ಫ್ಯಾಷನ್ ಬರಲ್ಲ ಅಂದವರಿಗೇನೆ ಶಾಕ್ ಕೊಟ್ಟ ರಶ್ಮಿಕಾ; ನೈಟ್ ಪಾರ್ಟಿಗೆ ಧರಿಸಿದ ಡ್ರೆಸ್ ಬೆಲೆ ಎಷ್ಟು?

By ಎಸ್. ಸುಮಂತ್

ರಶ್ಮಿಕಾ ಮಂದಣ್ಣ ಅವರ ಫೋಟೋಸ್‌ಗಳನ್ನ ನೋಡಿದರೆ ವಿಭಿನ್ನವಾದ ಫ್ಯಾಷನ್ ಫಾಲೋ ಮಾಡುವುದೇನು ಕಾಣಿಸುವುದಿಲ್ಲ. ಬಾಲಿವುಡ್ ಪ್ರವೇಶ ಮಾಡಿದರೂ ಒಂದೇ ರೀತಿಯ ಉಡುಪುಗಳನ್ನೇ ಧರಿಸುತ್ತಾರೆ. ಸೀರೆ ಲುಕ್, ಮಾಮೂಲಿ ಉಡುಗೆಗಳ ಲುಕ್‌ನಲ್ಲಿಯೇ ಪೋಸ್ ನೀಡುತ್ತಾರೆ. ಹೀಗೆಂದು ಭಾವಿಸಿದ್ದವರಿಗೆ ಸದ್ಯದ ಅವರ ಫೋಟೋ ಒಂದು ಕಿಕ್ಕೇರಿಸುವಂತಿದೆ. ಹೌದು, ರಶ್ಮಿಕಾ ಮಂದಣ್ಣ ಮ್ಯಾಡಕ್ ಫಿಲ್ಮ್ 2025ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಧರಿಸಿದ್ದ ಚಂದದ ಉಡುಗೆಯೊಂದು ಗಮನ ಸೆಳೆದಿದೆ.

ಈ ಕಾರ್ಯಕ್ರಮಕ್ಕೆ ಡಾರ್ಕ್ ಶೇಡ್ ಬರ್ಗಂಡಿ ಉಡುಪಿನಲ್ಲಿ ಗಮನ ಸೆಳೆದರು. ಬಹಳ ಆಕರ್ಷಣೀಯವಾದ ಡ್ರೆಸ್ ಅನ್ನು ರಶ್ಮಿಕಾ ಮಂದಣ್ಣ ಅವರು ಹಾಕಿದ್ದರು. ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ರಶ್ಮಿಕಾ ಇದೀಗ ತಮ್ಮ ವಿಭಿನ್ನ ಉಡುಗೆಯಿಂದ ಸುದ್ದಿಯಾಗಿದ್ದಾರೆ. ಹಾಗಾದ್ರೆ ಆ ಡ್ರೆಸ್ ಹೇಗಿದೆ..? ಅದರಲ್ಲಿ ರಶ್ಮಿಕಾ ಹೇಗೆ ಕಾಣಿಸ್ತಾರೆ ಅನ್ನೋ ಡಿಟೈಲ್ ಇಲ್ಲಿದೆ ನೋಡಿ.

Rashmika mandanna outfit price

ರಶ್ಮಿಕಾ ಮಂದಣ್ಣ ಅಂದು ರಾತ್ರಿ ಅಟೆಂಡ್ ಮಾಡಿದ ಕಾರ್ಯಕ್ರಮದಲ್ಲಿ ಗ್ಲಾಮರಸ್ ಲುಕ್‌ನಿಂದ ಎಲ್ಲರ ಚಿತ್ತ ಕದ್ದರು. ಅದು ವೆಲ್ವೆಟ್ ಕ್ಲಾತ್‌ನಿಂದ ತಯಾರಾಗಿದ್ದ ಮರೂನ್ ಕಲರ್ ಮಿಡಿಯಾಗಿತ್ತು. ಸ್ಕಿನ್ ಟಚ್ ಡ್ರೆಸ್ ಆಗಿರುವ ಕಾರಣ ರಶ್ಮಿಕಾ ಮಂದಣ್ಣ ಅವರನ್ನು ಮಿಡಿ ಬಿಗಿದಪ್ಪಿತ್ತು. ಆ ಬ್ಯೂಡಿಫುಲ್ ಡ್ರೆಸ್ ಜೊತೆಗೆ ಸಿಂಪಲ್ ಜ್ಯುವೆಲ್ಲರಿ ಕೂಡ ಹಾಕಿದ್ದರು. ಅದಕ್ಕೆ ಮ್ಯಾಚ್ ಆಗುವ ಫ್ಲಂಗಿಂಗ್ ನೆಕ್ಲೆಸ್ ಅನ್ನು ಹಾಕಿದ್ದರು. ಈ ಡ್ರೆಸ್‌ನಲ್ಲಿ ರಶ್ಮಿಮಾ ಮಂದಣ್ಣ ರೊಮ್ಯಾಂಟಿಕ್ ಆಗಿ ಕಾಣಿಸುತ್ತಿದ್ದರು.

