ಪಹಲ್ಗಾಮ್ ಘಟನೆ ಬಳಿಕ ಕಾಶ್ಮೀರದಲ್ಲೆಲ್ಲಾ ಓಡಾಡಿ ಬಂದ ಕಿರಣ್ ರಾಜ್ ; ಭಾರತ ಬಾವುಟ ಹಿಡಿದು ಮೆರೆದ ನಟ

By ಎಸ್ ಸುಮಂತ್

ಇತ್ತೀಚೆಗಷ್ಟೇ ಪಹಲ್ಗಾಮ್‌ನಲ್ಲಿ ಭಾರತೀಯರನ್ನ ಹುಡುಕಿ ಉಗ್ರರು ಕೊಂದಿದ್ದರು. ಈ ಉಗ್ರರ ಅಟ್ಟಹಾಸಕ್ಕೆ ಭಾರತದಿಂದ ತಕ್ಕ ಶಾಸ್ತಿ ಏನೋ ಆಗ್ತಾ ಇದೆ. ಆದರೆ ಹೋದ ಜೀವಗಳ ನೆನೆದು ಸಂಕಟದಲ್ಲಿ ಮುಳುಗಿವೆ ಅವರ ಕುಟುಂಬಗಳು. ಇದರ ನಡುವೆ ಕಾಶ್ಮೀರದ ಸೌಂದರ್ಯ ಸವಿದ ನಟ-ನಟಿಯರು ತಮ್ಮ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇದ್ದಾರೆ. ಅದರಲ್ಲೂ ತಾವಿದ್ದಾಗ ಏನಾದ್ರೂ ಇಂಥ ಘಟನೆ ನಡೆದಿದ್ದರೆ ಎಂಬ ಆತಂಕವೂ ಅವರ ಮನಸ್ಸಲ್ಲಿ ಬಂದಿದೆ.

ಇದೀಗ ನಟ ಕಿರಣ್ ರಾಜ್ ಕೂಡ ಕಾಶ್ಮೀರದ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಅಲ್ಲಿನ ಹಿಮದಲ್ಲಿ ಆಟವಾಡಿದ ವಿಡಿಯೋ, ಪೆಹಲ್ಗಾಮ್‌ ಸೌಂದರ್ಯವನ್ನು ತೋರಿಸುವ ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ. ಆ ವಿಡಿಯೋಗೆ ಕಾಶ್ಮೀರ ಅಂತ ಬರೆದು ನಮ್ಮ ಭಾರತದ ಬಾವುಟವನ್ನ ಹಾಕಿ ಅದರ ಜೊತೆಗೆ ಕವ್ ಸಿಂಬಲ್ ಒಂದನ್ನ ಹಾಕಿದ್ದಾರೆ. ಅಂದ್ರೆ ಎಲ್ಲರಿಗೂ ಅದು ಅರ್ಥವಾಗುವಂತ ಸಾಲು. ಕಾಶ್ಮೀರದ ಸೌಂದರ್ಯಾ ಹೀಗೆ ಉಳಿಯುತ್ತೆ. ನಮ್ಮ ಭಾರತದ ಸ್ಟ್ರಾಂಗ್ ಆಗಿದೆ. ಅದರ ಮೇಲೆ ನಮಗೆ ಲವ್ ಯಾವಾಗಲೂ ಇದ್ದೇ ಇರುತ್ತದೆ ಎಂದು ಹಾಕಿದ್ದಾರೆ.

Karna serial actor Kiran Raj went to Kashmir after Pahalgam incident

ಕಿರಣ್ ರಾಜ್ ವಿಡಿಯೋಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಎಲ್ಲಾ ಕಲಾವಿದರು, ಸಾಮಾನ್ಯ ಜನರು ಕಾಶ್ಮೀರ ಎಂದರೆ ಪ್ರಾಣ ಬಿಡ್ತಾ ಇದ್ರು. ಅದರಲ್ಲೂ ಕಾಶ್ಮೀರದಲ್ಲಿ ಶೂಟಿಂಗ್ ಮಾಡೋದಕ್ಕೆ ಹಾತೊರೆಯುತ್ತಿದ್ದರು. ಈಗ ಉಗ್ರರ ಅಟ್ಟಹಾಸದಿಂದ ಕಾಶ್ಮೀರಕ್ಕೆ ಹೋಗುವವರ ಸಂಖ್ಯೆಯು ಕಡಿಮೆಯಾಗಿದೆ. ಭಯವೂ ಜಾಸ್ತಿಯಾಗಿದೆ.

