'ಪುಟ್ಟಕ್ಕನ ಮಕ್ಕಳು' ಸೀರಿಯಲ್ ನಟಿ ಅಕ್ಷರಾ ಫಿಟ್ನೆಸ್ ಸೀಕ್ರೆಟ್ ಏನ್ ಗೊತ್ತೇ?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ದೊಡ್ಡ ಮಗಳು ಸಹನಾ. ಸಿಕ್ಕಾಪಟ್ಟೆ ಮುಗ್ಧತೆ ಇದ್ದರು ರೊಚ್ಚಿಗೇಳಿಸಿದರೆ ಕಾಳಿ ಅವತಾರವನ್ನೇ ತಾಳುತ್ತಾಳೆ. ಅದು ಪಾತ್ರದ ಕಥೆ. ಆದರೆ ಸಹನಾ ಪಾತ್ರ ಮಾಡಿರುವ ಅಕ್ಷರಾ ನಿಜ ಜೀವನದಲ್ಲೂ ಅಷ್ಟೇ ಇನೊಸೆಂಟ್ ರೀತಿಯೇ ಕಾಣಿಸುತ್ತಾರೆ. ಜೊತೆಗೆ ಒಳ್ಳೆ ಫಿಟ್ನೆಸ್ ಮೆಂಟೈನ್ ಮಾಡಿದ್ದಾರೆ.
ಈ ರೀತಿಯ ಫಿಟ್ನೆಸ್‌ಮೆಂಟೈನ್ ಮಾಡುವುದಕ್ಕೆ ಬಹಳ ಮುಖ್ಯವಾಗಿ ಡಯೆಟ್ ಕಾರಣ ಅಂತಾನೂ ಹೇಳ್ತಾರೆ. ಫಿಟ್ನೆಸ್ ಮೆಂಟೈನ್ ಮಾಡುವುದಕ್ಕೆ ಅಕ್ಷರಾ ಕೂಡ ಡಯೆಟ್ ಮಾಡ್ತಾರೆ. ಬ್ಯುಸಿ ಶೆಡ್ಯೂಲ್ ಇದ್ದಾಗ ಮಾತ್ರ ಅವರ ಡಯೆಟ್ ಸ್ಕಿಪ್ ಆಗುತ್ತೆ. ಇಲ್ಲದೆ ಹೋದಲ್ಲಿ ಡಯೆಟ್ ಬ್ರೇಕ್ ಆಗುವ ಮಾತೇ ಇಲ್ಲ. ತಮ್ಮ ಫಿಟ್ನೆಸ್ ಗುಟ್ಟು ಈ ಡಯೆಟ್ ಅಂತಾನೇ ಹೇಳ್ತಾರೆ.

ಡಯೆಟ್ ಫಾಲೋ ಮಾಡ್ತಾ ಇದ್ದಾಗ ಸಾಮಾನ್ಯವಾಗಿ ಅವರು ತಿನ್ನುವುದು ಡಯೆಟ್ ಆಹಾರವೇ ಆಗಿರುತ್ತದೆ. ಅದರಲ್ಲೂ ಬೆಳಗ್ಗೆ ಓಟ್ಸ್ ತಿಂತಾರೆ, ನಡುವೆ ಸ್ವಲ್ಪ ಫ್ರೂಟ್ಸ್ ತಿಂತಾರೆ. ಹಾಗೇ ಮಧ್ಯಾಹ್ನದ ಊಟಕ್ಕೆ ಲೈಟ್ ಎನಿಸುವಂತ ಮೀಲ್ಸ್ ತಿಂತಾರೆ. ರಾತ್ರಿ ಊಟಕ್ಕೂ ಅಷ್ಟೇ ಜಾಸ್ತಿ ಎನಿಸುವಂತ ಆಹಾರವನ್ನು ತಿನ್ನುವುದೇ ಇಲ್ಲ. ಹೀಗೆ ತಮ್ಮ ಫಿಟ್ನೆಸ್ ಹಾಗೂ ಬ್ಯೂಟಿಯನ್ನ ಕಾಪಾಡಿಕೊಳ್ಳುತ್ತಾರೆ.
ಅಕ್ಷರಾ ಪ್ರಕಾರ, ಹೆಲ್ತ್ ನೋಡಿಕೊಳ್ಳುವುದಕ್ಕೆ, ಫಿಟೈಸ್ ಕಾಪಾಡಿಕೊಳ್ಳುವುದಕ್ಕೆ ಬರೀ ಡಯೆಟ್ ಇದ್ರೆ ಸಾಕಾಗಲ್ಲ. ಬದಲಿಗೆ ದೇಹಕ್ಕೆ ಒಂದಷ್ಟು ವ್ಯಾಯಾಮವನ್ನು ಪ್ರತಿ ದಿನ ನೀಡಬೇಕಾಗುತ್ತದೆ. ಆಗ ಬ್ಯೂಟಿ, ಫಿಟೈಸ್. ಹೆಲ್ತ್ ಎಲ್ಲವನ್ನು ಕಾಪಾಡಿಕೊಳ್ಳಬಹುದಾಗಿರುತ್ತದೆ. ಅಕ್ಷರಾ ಅವರು ಕೂಡ ಸಾಧ್ಯವಾದಷ್ಟು ವರ್ಕೌಟ್‌ಗೂ ಸಮಯ ಕೊಡುವುದಕ್ಕೆ ಪ್ರಯತ್ನ ಮಾಡ್ತಾರೆ. ಬ್ಯುಸಿ ಇದ್ರೂ ಕೂಡ ಸಮಯ ಮಾಡಿಕೊಂಡು ವರ್ಕೌಟ್ ಮಾಡ್ತಾರೆ. ಆಹಾರದ ವಿಚಾರದಲ್ಲಂತೂ ಬಹಳ ಮುಖ್ಯವಾಗಿ ಗಮನ ಹರಿಸುತ್ತಾರೆ. ಹೊರಗಿನ ಆಹಾರವನ್ನು ಮುಟ್ಟುವುದಕ್ಕೂ ಹೋಗಲ್ಲ. ಹೀಗಾಗಿಯೇ ಶೂಟಿಂಗ್ ಅಂತ ಹೋದಾಗಲೂ ಅವರು ಮನೆಯಿಂದಾನೇ ಫುಡ್ ತೆಗೆದುಕೊಂಡು ಹೋಗ್ತಾರೆ.
ಡೇ ಶೂಟ್ ಅಥವಾ ನೈಟ್ ಶೂಟ್ ಏನೇ ಇದ್ದರು. ಮನೆಯಿಂದಾನೇ ಫುಡ್ ಕ್ಯಾರಿ ಮಾಡ್ತಾರಂತೆ. "ನಮ್ಮ ಅಮ್ಮನೇ ನಂಗೆ ರೆಗ್ಯೂಲರ್ ಆಗಿ ಫುಡ್ ಮಾಡಿಕೊಡುವುದು. ಬಿಸಿ ಬೇಳೆ ಬಾತ್ ಅಂಡ್ ಟೊಮೆಟೋ ಬಾತ್ ತುಂಬಾ ಇಷ್ಟಪಟ್ಟು ತಿನ್ನುವ ಫುಡ್ ಆಗಿರುವುದರಿಂದ ವಾರಕ್ಕೆ ಎರಡು ಬಾರಿ ಆದ್ರೂ ಅಮ್ಮನ ಬಳಿ ಹೇಳಿ ಮಾಡಿಸಿಕೊಂಡು ತಿಂತೀನಿ. ಇನ್ನು ಹೊರಗಡೆ ಹೋದಾಗಲೂ ಹೆಚ್ಚು ನಾನ್ ವೆಜ್ ಅನ್ನೇ ಪ್ರಿಫರ್ ಮಾಡೋದು. ಅದರಲ್ಲೂ ಫಿಶ್ ಐಟಂ ಅಂದ್ರೆ ತುಂಬಾ ಇಷ್ಟಪಟ್ಟು ತಿಂತೀನಿ' ಅಂತಾರೆ.