ತುಂಬಾ ಸಿಂಪಲ್ ಆಗಿರುವ ಈ ಡ್ರೆಸ್ ಬೆಲೆ ಕೇಳಿದ್ರೆ ಖಂಡಿತ ನೀವೂ ಶಾಕ್ ಆಗ್ತೀರಾ. ಇದರ ಬೆಲೆ 40,615 ರೂಪಾಯಿ. ಸಿಂಪಲ್ ಡ್ರೆಸ್ ಜೊತೆಗೆ ಮ್ಯಾಚ್ ಆಗುವಂತಹ ಕಿವಿಯೋಲೆ, ಕೈಬೆರಳಿಗೆ ಉಂಗುರ, ಡ್ರೆಸ್ ಕಲರ್ ಇರುವ ಚಪ್ಪಲಿ ಧರಿಸಿ, ರೆಡ್ ಕಾರ್ಪೆಟ್ ಮೇಲೆ ನಡಿಗೆ ತೋರಿದರು. ಇಷ್ಟು ಒಳ್ಳೆಯ ಡ್ರೆಸ್ ಹಾಕಿರುವ ರಶ್ಮಿಕಾ ಮಂದಣ್ಣ ಮೇಕಪ್ ಹಾಕಿಕೊಳ್ಳದೆ ಇರುತ್ತಾರೆಯೇ?

ಐಶ್ ಶ್ಯಾಡೋ, ಆರ್ಟಿಫಿಷಿಯಲ್ ರೆಪ್ಪೆಗಳು, ತನ್ನ ಹುಬ್ಬುಗಳಿಗೆ ಒಳ್ಳೆ ಪೆನ್ಸಿಲ್ ಹಚ್ಚಿರೋದು ಕಾಣಿಸುತ್ತದೆ. ತನ್ನ ಮೃದುವಾದ ಕೆನ್ನೆಗಳ ಮೇಲೆ ಪಿಂಕ್ ಬ್ಲಶ್ ಬಳಕೆ ಮಾಡಿರುವುದು ಕಾಣಿಸಿದೆ. ಕೂದಲನ್ನು ಬಿಟ್ಟು, ಫ್ಲವರ್ ಇರೋ ಚಪ್ಪಲಿ ಧರಿಸಿ ಪೋಸ್ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಗ್ಲಾಮರ್ ಲುಕ್‌ನಲ್ಲಿ ಕಂಗೊಳಿಸಿದ್ದಾರೆ‌. ಒಂದು ವೇಳೆ ನಿಮ್ಮ ಸಂಗಾತಿಯೊಂದಿಗೆ ಪಾರ್ಟಿ ಅಟೆಂಡ್ ಮಾಡುತ್ತಿದ್ದರೆ, ರೊಮ್ಯಾಂಟಿಕ್ ಸಮಯ ಕಳೆಯಲು ಬಯಸಿದವರು ರಶ್ಮಿಕಾ ಮಂದಣ್ಣ ಹಾಕಿರುವ ವೆಲ್ವೆಟ್ ಡ್ರೆಸ್ ಆಯ್ಕೆ ಮಾಡಿಕೊಳ್ಳಬಹುದು. ಆಗ ನೀವೂ ಇನ್ನಷ್ಟು ರೊಮ್ಯಾಂಟಿಕ್ ಆಗಿ ಕಾಣಿಸುತ್ತೀರಿ. ಸುಂದರ ಗಳಿಗೆಯಲ್ಲಿ, ಇನ್ನಷ್ಟು ಸೌಂದರ್ಯವನ್ನು ತೋರಿಸಲು ಈ ಡ್ರೆಸ್ ಸಹಕಾರಿಯಾಗಲಿದೆ.

ಇನ್ನು ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ತಮ್ಮ ಹುಟ್ಟುಹಬ್ಬವನ್ನು ಫಾರಿನ್‌ನಲ್ಲಿ ಆಚರಿಸಿಕೊಂಡಿದ್ದಾರೆ. ತಮ್ಮ ಆತ್ಮೀಯ ಗೆಳೆಯ ವಿಜಯ್ ದೇವರಕೊಂಡ ಕೂಡ ಆ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು ಎಂದು ಅವರಿಬ್ಬರ ಫೋಟೋಗಳೇ ಹೇಳುತ್ತಿವೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಇದೆ ಎಂದೇ ಟಾಲಿವುಡ್ ಅಂಗಳದಿಂದ ಹಿಡಿದು ಬಾಲಿವುಡ್ ಅಂಗಳದ ತನಕವೂ ಗುಸುಗುಸು ಮಾತಾಡ್ತಾರೆ. ಆದರೆ, ಇಬ್ಬರು ಆ ಬಗ್ಗೆ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಬದಲಿಗೆ ಕೈ ಕೈ ಹಿಡಿದು ಓಡಾಡುತ್ತಾ, ಮುಚ್ಚು ಮರೆ ಮಾಡಿ ಅದಕ್ಕೊಂದಿಷ್ಟು ಪುಷ್ಠಿ ನೀಡುತ್ತಿದ್ದಾರೆ.

More from Filmibeat

English summary
Rashmika mandanna outfit price she wore in Maddock Films 20th anniversary celebration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X