ಕಿರಣ್ ರಾಜ್ ಕಾಶ್ಮೀರದಲ್ಲಿ ಎಲ್ಲಾ ಕಡೆ ಓಡಾಡಿಕೊಂಡು ಬಂದಿದ್ದಾರೆ. ಅಲ್ಲಿ ಎಂಜಾಯ್ ಮಾಡಿದ ಕ್ಷಣವನ್ನ ಹಂಚಿಕೊಂಡಿದ್ದಾರೆ. ಇನ್ನು ಸಿನಿಮಾಗಳಲ್ಲಿ ನಟಿಸಿದ ಬಳಿಕ ಮತ್ತೆ ಸೀರಿಯಲ್ ಕಡೆಗೆ ಕಿರಣ್ ರಾಜ್ ಗಮನ ಕೊಟ್ಟಿದ್ದಾರೆ. ಜೀ ಕನ್ನಡದಲ್ಲಿ 'ಕರ್ಣ' ಎಂಬ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳ ದಿನಗಳ ನಂತರ ಮತ್ತೆ ಕಿರುತೆರೆಯ ನಾಯಕನಾಗಿದ್ದಾರೆ.

Karna serial actor Kiran Raj went to Kashmir after Pahalgam incident

ಈಗಾಗಲೇ ಕರ್ಣ ಹೆಸರು ಹಾಗೂ ಪ್ರೋಮೋ ನೋಡಿನೇ ನಿರೀಕ್ಷೆ ಹೆಚ್ಚಿದೆ. ಕಿರಣ್ ರಾಜ್ ಅವರನ್ನ ಕರ್ಣನಾಗಿ ನೋಡೋದಕ್ಕೆ ಅವರ ಫ್ಯಾನ್ಸ್ ಕಾಯ್ತಾ ಇದ್ದಾರೆ. ಅಷ್ಟೇ ಅಲ್ಲ ಈ ಸೀರಿಯಲ್‌ನಲ್ಲಿ ನಮ್ರತಾ ಹಾಗೂ ಭವ್ಯಾ ಗೌಡ ನಟಿಯರಾಗಿದ್ದಾರೆ. ಇದು ಇನ್ನಷ್ಟು ಕುತೂಹಲವನ್ನ ಮೂಡಿಸಿದೆ. ಕರ್ಣ ಸಾಂಗ್ ಮಿಲಿಯನ್ ಗಟ್ಟಲೇ ಓಡಿದೆ. ಒಂದ್ ಮಿಲಿಯನ್ ಅಲ್ಲ ಹತ್ತು ಮಿಲಿಯನ್. ಅಲ್ಲಿಂದಾನೇ ಟ್ರೆಂಡಿಂಗ್ ಶುರು ಮಾಡಿದೆ‌.

ಕಿರಣ್ ರಾಜ್‌ಗೆ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇದೆ. ಅದರಲ್ಲೂ ಕುದುರೆ ಸವಾರಿ ಮಾಡುವುದರಲ್ಲಿ ಎಕ್ಸ್ ಪರ್ಟ್ ಇದ್ದಾರೆ. ಕುದುರೆ ಸವಾರಿಯನ್ನ ಮಾಡುವುದನ್ನ ವಿಡಿಯೋಗಳನ್ನ ಹಾಕಿದ್ದಾರೆ. ಬೈಕ್ ಕ್ರೇಜ್ ಸಿಕ್ಕಾಪಟ್ಟೆ ಇದೆ. ಬೈಕ್ ಓಡಿಸೋ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಫಿಟ್ನೆಸ್ ಫ್ರೀಕ್ ಕೂಡ. ಜಿಮ್‌ನಲ್ಲಿ ಸಿಕ್ಕಾಪಟ್ಟೆ ದೇಹ ದಂಡನೆ ಮಾಡುತ್ತಾರೆ. ಒಳ್ಳೆ ಫಿಟ್ನೆಸ್ ಮೆಂಟೈನ್ ಮಾಡಿದ್ದಾರೆ.

ಕಿರಣ್ ರಾಜ್‌ಗೆ ಫ್ಯಾನ್ಸ್ ಏನು ಕಡಿಮೆ ಇಲ್ಲ. ಸೋಷಿಯಲ್ ಮೀಡಿಯಾದಲ್ಲೂ ಅಷ್ಟೇ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರು ಹಾಕುವ ವಿಡಿಯೋ, ಫೋಟೋಗಳಿಗೆ ಬರುವ ಲೈಕ್ಸ್, ಕಮೆಂಟ್‌ಗಳಿಗೆ ಲೆಕ್ಕವೇ ಇಲ್ಲ. ಕನ್ನಡತಿ ಸೀರಿಯಲ್‌ನಿಂದ ಅವರಿಗೆ ಮಹಿಳಾ ಫ್ಯಾನ್ ಬೇಸ್ ಜಾಸ್ತಿ ಇದೆ. ಕಿರಣ್ ರಾಜ್ ಎಂದರೆ ಕಿರುತೆರೆ ನೋಡುಗರು ಹೊತ್ತು ಮೆರೆಸುತ್ತಾರೆ. ಸಿನಿಮಾದಲ್ಲೂ ನಟನೆ ಮಾಡಿದ್ದು, ಈಗ ಮತ್ತೆ ಸೀರಿಯಲ್ ಕಡೆಗೆ ಬಂದಿದ್ದಾರೆ.

More from Filmibeat

English summary
Karna serial actor Kiran Raj went to Kashmir after Pahalgam incident;
Read more about: life style actor kashmir
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X