ರುಕ್ಮಿಣಿ ವಸಂತ್ ಸೌಂದರ್ಯದ ಸೀಕ್ರೆಟ್ ರಿವೀಲ್; ಫ್ರೆಶ್ ಲುಕ್ ಪಡೆಯಲು ಈಕೆ ಮಾಡುವ ಆ ಕೆಲಸವೇನು?
ಕನ್ನಡ ಚಿತ್ರರಂಗದಲ್ಲಿ ಈಗ ಎಲ್ಲೆಲ್ಲೂ ಆಕೆಯದ್ದೇ ಹವಾ. ಕೇವಲ ಒಂದು ಸಿನಿಮಾದಿಂದ ಇಡೀ ಸೌತ್ ಇಂಡಿಯಾದ ಕ್ರಶ್ ಆಗಿ ಬದಲಾದ ನಟಿ ಇವರು. ಆ ಮುಗ್ಧ ಕಣ್ಣುಗಳು, ಮಲ್ಲಿಗೆಯಂತಹ ನಗು ಕಂಡರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ?
ಸಿನಿಮಾದಲ್ಲಿ ಅಷ್ಟೇ ಅಲ್ಲ, ನಿಜ ಜೀವನದಲ್ಲೂ ಇವರು ಅಷ್ಟೇ ಸಿಂಪಲ್. ಅತಿಯಾದ ಮೇಕಪ್ ಇಲ್ಲದೆ, ನ್ಯಾಚುರಲ್ ಆಗಿ ಕಾಣಿಸಿಕೊಳ್ಳುವ ಈ ನಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದಾ ವೈರಲ್. ಅವರ ಚರ್ಮದ ಕಾಂತಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಆದರೆ ಈ ಸೌಂದರ್ಯ ಸುಮ್ಮನೆ ಬಂದಿದ್ದಲ್ಲ. ಇದರ ಹಿಂದೆ ಒಂದು ಶಿಸ್ತಿನ ಜೀವನ ಕ್ರಮವಿದೆ. ನಾವು ಇಂದು ಆ ಸುಂದರಿಯ ಸೌಂದರ್ಯದ ರಹಸ್ಯದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹೇಳಲಿದ್ದೇವೆ. ವಿಡಿಯೋ ಎಂಡ್ ವರೆಗೂ ನೋಡಿ ಎನ್ನುವ ಹಾಗೆ, ಲೇಖನವನ್ನೂ ಪೂರ್ತಿ ಓದಿ.
ಸ್ಯಾಂಡಲ್‌ವುಡ್ ಸುಂದರಿಯ ಬ್ಯೂಟಿ ಸೀಕ್ರೆಟ್ ರಿವೀಲ್
'ಸಪ್ತ ಸಾಗರದಾಚೆ ಎಲ್ಲೋ', 'ಕಾಂತಾರ ಚಾಪ್ಟರ್ 1' ಸಿನಿಮಾಗಳಿಂದ ಗಮನ ಸೆಳೆದ ನಟಿ ರುಕ್ಮಿಣಿ ವಸಂತ್. ಹೌದು, ಈ ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದ್ದಿರುವವರು ರುಕ್ಮಿಣಿ ವಸಂತ್. ಸದ್ಯಕ್ಕೆ 28ರ ಹರೆಯದ ಈ ನಟಿ ತನ್ನ ಸ್ಕಿನ್ ಕೇರ್ ಬಗ್ಗೆ ಕೆಲವು ಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಟಿಯರಿಗೆ ಶೂಟಿಂಗ್ ಸಮಯದಲ್ಲಿ ಅತಿಯಾದ ಮೇಕಪ್ ಅನಿವಾರ್ಯ. ಲೈಟ್ಸ್ ಶಾಖ, ಧೂಳು ಎಲ್ಲವೂ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಇವೆಲ್ಲವನ್ನೂ ಮೀರಿ ರುಕ್ಮಿಣಿ ಅವರು ತಮ್ಮ ಮುಖದ ಕಾಂತಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬುದು ಈಗ ಟ್ರೆಂಡಿಂಗ್ ವಿಷಯ.
