ರಾತ್ರಿ 10 ಗಂಟೆ ಆದ್ರೂ ಜಿಮ್‌ನಲ್ಲಿ ಬೆವರಿಳಿಸಲೇ ಬೇಕು ಮಾನಸ ಮನೋಹರ್; ಈ ನಟಿ ಫಿಟ್ನೆಸ್ ಫ್ರೀಕ್

By ಎಸ್ ಸುಮಂತ್

ಮಾನಸ ಮನೋಹರ್ ಗೊತ್ತಲ್ಲ. ಕಿರುತೆರೆ ವೀಕ್ಷಕರಿಗಂತೂ ಇವರು ನೆನಪಿದ್ದೆ ಇರ್ತಾರೆ. 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಮೀರಾ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದವರು. ಆಫೀಸಲ್ಲಿ ಒಬ್ಬ ಲೇಡಿ ಸಿಇಓ ಮೀರಾ ಅಂತವರಿದ್ದರೆ ಸಾಕು ಎಂಬಷ್ಟು ಖಡಕ್ ಅಂಡ್ ಸ್ಟೈಲಿಶ್ ಆಗಿ ಇದ್ದವರು. ಈಗ 'ಲಕ್ಷ್ಮೀನಿವಾಸ'ದಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಡೆಡ್ ಆಪೋಸಿಟ್ ಕ್ಯಾರೆಕ್ಟರ್ ಅಂಡ್ ಸ್ಟೈಲಿಶ್ ಲುಕ್ ಕೊಟ್ಟಿದ್ದಾರೆ. ಸಿಇಓ ಲುಕ್ ಕೊಟ್ಟಿದ್ದ ಮಾನಸ ಈಗ ದೊಡ್ಡ ಗೌಡರ ಸೊಸೆಯಾಗಿ ಕಾಣಿಸಿಕೊಂಡಿದ್ದಾರೆ.

ಮಾನಸ ಮನೋಹರ್ ಅವರದ್ದು ನೀಳಕಾಯ ದೇಹ. ಅವರು ಮೆಂಟೈನ್ ಮಾಡಿರುವ ಫಿಟ್ನೆಸ್ ನೋಡಿದರೆ ನಾವೂ ಹೀಗೆ ಇರಬಾರದಾ ಅಂತ ಹಲವರಿಗೆ ಫೀಲ್ ಬಾರದೆ ಇರದು. ಯಾಕಂದ್ರೆ, ಅಷ್ಟು ಅಚ್ಚುಕಟ್ಟಾಗಿ ತಮ್ಮನ್ನ ತಾವೂ ಮೆಂಟೈನ್ ಮಾಡಿಕೊಂಡಿದ್ದಾರೆ. ಅದರ ಹಿಂದೆಯೂ ಮಾನಸ ಅವರ ಸಾಕಷ್ಟು ಶ್ರಮವಿದೆ. ದೇಹ ದಂಡನೆ ಇದೆ. ಇಲ್ಲ ಅಂದಿದ್ರೆ ಅವರಿಗೂ ನೀಳಾಕಾಯ ದೇಹ ಇರೋದಕ್ಕೆ ಸಾಧ್ಯವೇ ಇರ್ತಾ ಇರಲಿಲ್ಲವೇನೋ. ಅದಕ್ಕೆ ಸಾಕ್ಷಿ ಅವರು ಹಂಚಿಕೊಂಡಿರುವ ಒಂದು ಫೋಟೋ.

Lakshmi Nivasa serial actress Manasa Manohar workout and fitness secret

ಹೌದು, ಮಾನಸ ಮನೋಹರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಜಿಮ್ ಒಳಗಿರುವ ಫೋಟೋವೊಂದನ್ನ ಹಂಚಿಕೊಂಡಿದ್ದಾರೆ. ವರ್ಕೌಟ್ ಮಾಡದೆ ಆ ಫಿಟ್ನೆಸ್ ಕಾಪಾಡಿಕೊಳ್ಳುವುದಕ್ಕೆ ಕಷ್ಟ ಇದೆ. ಜಿಮ್‌ನಲ್ಲಿ ವರ್ಕೌಟ್ ಮುಗಿಸಿದ ನಂತರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಾನಸ ಕೂಡ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಶೂಟಿಂಗ್ ಶೆಡ್ಯೂಲ್‌ನಿಂದ ಬ್ರೇಕ್ ಸಿಗೋದು ಕಷ್ಟ. ಈ ಸೀರಿಯಲ್‌ಗಳಲ್ಲಿ ನಟಿಸುತ್ತಿರುವವರಿಗೆ ವರ್ಕೌಟ್‌ಗೆ ಸಮಯ ಬಹಳ ಕಡಿಮೆ ಎಂಬಂತೆ ಆಗಿದೆ. ಅಷ್ಟೊಂದು ಬ್ಯುಸಿ ಶೆಡ್ಯೂಲ್ ಇರುತ್ತೆ. ಹೀಗಾಗಿಯೇ ಹಲವರು ಡಯೆಟ್‌ನಲ್ಲಿಯೇ ಫಿಟ್ನೆಸ್ ಬ್ಯಾಲೆನ್ಸ್ ಮಾಡ್ತಾರೆ. ಆದರೆ ಮಾನಸ ಮನೋಹರ್ ಮಾತ್ರ ಜಿಮ್ ಮಿಸ್ ಮಾಡೋದೆ‌ ಇಲ್ಲ. ಅದು ರಾತ್ರಿ ಸಮಯವಾದರೂ ಸರಿ.

