ಐತಿಹಾಸಿಕ ಸಾಧನೆ ಮಾಡುತ್ತಾರಾ ಶಾರುಖ್ ಖಾನ್ ? ಮೇ 5ರಂದು ಸೃಷ್ಟಿಯಾಗುತ್ತಾ ಇತಿಹಾಸ..?

ಬಣ್ಣದ ಪ್ರಪಂಚದಲ್ಲಿ ವಿಶ್ವದೆಲ್ಲೆಡೆ ಹಲವು ಕಾರ್ಯಕ್ರಮಗಳು ನಡೆಯುತ್ವೆ. ಆಸ್ಕರ್‌ನಂತಹ ಸಮಾರಂಭ ಮಾತ್ರವಲ್ಲ, ಅನೇಕರು ಫ್ಯಾಷನ್ ಪ್ರಪಂಚದಲ್ಲಿ ಕೂಡ ಮಿಂಚಲು ಹಾತೊರೆಯುತ್ತಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಇಲ್ಲಿಯವರೆಗೆ ಹಲವಾರು ಕಾರ್ಯಕ್ರಮಗಳ ನಡೆದಿವೆ. ಈ ಕಾರ್ಯಕ್ರಮಗಳಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳ ದಂಡು ರ್ಯಾಂಪ್ ವಾಕ್ ಮಾಡಿದೆ. ಆ ಪೈಕಿ ಮೆಟ್‌ಗಾಲಾ ಕೂಡ ಒಂದು. ಈ ಕಾರ್ಯಕ್ರಮಕ್ಕೆ ಆಹ್ವಾನ ಪಡೆಯುವುದೇ

ಪ್ರತಿಷ್ಠೆ ಎಂದು ಪರಿಗಣಿಸಲಾಗಿದೆ.ಒಂದು ರಾತ್ರಿ ನಡೆಯುವ ಫ್ಯಾಷನ್ ಲೋಕದ ಈ ಅತೀ ದೊಡ್ಡ ಈವೆಂಟ್‌ ನಲ್ಲಿ ಭಾಗವಹಿಸುವುದು ಅನೇಕರ ಕನಸು ಕೂಡ ಹೌದು, ಮನರಂಜನೆಯ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಬಹುದೊಡ್ಡ ಕಾರ್ಯಕ್ರಮ ಎಂದೇ ಬಿಂಬಿತವಾದ ಈ ಇವೆಂಟ್‌ ಈ ಬಾರಿ ಕೂಡ ಶುರುವಾಗಲಿದೆ.

Met Gala 2025 List of Indian Celebs Attending Will Shah Rukh Khan Make History

ಹೀಗಾಗಿ ಈ ಬಾರಿ ಯಾರನ್ನೆಲ್ಲ ನಾವು ನೋಡಬಹುದು ಎನ್ನುವ ಕುತೂಗಲ ಫ್ಯಾಷನ್ ಪ್ರಿಯರಲ್ಲಿದೆ. ಇದಕ್ಕೆ ಪೂರಕವಾಗಿ ಜೋಯ್ ಕಿಂಗ್, ಮಿರಾಂಡಾ ಕೆರ್, ಕ್ಲೋಯ್ ಸೆವೆಗ್ನಿ ಸೇರಿ ಹಲವು ವಿಶ್ವವಿಖ್ಯಾತ ತಾರೆಯರು ಈ ಬಾರಿ ಮೆಟ್‌ಗಾಲಾದಲ್ಲಿ ಹೆಜ್ಜೆ ಹಾಕಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಇವರಷ್ಟೇ ಅಲ್ಲ ಹಾಲಿವುಡ್‌ನ ಪ್ರಖ್ಯಾತ ಸ್ಟಾರ್‌ಗಳಾದ ನಿಕೋಲ್ ಕಿಡಮನ್, ಮೋನಿಕಾ ಬಾರ್ಬರೋ, ಡ್ಯಾಮ್ಸನ್ ಇದ್ರಿಸ್ , ಮಾಲ್ಕಮ್ ವಾಷಿಂಗ್ಟನ್, ಜೋಯ್ ಸಲ್ಡಾನ್ ಹೀಗೆ ಅನೇಕ ಹಾಲಿವುಡ್ ಸ್ಟಾರ್‌ಗಳು ಕೂಡ ಈ ಬಾರಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಜೋಡಿ ಟರ್ನರ್-ಸ್ಮಿತ್, ಜಾನಿಕ್ಜಾ ಬ್ರಾವೋ, ನಿಕೋಲ್ ಕಿಡಮನ್, ಜೊಯ್ ಸಲ್ಡಾನಾ ಕೂಡ ಈ ಬಾರಿಯ ಮೆಟ್‌ಗಾಲಾ ಫ್ಯಾಷನ್ ಇವೆಂಟ್ ಕಳೆ ಹೆಚ್ಚಿಸಲಿದ್ದಾರೆ ಎಂದು ಸುದ್ದಿಯಾಗಿದೆ.