ಬ್ಲಾಕ್ ಸರ್ಕಲ್‌ಗಳಿಗೆ ರುಕ್ಮಿಣಿ ಕೊಟ್ಟ ಟಿಪ್ಸ್
ನಟಿಯರಿಗೆ ಅತಿ ದೊಡ್ಡ ಶತ್ರು ಅಂದರೆ ಅದು ಕಣ್ಣಿನ ಕೆಳಗಿನ ಬ್ಲಾಕ್ ಸರ್ಕಲ್. ಸತತವಾಗಿ ಶೂಟಿಂಗ್ ಇರುವುದರಿಂದ ನಿದ್ದೆಯ ಕೊರತೆ ಕಾಡುವುದು ಸಹಜ. ರುಕ್ಮಿಣಿ ಅವರು ಈ ಬಗ್ಗೆ ಬಹಳ ಎಚ್ಚರಿಕೆ ವಹಿಸುತ್ತಾರೆ. ಅವರು ಹೇಳುವಂತೆ ಕಣ್ಣಿನ ಅಂದ ಕಾಪಾಡಲು ಒಳ್ಳೆಯ 'ಐ ಕ್ರೀಮ್' ಬಳಕೆ ಮಾಡುವುದು ತುಂಬಾ ಮುಖ್ಯ.
ಅದಕ್ಕಿಂತ ಹೆಚ್ಚಾಗಿ ದಿನಕ್ಕೆ ಕನಿಷ್ಠ 7-8 ಗಂಟೆಗಳ ಕಾಲ ನಿದ್ದೆ ಮಾಡುವುದು ಅನಿವಾರ್ಯ. ಕಣ್ಣಿನ ಸುತ್ತಲಿನ ಚರ್ಮ ತುಂಬಾ ಮೃದುವಾಗಿರುತ್ತದೆ. ಹಾಗಾಗಿ ಅಲ್ಲಿ ರಾಸಾಯನಿಕಯುಕ್ತ ಕ್ರೀಮ್ ಹಚ್ಚುವ ಬದಲು ನೈಸರ್ಗಿಕ ವಿಧಾನಗಳಿಗೆ ಅವರು ಮೊರೆ ಹೋಗುತ್ತಾರೆ. ಸೌತೆಕಾಯಿ ತುಂಡುಗಳನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳುವುದು ಇಂದಿಗೂ ಇವರ ಫೇವರಿಟ್ ಚಿಕಿತ್ಸೆ.
ರುಕ್ಮಿಣಿ ಅವರ ಡೈಲಿ ಸ್ಕಿನ್ ಕೇರ್ ರೂಟಿನ್
ರುಕ್ಮಿಣಿ ವಸಂತ್ ಅವರು ಅತಿಯಾದ ಪ್ರಾಡಕ್ಟ್ ಬಳಕೆಯನ್ನು ಇಷ್ಟಪಡುವುದಿಲ್ಲ. ಅವರ ಸ್ಕಿನ್ ಕೇರ್ ರೂಟಿನ್ ತುಂಬಾ ಸರಳವಾಗಿದೆ:
*ಕ್ಲೆನ್ಸಿಂಗ್: ಮುಖದ ಮೇಲಿರುವ ಕೊಳೆಯನ್ನು ತೆಗೆಯಲು ಮೃದುವಾದ ಫೇಸ್ ವಾಶ್ ಬಳಸುತ್ತಾರೆ.
*ಮೋಯಿಶ್ಚರೈಸರ್: ಚರ್ಮದ ತೇವಾಂಶ ಕಾಪಾಡಲು ಮರೆಯದೆ ಒಳ್ಳೆಯ ಮೋಯಿಶ್ಚರೈಸರ್ ಹಚ್ಚುತ್ತಾರೆ.
*ಸನ್‌ಸ್ಕ್ರೀನ್: ಮನೆಯಿಂದ ಹೊರಗೆ ಹೋಗುವಾಗ ಮಾತ್ರವಲ್ಲ, ಮನೆಯ ಒಳಗಿದ್ದರೂ ಸನ್‌ಸ್ಕ್ರೀನ್ ಹಚ್ಚುವುದನ್ನು ಮರೆಯುವುದಿಲ್ಲ.
