'ಕಾಂತಾರ' ಲೀಲಾಗಿದೆ ಸಿಕ್ಕಾಪಟ್ಟೆ ಕ್ರೇಜ್; ಲೈಫ್‌ ಅನ್ನು ಹೇಗೆಲ್ಲಾ ಎಂಜಾಯ್ ಮಾಡ್ತಾರೆ ಗೊತ್ತಾ...?

By ಎಸ್ ಸುಮಂತ್

ಸಪ್ತಮಿ ಗೌಡ ಸದ್ಯ ವಿಭಿನ್ನವಾದ ಪಾತ್ರಗಳಿಗೆ ಒತ್ತು ಕೊಡುತ್ತಿದ್ದಾರೆ. ಇತ್ತೀಚೆಗಷ್ಟೇ 'ದಿ ರೈಸ್ ಆಫ್ ಅಶೋಕ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲೂ ವಿಭಿನ್ನವಾದ ಪಾತ್ರವನ್ನು ಮಾಡಿದ್ದಾರೆ. 'ಕಾಂತಾರ' ಸಿನಿಮಾದಲ್ಲಿ ಲೀಲಾಳಾಗಿ ಹಳ್ಳಿ ಹುಡುಗಿ ಪಾತ್ರದ ಮೂಲಕ ಮನೆ ಮಾತಾಗಿದ್ದರು. ಆ ಪಾತ್ರ ಪ್ರೇಕ್ಷಕರ ಮನಗೆದ್ದಿತ್ತು. ಆ ಸಿನಿಮಾದ ಸಕ್ಸಸ್ ನಂತರ ಬೇರೆ ಬೇರೆ ಭಾಷೆಗಳಲ್ಲೂ ಸಿನಿಮಾ ಮಾಡುವುದಕ್ಕೆ ಶುರು ಮಾಡಿದರು. ನೋಡ ನೋಡುತ್ತಲೇ ಸಿಕ್ಕಾಪಟ್ಟೆ ಹೆಸರನ್ನು ಮಾಡಿದರು.

ಆದರೆ‌ ಸಪ್ತಮಿ ಗೌಡ ಯೋಚನೆ ಮಾಡುವ ರೀತಿ, ಲೈಫ್ ಅನ್ನು ಎಂಜಾಯ್ ಮಾಡುವ ರೀತಿಯೇ ವಿಭಿನ್ನ. ಅವರಿಗೆ ಇರುವ ಕ್ರೇಜ್ ನೋಡಿದರೇನೆ ವಾವ್ ಎನಿಸುತ್ತದೆ. ಈ ಹೊಸತನಗಳನ್ನು ಅನುಭವಿಸುವಂತ, ಎಕ್ಸ್ ಪಿರಿಮೆಂಟ್‌ಗಳನ್ನು ಮಾಡುವಂತ ಆಸೆ ಅವರಲ್ಲಿದೆ ಎಂಬುವುದು ಅವರ ಆಕ್ಟಿವಿಟಿ ನೋಡಿದಾಗಲೇ ಅರ್ಥವಾಗುತ್ತದೆ.

Kantara fame actress Sapthami Gowda lifestyle and crazy habits

ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಇತ್ತೀಚೆಗೆ ಅವರು ಮಾಡಿರುವ ಒಂದಷ್ಟು ಪೋಸ್ಟ್‌ಗಳು. ಕುದುರೆ ಸವಾರಿಯನ್ನು ಮಾಡಿರುವ ಪೋಸ್ಟ್ ಅನ್ನು ಹಾಕಿದ್ದಾರೆ. ಈ ರೀತಿಯ ಸವಾರಿ ಮಾಡಿರುವ ಪೋಸ್ಟ್ ಹಾಕಿರುವುದು ಇದೇ ಮೊದಲ ಸಲವಾಗಿದೆ. ಆ ವಿಡಿಯೋ ನೋಡಿದ್ರೆ ಕುದುರೆ ಸವಾರಿಯನ್ನು ಕಲಿಯುತ್ತಿರುವುದು ಸ್ಪಷ್ಟವಾದಂತೆ ಕಾಣಿಸುತ್ತಿದೆ. ಅದು ಬೆಂಗಳೂರಿನಲ್ಲಿ ಅಲ್ಲ, ಅಮೆರಿಕದಲ್ಲಿ ಕುದುರೆ ಸವಾರಿ ಮಾಡಿದ್ದಾರೆ ಎಂಬ ಊಹೆಯೂ ಇದೆ. ಯಾಕಂದ್ರೆ, ಅದರ ಜೊತೆಗೆ ಒಂದಷ್ಟು ಫೋಟೋಗಳನ್ನು ಟ್ಯಾಗ್ ಮಾಡಿದ್ದಾರೆ. ಅವರ ಆತ್ಮೀಯರ ಗ್ರ್ಯಾಜುಯೇಟ್ ಡೇ ಆಗಿದ್ದು, ಆ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದಾರೆ. ಹಾಗೇ ಸಪ್ತಮಿ ಅವರಿಗೂ ಪವರ್ ವುಮೆನ್ ಅವಾರ್ಡ್ ಕೂಡ ಸಿಕ್ಕಿದೆ. ಇದೆಲ್ಲಾ ಫೋಟೋ ಜೊತೆಗೆ ಒಂದೊಳ್ಳೆ ಪ್ರಕೃತಿ ಸೌಂದರ್ಯ ಎದ್ದು ಕಾಣುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕುದುರೆ ಸವಾರಿಯನ್ನಂತೂ ಸಖತ್ತಾಗಿ ಕಲಿಯುತ್ತಿದ್ದಾರೆ. ನಿಧಾನವಾಗಿ ಅಲ್ಲ ಫಾಸ್ಟ್ ಆಗಿನೇ ಓಡಿಸುತ್ತಿದ್ದಾರೆ.

