ಉಪೇಂದ್ರ ಪುತ್ರ ಆಯುಶ್ ಬಳಸೋ ಬೈಕ್ ಯಾವುದು? ಅದರ ಬೆಲೆ ಏನು ಗೊತ್ತಾ..?
ಉಪೇಂದ್ರ ಕನ್ನಡ ಇಂಡಸ್ಟ್ರಿಯ ವಿಭಿನ್ನ ಕ್ರಿಯೇಟಿವ್ ಡೈರೆಕ್ಟರ್. ಅವರು ನಿರ್ದೇಶನ ಮಾಡುವ ಸಿನಿಮಾ, ಯೋಚಿಸುವ ಒಂದೊಂದು ರೀತಿ ಬೇರೆ ಯಾರಿಗೂ ಬರುವುದಿಲ್ಲ. ಅವರು ಮುಂದಿನ ಭವಿಷ್ಯವನ್ನೇ ಕಣ್ಣೆದುರು ತಂದಿಡುವ ತಾಕತ್ತು ಇರೋದು ಇವರೇನೆ. ಹಾಗೇ ಯಾರೂ ಯೋಚಿಸದ ರೀತಿಯಲ್ಲಿ ಯೋಚಿಸುತ್ತಾರೆ. ಅದೇ ರೀತಿ ಅವರ ಮಗ ಕೂಡ. ಲೈಫ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜಿಯಾಗಿದ್ದಾರೆ. ಆಯುಷ್ ಉಪೇಂದ್ರ ಅವರ ಸೋಶಿಯಲ್ ಮೀಡಿಯಾದೊಳಗೆ ಒಮ್ಮೆ ಹೋಗಿ ಬಂದರೇ ಸಾಕು. ಆಯುಷ್‌ಗೆ ಇರುವ ಬೈಕ್ ಕ್ರೇಜ್ ಎಂತಹದ್ದು ಅನ್ನೋದು ಗೊತ್ತಾಗುತ್ತೆ.
ಉಪೇಂದ್ರ ಹಾಗೂ ಪ್ರಿಯಾಂಕಾ ಇಬ್ಬರು ಇಂಡಸ್ಟ್ರಿನಲ್ಲಿಯೇ ಇದ್ದರೂ ಕೂಡ ಮಕ್ಕಳಿನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಆಯುಷ್ ಇಂಡಸ್ಟ್ರಿಗೆ ಎಂಟ್ರಿ ಕೊಡುವುದಕ್ಕೆ ತಯಾರಿ ನಡೆಸುತ್ತಿದ್ದಾರೆ. ಇನ್ನು ಮಗಳು ಐಶ್ವರ್ಯಾ ಸ್ವಲ್ಪ ನಾಚಿಕೆ ಸ್ವಭಾವ. ಆಯುಷ್ ಮಾತಾಡಿದಂತೆ ಐಶ್ವರ್ಯಾ ಓಪನ್ ಅಪ್ ಆಗಲ್ಲ ಅನಿಸುತ್ತಿದೆ. ಆದರೆ ಆಯುಷ್‌ಗೆ ತಂಗಿ ಮೇಲೆ ಸಿಕ್ಕಾಪಟ್ಟೆ ಕಾಳಜಿ ಇದೆ. ಇಬ್ಬರು ಮಕ್ಕಳನ್ನ ಎಷ್ಟು ಸ್ಟ್ರಿಕ್ಟ್ ಆಗಿ ಬೆಳೆಸಿದ್ದಾರೋ ಅಷ್ಟೇ ಅವರದ್ದೇ ಲೈಫ್ ಲೀಡ್ ಮಾಡೋದಕ್ಕೂ ಅವಕಾಶ ನೀಡಿದ್ದಾರೆ. ಅವರ ಲೈಫ್ ಸ್ಟೈಲ್ ನೋಡಿದ್ರೆ ಇದೆಲ್ಲಾ ಅರ್ಥವಾಗುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಅಂದರೆ ಆಯುಷ್‌ಗಿರುವ ಬೈಕ್ ಕ್ರೇಜ್. ಆಯುಶ್ ಬಳಸುತ್ತಿರುವ ಬೈಕ್ ದುಬಾರಿ ಬೈಕ್‌ನ ಹೆಸರು Ducati.