*ನೀರು: ಚರ್ಮದ ಒಳಗಿನಿಂದ ಕಾಂತಿ ಬರಬೇಕಾದರೆ ದಿನಕ್ಕೆ 3-4 ಲೀಟರ್ ನೀರು ಕುಡಿಯುವುದು ಅವರ ಮೊದಲ ಆದ್ಯತೆ.

ರೇಷ್ಮೆಯಂತಹ ಕೂದಲಿಗೆ ಇವರೇನು ಮಾಡ್ತಾರೆ?
ರುಕ್ಮಿಣಿ ಅವರ ಉದ್ದನೆಯ ಮತ್ತು ದಟ್ಟವಾದ ಕೂದಲು ಅನೇಕ ಹುಡುಗಿಯರ ಕನಸು. ಶೂಟಿಂಗ್ ಸಮಯದಲ್ಲಿ ಕೂದಲಿಗೆ ಹೀಟಿಂಗ್ ಮಿಷನ್ ಹಾಗೂ ಸ್ಪ್ರೇಗಳನ್ನು ಬಳಸಲಾಗುತ್ತದೆ. ಇದರಿಂದ ಕೂದಲು ಹಾಳಾಗುವ ಸಾಧ್ಯತೆ ಹೆಚ್ಚು.
ಇದಕ್ಕೆ ರುಕ್ಮಿಣಿ ಅವರು ಹಳೆಯ ಕಾಲದ ಮನೆಯ ಮದ್ದನ್ನೇ ಅನುಸರಿಸುತ್ತಾರೆ. ವಾರಕ್ಕೆ ಎರಡು ಬಾರಿಯಾದರೂ ತೆಂಗಿನ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡುತ್ತಾರೆ. ಮನೆಯಲ್ಲೇ ತಯಾರಿಸಿದ ಹೇರ್ ಪ್ಯಾಕ್ ಬಳಸುವುದರಿಂದ ಅವರ ಕೂದಲು ಅಷ್ಟೊಂದು ಆರೋಗ್ಯಕರವಾಗಿ ಕಾಣುತ್ತದೆ. ರಾಸಾಯನಿಕ ಶಾಂಪೂಗಳ ಬದಲು ನೈಸರ್ಗಿಕ ಅಂಶಗಳಿರುವ ಶಾಂಪೂಗಳಿಗೆ ಅವರು ಮೊದಲ ಪ್ರಾಶಸ್ತ್ಯ ನೀಡುತ್ತಾರೆ.
ಡಯಟ್ ವಿಷಯದಲ್ಲೂ ಇವರು ಫುಲ್ ಸ್ಟ್ರಿಕ್ಟ್
ನಾವು ಏನು ತಿನ್ನುತ್ತೇವೆಯೋ ಅದು ನಮ್ಮ ಮುಖದಲ್ಲಿ ಕಾಣಿಸುತ್ತದೆ ಎಂಬುದು ರುಕ್ಮಿಣಿ ಅವರ ನಂಬಿಕೆ. ಹಾಗಾಗಿ ಅವರು ಜಂಕ್ ಫುಡ್‌ಗಳಿಂದ ದೂರ ಇರುತ್ತಾರೆ. ತಾಜಾ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದು ಚರ್ಮದ ಹೊಳಪನ್ನು ನೈಸರ್ಗಿಕವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಒಟ್ಟಿನಲ್ಲಿ, ರುಕ್ಮಿಣಿ ವಸಂತ್ ಅವರ ಸೌಂದರ್ಯದ ಹಿಂದೆ ಯಾವುದೇ ದೊಡ್ಡ ಸರ್ಜರಿಗಳಿಲ್ಲ. ಬದಲಿಗೆ ಶಿಸ್ತು, ಸಂಯಮ ಮತ್ತು ನೈಸರ್ಗಿಕ ವಿಧಾನಗಳಿವೆ. ಇದೇ ಅವರ ಸೌಂದರ್ಯದ ಅಸಲಿ ಸೀಕ್ರೆಟ್.


Click it and Unblock the Notifications











