Ramya:ಬದುಕನ್ನು ಎಂಜಾಯ್ ಮಾಡ್ತಿರೋ ರಿಯಲ್ ನಟಿ ಇವರೇ; ರಮ್ಯಾಗೆ ಏನೆಲ್ಲಾ ಕ್ರೇಜ್ ಇದೆ?

By ಎಸ್ ಸುಮಂತ್

ಮೋಹಕತಾರೆ ರಮ್ಯಾ ಕೆಲವು ವರ್ಷ ಸಿನಿಮಾಗಳಿಂದ ದೂರವಿದ್ದರೂ ಕ್ರೇಜ್ ಏನೂ ಕಮ್ಮಿಯಾಗಿಲ್ಲ. ಅವರು ಆದಷ್ಟು ಬೇಗ ಸಿನಿಮಾ ನಟನೆಗೆ ಕಮ್ ಬ್ಯಾಕ್ ಆಗಲಿ ಅಂತಾನೇ ಎಲ್ಲರೂ ಬಯಸುತ್ತಿದ್ದಾರೆ. 80ರ ದಶಕದಲ್ಲಿ ಇಡೀ ಚಿತ್ರರಂಗದಲ್ಲಿಯೇ ಬಹು ಬೇಡಿಕೆ ಇದ್ದಂತ ನಟಿ. ಈಗಲೂ ಅಷ್ಟೇ ಬೇಡಿಕೆ ಇದೆ. ನಟಿ ರಮ್ಯಾ ಅವರಿಗೆ ಇಂಡಸ್ಟ್ರಿಯಲ್ಲಿ ಅಷ್ಟು ಬೇಡಿಕೆಯಿದ್ದರೂ ಸಿನಿಮಾ ವಿಚಾರದಲ್ಲಿ ಬೇಸರ ಮೂಡಿಸಿದ್ದರು. ವಯಕ್ತಿಕ ವಿಚಾರದಲ್ಲಿ ಬಹಳಷ್ಟು ಸ್ಪೂರ್ತಿಯಾಗಿದ್ದಾರೆ. ಅವರು ಮಾಡುವ ಸಾಮಾಜಿಕ ಕಾರ್ಯಗಳು ಮಾನವರಾದ ನಮಗೆ ಸ್ಪೂರ್ತಿಯಾಗಲೇಬೇಕು. ಅದೇನಂತ ಹೇಳ್ತೀವಿ ಮುಂದೆ ಓದಿ.

ನಟಿ ರಮ್ಯಾ ಲಕ್ಕಿ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಅದರಲ್ಲಿ ಯಶ್ ನಾಯಕ ನಟ. ಲಕ್ಕಿ ಸಿನಿಮಾದಲ್ಲಿ ಹಾಡೊಂದು ಇದೆ. ನಾನೇನು ಮಾಡಲಿ ಸ್ವಾಮಿ ನಮ್ ಹುಡುಗಿ ನಾಯಿ ಪ್ರೇಮಿ ಅಂತ. ಅದು ರಮ್ಯಾ ಅವರಿಗೆ ಹೇಳಿ ಮಾಡಿಸಿದಂತೆ ಇದೆ. ರಮ್ಯಾ ಸಿಕ್ಕಾಪಟ್ಟೆ ಶ್ವಾನದ ಪ್ರೇಮಿ. ಅವರ ಸೋಷಿಯಲ್ ಮೀಡಿಯಾ ನೋಡಿದ್ರೇನೆ ಅರ್ಥವಾಗಿ ಬಿಡುತ್ತದೆ. ನಾಯಿ ಫೋಟೋಗಳೇ ತುಂಬಿ ತುಳುಕುತ್ತಿವೆ. ಬರೀ ಶ್ವಾನ ಪ್ರೇಮಿ ಮಾತ್ರವಲ್ಲ, ಡಾಗ್ ಕ್ರೇಜ್ ಮಾತ್ರ ಹೊಂದಿರೊದಲ್ಲ, ಅದನ್ನು ಮೀರಿ ಅವರಿಗಿರುವ ಕ್ರೇಜ್ ನಮಗೂ ಬರಲೇಬೇಕು.

Kannada actress Ramya aka Divya Spandana Crazy Life And Nature Love

ಪರಿಸರ ಅನ್ನೋದು ಮಾನವನ ಬದುಕಿಗೆ ಬಹಳ ಮುಖ್ಯ. ಒಂದೊಂದು ಕಾಲದಲ್ಲಿ ಪ್ರಕೃತಿ ತನ್ನ ಸೌಂದರ್ಯವನ್ನ ಬದಲಾಯಿಸಿಕೊಳ್ಳುತ್ತಾ ಇರುತ್ತದೆ. ಈಗ ವಸಂತ ಕಾಲ ಎಲ್ಲೆಲ್ಲೂ ಹಸಿರು ಚಿಗುರು ನಮ್ಮ ಕಣ್ಮನ ಸೆಳೆಯುತ್ತದೆ. ರಮ್ಯಾ ಅವರಿಗೂ ಪ್ರಕೃತಿ ಸೌಂದರ್ಯವೆಂದರೆ ಬಲು ಇಷ್ಟ. ಯಾವ ದೇಶಕ್ಕೆ ಹೋಗಲಿ ಅಲ್ಲಿ ಪ್ರಕೃತಿ ಬದಲಾವಣೆಯ ಫೋಟೋಗಳನ್ನ ತೆಗೆಯುತ್ತಾರೆ. ಪ್ರಾಣಿಗಳು ಕಣ್ಣಿಗೆ ಕಂಡರೆ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಪ್ರಕೃತಿಯ ಮಡಿಲಲ್ಲಿ ವಾವ್ ಎನಿಸುವಂತ ದೃಶ್ಯಗಳು ಕಂಡರೆ ಆ ಫೋಟೋ, ವಿಡಿಯೋ ಕ್ಲಿಕ್ ಮಾಡಿ ಹಾಕುತ್ತಾರೆ. ಇದು ತೋರಿಸುವುದು ಏನಂದ್ರೆ ಪ್ರಕೃತಿ ಮೇಲಿರುವ ಅವರ ಪ್ರೀತಿಯನ್ನು ತೋರಿಸುತ್ತದೆ.

