ಪ್ರಿಯಾಂಕಾ ಚೋಪ್ರಾ ಐವರಿ ಲೆಹೆಂಗಾ ಸೀರೆ ಲುಕ್ ಹೇಗಿದೆ? ಫ್ಯಾಷನ್ ರಾಣಿ ಸೃಷ್ಟಿಸಿದ ಹೊಸ ಟ್ರೆಂಡ್ ಏನು?

By Srushti. S G

ಪ್ರಿಯಾಂಕಾ ಚೋಪ್ರಾ ಸಾರ್ವಜನಿಕವಾಗಿ ಹೆಜ್ಜೆ ಇಟ್ಟರೆಂದರೆ ಸಾಕು ಅದು ಫ್ಯಾಷನ್ ಲೋಕದಲ್ಲಿ ದೊಡ್ಡ ಕ್ರಾಂತಿಯೇ ಸೃಷ್ಟಿಸುತ್ತದೆ. ತಮ್ಮ ಪ್ರತಿ ಚಲನವಲನದಲ್ಲೂ ಅವರು ಹೊಸ ಶೈಲಿಯನ್ನು ಇಂಟ್ರುಡ್ಯೂಸ್ ಮಾಡುತ್ತಾರೆ. ಇತ್ತೀಚೆಗೆ ಅವರು ಧರಿಸಿದ ಮಿನುಗುವ ಐವರಿ ಲೆಹೆಂಗಾ-ಸೀರೆಯ ಸೌಂದರ್ಯವು ಫ್ಯಾಷನ್ ಪ್ರಿಯರ ಕಣ್ಮನ ಸೆಳೆದಿದೆ.

ನಟಿಯ ಈ ಸೌಂದರ್ಯ ಇಡೀ ಬಾಲಿವುಡ್ ತಾರೆಯರಿಗೆ ಶೈಲಿಯ ಹೊಸ ಪಾಠ ಹೇಳಿಕೊಟ್ಟಿದೆ. ಉಡುಗೆ-ತೊಡುಗೆಗಳ ವಿಷಯದಲ್ಲಿ ಪ್ರಿಯಾಂಕಾ ಚೋಪ್ರಾ ಯಾವಾಗಲೂ ಮುಂಚೂಣಿಯಲ್ಲೇ ಇರುತ್ತಾರೆ. ಈ ರಾಜಗಾಂಭೀರ್ಯದ ಐವರಿ ಉಡುಗೆಯಿಂದ ಅವರು ಬಾಲಿವುಡ್‌ನ ಫ್ಯಾಷನ್ ರಾಣಿ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

Priyanka Chopra Regal Ivory Lehenga Saree and Why It s the Biggest Fashion Trend of the Season

ಈ ಲೆಹೆಂಗಾ-ಸೀರೆಯು ಬರಿ ಧಿರಿಸಲ್ಲ. ಇದೊಂದು ಸೂಕ್ಷ್ಮವಾದ ಅತ್ಯದ್ಭುತ ವಿನ್ಯಾಸದ ಮಿಳಿತ. ಈ ಮುತ್ತಿನಂಥ ಉಡುಗೆಯ ಕಥೆ ಹಾಗೂ ಅದರ ಶೈಲಿಯ ರಹಸ್ಯ ಏನೆಂದು ತಿಳಿಯೋಣ ಬನ್ನಿ.

ಮಿನುಗು ಐವರಿ ಸೀರೆಯ ಮೋಡಿ

ಐವರಿ (ಕ್ರೀಮ್ ಬಿಳುಪು) ಬಣ್ಣವು ಯಾವತ್ತಿಗೂ ರಾಜವೈಭವದ ಮತ್ತು ಸಾಂಪ್ರದಾಯಿಕ ಸೊಗಸನ್ನು ನೀಡುತ್ತದೆ. ಪ್ರಿಯಾಂಕಾ ಆಯ್ಕೆ ಮಾಡಿಕೊಂಡಿರುವ ಈ ಉಡುಪಿನಲ್ಲಿ ಲೆಹೆಂಗಾದ ಗತ್ತು ಮತ್ತು ಸೀರೆಯ ಸೊಬಗು ಸೇರಿಕೊಂಡು ಒಂದಕ್ಕೊಂದು ಬೆಸೆದುಕೊಂಡಿವೆ. ಈ ವಿಭಿನ್ನ ಶೈಲಿಯ ಧಿರಿಸನ್ನು ಪ್ರಿಯಾಂಕಾ ಚೋಪ್ರಾ ಅತ್ಯಂತ ಸಲೀಸಾಗಿ ಧರಿಸಿದ್ದಾರೆ. ಇದು ನಮ್ಮ ಸಾಂಪ್ರದಾಯಿಕ ಉಡುಗೆಗಳಿಗೆ ಹೊಸ ತಿರುವು ನೀಡಿದಂತಿದೆ. ಸಾಂಪ್ರದಾಯಿಕ ಉಡುಪುಗಳನ್ನೂ ಸಹ ಹೇಗೆ ಆಧುನಿಕವಾಗಿ ತೊಡಬಹುದು ಎಂಬುದಕ್ಕೆ ಈ ಲುಕ್ ಉತ್ತಮ ನಿದರ್ಶನ.