ಈ ಬೈಕ್ ಸಿಕ್ಕಾಪಟ್ಟೆ ಆಕರ್ಷಣೀಯವಾಗಿದೆ. ಸಿಂಗಲ್ ಸೀಟರ್ ಬೈಕ್. ದೊಡ್ಡ ದೊಡ್ಡ ಟೈಯರ್. ರೋಡ್ ಮೇಲೆ ಓಡಿಸ್ತಾ ಇದ್ರೆ ವಾವ್ ಎಂದು ಎಲ್ಲರೂ ತಿರುಗಿ ನೋಡುವಂತ ಬೈಕ್ ಇದು. ಇದರ ಬೆಲೆ ಬಂದು 17.9 ಲಕ್ಷ ರೂಪಾಯಿ. ಇದರ ಪವರ್ 159.5 bhp ಇದೆ. ಹಾಗೇ ಇದರ ತೂಕ ಬಂದು 239 ಕೆಜಿ. ಬೈಕ್ ರೇಸ್, ಬೈಕ್ ರೈಡ್ ಹೋಗುವವರಿಗೆ ಈ ಬೈಕ್ ತುಂಬಾ ಕಂಫರ್ಟೆಬಲ್. ಈ ಬೈಕ್ ಓಡಿಸುವುದಕ್ಕೆ ಅಷ್ಟೇ ಖುಷಿಯನ್ನು ನೀಡುತ್ತದೆ. ಇದೇ ಥರದ ಬೈಕ್ ಅನ್ನೇ ಆಯುಷ್ ಉಪೇಂದ್ರ ತೆಗೆದುಕೊಂಡಿರುವುದು. ಅವರ ಬಳಿ ಬ್ಲಾಕ್ ಕಲರ್ ಬೈಕ್ ಇದೆ. ಇದರ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಬೈಕ್ ಮೇಲೆ ಆಯುಷ್ ಸಿಕ್ಕಾಪಟ್ಟೆ ಲವ್ ಅನ್ಸುತ್ತೆ. ಅವರ ಸೋಷಿಯಲ್ ಮೀಡಿಯಾ ಪ್ರೊಫೈಲ್ ನೋಡಿದರೇನೆ ಅದು ಅರ್ಥವಾಗುತ್ತದೆ. ಅಷ್ಟೇ ಅಲ್ಲ ಟ್ರಾವೆಲ್ ಪ್ರಿಯರು ಕೂಡ. ಅದರಲ್ಲೂ ಬೈಕ್‌ನಲ್ಲಿ ರೈಡ್‌ನಲ್ಲಿ ಆಸಕ್ತಿ ಹೊಂದಿರುವವರು ಆಯುಷ್. ಸ್ನೇಹಿತರ ಜೊತೆಗೂ ಆಗಾಗಾ ಬೈಕ್ ಸವಾರಿ ಮಾಡುತ್ತಾರೆ ಎಂಬುದಕ್ಕೆ ಅವರ ಸೋಷಿಯಲ್ ಮೀಡಿಯಾದಲ್ಲಿಯೇ ಸಾಕಷ್ಟು ಫೋಟೋಗಳಿದ್ದಾವೆ.
ಅಷ್ಟೇ ಅಲ್ಲ ಆಯುಷ್ ಲೈಫ್‌ನ ಅದ್ಭುತವಾಗಿ ಎಂಜಾಯ್ ಮಾಡುತ್ತಾರೆ. ರೆಸಾರ್ಟ್, ವೆಕೆಷನ್ ಅಂತ ಸಿಕ್ಕಾಪಟ್ಟೆ ಟ್ರಿಪ್ ಹೊಡೀತಾರೆ. ಈಗಷ್ಟೇ ಒಂದು ಸ್ಟೋರಿಯನ್ನ ಹಂಚಿಕೊಂಡಿದ್ದಾರೆ. ಮನೆಯ ಮುಂದೆ ನಿಂತಿರುವ ಮೂರು ಬೈಕ್ ಹಾಗೇ ಒಂದು ಜೀಪ್, ಒಂದು ಕಾರಿನ ವಿಡಿಯೋ ಮಾಡಿ ಹಾಕಿದ್ದಾರೆ. ಮನೆ ಮುಂದೆ ಅಷ್ಟೊಂದು ಕಾರು, ಬೈಕ್ ಗಳು ನಿಂತಿದ್ದರು ಕೂಡ ಆಯುಶ್ ಉಪೇಂದ್ರ ಅವರಿಗೆ ಸಿಕ್ಕಾಪಟ್ಟೆ ಇಷ್ಟ ಅಂದ್ರೆ ಅದು ದುಕಾಟಿ ಬೈಕ್. ಹೆಚ್ಚು ಅದೇ ಬೈಕ್ ಅನ್ನೇ ಓಡಿಸುವುದು. ಹೆಲ್ಮೆಟ್ ಹಾಕಿಕೊಂಡು ಸ್ಟೈಲ್ ಆಗಿ ಪೋಸ್ ಕೊಟ್ಟಿರುವ ಫೋಟೋಗಳು ಹೆಚ್ಚಾಗಿವೆ. ಲೈಫ್ ಕೂಲ್ ಅಂಡ್ ಗ್ರೇಟ್ ಅನ್ನೋ ರೀತಿ ತೆಗೆದುಕೊಂಡು ಹೋಗುತ್ತಿದ್ದಾರೆ. ಲೈಫ್ ನ ಸ್ವೀಟ್ ಆಗಿ ಎಂಜಾಯ್ ಮಾಡ್ತಾ ಇದಾರೆ.


Click it and Unblock the Notifications











