ವೈಷ್ಣವಿ ಗೌಡ ಫಿಟ್ನೆಸ್ ಸೀಕ್ರೆಟ್ ಏನು? ಏನಿದು ಎರಡೂವರೆ ಹೊತ್ತಿನ ಊಟ?

By ಎಸ್ ಸುಮಂತ್

ವೈಷ್ಣವಿ ಗೌಡ ಸದ್ಯ 'ಸೀತಾರಾಮ' ಧಾರಾವಾಹಿಯಲ್ಲಿ ಮಗುವಿನ ತಾಯಿ ಪಾತ್ರವನ್ನ ಮಾಡ್ತಾ ಇದ್ದಾರೆ. ನಟನೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೂ ಫಿಟ್ನೆಸ್ ಅಂತು ಸಖತ್ತಾಗಿಯೇ ಮೆಂಟೈನ್ ಮಾಡಿದ್ದಾರೆ. ಆ ಫಿಟ್ನೆಸ್‌ಮೆಂಟೈನ್ ಮಾಡೋದಕ್ಕೆ ಸುಲಭ ಏನು ಅಲ್ಲ. ಯಾರೇ ಆಗಲಿ ಕಷ್ಟ ಪಡಲೇಬೇಕು. ವೈಷ್ಣವಿ ಅವರನ್ನು ನೋಡಿದಾಗ ಜೀರೋ ಸೈಜ್‌ಮೆಂಟೈನ್ ಮಾಡಿರೋದು ಗೊತ್ತಾಗುತ್ತೆ. ಹಾಗಾದ್ರೆ ಅವರ ಫಿಟ್ನೆಸ್ ಹಿಂದಿನ ಸೀಕ್ರೆಟ್ ಏನು? ಎಂಬ ಕುತೂಹಲ ನಿಮಗೂ ಇರುತ್ತದೆ ಅಲ್ವಾ. ಬನ್ನಿ ಆ ಟಿಪ್ಸ್ ಹೇಳ್ತೀವಿ.

ನಿಮಗೆಲ್ಲಾ ಗೊತ್ತಿರೋ ಹಾಗೇ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸದಾ‌ ಆಕ್ಟೀವ್ ಆಗಿರುತ್ತಾರೆ. ಶೂಟಿಂಗ್ ಬ್ಯುಸಿ ಇದ್ರು ಕೂಡ ತಮ್ಮ ಸೋಷಿಯಲ್ ಮೀಡಿಯಾಗೆ ಕಂಟೆಂಟ್ ಹಾಕೋದನ್ನ ಮರೆಯೋದಿಲ್ಲ. ಇದೀಗ ಫಿಟ್ನೆಸ್ ಬಗ್ಗೆ ಒಂದಷ್ಟು ಮಾಹಿತಿಯನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ನೀಡಿದ್ದಾರೆ. ತಾವೂ ತಿನ್ನುವ ಊಟ ಹೇಗಿರುತ್ತೆ? ಏನೆಲ್ಲಾ ಮಾಡ್ತಾರೆ ಎಂಬ ಡಿಟೈಲ್ ಇಲ್ಲಿದೆ ನೋಡಿ.

Seetha Rama serial actress Vaishnavi Gowda Fitness Secret and Food Habits

ಮನೆಯ ಊಟ ಬಿಟ್ಟರೆ ಹೊರಗಿನ ಊಟ ತಿನ್ನಲ್ಲ. ಬೆಳಗ್ಗೆ ಮನೆಯಲ್ಲಿ ಮಾಡಿದ ತಿಂಡಿ ತಿನ್ನುತ್ತಾರೆ. ಜೊತೆಗೆ ಪ್ರತಿದಿನ ಒಂದು ಕಷಾಯ ಇದ್ದೇ ಇರುತ್ತದೆ. ಕಷಾಯವನ್ನು ಕುಡಿದು ನಂತರ ತಿಂಡಿ ತಿನ್ನುತ್ತಾರೆ. ಮಧ್ಯಾಹ್ನವೂ ಮನೆಯ ಊಟವನ್ನೇ ಹೆಚ್ಚು ತಿನ್ನುತ್ತಾರೆ. ಶೂಟಿಂಗ್ ಸೆಟ್‌ನಲ್ಲೂ ಪ್ರತಿದಿನ ಹೆಚ್ಚಿನ ಊಟ ಇರುತ್ತೆ. ಆದರೆ ಮನೆಯ ಊಟವನ್ನೇ ಹೆಚ್ಚು ಇಷ್ಟ ಪಡುತ್ತಾರೆ.

