ರಾಜಮೌಳಿ ಸಿನಿಮಾದಲ್ಲಿ ಸೀರೆಯುಟ್ಟು ಗನ್ ಹಿಡಿದ 'ಮಂದಾಕಿನಿ'; ಪ್ರಿಯಾಂಕಾ ಚೋಪ್ರಾ ಸೀರೆ ಕ್ರೇಜ್‌ಗೆ ಫಿದಾ
ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಈಗ ಭಾರತೀಯ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡುತ್ತಿದ್ದಾರೆ. ಅದು ನಿರ್ದೇಶಕ ಎಸ್ ಎಸ್ ರಾಜಮೌಳಿಯ ಬಹು ನಿರೀಕ್ಷಿತ ಸಿನಿಮಾದ ಮೂಲಕ ಗ್ರ್ಯಾಂಡ್ ಆಗಿ ಗ್ಲೋಬಲ್ ಎಂಟ್ರಿ ಕೊಡಲಿದ್ದಾರೆ.
ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪ್ರಿಯಾಂಕಾ ಅವರ 'ದೇಸಿ ಗರ್ಲ್' ಲುಕ್ ಪೋಸ್ಟರ್ ಎಲ್ಲೆಡೆ ಸಖತ್ ವೈರಲ್ ಆಗಿದೆ. ಸೀರೆಯುಟ್ಟು ಗನ್ ಹಿಡಿದು ಆಕ್ಷನ್ ಮೂಡ್‌ನಲ್ಲಿರುವ ಪ್ರಿಯಾಂಕಾ ಅಭಿಮಾನಿಗಳನ್ನು ತನ್ನತ್ತ ಸೆಳೆದಿದ್ದಾರೆ.

ಸೀರೆ ಮತ್ತು ಗನ್: ಮಂದಾಕಿನಿ ಲುಕ್
ಪೋಸ್ಟರ್‌ನಲ್ಲಿ ಪ್ರಿಯಾಂಕಾ ಸೀರೆಯ ಲುಕ್ ಸಿನಿಮಾ ಪ್ರಿಯರ ಗಮನ ಸೆಳೆದಿದೆ. ಅವರು ಹಳದಿ ಬಣ್ಣದ ಸೀರೆ ಉಟ್ಟು, ಕೈಯಲ್ಲಿ ಗನ್ ಹಿಡಿದಿದ್ದಾರೆ. ಅವರ ಈ ನೋಟ ನಿಜಕ್ಕೂ ಸಿಕ್ಕಾಪಟ್ಟೆ ಥ್ರಿಲ್ಲಿಂಗ್ ಆಗಿದೆ. ಇದು ಭಾರತ ಸಾಂಪ್ರದಾಯಿಕ ಉಡುಗೆ ಸೀರೆಯ ಮೇಲೆ ಪ್ರಿಯಾಂಕಾ ಅವರಿಗಿರುವ ಅಪಾರ ಪ್ರೀತಿಯನ್ನು ತೋರಿಸಿದೆ. ಈ ಪೋಸ್ಟರ್ ನಿಜಕ್ಕೂ ಥ್ರಿಲ್ ಕೊಟ್ಟಿದೆ. ಪ್ರಿಯಾಂಕಾ ಆಕ್ಷನ್ ಮೂಡ್‌ನಲ್ಲಿ ಒಂದು ಕೈಯಲ್ಲಿ ಗನ್ ಹಿಡಿದು, ಮತ್ತೊಂದು ಕೈಯಲ್ಲಿ ಸಮತೋಲನ ಕಾಯ್ದುಕೊಳ್ಳುತ್ತಿದ್ದಾರೆ.
