ದಿಶಾ ಮದನ್ ಡಯೆಟ್ ಬ್ರೇಕ್ ಮಾಡೋಕೆ ಜಸ್ಟ್ ಒಂದು ಐಸ್ ಕ್ರೀಂ ಸಾಕು; ಅದು ಹೇಗೆ ಅಂತಿರಾ?

By ಎಸ್ ಸುಮಂತ್

ದಿಶಾ ಮದನ್... ಸೋಷಿಯಲ್ ಮೀಡಿಯಾ ಮೂಲಕವೇ ಫೇಮಸ್ ಆದವರು. ಈಗ ಲಕ್ಷ್ಮೀ ನಿವಾಸದಲ್ಲಿ ಭಾವನಾ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ಸಿದ್ದೇ ಗೌಡ್ರು ಹಾಗೂ ಭಾವನಾ ನಡುವೆ ಈಗೀಗ ಲವ್ ಬೇರೆ ಆಗಿದೆ. ಈಗ ಗಂಡ ಹೆಂಡತಿ ಫುಲ್ ಖುಷಿಯಾಗಿದ್ದಾರೆ. ಇದು ವೀಕ್ಷಕರಿಗೂ ಖುಷಿ ಕೊಟ್ಟಿದೆ. ಇದು ಸೀರಿಯಲ್ ಕಥೆ. ಆದರೆ ಅವ್ರು ರಿಯಲ್ ಲೈಫ್‌ನಲ್ಲಿ ಹೇಗಿರ್ತಾರೆ ಅನ್ನೋದು ಗೊತ್ತಾ..? ಅವರ ನೆಚ್ಚಿನ ಫುಡ್ ಯಾವ್ದು..? ಫಿಟ್ನೆಸ್ ಸೀಕ್ರೆಟ್ ಏನು ಅನ್ನೋದು ಗೊತ್ತಾ..? ಇಲ್ಲಿದೆ ನೋಡಿ ಮಾಹಿತಿ‌.

ಸಾಮಾನ್ಯವಾಗಿ ಸೆಲೆಬ್ರೆಟಿಗಳ ಪರ್ಸನಲ್ ಜೀವನದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಅಲ್ವಾ? ತೆರೆಮೇಲೆ ಬ್ಯೂಟಿಫುಲ್ ಆಗಿ ಕಾಣುವ ಹೆಂಗಳೆಯರು ಮನೆಯಲ್ಲಿ ಹೇಗಿರ್ತಾರೆ..? ನಿಜವಾಗಲೂ ಅಡುಗೆ ಮಾಡೋದಕ್ಕೆ ಬರುತ್ತಾ ಅಂತೆಲ್ಲ ಕುತೂಹಲವಿರುತ್ತದೆ. ಆ ಕುತೂಹಲಕ್ಕೆ ದಿಶಾ ಮದನ್ ಸಂದರ್ಶನ ತೆರೆ ಎಳೆದಿದೆ ನೋಡಿ. ಅದಕ್ಕೂ ಮುನ್ನ ಸೀರಿಯಲ್‌ನಲ್ಲಿ ದಿಶಾ ಮದನ್ ಎಷ್ಟು ಬ್ಯುಸಿ ಅನ್ನೋದನ್ನ ನೋಡೋಣ.