ಆರೋಗ್ಯ ಚೆನ್ನಾಗಿ ಇರಬೇಕು ಅಂದ್ರೆ ಮನೆಯ ಊಟವನ್ನೇ ತಿನ್ನಬೇಕು. ಹೀಗಾಗಿ ಸೆಲೆಬ್ರೆಟಿಗಳು ಸಾಧ್ಯವಾದಷ್ಟು ಮನೆಯ ಆಹಾರವನ್ನೇ ಸಾಧ್ಯವಾದಷ್ಟು ತಿನ್ನುತ್ತಾರೆ. ಇನ್ನು ವೈಷ್ಣವಿ ಊಟದ ನಡುವೆ ಸೌತೆಕಾಯಿ, ಫ್ರೂಟ್ಸ್ ಅನ್ನು ಮಿಸ್ ಮಾಡೋದಿಲ್ಲ. ಯಾಕಂದ್ರೆ ಊಟ ಸ್ವಲ್ಪವೇ ಮಾಡಿದ್ರೂ ಸೇಬು ಹಾಗೂ ಬಾಳೆಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತೆ. ಹಣ್ಣುಗಳಿಂದ ಸಿಗುವ ಪೋಷಾಕಾಂಶಗಳು ಸೌಂದರ್ಯಕ್ಕೂ ಒಳ್ಳೆಯದೆ. ಮುಖದ ಹೊಳಪು ಹೆಚ್ಚಾಗುವುದಕ್ಕೂ ಇದು ಸಹಾಯಕಾರಿಯಾಗಿರುತ್ತದೆ. ಹೀಗಾಗಿ ಊಟ ಕಡಿಮೆ ತಿಂದರೂ ಹಣ್ಣುಗಳಿಂದ ಕಂಪ್ಲೀಟ್ ಮಾಡಬೇಕು.

ವೈಷ್ಣವಿ ಗೌಡ ಇಷ್ಟೊಂದು ಫಿಟ್ಬೆಸ್ ಮೆಂಟೈನ್ ಮಾಡೋದಕ್ಕೆ ಇನ್ನು ಒಂದು ಕಾರಣವೂ ಇದೆ. ಅದುವೆ ಎರಡೂವರೆ ಸಮಯ ಊಟ. ನಾವೆಲ್ಲಾ ದಿನದ ಮೂರು ಟೈಮ್ ಊಟ ಮಾಡುತ್ತೇವೆ. ಆದರೆ ವೈಷ್ಣವಿ ಗೌಡ ಹಾಗಲ್ಲ. ತಿನ್ನುವುದೇ ಎರಡುವರೆ ಸಮಯ. ಅಂದ್ರೆ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ಸಂಜೆ ವೇಳೆಗೆ ಏನಾದ್ರೂ ಸ್ನ್ಯಾಕ್ಸ್. ರಾತ್ರಿ ಊಟ ಏನೂ ಮಾಡಲ್ಲ. ಬಾಳೆ ಹಣ್ಣು ಅಥವಾ ಹಾಲು ಕುಡಿದು ಮಲಗುತ್ತಾರಂತೆ. ಇದೇ ನೋಡಿ ವೈಷ್ಣವಿ ಅವರ ಫಿಟ್ನೆಸ್ ಸೀಕ್ರೇಟ್. ಹಾಗಂತ ದೇಹಕ್ಕೆ ವ್ಯಾಯಾಮ ಮಾಡಲ್ಲ ಅಂತೇನಿಲ್ಲ‌ ಯೋಗವನ್ನು ಬಿಡದೆ ಮಾಡುತ್ತಾರೆ. ಒಂದಷ್ಟು ವರ್ಕೌಟ್ ಕೂಡ ಇದ್ದೆ ಇರುತ್ತದೆ. ಆದರೆ ಶೂಟಿಂಗ್ ಬ್ಯುಸಿನಲ್ಲಿ ವರ್ಕೌಟ್ ಮಾಡುವುದಕ್ಕೆ ಸಮಯ ಸಿಗದೇ ಹೋದಾಗ ಆಹಾರದಲ್ಲಿಯೇ ಡಯೆಟ್ ಮಾಡ್ತಾರೆ.

Seetha Rama serial actress Vaishnavi Gowda Fitness Secret and Food Habits

ಇದಿಷ್ಟು ವೈಷ್ಣವಿ ಡಯೆಟ್. ಸದ್ಯ ವೈಷ್ಣವಿ ಗೌಡ ಎಲ್ಲರ ಮನೆಯ ಸೀತಾ ಆಗಿ ಮನ ಸೆಳೆದಿದ್ದಾರೆ. ವೈಷ್ಣವಿ ಎಲ್ಲರಿಗೂ ಇಷ್ಟವಾಗುವಂತವರು. ಯಾಕಂದ್ರೆ ಬಿಗ್ ಬಾಸ್ ಗೆ ಬಂದಾಗಲೂ ಅಲ್ಲಿಯೂ ಎಲ್ಲರ ಮನಸ್ಸನ್ನು ಗೆದ್ದವರು. ಯಾವುದೇ ಸೀರಿಯಲ್ ಮಾಡಿದರು ಅಲ್ಲಿ, ಆ ಪಾತ್ರದ ಮೂಲಕ ಮನಸ್ಸನ್ನು ಗೆಲ್ಲುತ್ತಾರೆ. ಇದೀಗ ಸೀತಾ ಪಾತ್ರದಲ್ಲಿ ದೊಡ್ಡವರು ಮಾತ್ರವಲ್ಲ ರೊಮ್ಯಾಂಟಿಕ್ ಕಪಲ್ ಮನಸ್ಸನ್ನು ಗೆದ್ದಿದ್ದಾರೆ.

More from Filmibeat

English summary
Seetha Rama serial actress Vaishnavi Gowda Fitness Secret and Food Habits;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X