ಈ ಹಳದಿ ಸೀರೆ ಲುಕ್ ಕಿಕ್ ಕೊಟ್ಟಿದೆ. ಇದು ದೇಸಿ ಗರ್ಲ್ ಫೀಲ್ ಜೊತೆ ಗ್ಲೋಬಲ್ ಆಕ್ಷನ್ ಸ್ಪರ್ಶ ಕೊಟ್ಟಿದೆ. ಈ ಮೂಲಕ ಸೀರೆಗೂ ಮತ್ತು ಆಕ್ಷನ್‌ಗೂ ಒಂದು ಹೊಸ ಕನೆಕ್ಷನ್ ಸಿಕ್ಕಿದೆ. ಸೀರೆ ಉಟ್ಟೂ ಸಾಹಸ ಮಾಡಿಸಿರುವ ರಾಜಮೌಳಿ ಕಲ್ಪನೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಭಾರತೀಯ ಮಹಿಳೆಯರ ಶಕ್ತಿಯ ಪ್ರತೀಕವೂ ಆಗಿದೆ. ಹಾಗಂತ ಪ್ರಿಯಾಂಕಾ ಚೋಪ್ರಾ ಸೀರೆಯುಟ್ಟು ಸಿನಿಮಾದಲ್ಲಿ ಕಂಗೊಳಿಸಿದ್ದು ಇದೇ ಮೊದಲೇನಲ್ಲ.
'ದೇಸಿ ಗರ್ಲ್'ನ ಸೀರೆ ಕ್ರೇಜ್‌ಗೆ ಜಾಗತಿಕ ವೇದಿಕೆ
ಪ್ರಿಯಾಂಕಾ ಚೋಪ್ರಾ ಸೀರೆಯುಟ್ಟು ಆಕ್ಷನ್ ಮೂಡ್‌ನಲ್ಲಿರುವ ಲುಕ್‌ಗೆ ಇಡೀ ಜಗತ್ತು ಕ್ಲೀನ್ ಬೋಲ್ಡ್ ಆಗಿದೆ. ಇನ್ನು ಕೆಲವರು ಸೀರೆಯುಟ್ಟು ಆಕ್ಷನ್ ಸೀನ್ ಅಂತಾನೂ ಅಂತಿದ್ದಾರೆ. ಅದೇನೆ ಇದ್ದರೂ ಪ್ರಿಯಾಂಕಾ ಚೋಪ್ರಾ ಸೀರೆ ಪ್ರೀತಿ ಬಲು ದೊಡ್ಡದು. ಹಾಲಿವುಡ್‌ಗೆ ಎಂಟ್ರಿ ಕೊಟ್ಟು ದೊಡ್ಡ ಸ್ಟಾರ್ ಆದರೂ, ಅವರು ಅಂಜಿಕೆಯಿಲ್ಲದೆ ಸೀರೆ ಉಡುವುದನ್ನು ಬಿಟ್ಟಿಲ್ಲ. ವಿಶ್ವದ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲೂ ಹೆಮ್ಮೆಯಿಂದ ಸೀರೆಯನ್ನು ಧರಿಸುತ್ತಾರೆ.
ಪ್ರಿಯಾಂಕಾ ಪ್ರಕಾರ ಸೀರೆ ಕೇವಲ ಸಾಂಪ್ರದಾಯಿಕ ಉಡುಗೆ ಅಲ್ಲ. ಅದು ಆಧುನಿಕ, ಗ್ಲಾಮರಸ್ ಮತ್ತು ಸ್ಟೈಲಿಶ್ ಆಗಿಯೂ ಇರಬಲ್ಲದು. ತಮ್ಮ ವಿಭಿನ್ನ ಲುಕ್‌ಗಳ ಮೂಲಕ ಅವರು ಇದನ್ನು ಸಾಬೀತು ಮಾಡಿದ್ದಾರೆ. ಪ್ರಿಯಾಂಕಾ ಅವರ ಸೀರೆ ಆಯ್ಕೆ ಯಾವಾಗಲೂ ಹೊಸ ಟ್ರೆಂಡ್‌ಗಳನ್ನು ಸೆಟ್ ಮಾಡುತ್ತದೆ.

ರಾಜಮೌಳಿಯ ಪೋಸ್ಟರ್‌ನಿಂದ ಶಕ್ತಿಶಾಲಿ ಸಂದೇಶ
ರಾಜಮೌಳಿ ನಿರ್ದೇಶದನ ಸಿನಿಮಾದ ಪ್ರಿಯಾಂಕಾ ಲುಕ್ ಬೇರೊಂದು ಲೆವೆಲ್ ಕ್ರೇಜ್‌ಗೆ ಉದಾಹರಣೆ. ಈ ಲುಕ್ ಒಂದು ಶಕ್ತಿಶಾಲಿ ಸಂದೇಶವನ್ನು ಸಾರುತ್ತದೆ. ಸೀರೆ ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ. ಸೀರೆಯುಟ್ಟು ಆಕ್ಷನ್ ಕೂಡ ಮಾಡುವುದು ಅನ್ನೋ ಆಲೋಚನೆ. ಈ ಲುಕ್ ಭಾರತೀಯ ಮಹಿಳೆಯರ ನಿಜವಾದ ಶಕ್ತಿ ಮತ್ತು ದಿಟ್ಟತನವನ್ನು ಪ್ರತಿಬಿಂಬಿಸಿದೆ. 'ಮಂದಾಕಿನಿ' ಪಾತ್ರದ ಹೆಸರಿನಲ್ಲೂ ಒಂದು ಪವರ್‌ಫುಲ್ ಗತ್ತಿದೆ.