Lakshmi Nivasa serial Disha Madan Fitness and Ice cream secret

ಸಾಮಾನ್ಯವಾಗಿ ಸೀರಿಯಲ್‌ನಲ್ಲಿ ಆಕ್ಟ್ ಮಾಡುವವರಿಗೆ ಹದಿನೈದು ದಿನ ಕಂಟಿನ್ಯೂ ಶೂಟಿಂಗ್ ಇರುತ್ತದೆ. ಆ ಸಮಯದಲ್ಲಿ ವರ್ಕ್ ಲೋಡ್ ಕೂಡ ಹೆಚ್ಚಾಗಿರುತ್ತದೆ. ಅವರಿಗೆ ಒಮ್ಮೊಮ್ಮೆ ರೆಸ್ಟ್ ಸಿಗುವುದು ಕಷ್ಟವೇ. ಆದರೂ ದಿಶಾ ಮದನ್ ತಾವೇ ಅಡುಗೆಯನ್ನು ಮಾಡ್ತಾರೆ ಅನ್ನೋದು ಗೊತ್ತಾ? ದಿಶಾ ಮದನ್ ಪತಿಗೆ ಚಿತ್ರಾನ್ನ ಎಂದರೆ ತುಂಬಾನೇ ಇಷ್ಟವಂತೆ. ಹೀಗಾಗಿ ಆ ಚಿತ್ರಾನ್ನವನ್ನ ದಿಶಾ ಮದನ್ ಅವರೇ ಮಾಡುತ್ತಾರೆ. ಹಾಗೇ ದಿಶಾ ಮದನ್ ಅವರಿಗೆ ಪರ್ಸನಲ್ ಆಗಿ ಕಡುಬು ಅಂದ್ರೆ ತುಂಬಾನೇ ಇಷ್ಟವಂತೆ. ಅದು ಖಾರದ ಕಡುಬಾಗಲಿ, ಸಿಹಿ ಕಡುಬಾಗಲಿ ಇಷ್ಟಪಟ್ಟು ತಿಂತಾರಂತೆ. ಶೂಟಿಂಗ್ ಗ್ಯಾಪ್ ಸಿಕ್ಕಾಗೆಲ್ಲಾ ಅಡುಗೆಯನ್ನು ಮಾಡ್ತಾರಂತೆ.

ಇನ್ನು ನಿಮಗೆಲ್ಲ ಗೊತ್ತಿರುವಂತೆ ದಿಶಾ ಮದನ್ ಅವರಿಗೆ ಎರಡು ಮಕ್ಕಳು. ಆದರೂ ಅವರ ಬ್ಯೂಟಿ, ಫಿಟ್ನೆಸ್ ನೋಡಿದಾಗ ಆಶ್ಚರ್ಯವಾಗದೆ ಇರಲಾರದು. ಫಿಟ್ನೆಸ್ ಗುಟ್ಟು ಏನಿರಬಹುದು ಎಂಬ ಪ್ರಶ್ನೆ ಬರುತ್ತದೆ. ಅದಕ್ಕೂ ಉತ್ತರ ಇಲ್ಲಿದೆ ನೋಡಿ. ದಿಶಾ ಮದನ್ ಕೂಡ ಡಯೆಟ್ ಫಾಲೋ ಮಾಡ್ತಾರೆ. ಆದರೆ ಐಸ್ ಕ್ರೀಂ ಕಂಡರೆ ಅಂದಿನ ಡಯೆಟ್ ಬ್ರೇಕ್ ಮಾಡಿ ಆದರೂ ಸರಿ ಮೊದಲು ಐಸ್ ಕ್ರೀಂ ತಿಂದು ಮುಗಿಸುತ್ತಾರೆ. ಮೊದಲು ಐಸ್ ಕ್ರೀಂ ಆಮೇಲೆ ಉಳಿದದ್ದು ಎನ್ನುತ್ತಾರೆ.