ಇನ್ನು ಭಾರತದಿಂದ ಬಾಲಿವುಡ್‌ನ ಸೂಪರ್ ಸ್ಟಾರ್ ಶಾರುಖ್ ಖಾನ್ ಈ ಬಾರಿಯ ಮೆಟ್‌ಗಾಲಾ ಫ್ಯಾಷನ್ ಇವೆಂಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಸೇರಿ ಅನೇಕ ಪತ್ರಿಕೆಗಳು ವರದಿಯನ್ನು ಮಾಡಿವೆ. ಹಾಗೊಂದು ವೇಳೆ ಈ ಸುದ್ದಿ ನಿಜಾ ಆಗಿದ್ದೇ ಆದಲ್ಲಿ ಮೆಟ್‌ಗಾಲಾದ ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಗೆ ಶಾರುಖ್ ಖಾನ್ ಪಾತ್ರವಾಗಲಿದ್ದಾರೆ.

ಯಾಕೆಂದರೆ ಹಿಂದೆ ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಆಲಿಯಾ ಭಟ್ ಸೇರಿ ಭಾರತದ ಅನೇಕ ನಾಯಕಿಯರು ಈ ಫ್ಯಾಷನ್ ಇವೆಂಟ್‌ನಲ್ಲಿ ಭಾಗವಹಿಸಿದ್ದಾರೆ. ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಚಿತ್ರ ವಿಚಿತ್ರವಾದ ವೇಷ ಭೂಷಣವನ್ನು ಧರಿಸಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಇಂತಹ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೆ ಭಾರತದ ಯಾವ ನಟ ಕೂಡ ಭಾಗವಹಿಸಿಲ್ಲ. ಹೀಗಾಗಿ ಓಗ ಎಲ್ಲರ ಕಣ್ಣು ಈ ಮೇ 5ರ ಮೇಲೀದೆ. ಶಾರುಖ್ ಖಾನ್ ಮೆಟ್‌ಗಾಲಾದಲ್ಲಿ ಭಾಗವಹಿಸುತ್ತಾರಾ ? ಈ ಮೂಲಕ ಐತಿಹಾಸಿಕ ಸಾಧನೆ ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಅಧಿಕೃತ ಉತ್ತರ ಕೂಡ ಅವತ್ತೇ ಸಿಗಲಿದೆ.

ಶಾರುಖ್ ಖಾನ್ ಹೊರತು ಪಡಿಸಿದರೆ ಈ ಬಾರಿ ಕೂಡ ಪ್ರಿಯಾಂಕ ಚೋಪ್ರಾ ಈ ಮೆಟ್‌ಗಾಲಾ ಫ್ಯಾಷನ್ ಇವೆಂಟ್‌ನಲ್ಲಿ ಭಾಗವಹಿಸಲಿದ್ದಾರೆ. ಶಾರುಖ್ ಖಾನ್ ಒಂದು ವೇಳೆ ಈ ಕಾರ್ಯಕ್ರಮಕ್ಕೆ ಬಂದರೆ ಅನೇಕ ವರ್ಷಗಳ ನಂತರ ಪ್ರಿಯಾಂಕ ಚೋಪ್ರಾ ಮತ್ತು ಶಾರುಖ್ ಖಾನ್ ಮುಖಾಮುಖಿಯಾದಂತೆ ಆಗಲಿದೆ. ಅಂದ್ಹಾಗೇ ಶಾರುಖ್ ಖಾನ್ ಮತ್ತು ಪ್ರಿಯಾಂಕ ಚೋಪ್ರಾ ನಡುವೆ ಸಂಬಂಧ ಇತ್ತು ಎನ್ನುವ ಮಾತು ಮೊದಲಿಂದ ಇದೆ. ಹೀಗಾಗಿ ಈ ಭೇಟಿ ಈಗ ಅನೇಕರಲ್ಲಿ ಕುತೂಹಲ ಕೆರಳಿಸಿದೆ.

ಈ ಇಬ್ಬರನ್ನು ಹೊರತು ಪಡಿಸಿದರೆ ಗರ್ಭಿಣಿಯಾಗಿರುವ ಕಿಯಾರಾ ಅಡ್ವಾಣಿ, ಪಂಜಾಬ್‌ನ ಖ್ಯಾತ ಗಾಯಕ ಮತ್ತು ನಾಯಕ ದಿಲ್ಜಿತ್ ದೊಸಾಂಜ್ ಮತ್ತು ಇಶಾ ಅಂಬಾನಿ ಕೂಡ ಈ ಬಾರಿ ಮೆಟ್‌ಗಾಲಾ ಫ್ಯಾಷನ್ ಇವೆಂಟ್‌ನಲ್ಲಿ ಭಾಗವಹಿಸಲಿದ್ದಾರೆ.

More from Filmibeat

English summary
As anticipation reaches a fever pitch for the Met Gala on May 5, all eyes turn to Bollywood royalty — Shah Rukh Khan — who is poised to make a historic debut on fashion’s most exclusive red carpet. Taking place at the legendary Metropolitan Museum of Art in New York, his appearance, styled by India’s iconic Sabyasachi, promises a cultural moment like no other. For Indian fans, this isn’t just fashion — it’s legacy in the making
Read more about: shah rukh khan fashion life style
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X