ಇವರು ಮತ್ಯಾರೂ ಅಲ್ಲ ಮೇಘಾ ಶೆಟ್ಟಿ; ಸಿಂಗಾಪುರದಲ್ಲಿ ಫುಲ್ ಜಾಲಿ ಜಾಲಿ
'ಜೊತೆ ಜೊತೆಯಲಿ' ಸೀರಿಯಲ್ ಮೂಲಕ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡವರು ಮೇಘಾ ಶೆಟ್ಟಿ. ತಮ್ಮ ಕ್ಯೂಟ್‌ನೆಸ್‌ನಿಂದ ಕಿರುತೆರೆ ವೀಕ್ಷಕರ ಮನಸ್ಸನ್ನು ಗೆದ್ದವರು. ಆದರೆ, ದಿನ ಕಳೆದಂತೆ ಗ್ಲಾಮರ್ ಗೊಂಬೆಯಾಗಿ ಬದಲಾಗಿದ್ದಾರೆ. ಮೊದಲೇ ಬೆಳ್ಳಗೆ ಇದ್ದ ಮೇಘಾ ಶೆಟ್ಟಿ ಇತ್ತೀಚೆಗಂತೂ ಇನ್ನಷ್ಟು ಫಳ ಫಳ ಅಂತ ಹೊಳೆಯುತ್ತಿದ್ದಾರೆ. ಹಾಲುಗೆನ್ನೆಯ ಈ ಚೆಲುವೆಯಂತೆ ಕಾಣಿಸುತ್ತಿದ್ದಾರೆ. ಹೋಮ್ಲಿ ಗರ್ಲ್ ಥರಾನೇ ಇದ್ದರೂ ಕೂಡ ಮಾಡರ್ನ್ ಆಗಿನೇ ಕಾಣಿಸಿಕೊಳ್ಳುತ್ತಾರೆ. ಇದೀಗ ಹೊಸ ಲುಕ್‌ನಲ್ಲಿ ಸಿಂಗಾಪುರ್ ರಸ್ತೆಯಲ್ಲೆಲ್ಲಾ ಓಡಾಡಿದ್ದಾರೆ.
ಮೇಘಾ ಶೆಟ್ಟಿ ಇತ್ತೀಚೆಗೆ ನಟನೆ ಜೊತೆಗೆ ನಿರ್ಮಾಪಕಿ ಆಗಿ ಗಮನ ಸೆಳೆದಿದ್ದಾರೆ. ಕಲರ್ಸ್ ಕನ್ನಡದಲ್ಲಿ 'ಮುದ್ದು ಸೊಸೆ' ಧಾರಾವಾಹಿಯ ನಿರ್ಮಾಣ ಮಾಡಿದ್ದಾರೆ. ಒಂದಷ್ಟು ಸಿನಿಮಾಗಳಲ್ಲಿಯೂ ಮಿಂಚಿದ್ದಾರೆ. ಈ ಬ್ಯುಸಿ ಶೆಡ್ಯೂಲ್‌ನಲ್ಲಿಯೂ ಟ್ರಿಪ್ ಹೊರಟು ಕೂಲ್ ಆಗಿ ಪೋಸ್ ನೀಡಿದ್ದಾರೆ. ಸದ್ಯ ಸಿಂಗಾಪುರ ಪ್ರವಾಸ ಮಾಡಿದ್ದಾರೆ. ಅಲ್ಲಿನ ಒಂದಷ್ಟು ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅಲ್ಲಿನ ಕೊಟ್ಟಿರುವ ಲುಕ್ಕೇ ವಿಭಿನ್ನವಾಗಿದೆ. ದುಬಾರಿ ದುನಿಯಾದ ಫೀಲ್ ಮಾಡಿಸಿದ್ದಾರೆ. ಹೇರ್ ಸ್ಟೈಲ್, ಡ್ರೆಸ್, ಬ್ಯಾಗ್ ಎಲ್ಲವೂ ಗಮನ ಸೆಳೆಯುತ್ತಿದೆ. ಬ್ಲಾಕ್ ಅಂಡ್ ಬ್ಲಾಕ್‌ನಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಕಾಣಿಸಿಕೊಂಡಿದ್ದಾರೆ.

