ಹುಟ್ಟೂರಿನಲ್ಲಿ ರೀಷ್ಮಾ ನಾಣಯ್ಯ; ಕೊಡವ ಸೀರೆಯಲ್ಲಿ 'ಮಚ್ ಲಕ್ಷ್ಮೀ' ಮಿಂಚಿಂಗ್
ರೀಷ್ಮಾ ನಾಣಯ್ಯ ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆಗೆ ಮಿಂಚುತ್ತಾ ಇದ್ದಾರೆ. ರೀಷ್ಮಾ ನಾಣಯ್ಯ ಮೂಲತಃ ಕೊಡಗಿನ ಬೆಡಗಿ. ಆದರೆ, ಬೆಳೆದದ್ದು, ಓದಿದ್ದು, ಇರೋದು ಎಲ್ಲವೂ ಬೆಂಗಳೂರಿನಲ್ಲಿ. ಆದರೂ ಆಗಾಗ ಹುಟ್ಟೂರು ಅವರನ್ನು ಸೆಳೆಯುತ್ತಲೇ ಇರುತ್ತೆ. ರೀಷ್ಮಾ ನಾಣಯ್ಯ ಸದ್ಯ ತಮ್ಮ ಊರಿನಲ್ಲಿ ಬೀಡು ಬಿಟ್ಟಿದ್ದಾರೆ.
ಕೊಡಗಿನ ಬೆಡಗಿಯಾಗಿ ಗಮನ ಸೆಳೆಯುತ್ತಿದ್ದಾರೆ. ಎಷ್ಟೇ ದೂರ ಬಂದರು ಊರಿನ ನಂಟು ಬಿಡಲಾರದು ಎಂಬ ಮಾತಿದೆ. ಹಾಗೆ ಹುಟ್ಟೂರಿನ ಸಂಸ್ಕೃತಿಯನ್ನು ಮರೆಯುವಂತಿಲ್ಲ. ಇಷ್ಟಪಟ್ಟೆ ಅದನ್ನೆಲ್ಲ ಫಾಲೋ ಮಾಡ್ತಾರೆ. ರೀಷ್ಮಾ ನಾಣಯ್ಯ ಕೂಡ ಊರಿಗೆ ಹೋಗಿರೋದು. ಅಲ್ಲದೆ ಅಲ್ಲಿನ ಬಹುಮುಖ್ಯವಾದ ಸಂಪ್ರದಾಯವನ್ನು ಹೊತ್ತು ಮೆರೆದಿದ್ದಾರೆ.

ಹೌದು, ರೀಷ್ಮಾ ನಾಣಯ್ಯ ಸದ್ಯ ಮಡಿಕೇರಿ ಲೈಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಮೂಲತಃ ಕೊಡಗಿನವರೇ ಆದ ಕಾರಣ ಅಲ್ಲಿನ ಶೈಲಿಯ ಸೀರೆಯನ್ನೇ ಧರಿಸಿದ್ದಾರೆ. ಎಷ್ಟೇ ದೂರವಿದ್ದರೂ ಕೆಲವೊಂದು ಕಾರ್ಯಕ್ರಮಗಳಿಗಾದರೂ ಊರು ಸೇರಬೇಕಾಗುತ್ತದೆ. ಸಂಬಂಧಿಕರ ಮದುವೆಗೋ, ಸ್ನೇಹಿತೆಯರ ಒಡನಾಟಕ್ಕೋ ಹುಟ್ಟಿದ ಊರಿನ ಕಡೆಗೆ ಪಯಣ ಬೆಳೆಸಬೇಕಾಗುತ್ತದೆ.
ಕೊಡವ ಸಂಪ್ರದಾಯದಂತೆ ಸೀರೆಯುಟ್ಟು ಕಂಗೊಳಿಸಿದ್ದಾರೆ. ಕೊಡವ ಸಂಪ್ರದಾಯದಂತೆ ಸೀರೆ ಉಡುವುದೇ ಚೆಂದ. ರೀಷ್ಮಾ ನಾಣಯ್ಯ ಮಾಮೂಲಿಗಿಂತ ಈ ಸೀರೆಗೆ ಹೆಚ್ಚು ಅಲಂಕಾರ ಬೇರೆ ಮಾಡಿಕೊಂಡಿದ್ದಾರೆ. ಹೀಗಿದ್ದಾಗ ಮಚ್ ಲಕ್ಷ್ಮೀ ಬ್ಯೂಟಿ ಇನ್ನಷ್ಟು ಜಾಸ್ತಿಯಾಗದೇ ಇರುತ್ತದೆಯೇ.
