ಧ್ರುವ ಸರ್ಜಾ ಇಂದು ಹಾಕಿದ್ದ ಟೀ ಶರ್ಟ್‌ಗೆ ಫುಲ್ ಡಿಮ್ಯಾಂಡ್.. ಆನ್ಲೈನ್‌ನಲ್ಲಿ ನೋ ಸ್ಟಾಕ್
ಧ್ರುವ ಸರ್ಜಾ ಫ್ಯಾಷನ್ ಸೆನ್ಸ್ ಬೇರೆ ಲೆವೆಲ್‌ನಲ್ಲಿಯೇ ಇದೆ. ಸಾಮಾನ್ಯವಾಗಿ ಯಾವುದೇ ಇವೆಂಟ್‌ನಲ್ಲಿ ನೋಡಿದರೂ ಅವರು ರೌಂಡ್ ನೆಕ್ ಟೀ ಶರ್ಟ್ ಅನ್ನೇ ಹೆಚ್ಚು ಹಾಕುತ್ತಾರೆ. ಅದರಲ್ಲೂ ರೌಂಡ್ ನೆಕ್ ಟೀ ಶರ್ಟ್ ಅವರಿಗೆ ನೀಟಾಗಿ ಸೂಟ್ ಆಗುತ್ತೆ ಕೂಡ. ಯಾವುದಾದರೂ ಸಭೆ, ಸಮಾರಂಭವಿದ್ದಾಗಷ್ಟೇ ಡ್ರೆಸ್‌ನಲ್ಲಿ ಬದಲಾವಣೆ ನೋಡಬಹುದು. ಬಿಟ್ಟರೆ ಹೆಚ್ಚು ಹಾಕುವುದೇ ಟೀ ಶರ್ಟ್ ಅನ್ನೇ. ಅವರ ದೇಹದ ಆಕಾರಕ್ಕೂ ಟೀ ಶರ್ಟ್‌ಗಳು ಅದ್ಭುತವಾಗಿ ಕಾಣಿಸುತ್ತವೆ. ಹಾಗೇ ಆರಾಮದಾಯಕ ಕೂಡ. ಹಾಗಂತ ಅವರು ಹಾಕುವ ಟೀ ಶರ್ಟ್‌ಗಳು ಕಡಿಮೆ ಮೊತ್ತದ್ದೇನು ಆಗಿರಲ್ಲ. ದುಬಾರಿ ಬೆಲೆಯ ದೊಡ್ಡ ಬ್ರ್ಯಾಂಡ್‌ಗಳ ಟೀ ಶರ್ಟ್ ಅನ್ನೇ ಧರಿಸುತ್ತಾರೆ.
ಇಂದು ಪ್ರೆಸ್ ಮೀಟ್ ಒಂದಕ್ಕೆ ಹಾಜರಿ ಹಾಕಿದ್ದರು. ಧ್ರುವ ಸರ್ಜಾ ಅವರು ಯಾರೇ ಹೊಸಬರು ಬೆಂಬಲ ಕೇಳಿದ್ರು ನೀಡುತ್ತಾರೆ. ಜೊತೆಗೆ ನಿಂತು ಸಪೋರ್ಟ್ ಮಾಡುತ್ತಾರೆ. ಅವರ ಸಿನಿಮಾಗೆ ಶುಭ ಹಾರೈಸುತ್ತಾರೆ. ಇಂದು ಕೂಡ ಹೊಸ ತಂಡದ ಜೊತೆಗೆ ನಿಂತಿದ್ದರು. ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಬೆಂಬಲ ನೀಡಿದ್ದರು. ಈ ವೇಳೆ ಪ್ರೆಸ್ ಮೀಟ್ ಕಾರ್ಯಕ್ರಮಕ್ಕೆ ಅವರು ಹಾಕಿದ್ದಂತಹ ಟೀ ಶರ್ಟ್ ಗಮನ ಸೆಳೆದಿದೆ. ಸಿಂಪಲ್ ಆಗಿದ್ರು, ಸಿಕ್ಕಾಪಟ್ಟೆ ದುಬಾರಿ ಅನ್ನೋದು ಚೆಕ್ ಮಾಡಿದ ಮೇಲೆ ಗೊತ್ತಾಗಿದೆ. ಅಷ್ಟೇ ಅಲ್ಲ ಈ ಟೀ ಶರ್ಟ್ ಸಿಗೋದು ಕಷ್ಟವಾಗಿದೆ. ಅಷ್ಟು ಡಿಮ್ಯಾಂಡ್ ಇದೆ.