ಮೇಘಾ ಶೆಟ್ಟಿ ಫೆದರ್ ಲೇಯರ್ ಕಟ್ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿದ್ದಾಗ ಇಂಥದ್ದೊಂದು ಲುಕ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಬರೀ ಗುಂಗರು ಕೂದಲು, ಸ್ಟ್ರೈಟ್ ಹೇರ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಆದರೆ ಸಿಂಗಾಪುರ್‌ನಲ್ಲಿ ಎಲ್ಲರೂ ಒಮ್ಮೆ ತಿರುಗಿ ನೋಡುವಂತಹ ಅವತಾರದಲ್ಲಿ ಕಂಡಿದ್ದಾರೆ. ಫೆದರ್ ಹೇರ್ ಸ್ಟೈಲ್ ಮಾಡಿಸಿಕೊಂಡು, ಕಣ್ಣಿಗೆ ಕಪ್ಪು ಬಣ್ಣದ ಕೂಲಿಂಗ್ ಗ್ಲಾಸ್ ಹಾಕಿಕೊಂಡು, ಕೈಯಲ್ಲಿಂದು ಬ್ಲಾಕ್ ಕಲರ್ ಬ್ಯಾಗ್ ಹಿಡಿದು, ಕಪ್ಪು ಬಣ್ಣದ ಸ್ಕರ್ಟ್ ಅಂಡ್ ಟಾಪ್ ಧರಿಸಿ, ಕಪ್ಪು ಬಣ್ಣದ್ದೆ ಸ್ಲಿಪ್ಪರ್ ಹಾಕಿ, ಎಲ್ಲವೂ ಬ್ಲಾಕ್ ಅಂಡ್ ಬ್ಲಾಕ್‌ನಲ್ಲಿಯೇ ಕಾಣಿಸಿಕೊಂಡಿದ್ದಾರೆ.
ಹಾಗಂತ ಮೇಘಾ ಶೆಟ್ಟಿಯ ಬರೀ ಲುಕ್ ಮಾತ್ರ ಬದಲಾಗಿರೋದಲ್ಲ. ಸಿಂಗಾಪುರದಲ್ಲಿ ಓಡಾಡಿರೋದು ದುಬಾರಿ ಬೆಲೆಯ ವಸ್ತುಗಳ ಜೊತೆಗೆ. ಅಂದ್ರೆ ಅವರಾಕಿರುವ ಚಪ್ಪಲಿ, ಹಿಡಿದಿರುವ ಬ್ಯಾಗ್ ಏನು ಕಡಿಮೆ ಬೆಲೆಯದ್ದಲ್ಲ. ಮೇಘಾ ಶೆಟ್ಟಿ ಹಿಡಿದಿರುವ ಬ್ಯಾಗ್ Othego MM ಬ್ರ್ಯಾಂಡ್‌ನ ಬ್ಯಾಗ್ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇದರ ಬೆಲೆ ಬರೋ 3 ಲಕ್ಷದ 5 ಸಾವಿರ ರೂಪಾಯಿ.

ಇನ್ನು ಮೇಘಾ ಶೆಟ್ಟು ಹಿಡಿದುಕೊಂಡಿರುವ ಸೇಮ್ ಟು ಸೇಮ್ ಡಿಸೈನ್ ಬ್ಯಾಗ್ ಆನ್‌ಲೈನ್‌ನಲ್ಲಿ ಸಿಗುತ್ತಿದೆ. ಅದಕ್ಕಾಗಿ ಜಸ್ಟ್ 3 ಲಕ್ಷದ 5 ಸಾವಿರ ಇದ್ದರೆ ಸಾಕು. ಮತ್ತೆ ಅವರು ಹಾಕಿರುವ ಚಪ್ಪಲಿ ಸಿಂಪಲ್ ಎನಿಸಿದರು ಅದು ಏನು ಕಡಿಮೆ ಇಲ್ಲ. ಅದು ಕೂಡ ದುಬಾರಿ ಬ್ರ್ಯಾಂಡ್‌ನದ್ದೇ ಆಗಿದೆ. LV sunset flat slipper ಇದಾಗಿದೆ. ನೋಡೋದಕ್ಕೆ ಇಷ್ಟೊಂದು ಸರಳವಾಗಿದೆಯಲ್ಲ ಅನ್ನಿಸಿದರು ಅದರ ಬೆಲೆ ಬಂದು 1 ಲಕ್ಷದ 8 ಸಾವಿರ ರೂಪಾಯಿ ಇದೆ. ಇನ್ನು ಅವರು ಹಾಕಿರುವ ಡ್ರೆಸ್, ಗಾಗಲ್ ಬೇರೆ ಬೇರೆ ಬ್ರ್ಯಾಂಡ್ ನದ್ದೇ ಆಗಿರುತ್ತದೆ.
ಒಟ್ಟಾರೆ ಸಿಂಗಾಪುರದ ಪ್ರವಾಸದಲ್ಲಿರುವ ನಟಿ ಮೇಘಾ ಶೆಟ್ಟಿ ದುಬಾರಿಯಾಗಿ ಓಡಾಡಿದ್ದಾರೆ. ಅದರ ಜೊತೆಗೆ ಅಲ್ಲಿನ ಸ್ಪೆಷಲ್ ಫುಡ್ ಅನ್ನು ಸವಿದಿದ್ದಾರೆ. ಅವರೇ ಹಾಕಿರುವ ಪೋಟೋದಲ್ಲಿ ಅವರು ಏನನ್ನ ತಿಂದಿದ್ದಾರೆ ಎಂಬುದನ್ನ ಕಾಣಬಹುದಾಗಿದೆ. ಚಿಕನ್ ಗ್ರೇವಿ ಜೊತೆಗೆ ರೈಸ್ ಒಂದನ್ನ ತೆಗೆದುಕೊಂಡಿದ್ದಾರೆ. ಆ ರೈಸ್ ಕಲರ್ ನೋಡಿದ್ರೆ ನಮ್ಮ ಕಡೆಯೆಲ್ಲಾ ಟಮೋಟೋ ರೈಸ್ ರೀತಿ ಕಾಣಿಸ್ತಾ ಇದೆ. ಆದರೆ ಅಲ್ಲಿ ಅದಕ್ಕೆ ಹೆಸರು ಬೇರೆ ಇರಬಹುದು.


Click it and Unblock the Notifications











