ವೀಕೆಂಡ್‌ನಲ್ಲಿ ಲವ್‌ ಮಾಕ್ಟೆಲ್ ನಟಿಯರ ಮಸ್ತ್ ಪಾರ್ಟಿ; ಅಮೃತಾ,ರಚನಾ, ಮಿಲನಾ ಪಾರ್ಟಿ ಮಾಡಿದ್ದೆಲ್ಲಿ?

By ಎಸ್ ಸುಮಂತ್

ಅಮೃತಾ ಅಯ್ಯಂಗಾರ್ ಇತ್ತೀಚೆಗೆ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಲೈಫ್ ಅನ್ನು ಫುಲ್ ಜಾಲಿ ಜಾಲಿಯಾಗಿ ಕಳೆಯುತ್ತಾ ಇದ್ದಾರೆ. ಸಿನಿಮಾ ಶೂಟಿಂಗ್ ಅಂತ ಬ್ಯುಸಿಯಾಗಿದ್ದರೂ, ನಡುವೆ ಸ್ನೇಹಿತರನ್ನ ಮರೆಯೋದೆ ಇಲ್ಲ. ಆಗಾಗ ಅಲ್ಲಿ ಇಲ್ಲಿ ಹೋಗ್ತಾ ಇರ್ತಾರೆ, ಎಂಜಾಯ್ ಮಾಡ್ತಾ ಇರ್ತಾರೆ. ಈ ವೀಕೆಂಡ್‌ನಲ್ಲಿ ಅಮೃತಾ ಅಯ್ಯಂಗಾರ್ ಒಂದೊಳ್ಳೆ ಪಾರ್ಟಿ ಮಾಡಿದ್ದಾರೆ. ಅದು ಬೆಂಗಳೂರಿನಲ್ಲಿ ಪಬ್‌ನಲ್ಲಿ ಗರ್ಲ್ಸ್‌ ಜೊತೆ ಮಸ್ತ್ ಎಂಜಾಯ್ ಮಾಡಿದ್ದಾರೆ.

ವೀಕೆಂಡ್ ಬೇರೆ, ಜೊತೆಗೆ ಮಿಲನಾ ನಾಗರಾಜ್ ಬರ್ತ್ ಡೇ ಕೂಡ ಇತ್ತು. ಹೀಗಾಗಿ ಅಮೃತಾ ಅಯ್ಯಂಗಾರ್ ಅಂಡ್ ಗ್ಯಾಂಗ್ ಪಬ್‌ನಲ್ಲಿ ಬರ್ತ್ ಡೇ ಸೆಲೆಬ್ರೇಷನ್ ಮಾಡಿದ್ದಾರೆ. ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಕನ್ನಡದ ಚಿತ್ರರಂಗದಲ್ಲಿ ಬೆಸ್ಟ್ ಫ್ರೆಂಡ್ಸ್, ಗೈಡ್, ಸಿಸ್ಟರ್ ಹೀಗೆ ಅವರ ಬದುಕಿನ ಬಹುಮುಖ್ಯ ಭಾಗ.

Love Mocktail Film actress Amrutha Iyengar Rachana Inder celebrating Milana Nagaraj birthday

ಅಂದ್ಹಾಗೆ ಇವ್ರಿಬ್ಬರೂ 'ಲವ್ ಮಾಕ್ಟೇಲ್' ಸಿನಿಮಾದ ಬಳಿಕ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಮಿಲನಾ ನಾಗರಾಜ್ ಫ್ಯಾಮಿಲಿ ಜೊತೆಗೆ ಅಮೃತಾ ಅಯ್ಯಂಗಾರ್ ಕೂಡ ಅಷ್ಟೇ ಅನ್ಯೋನ್ಯವಾಗಿದ್ದಾರೆ. ಹೀಗಾಗಿಯೇ ಅವರ ಹುಟ್ಟುಹಬ್ಬವನ್ನ ಸ್ನೇಹಿತೆಯರೆಲ್ಲಾ ಸೇರಿ ಸೆಲೆಬ್ರೆಟ್ ಮಾಡಿದ್ದಾರೆ. ಇನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದಾರೆ.

ವಿಲನಾ ನಾಗರಾಜ್ ಬರ್ತ್‌ಡೇ ಸೆಲೆಬ್ರೆಟ್ ಮಾಡುವುದಕ್ಕೆ ಪಬ್‌ನಲ್ಲಿ ಸಖತ್ ಆಗಿಯೇ ತಯಾರಿ ಮಾಡಿಕೊಂಡಿತ್ತು. ಬಲೂನ್‌ಗಳಿಂದ ಬ್ಯಾಗ್ರೌಂಡ್ ಡಿಸೈನ್ ಮಾಡಿದ್ದು, ಕೇಕ್ ಕಟ್ ಮಾಡಿಸಿ, ಖುಷಿ ಪಟ್ಟಿದ್ದಾರೆ. ಅದರಲ್ಲೂ ಈ ಬರ್ತ್ ಡೇ ಪಾರ್ಟಿಯಲ್ಲಿ ಸೇರಿದ್ದವರು ಯಾರೆಲ್ಲ ಅನ್ನೋದು ಗೊತ್ತಾ? ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟಿಯರೆಲ್ಲರೂ ಈ ಪಾರ್ಟಿಗೆ ಹಾಜರಿ ಹಾಕಿದ್ದಾರೆ.

