ಎರಡೊತ್ತು ಊಟ, ಮಟನ್ ಮುಟ್ಟಲ್ಲ, ಪಾರ್ಟಿಗೆ ಹೋಗಲ್ಲ; ಸುದೀಪ್ ಡಯೆಟ್ ಕಷ್ಟ ಕಷ್ಟ

ಸಿನಿಮಾ ತಾರೆಯರ ಡಯೆಟ್, ವರ್ಕೌಟ್ ರೊಟೀನ್ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇರುತ್ತದೆ. ವಯಸ್ಸಾದರೂ ಇಷ್ಟು ಸೊಗಸಾಗಿ ಕಾಣಿಸಿಕೊಳ್ಳುವ ಹಿಂದಿನ ಸೀಕ್ರೆಟ್ ಏನು ಎಂದು ತಿಳಿದುಕೊಳ್ಳಲು ಕೆಲವರು ಇಷ್ಟಪಡುತ್ತಾರೆ. ನಟ ಸುದೀಪ್ ತಮ್ಮ ಡಯೆಟ್ ಹಾಗೂ ವರ್ಕೌಟ್ ಬಗ್ಗೆ ಗಲಾಟ ತಮಿಳು ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ವಯಸ್ಸು 50 ದಾಟಿದ್ರು ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಲವಲವಿಕೆಯಿಂದ ಇರುತ್ತಾರೆ. ಅವರ ಸ್ಟೈಲ್, ಚಾರ್ಮ್ ಯುವ ನಟರನ್ನು ನಾಚಿಸುವಂತಿರುತ್ತದೆ. ಇನ್ನು ಗಂಟೆಗಳ ಕಾಲ ಬಿಗ್‌ಬಾಸ್ ವೇದಿಕೆಯಲ್ಲಿ ನಿಂತು ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ. ಸಿನಿಮಾಗಳಲ್ಲಿ ನಟಿಸುತ್ತಾರೆ. ಆಕ್ಷನ್ ಸನ್ನಿವೇಶಗಳಲ್ಲಿ ಅಬ್ಬರಿಸುತ್ತಾರೆ. ಈ ವಯಸ್ಸಲ್ಲೂ ರೋಮ್‌ಕಾಮ್ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ಹಾಗಾಗಿ ಕಿಚ್ಚನ ಫಿಟ್ನೆಸ್ ಸೀಕ್ರೆಟ್ ಏನು ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡುತ್ತಿರುತ್ತದೆ.

Kiccha Sudeep Reveals His Fitness Secret Two Meals a Day and Strict Workout Routine

ಸದ್ಯ 'ಮಾರ್ಕ್' ಸಿನಿಮಾ ರಿಲೀಸ್ ಹಾಗೂ ಪ್ರಮೋಷನ್ ಕೆಲಸಗಳಲ್ಲಿ ಸುದೀಪ್ ಫುಲ್ ಬ್ಯುಸಿಯಾಗಿದ್ದಾರೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಮುಂದಿನ ವಾರ ತಮಿಳು ಪ್ರೇಕ್ಷಕರ ಮುಂದೆ ಸಿನಿಮಾ ಹೋಗ್ತಿದೆ. ಈ ವೀಕೆಂಡ್ ಬಿಗ್‌ಬಾಸ್ ನಿರೂಪಣೆಗೆ ಬ್ರೇಕ್ ಹಾಕಿ 'ಮಾರ್ಕ್' ಸಿನಿಮಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಮ್ಮ ಡಯೆಟ್ ಬಗ್ಗೆ ಮಾತನಾಡಿರುವ ಸುದೀಪ್ ಬೆಳಗ್ಗೆ 10ರಿಂದ 11 ಗಂಟೆಗೆ ನನ್ನ ಲಂಚ್ ಮುಗಿಯುತ್ತದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. "ನಾನು ಬೆಳಗ್ಗೆ ತಿಂಡಿ ತಿನ್ನಲ್ಲ. ಬದಲಿಗೆ ಒಮ್ಮೆಲೆ 11 ಗಂಟೆ ವೇಳೆಗೆ ಊಟ ಮಾಡುತ್ತೇನೆ. ಸಂಜೆ 6 ಗಂಟೆ ಹೊತ್ತಿಗೆ ಡಿನ್ನರ್ ಮುಗಿಯುತ್ತದೆ. ದಿನಕ್ಕೆ 2 ಬಾರಿ ಮಾತ್ರ ಊಟ ಮಾಡುತ್ತೇನೆ ಎಂದಿದ್ದಾರೆ. ಬೆಳಗ್ಗೆ 11 ಗಂಟೆಗೆ ಬ್ರೌನ್ ರೈಸ್, ದಾಲ್ ತಿಂತೀನಿ. ವಾರದ 7 ದಿನವೂ ಅದೇ ಕೊಟ್ರು ಪರವಾಗಿಲ್ಲ ತಿಂತೀನಿ. ಮೊಟ್ಟೆ, ತರಕಾರಿ, ಚಿಕನ್ ತಿಂತೀನಿ. ಮಟನ್ ತಿನ್ನಲ್ಲ ಎಂದು ಸುದೀಪ್ ಹೇಳಿದ್ದಾರೆ.

