೆ.
ತಮ್ಮ ನೆಚ್ಚಿನ ನಟನ ಅನುಪಸ್ಥಿತಿಯಲ್ಲಿ ಅವರ ಪುತ್ರನನ್ನೋ ಖುಷಿಪಟ್ಟಿದ್ದಾರೆ. ಇನ್ನು ವಿನೀಶ್‌ಗೆ ಈಗ 16 ವರ್ಷ. ಇನ್ನು ನಾಲ್ಕೈದು ವರ್ಷಗಳಲ್ಲಿ ಮಗನನ್ನು ಸಿನಿಮಾಗೆ ಪರಿಚಯಿಸುವ ಸಾಧ್ಯತೆಯಿದೆ. ಈಗಾಗಲೇ ವಿನೀಶ್ ಐರಾವತ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಕೊಟ್ಟು ದರ್ಶನ್ ಅಭಿಮಾನಿಗಳನ್ನು ರಂಜಿಸಿದ್ದಾರೆ. ಹೀಗಾಗಿ ಬಹುಬೇಗನೆ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಸಾಧ್ಯತೆಯಿದೆ.
ಇನ್ನು ಈ ಹಿಂದೆ ದರ್ಶನ್ ಕೂಡ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಕರೆದುಕೊಂಡು ಬರೋದಾಗಿ ಹೇಳಿದ್ದರು. ತಮ್ಮ ಕುಟುಂಬದ ಹೆಸರು ಚಿತ್ರರಂಗದಲ್ಲಿ ಮುಂದುವರೆಯಬೇಕು ಎಂದು ಹೇಳುವ ಮೂಲಕ ವಿನೀಶ್ ಸಿನಿಮಾಗೆ ಎಂಟ್ರಿ ಕೊಡುವ ಬಗ್ಗೆ ಸುಳಿವು ನೀಡಿದ್ದರು. ಬಹುಶ: ವಿನೀಶ್ ಓದು ಮುಗಿದ ಕೂಡಲೇ ಸಿನಿಮಾಗೆ ಲಾಂಚ್ ಮಾಡಬಹುದು. ಆದ್ರೀಗ ದರ್ಶನ್ ಜೈಲು ಸೇರಿದ್ದರಿಂದ ವಿನೀಶ್ ತಯಾರಿ ಕೊಂಚ ತಡವಾಗಬಹುದು. ಆದರೆ, ಅಭಿಮಾನಿಗಳಿಗಂತೂ ವಿನೀಶ್ ಯಾವಾಗ ಎಂಟ್ರಿ ಕೊಡುತ್ತಾರೋ ಎಂದು ಎದುರು ನೋಡುತ್ತಿದ್ದಾರೆ.


Click it and Unblock the Notifications