ಈಗ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿರುವ ಫೋಟೋದಲ್ಲೂ ರಾತ್ರಿಯಾದರೂ ಜಿಮ್‌ನಲ್ಲಿರುವ ಫೋಟೋವನ್ನ ಹಂಚಿಕೊಂಡಿದ್ದಾರೆ. ವರ್ಕೌಟ್ ಮುಗಿದ ಮೇಲೆ ಹಾಕಿರುವ ಫೋಟೋದಲ್ಲಿ ಸಮಯವನ್ನು ಹಾಕಿದ್ದಾರೆ. ರಾತ್ರಿ 9.39 ಆಗಿದೆ. ಅಂದ್ರೆ ರಾತ್ರಿ ಸಮಯವಾದರೂ ಸರಿ ದೇಹಕ್ಕೆ ಬೇಕಾದ ವರ್ಕೌಟ್ ಮಾತ್ರ ಬಿಡೋದಿಲ್ಲ ಎಂಬುದನ್ನು ಈ ಫೋಟೋ ಪ್ರೂವ್ ಮಾಡಿದೆ. ಮಾನಸ ಮನೋಹರ್ ಅವರ ಫಿಟ್ನೆಸ್ ಗುಟ್ಟು ಇಂದು ಬಯಲಾಗಿದೆ.

ಬರೀ ವರ್ಕೌಟ್ ಅಷ್ಟೇ ಮಾಡಲ್ಲ, ಡಯೆಟ್ ಕೂಡ ಪಾಲಿಸುತ್ತಾರೆ. ಅಂದ್ರೆ ಮನೆ ಊಟಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನ ನೀಡುತ್ತಾರೆ. ಹೊರಗಿನ ಊಟ ಮಾಡಿದ್ರು ಕೂಡ ಮನೆ ಊಟ ಜಾಸ್ತಿ ಆದ್ಯತೆ ನೀಡುತ್ತಾರೆ. ಅದೇ ಸ್ಟೋರಿನಲ್ಲಿ ಮನೆ ಊಟದ ಫೋಟೋ ಕೂಡ ಹಂಚಿಕೊಂಡಿದ್ದಾರೆ. ಆಲ್ಮೋಸ್ಟ್ ಎಲ್ಲಾ ನಟಿಯರು ಮನೆ ಊಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಸೌತೆ ಕಾಯಿ, ಕ್ಯಾರೆಟ್ ಹೀಗೆ ದೇಹಕ್ಕೆ ಪೋಷಕಾಂಶ ಒದಗಿಸುವ ಹಸಿ ತರಕಾರಿಗಳನ್ನ ಊಟದ ಜೊತೆಗೆ ಸೇವಿಸುತ್ತಾರೆ. ಮಾನಸ ಮನೋಹರ್ ಕೂಡ ತಮ್ಮ‌ ಫಿಟ್ನೆಸ್ ಗಾಗಿ ಏನೆಲ್ಲಾ ಬೇಕೋ ಅದೆಲ್ಲವನ್ನು ಮಾಡುತ್ತಾರೆ.

ಇನ್ನು ಮಾನಸ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದಾರೆ. ಮದುವೆಯ ನಂತರ ತುಂಬಾನೇ ಎಂಜಾಯ್ ಮಾಡುತ್ತಿದ್ದಾರೆ. ಅವರ ಅತ್ತೆ ಕೂಡ ಸೊಸೆಯ ಫ್ಯಾಷನ್ ಜೊತೆಗೆ ಹೊಂದಿಕೊಂಡಿದ್ದಾರೆ. ಎಲ್ಲಾದರೂ ಟ್ರಿಪ್ ಹೋದರೆ ಅತ್ತೆ ಸೊಸೆ ಬೆಸ್ಟ್ ಫ್ರೆಂಡ್ ರೀತಿಯೇ ಕಾಣುತ್ತಾರೆ. ಇಬ್ಬರು ಒಂದೇ ರೀತಿಯ ಡ್ರೆಸ್‌ಗಳನ್ನು ಹಾಕುತ್ತಾರೆ. ಆತ್ಮೀಯತೆಯಿಂದ ಪೋಟೋಗೆ ಪೋಸ್ ನೀಡುತ್ತಾರೆ. ಫ್ಯಾಮಿಲಿ ಜೊತೆಗೆ ಖುಷಿ ಖುಷಿಯಾಗಿ, ಅಮೂಲ್ಯವಾದ ಕ್ಷಣಗಳನ್ನ ಕಳೆಯುತ್ತಿದ್ದಾರೆ ಮಾನಸ ಮನೋಹರ್.

More from Filmibeat

English summary
Lakshmi Nivasa serial actress Manasa Manohar workout and fitness secret
Read more about: life style actress workout
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X