Lakshmi Nivasa serial Disha Madan Fitness and Ice cream secret

ಹಾಗೇ ಬೇರೆಯವರು ವಿತೌಟ್ ಸಜೆಷನ್ ಡಯೆಟ್ ಮಾಡೋರಿಗೆ ಹೇಳೋದು ಹೀಗೆ, "ಒಂದೇ ಥರದ ಡಯೆಟ್ ಎಲ್ಲರಿಗೂ ಹೊಂದಾಣಿಕೆ ಆಗುತ್ತೆ ಅಂತ ಹೇಳುವುದಕ್ಕೆ ಆಗಲ್ಲ. ನಮ್ಮ ನಮ್ಮ ದೇಹಕ್ಕೆ ಸೂಟ್ ಆಗುವಂತಹ ಡಯೆಟ್ ಪ್ಲಾನ್ ಮಾಡಿಕೊಳ್ಳಬೇಕಾಗುತ್ತೆ. ಯಾಕಂದ್ರೆ ಸುಮಾರು ಜನಕ್ಕೆ ಶುಗರ್, ಥೈರಾಯಿಡ್ ಸಮಸ್ಯೆ ಇರುತ್ತೆ. ಆಗ ಯಾರೋ ಮಾಡುವ ಡಯಟ್ ಅನ್ನು ಮಾಡುವುದಕ್ಕೆ ಆಗಲ್ಲ. ಹೀಗಾಗಿ ಟೆಸ್ಟ್ ಮಾಡಿಸಿ. ಯಾವ್ಯಾವ ವಿಟಮಿನ್ ಕೊರತೆ ಇದೆ ನೋಡಿಕೊಂಡು ಡಯೆಟ್ ಮಾಡಬೇಕು. ನಾನು ಕೂಡ ಹೆಲ್ತ್ ವಿಚಾರದಲ್ಲಿ ತುಂಬಾ ಕಾಳಜಿ ಮಾಡ್ತೀನಿ. ಆಗ ಮಾತ್ರ ಹೆಲ್ತಿ ಫಿಟ್ನೆಸ್ ಮೆಂಟೈನ್ ಮಾಡುವುದಕ್ಕೆ ಸಾಧ್ಯ. ನಾನು ಪ್ರತಿ ದಿನ ಮೊಟ್ಟೆ, ಒಂದು ಇಡ್ಲಿ, ವಡೆ, ಮಧ್ಯಾಹ್ನ ರೈಸ್, ಚಪಾತಿ, ಪಲ್ಯ, ರಾತ್ರಿ ಸಮಯಕ್ಕೆ ಪ್ರೋಟಿನ್ ಅಂತ ಚಿಕನ್ ಇರುತ್ತದೆ" ಎನ್ನುತ್ತಾರೆ.

ಇನ್ನು ದಿಶಾ ಮದನ್ ರಿಯಲ್ ಲೈಫ್‌ನಲ್ಲಿ ಇರುವುದೇ ಬೇರೆ ರೀತಿ. ಫುಲ್ ಮಾಡರ್ನ್ ಹುಡುಗಿ. ಆದರೆ ಭಾವನಾ ಪಾತ್ರ ಮಾಡುವುದು ಸುಲಭವಲ್ಲ. ಅದರ ಬಗ್ಗೆ ಮಾತನಾಡಿ,'ಖಂಡಿತ ಅದೊಂದು ಚಾಲೆಂಜಿಂಗ್ ಪಾತ್ರವೇ ಸರಿ. ಕೆಲವರು ಲೈಫ್‌ನಲ್ಲಿ ಸೈಲೆಂಟ್ ಆಗಿರುತ್ತಾರೆ. ಅಂಥವರಿಗೆ ವೈಲೆಂಟ್ ಆದಂತ ಪಾತ್ರ ಸಿಗುತ್ತದೆ. ಆಗ ಅದು ಚಾಲೆಂಜ್ ಅನ್ನಿಸುತ್ತೆ. ನನಗೂ ಹಾಗೇ ಭಾವನಾ ಕ್ಯಾರೆಕ್ಟರ್ ರೀತಿ ನಿಜ ಜೀವನದಲ್ಲಿ ಇಲ್ಲದೆ ಹೋದರು ಅದೊಂತರ ಖುಷಿ ಕೊಡುತ್ತದೆ' ಎಂದು ಹೇಳುತ್ತಾರೆ.

More from Filmibeat

English summary
Lakshmi Nivasa serial Disha Madan Fitness and Ice cream secret
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X