ಕೈಯಲ್ಲಿ ಬಿಯರ್ ಗ್ಲಾಸ್.. ಟೂ ಪೀಸ್ ತೊಟ್ಟು ಕನ್ನಡ ನಟಿ ಫುಲ್ ಬಿಂದಾಸ್
ಇರೋದು ಒಂದೇ ಜೀವನ. ಎಷ್ಟು ಅಂತ ದುಡಿಯೋದು. ಸಮಯ ಸಿಕ್ಕಾಗಲೆಲ್ಲಾ ಎಂಜಾಯ್ ಮಾಡಬೇಕು. ತಾರೆಯರು ಸಿನಿಮಾಗಳಿಂದ ಬಿಡುವು ಸಿಕ್ಕರೆ ಸಾಕು ವಿದೇಶಗಳ ಪ್ರವಾಸಕ್ಕೆ ಮುಂದಾಗುತ್ತಾರೆ. ಕಡಲ ತಡಿಯ ರೆಸಾರ್ಟ್‌ಗಳಲ್ಲಿ ಬೀಡು ಬಿಟ್ಟು ವಾರದ ಮಟ್ಟಿಗೆ ಸಖತ್ ಎಂಜಾಯ್ ಮಾಡಿ ಬರುತ್ತಾರೆ.
ಕೆಲ ನಟಿಯರು ತೆರೆಮೇಲೆ ಅಷ್ಟೇನು ಸ್ಕಿನ್ ಶೋ ಮಾಡದಿದ್ದರೂ ಪರ್ಸನಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಬಿಂದಾಸ್ ಆಗಿ ಇರ್ತಾರೆ. ಪ್ರವಾಸಕ್ಕೆ ಹೋದಾಗ ರೆಸಾರ್ಟ್, ಬೀಚ್‌ಗಳ ಬಳಿ ಈಜುಡುಗೆಯಲ್ಲಿ ಪೋಸ್ ಕೊಡುತ್ತಾರೆ. ಆ ಫೋಟೊ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಪಡ್ಡೆ ಹುಡುಗರ ನಿದ್ದೆ ಕದಿಯುತ್ತಾರೆ.

ಸದ್ಯ ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಪ್ರವಾಸಿಗರ ಪಾಲಿನ ಭೂಲೋಕದ ಸ್ವರ್ಗದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಶ್ರದ್ಧಾ ಶ್ರೀನಾಥ್ ಉಳಿದುಕೊಂಡಿದ್ದರು. ಅಲ್ಲಿ ರೆಸಾರ್ಟ್‌ನಲ್ಲಿ ಸ್ಟೇ ಮಾಡಿರುವ ಬೆಡಗಿ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಈಜುಡುಗೆಯಲ್ಲಿ ಬಿಂದಾಸ್ ಪೋಸ್ ನೀಡಿ ಆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೊನಾಕಿನಿ ಮಾತ್ರವಲ್ಲ ಟೂ ಪೀಸ್ ತೊಟ್ಟು ಶ್ರದ್ಧಾ ಬಿಸಿಯೇರಿಸಿದ್ದಾರೆ. ರೆಸಾರ್ಟ್‌ನಲ್ಲಿ ಜೂಸ್ ಮಾತ್ರವಲ್ಲ, ಬಿಯರ್ ಹೀರುತ್ತಾ ಶ್ರದ್ಧಾ ಜಾಲಿ ಮಾಡುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಒಂದಷ್ಟು ಫೋಟೊಗಳನ್ನು ಆಕೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಪಡ್ಡೆ ಹುಡುಗರು ಕಾಮೆಂಟ್ ಮಾಡಿ ಶ್ರದ್ಧಾ ಸಖತ್ ಹಾಟ್ ಮಗಾ ಎನ್ನುತ್ತಿದ್ದಾರೆ.