ಗ್ಲೋಬಲ್ ಸಿನಿಮಾದಲ್ಲಿ ಸೀರೆಗೆ ವಿಶೇಷ ಸ್ಥಾನ
ಪ್ರಿಯಾಂಕಾ ಚೋಪ್ರಾ ಸೀರೆಯನ್ನು ಸಾಂಪ್ರದಾಯಿಕ ಮತ್ತು ಗ್ಲೋಬಲ್ ಕಲ್ಚರ್‌ನ ಒಂದು ಮುಖ್ಯ ಭಾಗ ಎಂದು ಕರೆದಿದ್ದಾರೆ. ಯಾವುದೇ ಉಡುಗೆಯನ್ನು ಆತ್ಮವಿಶ್ವಾಸದಿಂದ ಧರಿಸಬೇಕು ಎಂಬುದನ್ನು ಈ ನಟಿ ಜಗತ್ತಿಗೆ ತೋರಿಸಿದ್ದಾರೆ. ಸೀರೆ ಉಟ್ಟಾಗ ಅವರಿಗೆ ಸಿಗುವ ಗೌರವ ಮತ್ತು ಗಮನವೇ ಬೇರೆ. ಆ ಸೀರೆಯ ಕ್ರೇಜ್, ಈಗ ರಾಜಮೌಳಿ ಅವರ ಬಹುಕೋಟಿ ವೆಚ್ಚದ ಸಿನಿಮಾದ ಮೂಲಕ ಮತ್ತಷ್ಟು ಹೆಚ್ಚಾಗಿದೆ. ಸೀರೆಯುಟ್ಟು ಗನ್ ಹಿಡಿದಿರುವ ಮಂದಾಕಿನಿಯ ದೃಶ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಸೀರೆ ಫ್ಯಾಷನ್ ಭವಿಷ್ಯ
ರಾಜಮೌಳಿ ಸಿನಿಮಾ ಪ್ರಿಯಾಂಕಾ ಅವರ ಸೀರೆ ಕ್ರೇಜ್ ಅನ್ನು ಗ್ಲೋಬಲ್ ಹಂತಕ್ಕೆ ಕೊಂಡೊಯ್ಯುತ್ತದೆ. ಸೀರೆ ಎಂದರೆ ಕೇವಲ ಮದುವೆ ಅಥವಾ ಹಬ್ಬಕ್ಕೆ ಸೀಮಿತವಾಗುವುದಿಲ್ಲ. ಅದು ಸಾಹಸ, ಆಕ್ಷನ್ ಮತ್ತು ಶಕ್ತಿಯ ಸಂಕೇತವೂ ಆಗುತ್ತದೆ. ಸೀರೆಯುಟ್ಟು ಗನ್ ಹಿಡಿದ ಮಂದಾಕಿನಿ, ಭಾರತೀಯ ನಾರಿಯ ಹೊಸ ಪ್ರತಿರೂಪ. ಇದು ಯುವ ಪೀಳಿಗೆಗೆ ಸೀರೆಯ ಮೇಲೆ ಇನ್ನಷ್ಟು ಆಸಕ್ತಿ ಮೂಡಿಸುವುದರಲ್ಲಿ ಅನುಮಾನವಿಲ್ಲ. ಈ ಚಿತ್ರವು ಬಿಡುಗಡೆಯಾದ ಮೇಲೆ ಸೀರೆ ಹೊಸ ಟ್ರೆಂಡ್ ಅನ್ನು ಸೃಷ್ಟಿಸುವುದು ಖಚಿತ.


Click it and Unblock the Notifications