ಕಲಾತ್ಮಕ ಕಸೂತಿಯ ಕಲರವ

ಈ ಲೆಹೆಂಗಾ-ಸೀರೆಯ ಮೇಲೆ ಮಾಡಿದ ಕಸೂತಿ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಈ ಉಡುಪಿನ ಹೈಲೈಟ್ ಅಂದರೆ, ಎಲ್ಲಾ ಕಡೆ ಸೂಕ್ಷ್ಮವಾದ ಎಳೆಗಳ ಕಸೂತಿ ಮಾಡಲಾಗಿದೆ. ಚಿಕ್ಕ ಚಿಕ್ಕ ಮಣಿಗಳು ಮತ್ತು ಹೊಳೆಯುವ ಜರಿಗಳಿಂದ ಅಲಂಕರಿಸಲಾಗಿದೆ. ಪ್ರತಿ ನೂಲಿನ ಎಳೆಯೂ ಒಂದೊಂದು ಕಲೆಯ ಕಥೆಯನ್ನು ಹೇಳುತ್ತದೆ.ಈ ವಿನ್ಯಾಸವು ಪ್ರಿಯಾಂಕಾ ಚೋಪ್ರಾ ತೊಟ್ಟಿರುವ ಉಡುಪಿನ ಮೌಲ್ಯವನ್ನು ಹೆಚ್ಚಿಸಿದೆ. ಈ ಉಡುಗೆ ತೊಡುವ ಮೂಲಕ ನಮ್ಮ ದೇಶದ ವಸ್ತ್ರ ವಿನ್ಯಾಸವನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಲಾಗಿದೆ.


ಪ್ರಿಯಾಂಕಾ ಚೋಪ್ರಾ ಆತ್ಮವಿಶ್ವಾಸ

ಪ್ರಿಯಾಂಕಾ ಚೋಪ್ರಾ ಅವರ ಈ ರಾಜಗಾಂಭೀರ್ಯದ ನೋಟ ಕೇವಲ ಉಡುಪಿನಿಂದ ಬಂದಿದ್ದಲ್ಲ. ಅವರ ದೃಢ ವಿಶ್ವಾಸ ಹಾಗೂ ಸ್ಟೈಲಿಂಗ್ ಸೆನ್ಸ್‌ನಿಂದ ಬಂದಿದೆ. ಪ್ರಿಯಾಂಕಾ ಅತ್ಯಂತ ಸರಳವಾಗಿ ಈ ಉಡುಪನ್ನು ಧರಿಸಿದ್ದಾರೆ. ಇಲ್ಲಿರುವ ಇನ್ನೊಂದು ಹೈಲೈಟ್ ಅಂದರೆ, ಈ ಉಡುಪಿಗೆ ಬಳಸಿದ ಆಭರಣಗಳು ಅತ್ಯಂತ ಕಡಿಮೆ. ಹೆವಿ ಎನಿಸುವ ಆಭರಣಗಳನ್ನು ಕೈಬಿಟ್ಟು ಸೀರೆಯ ನೈಜ ಕಾಂತಿಯನ್ನು ಹೆಚ್ಚಿಸಿದ್ದಾರೆ. ಲಘು ಮೇಕಪ್ ಹಾಗೂ ಅಚ್ಚುಕಟ್ಟಾದ ಕೇಶ ವಿನ್ಯಾಸ ಆ ಐವರಿ ಸೀರೆಯ ಸೊಬಗಿಗೆ ಮತ್ತಷ್ಟು ಪೂರಕ ಎನಿಸಿದೆ. ಪ್ರಿಯಾಂಕಾ ಚೋಪ್ರಾ ನಿಲುವು ಹಾಗೂ ನಗು ಈ ಉಡುಪಿನ ಗತ್ತನ್ನು ದುಪ್ಪಟ್ಟು ಮಾಡಿದೆ.

ಜಾಗತಿಕ ಸ್ಟೈಲ್ ಐಕಾನ್

ಪ್ರಿಯಾಂಕಾ ಚೋಪ್ರಾ ಕೇವಲ ಬಾಲಿವುಡ್ ನಟಿ ಮಾತ್ರವಲ್ಲ. ಹಾಲಿವುಡ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಭಾರತದ ಬಿಟ್ಟು ಬೇರೆ ಎಲ್ಲೇ ಕೆಲಸ ಮಾಡಿದರೂ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಲೇ ಇರುತ್ತಾರೆ. ಈ ಐವರಿ ಲೆಹೆಂಗಾ-ಸೀರೆಯು ಭಾರತೀಯ ಸಂಸ್ಕೃತಿ ಹಾಗೂ ಆಧುನಿಕ ಶೈಲಿಯ ಅತ್ಯದ್ಭುತ ಸಮಾಗಮ. ಪ್ರಿಯಾಂಕಾ ಚೋಪ್ರಾ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆಯನ್ನು ಹೊಸ ರೂಪದಲ್ಲಿ ಜಗತ್ತಿಗೆ ಪರಿಚಯಿಸಿದ್ದಾರೆ. ಈ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ ಮತ್ತೊಮ್ಮೆ ಬಾಲಿವುಡ್‌ನ ಫ್ಯಾಷನ್ ಲೋಕದ ಅಧಿಪತಿ ಎಂದು ಸಾಬೀತು ಮಾಡಿದಂತಾಗಿದೆ.

More from Filmibeat

English summary
Priyanka Chopra Regal Ivory Lehenga Saree and Why It's the Biggest Fashion Trend of the Season.
Read more about: priyanka chopra actress fashion
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X