ಹೌದು ಪ್ರೆಸ್ ಮೀಟ್‌ಗೆ ಧ್ರುವ ಸರ್ಜಾ ಹಾಕಿದ್ದ ಟೀ ಶರ್ಟ್, Michael Kors ಎಂಬ ಬ್ರ್ಯಾಂಡ್ ನದ್ದು. ಇದು Ajio Luxನಲ್ಲಿ ಲಭ್ಯವಿದೆ. ಆನ್‌ಲೈನ್‌ನಲ್ಲಿ ಇದರ ಬೆಲೆ ಬಂದು 10 ಸಾವಿರ ರೂಪಾಯಿ ಇದೆ. ಧ್ರುವ ಸರ್ಜಾ ಅವರು ಹಾಕಿದ್ದದ್ದು ಕೂಡ ಇದೇ ಕಲರ್ ಟೀ ಶರ್ಟ್. ಅಂದ್ರೆ ಬಿಳಿ ಬಣ್ಣದ ಟೀ ಶರ್ಟ್ ಆಗಿತ್ತು. ರೌಂಡ್ ನೆಕ್ ಕಾಲರ್ ಹೊಂದಿತ್ತು. Michael kors ಎಂಬ ಬ್ರ್ಯಾಂಡ್ ಸ್ಟಿಕ್ಟರ್ ಮುಂದೆಯೂ ಅಂಟಿಸಲಾಗಿದೆ. ಹಿಂದೆಯೂ ದೊಡ್ಡದಾಗಿ ಹಾಕಲಾಗಿದೆ. Michael kors ಬ್ರ್ಯಾಂಡ್‌ನ ಟೀ ಶರ್ಟ್ ಧರಿಸಿ ಪ್ರೆಸ್ ಮೀಟ್‌ಗೆ ಬಂದಿದ್ದರು. ಈ ಟೀ ಶರ್ಟ್ ಸಿಂಪಲ್ ಆಗಿದ್ರು ಗಮನ ಸೆಳೆಯುತ್ತಿತ್ತು.
ಇನ್ನು ಪ್ರೆಸ್ ಮೀಟ್ ವಿಚಾರಕ್ಕೆ ಬರುವುದಾದರೆ 'ಪಪ್ಪಿ' ಎಂಬ ಸಿನಿಮಾವನ್ನ ಧ್ರುವ ಸರ್ಜಾ ಅವರೇ ಪ್ರೆಸೆಂಟ್ ಮಾಡ್ತಾ ಇದ್ದಾರೆ. ಪಕ್ಕಾ ಉತ್ತರ ಕರ್ನಾಟಕದ ಮಂದಿಯೇ ಸೇರಿಕೊಂಡು ಮಾಡಿರುವಂತ ಸಿನಿಮಾ. ಈಗಾಗಲೇ ರೀಲ್ಸ್, ವಿಡಿಯೋಗಳ ಮೂಲಕ ಸಿಕ್ಕಾಪಟ್ಟೆ ವೈರಲ್ ಆಗಿದ್ದಂತ ಸಿನಿಮಾ ಇದು.

ಮುಗ್ಧ ಮಕ್ಕಳ, ಉತ್ತರ ಕರ್ನಾಟಕದ ರಗಡ್ ಪದಗಳನ್ನು ಬೆಂಗಳೂರಿಗರು ತಿರುಗಿ ನೋಡುವಂತೆ ಮಾಡಿತ್ತು. ಸೋಷಿಯಲ್ ಮೀಡಿಯಾದಲ್ಲಂತು ಯಾವುದು ಗುರು ಇದು ಸಿನಿಮಾ ಎಂಬ ಲೆವೆಲ್‌ಗೆ ಟಾಕ್ ಕ್ರಿಯೇಟ್ ಆಗಿತ್ತು. ಇದೀಗ ಪಪ್ಪಿ ಸಿನಿಮಾವನ್ನು ರಾಜ್ಯಾದ್ಯಂತ ರಿಲೀಸ್ ಮಾಡುವುದಕ್ಕೆ KRG ಮುಂದೆ ಬಂದಿದ್ದು, ಇದಕ್ಕೆ ಸಹಾಯ ಮಾಡಿದ್ದು, ಬೆನ್ನೆಲುಬಾಗಿ ನಿಂತಿರೋದು ಆಕ್ಷನ್ ಪ್ರಿನ್ಸ್ ಧೃವ ಸರ್ಜಾ.
'ಪಪ್ಪಿ' ಸಿನಿಮಾದ ಕಂಟೆಂಟ್ ಮೆಚ್ಚಿ ಧ್ರುವ ಸರ್ಜಾ ಬೆಂಬಲಕ್ಕೆ ನಿಂತಿದ್ದಾರೆ. ಅಷ್ಟೆ ಅಲ್ಲ ಆ ಉತ್ತರ ಕರ್ನಾಟಕ ಮಂದಿ ಆಡಿದ ಮಾತುಗಳು, ಮಕ್ಕಳ ಬಾಯಲ್ಲಿ ಬಂದ ಕಾಮಿಡಿ ಪದಗಳು, ಅವರೊಳಗಿದ್ದ ಪ್ರತಿಭೆ ಎಲ್ಲವನ್ನು ಕಣ್ಣಾರೆ ಕಂಡು ಧ್ರುವ ಸರ್ಜಾ ಅವರು ಖುಷಿಯಾಗಿದ್ದಾರೆ. ಎಲ್ಲರ ಹೆಸರನ್ನು ನೆನಪಿಟ್ಟುಕೊಂಡು ಹಾರೈಸಿ ಧ್ರುವ ಸರ್ಜಾ ಅಚ್ಚರಿ ಮೂಡಿಸಿದ್ದರು.


Click it and Unblock the Notifications