ರೀಷ್ಮಾ ನಾಣಯ್ಯ ಸದ್ಯ ಹಂಚಿಕೊಂಡಿರುವ ಫೋಟೋದಲ್ಲಿ ಮೈಸೂರ್ ಸಿಲ್ಕ್ ಸೀರೆಯುಟ್ಟಿರುವುದು ಕಾಣಿಸುತ್ತಿದೆ. ಅದರ ಡಿಸೈನ್, ಅದರ ಲುಕ್ ನೋಡಿದಾಗ ಮೈಸೂರ್ ಸಿಲ್ಕ್ ಸೀರೆಯಂತೆಯೇ ಕಾಣಿಸುತ್ತಿದೆ. ರೀಷ್ಮಾ ನಾಣಯ್ಯ ಧರಿಸುವ ಬಟ್ಟೆಗಳಿಗೆ, ಮಾಡುವ ಮೇಕಪ್‌ಗೆ ಹೆಚ್ಚಿನ ಒತ್ತು ನೀಡುತ್ತಾರೆ. ಸೌಂದರ್ಯಕ್ಕೆ ಸಂಬಂಧಿಸಿದ ಪ್ರತಿಯೊಂದನ್ನು ಗಮನವಿಟ್ಟು ಫಾಲೋ ಮಾಡ್ತಾರೆ. ಸೀರೆಗಳ ವಿಚಾರದಲ್ಲೂ ಅಷ್ಟೇ. ಅವರ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸೀರೆಯ ಫೋಟೋಗಳನ್ನ ನೋಡಿದರೇನೆ ಸುಲಭವಾಗಿ ಸೀರೆಗಳ ವಿಚಾರದಲ್ಲೂ ಒಳ್ಳೆ ಟೇಸ್ಟ್ ಇದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬಹುದು. ಈಗ ಹಾಕಿರುವ ಮೈಸೂರ್ ಸಿಲ್ಕ್ ಸೀರೆ ಕೂಡ ರೀಷ್ಮಾ ಅವರ ಅಂದವನ್ನ ಹೆಚ್ಚಿಸಿದೆ. ಸೀರೆಯ ಕಲರ್ ಕೂಡ ಸಖತ್ತಾಗಿದೆ ಅಂತಾನೆ ಸೀರೆ ಪ್ರಿಯರು ಕಮೆಂಟ್ ಹಾಕ್ತಾ ಇದ್ದಾರೆ.
ರೀಷ್ಮಾ ನಾಣಯ್ಯ ಪರ್ಪಲ್ ಕಲರ್ ಇರುವ ಸೀರೆಯನ್ನ ಹಾಕಿದ್ದಾರೆ. ಅದರಲ್ಲಿ ಗೋಲ್ಡನ್ ಕಲರ್ ಬಾರ್ಡರ್ ಕೂಡ ಇದೆ. ಬಾಕ್ಸ್ ಟೈಪ್ ಡಿಸೈನ್ ಮುಂಭಾಗಕ್ಕೆ ಬರುವಂತೆ ಸೀರೆಯನ್ನ ಉಟ್ಟಿದ್ದು, ಅದು, ಪ್ಲೈನ್ ಅಂಡ್ ಡಿಸೈನ್ ಎಂಬಂತೆ ಕಾಣಿಸುತ್ತಿದೆ. ಈ ಸೀರೆಗೆ ಮ್ಯಾಚ್ ಆಗುವಂತೆ ಮೇಕಪ್ ಕೂಡ ಮಾಡಿಕೊಂಡಿದ್ದಾರೆ. ಸೆರಗನ್ನ ಪಿನ್ ಮಾಡಿರುವುದು ಕೂಡ ಚೆನ್ನಾಗಿ ಕಾಣಿಸುವಂತ ಪಿನ್ ಯೂಸ್ ಮಾಡಿದ್ದಾರೆ. ಕೈಗೆ ಎರಡು ಡಿಸೈನ್ ಬಳೆಗಳನ್ನ ಹಾಕಿದ್ದಾರೆ. ನೆಕ್ಲೆಸ್ ಅಂಡ್ ಕಿವಿಯೋಲೆಯ ಸೆಟ್ ಅನ್ನ ಬಳಸಿದ್ದಾರೆ. ಅದು ಬಿಗ್ ಸೈಜ್‌ನಲ್ಲಿ ಇರುವ ಚೋಕರ್ ನೆಕ್ಲೇಸ್ ಹಾಕಿದ್ದಾರೆ. ಇದು ಕಂಪ್ಲೀಟ್ ಗೋಲ್ಡನ್ ಕಲರ್‌ನಲ್ಲಿದ್ದು, ಸೆಂಟರ್‌ನಲ್ಲಿ ಲಕ್ಷ್ಮೀ ದೇವಿಯ ಪೆಂಡೆಂಟ್ ಕೂಡ ಅದರಲ್ಲಿದೆ.
ಇನ್ನು ಕಿವಿಗೆ ಒಂದೇ ಕಲರ್ ಅಂದ್ರೆ ಗೋಲ್ಡನ್ ಕಲರ್ ಇರುವ ದೊಡ್ಡ ಜುಮಕಿಯನ್ನ ಹಾಕಿದ್ದಾರೆ. ಫ್ರೀ ಹೇರ್ ಬಿಟ್ಟಿದ್ದು, ಅಂದಕ್ಕೆ ಮತ್ತೊಂದು ಹೆಸರೇ ರೀಷ್ಮಾ ನಾಣಯ್ಯ ಎಂಬಷ್ಟು ಮುದ್ದಾಗಿ ಕಾಣಿಸ್ತಾ ಇದ್ಧಾರೆ. ಸಿಕ್ಕಾಪಟ್ಟೆ ಫೋಟೋಶೂಟ್ ಮಾಡಿಸುವ ರೀಷ್ಮಾ ನಾಣಯ್ಯ ಮಾಡರ್ನ್ ಡ್ರೆಸ್ ಹಾಗೂ ಟ್ರೆಡಿಷನಲ್ ಡ್ರೆಸ್ ಎರಡರಲ್ಲೂ ಮುದ್ದಾಗಿ ಕಾಣಿಸ್ತಾರೆ.


Click it and Unblock the Notifications