ಇನ್ನು ಸಪ್ತಮಿ ಗೌಡಗೆ ಟ್ರಾವೆಲ್ ಮಾಡೋದು ತುಂಬಾ ಇಷ್ಟ ಅಂತ ಅವರ ಸೋಷಿಯಲ್ ಮೀಡಿಯಾ ನೋಡಿದರೇನೆ ಅರ್ಥವಾಗುತ್ತದೆ. ಅದರಲ್ಲೂ ಫಾರಿನ್ ಸುತ್ತಾಟದ ಫೋಟೋಗಳನ್ನೇ ಹೆಚ್ಚಾಗಿ ಹಂಚಿಕೊಳ್ಳುತ್ತಾ ಇರುತ್ತಾರೆ. ಅಲ್ಲಿನ ವಿಶೇಷ ರಸ್ತೆಗಳು, ಅಲ್ಲಿನ ವಿಶೇಷ ತಿನಿಸು, ಅಲ್ಲಿನ ಪ್ರಕೃತಿ ಹೀಗೆ ಕಣ್ಣಿಗೆ ಅಂದವಾಗಿ ಕಂಡಿದ್ದೆಲ್ಲವನ್ನು ಸೆರೆ ಹಿಡಿದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ.

ಇನ್ನು ಟ್ರಾವೆಲ್ ಮಾಡುವುದು ಇವರ ಕ್ರೇಜ್ ಲಿಸ್ಟ್‌ನಲ್ಲಿ ಸೇರಿಕೊಂಡಿದೆ. ಅಷ್ಟೇ ಅಲ್ಲ ಸಿಕ್ಕಾಪಟ್ಟೆ ಫೋಟೊಶೂಟ್ ಮಾಡಿಸುವ ಕ್ರೇಜ್ ಕೂಡ ಇಟ್ಟುಕೊಂಡಿದ್ದಾರೆ. ಹಬ್ಬಗಳಿಗೆ ಆಗಲಿ, ಏನಾದರು ಸ್ಪೆಷಲ್ ಡೇ ಇರಲಿ, ಅಥವಾ ಚೆಂದವಾಗಿ ರೆಡಿಯಾದಾಗ ಫೋಟೋಶೂಟ್ ಮಾಡಿಸುತ್ತಾ ಇರುತ್ತಾರೆ. ಅವರ ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಫೋಟೋಶೂಟ್ ಮಾಡಿಸಿದ ಫೋಟೋಗಳೇ ಕಾಣಿಸುತ್ತವೆ. ಅದರಲ್ಲೂ ಎಲ್ಲಾ ರೀತಿಯ ಡ್ರೆಸ್‌ನಲ್ಲೂ ಕಾಣಿಸಿದ್ದಾರೆ. ಮಾಡರ್ನ್‌ ಡ್ರೆಸ್‌ನಿಂದ ಹಿಡಿದು ಟ್ರೆಡಿಷನಲ್ ಡ್ರೆಸ್ ಕೂಡ ಹಾಕ್ತಾರೆ. ಎಲ್ಲಾ ರೀತಿಯ ಡ್ರೆಸ್‌ನಲ್ಲೂ ಚೆಂದವಾಗಿ ಕಾಣುವ ಸಪ್ತಮಿ ಗೌಡಗೆ ಮತ್ತೊಂದು ಕ್ರೇಜ್ ಇದೆ. ಅದೇ ಶ್ವಾನದ ಕ್ರೇಜ್.

Kantara fame actress Sapthami Gowda lifestyle and crazy habits

ಅವರ ಬಳಿಯೂ ಒಂದು ದೊಡ್ಡ ಶ್ವಾನವಿತ್ತು. ಅದಕ್ಕೆ ಸಿಂಬಾ ಎಂಬ ಹೆಸರನ್ನ ಇಟ್ಟಿದ್ದರು. ಹೋದಲ್ಲಿ ಬಂದಲ್ಲಿ ಅದು ಸಪ್ತಮಿ ಗೌಡ ಜೊತೆಗೆ ಇರ್ತಾ ಇತ್ತು. ಒಳ್ಳೆಯ ನಂಟನ್ನು ಹೊಂದಿದ್ದರು. ಆದರೆ ಆ ಸಿಂಬಾ ಈಗ ಅವರ ಜೊತೆಗಿಲ್ಲ. ಅದೊಂದು ಭಾವನಾತ್ಮಕ ಕನೆಕ್ಷನ್ ಸರಿ. ಯಾಕಂದ್ರೆ ಪ್ರಾಣಿಗಳಿಗೆ ಅದರಲ್ಲೂ ನಾಯಿಗೆ ಮಾತು ಬಾರದೆ ಹೋದರೂ ಪ್ರೀತಿ ತೋರಿಸುವುದು ಜಾಸ್ತಿ. ಅದೇ ರೀತಿ ಸಪ್ತಮಿ ಅವರ ಬಳಿ ಇದ್ದ ನಾಯಿ ಇತ್ತು ಅನ್ಸುತ್ತೆ. ಈಗ ಫಾರಿನ್‌ನಲ್ಲೂ ಎರಡು ನಾಯಿಗಳ ಜೊತೆಗೆ ನಿಂತು ಸಪ್ತಮಿ ಗೌಡ ಸಿಂಬಾ ನೆನಪಿನಲ್ಲಿಯೇ ಫೋಟೋ ತೆಗೆಸಿಕೊಂಡಿದ್ದಾರೆ.

More from Filmibeat

English summary
Kantara fame actress Sapthami Gowda lifestyle and crazy habits:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X