ಕಾಶ್ಮೀರದಲ್ಲಿ ಹುಟ್ಟಿ ಬೆಳೆದ ಶ್ರದ್ಧಾ ಕಾಲೇಜು ದಿನಗಳಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ತಂದೆ ಆರ್ಮಿ ಆಫೀಸರ್. ಅಚಾನಕ್ ಆಗಿ ಚಿತ್ರರಂಗಕ್ಕೆ ಬಂದಿದ್ದ ಚೆಲುವೆಗೆ 'ಯೂಟರ್ನ್' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಪವನ್ ಕುಮಾರ್ ನಿರ್ದೇಶನದ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಸಂಚಲನ ಸೃಷ್ಟಿಸಿತ್ತು. ಶ್ರದ್ಧಾ ಮರ ಸುತ್ತುವ ನಾಯಕಿ ಪಾತ್ರಗಳಿಗಿಂತ ನಟನೆಗೆ ಅವಕಾಶ ಇರುವ ಪಾತ್ರಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ.
'ಊರ್ವಿ', 'ರಿಚ್ಚಿ', 'ಆಪರೇಷನ್ ಅಲಮೇಲಮ್ಮ', 'ಜೆರ್ಸಿ', 'ವಿಕ್ರಂ ವೇದ', 'ನೇರ್ಕೊಂಡ ಪಾರ್ವೈ' ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ಶ್ರದ್ಧಾ ನಟಿಸಿದ್ದಾರೆ. 'ಡಿಯರ್ ವಿಕ್ರಂ' ಬಳಿಕ ಕನ್ನಡದಲ್ಲಿ ಯಾವುದೇ ಸಿನಿಮಾ ನಟಿಸುತ್ತಿಲ್ಲ. ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಈ ವರ್ಷ ಶ್ರದ್ಧಾ ನಟಿಸಿದ 'ಡಾಕು ಮಹಾರಾಜ್' ಹಾಗೂ 'ಕಲಿಯುಗಂ' ಎಂಬ ಸಿನಿಮಾಗಳು ತೆರೆಗೆ ಬಂದಿದ್ದವು. ಸದ್ಯ 'ಆರ್ಯನ್' ಎಂಬ ತಮಿಳು ಸಿನಿಮಾವೊಂದು ಆಕೆಯ ಕೈಯಲ್ಲಿದೆ.
ಇದೀಗ ಶ್ರದ್ಧಾ ಮಾಲ್ಡೀವ್ಸ್ ವಕೇಶನ್ ಫೋಟೊಗಳು ಸಖತ್ ವೈರಲ್ ಆಗುತ್ತಿದೆ. ಯೂಟರ್ನ್ ಬೆಡಗಿಯನ್ನು ಈ ಅವತಾರದಲ್ಲಿ ನೋಡುತ್ತೇವೆ ಎಂದುಕೊಂಡಿರಲಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಕಳೆದ ವಾರ ಶ್ರದ್ಧಾ ನಟಿಸಿದ ತಮಿಳು ಸಿನಿಮಾ 'ಕಲಿಯುಗಂ' ಓಟಿಟಿಗೆ ಬಂದಿತ್ತು. ಸಿನಿರಸಿಕರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಆಕೆ ಲೀಡ್ ರೋಲ್‌ನಲ್ಲಿ ಮಿಂಚಿದ್ದಾರೆ. ಕನ್ನಡ ನಟ ಕಿಶೋರ್ ಸಾಥ್ ಸಿಕ್ಕಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಶ್ರದ್ಧಾ ಆಗಾಗ್ಗೆ ಫೋಟೊಶೂಟ್ ಮಾಡಿ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಕಳೆದ ವರ್ಷ ಥೈಲ್ಯಾಂಡ್ ಪ್ರವಾಸದಲ್ಲಿ ಕಪ್ಪು ಬಣ್ಣದ ಮೊನಾಕಿನಿ ಧರಿಸಿ ಆಕೆ ಮಿಂಚಿದ್ದರು. ಆದರೆ ತೆರೆಮೇಲೆ ಈವರೆಗೆ ಅಷ್ಟೇನು ಬೋಲ್ಡ್ ಆಗಿ ಶ್ರದ್ಧಾ ದರ್ಶನ ಕೊಟ್ಟಿಲ್ಲ. ಮುಂದೆ ನಿರ್ಮಾಪಕರು, ನಿರ್ದೇಶಕರು ಇಂತಹ ಬೇಡಿಕೆ ಇಟ್ಟರೂ ಅಚ್ಚರಿಪಡಬೇಕಿಲ್ಲ.


Click it and Unblock the Notifications