ಸಲ್ಮನ್, ಸಲಾಡ್, ಮೊಟ್ಟೆ, ಕೆಲವೊಮ್ಮೆ ಪ್ರಾನ್ಸ್ ತಿಂತೀನಿ. ಸಂಜೆಗೆ ಅಕ್ಕಿರೊಟ್ಟಿ, ರಾಗಿ ರೊಟ್ಟಿ ಮಾಡ್ತಾರೆ ಅಷ್ಟು ಮಾತ್ರ ತಿಂತೀನಿ. ಕ್ಯಾಲರಿ ಜಾಸ್ತಿ ಆಗುತ್ತೆ ಎಂದು ಭಯಪಡಲ್ಲ. ಚೆನ್ನಾಗಿ ವರ್ಕ್‌ಔಟ್ ಮಾಡ್ತೀನಿ. "ನಾನು ಜಂಕ್ ಫುಡ್ ತಿನ್ನಲ್ಲ, ಪಾರ್ಟಿಗೆ ಹೋಗಲ್ಲ. ಅಪ್ಪಿ ತಪ್ಪಿ ಯಾವುದಾದರೂ ಕಾರ್ಯಕ್ರಮದಲ್ಲಿ ಆಪ್ತರ ಖುಷಿಗೆ ಒಂದೋ ಎರಡೋ ಪೀಸ್ ತಿಂತೀನಿ. ಇನ್ನುಳಿದಂತೆ ಮನೆಯಲ್ಲಿ ಊಟ ಮಾಡಿದ ಬಳಿಕವೇ ಪಾರ್ಟಿಗಳಿಗೆ ಹೋಗ್ತೀನಿ ಎಂದು ಸುದೀಪ್ ತಿಳಿಸಿದ್ದಾರೆ.

ಬೆಳಗ್ಗೆ 11 ಗಂಟೆಗೆ ಲಂಚ್, ಸಂಜೆ 6 ಗಂಟೆಗೆ ಡಿನ್ನರ್ ಆಗಲೇಬೇಕು. ಕಾರಣ ಸಂಜೆಯಿಂದ ಬೆಳಗ್ಗೆ 11 ಗಂಟೆ ಅಂದ್ರೆ 15 ಗಂಟೆಗಳ ಕಾಲ ಏನು ತಿಂದಿರಲ್ಲ. 2 ಹೊತ್ತು ತಿನ್ನುವುದರಿಂದ ಹಸಿವು ತಡೆದುಕೊಳ್ಳಲು ಸಾಧ್ಯವಾಗಲ್ಲ ಎಂದು ಸುದೀಪ್ ಡಯೆಟ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಕಳೆದ ವರ್ಷದ ಕೊನೆಗೆ 'ಮ್ಯಾಕ್ಸ್' ರೀತಿಯ ಹಿಟ್ ಸಿನಿಮಾ ಕೊಟ್ಟಿದ್ದ ಸುದೀಪ್ ಈ ವರ್ಷ 'ಮಾರ್ಕ್' ಮೂಲಕ ಮತ್ತೆ ಸದ್ದು ಮಾಡ್ತಿದ್ದಾರೆ.

ಮೊದಲ ದಿನವೇ 'ಮಾರ್ಕ್' ಸಿನಿಮಾ 15 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಹೇಳಿದೆ. ಮೊದಲ ದಿನ 'ಮ್ಯಾಕ್ಸ್‌'ಗಿಂತ 25%ರಷ್ಟು ಹೆಚ್ಚು ಕಲೆಕ್ಷನ್ ಮಾಡಿರುವುದಾಗಿ ಹೇಳಿದ್ದಾರೆ. ಮುಂದಿನ ವರ್ಷಾಂತ್ಯಕ್ಕೆ ಮತ್ತೊಂದು ಸಿನಿಮಾ ರಿಲೀಸ್ ಮಾಡುವುದಾಗಿಯೂ ಸುದೀಪ್ ಘೋಷಿಸಿದ್ದಾರೆ. ಈಗಾಗಲೇ ಚಿತ್ರದ ಓಟಿಟಿ ಹಾಗೂ ಟಿವಿ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿದೆ.

More from Filmibeat

Read more about: sudeep sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X