ಇದಿಷ್ಟು ತಮ್ಮ ಬ್ಯೂಟಿ ಮೆಂಟೈನ್ ಮಾಡುವುದಕ್ಕೆ, ಫಿಟೈಸ್ ಕಾಪಾಡಿಕೊಳ್ಳುವುದಕ್ಕೆ ಅಕ್ಷರಾ ಪಾಲಿಸುವ ನಿಯಮಗಳು. ನೀವೂ ಕೂಡ ಫಿಟೈಸ್ ಕಾಪಾಡಿಕೊಂಡು, ಆರೋಗ್ಯದಿಂದ ಇರಬೇಕು ಅಂದ್ರೆ ಕೊಂಚ ಈ ಟಿಪ್ಸ್ ಫಾಲೋ ಮಾಡಿ. ನಮ್ಮ ವಯಸ್ಸಿನ ಮಿತಿ ಕೂಡ ಕಡಿಮೆ ಕಾಣಬೇಕು ಎಂದಾಗ ಫಿಟ್ನೆಸ್ ಬಹಳ ಮುಖ್ಯವಾಗುತ್ತದೆ. ವರ್ಕೌಟ್ ಮಾಡುತ್ತಾ ಇದ್ದರೆ, ಬೆವರು ಸುರಿದಾಗ ದೇಹದಲ್ಲಿನ ಟ್ಯಾನ್ ಕೂಡ ರಿಮೂವ್ ಆಗುತ್ತದೆ. ಆಗ ದೇಹದ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತದೆ. ಹೊಳೆಯುವ ತ್ವಜೆ ನಿಮ್ಮದಾಗುತ್ತದೆ. ಫಿಟ್ನೆಸ್ ಕಾಪಾಡಿಕೊಳ್ಳುವುದಕ್ಕೆ ನಿಮಗೆ ವರ್ಕೌಟ್ ಮಾಡಲು ಸಮಯ ಇಲ್ಲದೆ ಹೋದರೂ ಆಹಾರ ಕ್ರಮದಲ್ಲಿ ಅದನ್ನ ಪಾಲನೆ ಮಾಡಿ. ಆಗ ಫಿಟ್ ಅಂಡ್ ಫೈನ್ ಆಗಿ ಇರಬಹುದು. ಸೌಂದರ್ಯ ವೃದ್ದಿ ಮಾತ್ರವಲ್ಲ, ಆರೋಗ್ಯವೂ ಅದರಿಂದ ಸಿಗಲಿದೆ. ಹೀಗಾಗಿ ನೀವೂ ಕೂಡ ಅಕ್ಷರಾ ಹೇಳುವ ಟಿಪ್ಸ್ ಫಾಲೋ ಮಾಡಬಹುದು.


Click it and Unblock the Notifications