Love Mocktail Film actress Amrutha Iyengar Rachana Inder celebrating Milana Nagaraj birthday

ಸಿನಿಮಾ ಆದ್ಮೇಲೂ ಫ್ಯಾಮಿಲಿಯಂತೆ ಈ ನಟಿಯರು ಇದ್ದಾರೆ. ರಚನಾ ಇಂದರ್, ಸುಷ್ಮಿತಾ ಹಾಗೂ ಅಮೃತಾ ಸೇರಿ ಮಿಲನಾ ನಾಗರಾಜ್ ಅವರ ಹುಟ್ಟು ಹಬ್ಬವನ್ನ ಆಚರಿಸಿದ್ದಾರೆ. ರಚನಾ ಇಂದರ್ ಲವ್ ಮಾಕ್ಟೇಲ್ ಸಿನಿಮಾ ಮೂಲಕ ಎಲ್ಲರ ಮನೆ ಮಗಳಾಗಿ ಬಿಟ್ಟರು. ಸುಷ್ಮಿತಾ ಅಂತೂ ತೆರೆ ಮೇಲೂ ಬೆಸ್ಟ್ ಫ್ರೆಂಡ್, ಹೊರಗಡೆಯೂ ಅದೇ ಬಾಂಡಿಂಗ್ ಉಳಿಸಿಕೊಂಡಿದ್ದರು. ಹಾಗೇ ಅಮೃತಾ ಅಯ್ಯಂಗಾರ್ ಸಿನಿಮಾದಲ್ಲಿ ಮಿಲನಾ ಅವರಿಗೆ ವಿಲನ್ ಆದ್ರೂ ರಿಯಲ್ ಲೈಫ್‌ನಲ್ಲಿ ಅಕ್ಕನ ಸ್ಥಾನವನ್ನ ನೀಡಿದ್ದಾರೆ.

ಮಿಲನಾ ಅವರ ಹುಟ್ಟುಹಬ್ಬಕ್ಕೆ ಅಮೃತಾ ಅಯ್ಯಂಗಾರ್ ಸ್ಪೆಷಲ್ ಆಗಿ ರೆಡಿಯಾಗಿದ್ದಾರೆ. ಅದರಲ್ಲೂ ತಮಗೆ ಸಿಕ್ಕಾಪಟ್ಟೆ ಇಷ್ಟ ಇರುವಂತ ಫೇವರಿಟ್ ಜ್ಯುವೆಲ್ಲರಿ ಹಾಕಿದ್ದಾರೆ. ಪಾಚಿ ಹಸಿರು ಟಾಪ್ ಹಾಕಿದ್ದಾರೆ. ಅದಕ್ಕೆ ಸಣ್ಣ ಎಳೆಯಿರುವ ಸರ ಹಾಕಿದ್ದಾರೆ. ಆ ಸಣ್ಣ ಎಳೆಯ ಸರದಲ್ಲಿ ಕೊಂಚ ಅಗಲವಾದ ಪೆಂಡೆಂಟ್‌ ಇದೆ. ಅದು ಪ್ಲೈನ್ ಆಗಿದೆ. ಎರಡು ಎಳೆಯಲ್ಲಿ ಆ ಸರ ಇದೆ. ಮೊದಲ ಎಳೆ ಕೊಂಚ ಚಿಕ್ಕದಾಗಿತ್ತು. ಅದರಲ್ಲಿ ಪರ್ಪಲ್ ಕಲರ್ ಮಣಿ ಇದೆ. ಅದು ಕೂಡ ಸಣ್ಣದಾಗಿ ಬಿಲ್ಲೆಯ ಆಕಾರದಲ್ಲಿದೆ.

ಹಾಗೇ ಅದಕ್ಕಿಂತ ಕೊಂಚ ಕೆಳಗೆ ಗ್ರೀನ್ ಕಲರ್ ಇರುವಂತ ಬಿಲ್ಲೆಯ ಆಕಾರದ ಪೆಂಡೆಂಟ್ ಅನ್ನ ನೋಡಬಹುದಾಗಿದೆ. ಇದು ಅಮೃತಾ ಅಯ್ಯಂಗಾರ್ ಅವರ ಫೇವರಿಟ್ ಹಾರವಂತೆ. ಹಾಗಂತ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರ್ತ್ ಡೇ ವೈಬ್ ಫೋಟೋಗಳನ್ನು ಹಂಚಿಕೊಂಡು, ಅದರ ಜೊತೆಗೆ ತಮಗಿಷ್ಟವಾದ ಜ್ಯುವೆಲ್ಲರಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ವೀಕೆಂಡ್ ಜೊತೆಗೆ ಬರ್ತ್ ಡೇ ಕೂಡ ಬಂದಿದ್ದು, ಹಳೆಯ ಸ್ನೇಹಿತೆಯರೆಲ್ಲಾ ಸೇರಿ ತಮ್ಮ ನಿರ್ಮಾಪಕಿಯ ಬರ್ತ್ ಡೇ ಆಚರಿಸಿದ್ದಾರೆ. ಎಲ್ಲರೂ ಒಂದೊಳ್ಳೆ ಪಾರ್ಟಿಯನ್ನು ಸಖತ್ ಆಗಿಯೇ ಎಂಜಾಯ್ ಮಾಡಿದ್ದಾರೆ.

More from Filmibeat

English summary
Love Mocktail Film actress Amrutha Iyengar, Rachana Inder celebrating Milana Nagaraj birthday;
Read more about: life style milana nagaraj
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X