ಅಂದ ಹಾಗೇ ಸಾಕಷ್ಟು ನಟಿಯರನ್ನು ನಾವೂ ನೋಡಿದ್ದೇವೆ. ಶೂಟಿಂಗ್, ಇಲ್ಲವಾದಲ್ಲಿ ಟ್ರಿಪ್, ರೀಲ್ಸ್, ಎಂಜಾಯ್ಮೆಂಟ್. ಆದರೆ ಈ ವಿಚಾರದಲ್ಲಿ ರಮ್ಯಾ ಅದೆಷ್ಟು ವಿಭಿನ್ನವಾಗಿ ನಿಲ್ಲುತ್ತಾರೆ ಅನ್ನೋದನ್ನ ಸುಮ್ಮನೆ ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ. ಯಾಕಂದ್ರೆ ರಮ್ಯಾ ಅವರಿಗೆ ಸಾಮಾನ್ಯವಾಗಿ ಹೆಚ್ಚು ಜನಕ್ಕೆ ಇಷ್ಟವಾಗದೆ ಇರುವ ಅದರಲ್ಲೂ ಸಿನಿಮಾ ಇಂಡಸ್ಟ್ರಿಯಲ್ಲಿರುವವರಿಗೆ ಇಷ್ಟವಾಗದೆ ಇರುವ ವಾತಾವರಣವನ್ನು ಎಂಜಾಯ್ ಮಾಡುತ್ತಾರೆ. ಅಂದ್ರೆ ಅಲ್ಲಿ ಶಾಂತತೆ ಇರಬೇಕು, ವಿಚಾರಧಾರೆ ಇರಬೇಕು. ಅಂಥದ್ದೊಂದು ಕಾರ್ಯಕ್ರಮದಲ್ಲಿ ರಮ್ಯಾ ಅವರು ಇಂದು ಹಾಜರಿಯಾಗಿದ್ದರು. ಅದುವೇ ಆರ್ಟ್ ಎಕ್ಸಿಬಿಷನ್.

ಅಲ್ಲಿ ರಮ್ಯಾ ಪ್ರಮೋಷನ್‌ಗಾಗಿ ಹೋಗಿ, ಅಲ್ಲಿನ ಕಲರ್ ಫುಲ್ ಮನಸ್ಸುಗಳ ಜೊತೆಗೆ ಬೆರೆತು, ಒಂದಷ್ಟು ವಿಚಾರಗಳನ್ನ ಚರ್ಚಿಸುತ್ತಾ, ಎಂಜಾಯ್ ಮಾಡಿದ್ದಾರೆ. ರಮ್ಯಾ ಅವರೇ ಹಂಚಿಕೊಂಡಿರುವ ವಿಡಿಯೋದಲ್ಲಿ, ಅವರ ನಗು ಕಾಣಿಸಿದೆ. ಅದನ್ನ ಗಮನಿಸಿದರೆ ಸಾಕು. ಆ ಕಾರ್ಯಕ್ರಮವನ್ನು ರಮ್ಯಾ ಅವರು ಎಷ್ಟರಮಟ್ಟಿಗೆ ಎಂಜಾಯ್ ಮಾಡಿದ್ದಾರೆ ಅನ್ನೋದು ಅರ್ಥವಾಗುತ್ತದೆ.

Kannada actress Ramya aka Divya Spandana Crazy Life And Nature Love

ಹೀಗೆ ಪ್ರಕೃತಿ ಬಗ್ಗೆ ಅವರಿಗಿರುವ ಕ್ರೇಜ್ ನಮಗೂ ಸ್ಪೂರ್ತಿಯಾದಾಗ ನೆಲದ ಮೇಲೆ ಬಿದ್ದ ಹೂ ಕೂಡ ಚೆಂದವಾಗಿ ಕಾಣಿಸುತ್ತದೆ. ಮರ ಗಿಡಗಳನ್ನು ಬೆಳೆಸುವ ಮನಸ್ಸಾಗುತ್ತದೆ. ಪ್ರಕೃತಿ ಕೂಡ ನಮ್ಮ ಜೊತೆಗೆ ಮಾತನಾಡಿದಂತೆ ಆಗುತ್ತದೆ. ಶ್ವಾನದ ಜೊತೆಗೆ ರಮ್ಯಾ ಅವರನ್ನು ಬಹಳಷ್ಟು ಆತ್ಮೀಯತೆಯನ್ನು ಹೊಂದಿದ್ದಾರೆ. ಅವರ ಸೋಷಿಯಲ್ ಮೀಡಿಯಾದಲ್ಲಿ ಶ್ವಾನದ್ದೇ ಕಾರುಬಾರು.

More from Filmibeat

English summary
Kannada actress Ramya aka Divya Spandana Crazy Life And Nature Love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X